ಪತ್ನಿಯ ಜತೆಗೆ ‘ಕಳೆದುಹೋದ’ ಬೆಲ್ಚಪ್ಪ!
Team Udayavani, Aug 15, 2019, 5:00 AM IST
ಪತ್ನಿಯನ್ನು ಕಳೆದುಕೊಂಡ ಪತಿ ಅದೇ ಆಘಾತದಿಂದ ಹೊರಗೆ ಬಂದಿರುವುದಿಲ್ಲ. ಪತ್ನಿ ಸತ್ತರೂ ಆಕೆ ಇನ್ನೂ ಜತೆಗಿದ್ದಾಳೆ ಎಂದು ಹುಡುಕುವ ಆತ ಅದೇ ಗುಂಗಿನಲ್ಲಿ ದಿನಕಳೆಯುತ್ತಾನೆ!
ಇದೇ ಅಂಶವನ್ನು ಇಟ್ಟುಕೊಂಡು ಮಾಡಿದ ಸಿನೆಮಾ ಬೆಲ್ಚಪ್ಪ. ರಜನೀಶ್ ದೇವಾಡಿಗ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾದಲ್ಲಿ ಅರವಿಂದ ಬೋಳಾರ್ ಮುಖ್ಯಪಾತ್ರದಲ್ಲಿದ್ದಾರೆ. ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ, ಸಿನೆಮಾ ಬಗ್ಗೆ ಪ್ರೊಜೆಕ್ಟ್ ಮಾಡಿದ ರೀತಿ ಹಾಗೂ ತೆರೆಮೇಲೆ ಕಾಣುವುದಕ್ಕೂ ವ್ಯತ್ಯಾಸಗಳು ಕಾಣುತ್ತಿವೆ. ಸಣ್ಣ ಕಥೆಯ ಎಳೆಯನ್ನು ತುಂಬ ಎಳೆದು ವಿವಿಧ ರೀತಿಯಲ್ಲಿ ತಂದ ರೀತಿಯ ಬಗ್ಗೆಯೂ ಕೆಲವರಿಗೆ ಆಕ್ಷೇಪವಿದೆ. ಎಡಿಟಿಂಗ್ ಕೂಡ ತುಂಬ ಸುಧಾರಿಸಬೇಕಿತ್ತು. ಕಾಮಿಡಿ ಆ್ಯಕ್ಟರ್‌ಗಳೇ ಇದ್ದರೂ ನಗು ಉಕ್ಕಿಸುವ ಅಂಶಗಳು ಇಲ್ಲಿ ಸ್ವಲ್ಪ ಕಡಿಮೆನೆ ಇದೆ… ಹೀಗೆ ಹಲವು ಆಕ್ಷೇಪಗಳು ಸಿನೆಮಾ ಬಗ್ಗೆ ಕೇಳಿಬರುತ್ತದೆ. ಆದರೂ, ಬೋಳಾರ್, ದೀಪಕ್ ರೈ ಪಾಣಾಜೆ, ಉಮೇಶ್ ಮಿಜಾರ್ ತಮ್ಮ ಪಾತ್ರಗಳಲ್ಲಿ ಹೊಸತನವನ್ನು ಪ್ರದರ್ಶಿಸಿರುವುದು ಇಷ್ಟವಾಗುತ್ತದೆ.
ಸದ್ಯ ಥಿಯೇಟರ್‌ನಲ್ಲಿ ಸಿನೆಮಾಕ್ಕೆ ಒಳ್ಳೆಯ ಅಭಿಪ್ರಾಯ ಇದೆ. ಬೆಲ್ಚಪ್ಪ ಇನ್ನಷ್ಟು ಸುಧಾರಿಸಿಕೊಂಡು ಎಂಟ್ರಿ ಆಗುತ್ತಿದ್ದರೆ ಇನ್ನೂ ಉತ್ತಮವಾಗುತ್ತಿತ್ತು ಎಂಬ ಅಭಿಪ್ರಾಯವೂ ಕೋಸ್ಟಲ್ವುಡ್ ಗಲ್ಲಿಯಲ್ಲಿ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.