ಧನಂಜಯ ದಾಳಿಗೆ ಸಡ್ಡು ಹೊಡೆದ ಟೇಲರ್
ಟೆಸ್ಟ್: ಅಖೀಲ ಧನಂಜಯ 57ಕ್ಕೆ 5; ಟೇಲರ್ ಅಜೇಯ 86
Team Udayavani, Aug 15, 2019, 5:45 AM IST
ಗಾಲೆ: ಶ್ರೀಲಂಕಾ- ನ್ಯೂಜಿಲ್ಯಾಂಡ್ ನಡುವಿನ ಗಾಲೆ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಲೆಗ್‌ಸ್ಪಿನ್ನರ್ ಅಖೀಲ ಧನಂಜಯ ಮತ್ತು ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಅಮೋಘ ಪ್ರದರ್ಶನ ನೀಡಿದ್ದಾರೆ. ಮಳೆಯಿಂದಾಗಿ 68 ಓವರ್‌ಗಳಿಗೆ ದಿನದಾಟ ಕೊನೆ ಗೊಂಡಾಗ ನ್ಯೂಜಿಲ್ಯಾಂಡ್ 5 ವಿಕೆಟ್ ಉರುಳಿಸಿಕೊಂಡು 203 ರನ್ ಮಾಡಿತ್ತು.
ಪ್ರವಾಸಿಗರ ಐದೂ ವಿಕೆಟ್‌ಗಳನ್ನು ಅಖೀಲ ಧನಂಜಯ 57 ರನ್ ವೆಚ್ಚದಲ್ಲಿ ಉರುಳಿಸಿದರು. ಕೇವಲ 6ನೇ ಟೆಸ್ಟ್ ಆಡುತ್ತಿರುವ ಅವರು ಇನ್ನಿಂಗ್ಸ್ ಒಂದರಲ್ಲಿ 4ನೇ ಸಲ 5 ಪ್ಲಸ್ ವಿಕೆಟ್ ಕಿತ್ತ ಸಾಧನೆಗೈದರು. ಇವರ ದಾಳಿಗೆ ತಡೆಯೊಡ್ಡಿ ನಿಂತದ್ದು ರಾಸ್ ಟೇಲರ್ ಹೆಗ್ಗಳಿಕೆ. ಟೇಲರ್ 86 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ (131 ಎಸೆತ, 6 ಬೌಂಡರಿ).
ಕಿವೀಸ್ ಆರಂಭ ಉತ್ತಮವಾಗಿತ್ತು. ಜೀತ್ ರಾವಲ್ (33)-ಟಾಮ್ ಲ್ಯಾಥಂ (30) 26.3 ಓವರ್ ನಿಭಾ ಯಿಸಿ ಮೊದಲ ವಿಕೆಟಿಗೆ 64 ರನ್ ಒಟ್ಟುಗೂಡಿಸಿದರು. ಆದರೆ ನಾಯಕ ಕೇನ್ ವಿಲಿಯಮ್ಸನ್ ಖಾತೆ ತೆರೆಯದೆ ವಾಪಸಾದರು. ಹೀಗಾಗಿ 7 ರನ್ ಅಂತರದಲ್ಲಿ ನ್ಯೂಜಿಲ್ಯಾಂಡಿನ 3 ವಿಕೆಟ್ ಉರುಳಿತು.
4ನೇ ವಿಕೆಟಿಗೆ ಜತೆಗೂಡಿದ ರಾಸ್ ಟೇಲರ್ ಮತ್ತು ಹೆನ್ರಿ ನಿಕೋಲ್ಸ್ (42) 28 ಓವರ್ ನಿಭಾಯಿಸಿ ಭರ್ತಿ 100 ರನ್ ಪೇರಿಸುವುದರೊಂದಿಗೆ ಕಿವೀಸ್ ಭಾರೀ ಕುಸಿತದಿಂದ ಪಾರಾಯಿತು. ಬಳಿಕ ನಿಕೋಲ್ಸ್ ಮತ್ತು ಕೀಪರ್ ವಾಟಿÉಂಗ್ (1) ವಿಕೆಟ್‌ಗಳನ್ನು 8 ರನ್ ಅಂತರದಲ್ಲಿ ಕಿತ್ತ ಧನಂಜಯ ಮತ್ತೆ ಪ್ರವಾಸಿಗರಿಗೆ ಕಂಟಕವಾಗಿ ಕಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.