ಭಾರತಕ್ಕೆ ವಾಪಸಾಗಲು ಸೂಚನೆ
ಕ್ರಿಕೆಟ್ ಮ್ಯಾನೇಜರ್ ದುರ್ವರ್ತನೆ
Team Udayavani, Aug 15, 2019, 5:52 AM IST
ಹೊಸದಿಲ್ಲಿ: ಕೆರಿಬಿಯನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ (ಆಡಳಿತಾತ್ಮಕ ಪ್ರಬಂಧಕ) ಸುನೀಲ್ ಸುಬ್ರಹ್ಮಣ್ಯಂ ಅವರನ್ನು ಬಿಸಿಸಿಐ ಕೂಡಲೇ ವಾಪಸಾಗಲು ಸೂಚಿಸಿದೆ. ಕ್ರಿಕೆಟ್ ಅಧಿಕಾರಿಯೊಬ್ಬರನ್ನು ಹೀಗೆ ಅರ್ಧದಲ್ಲಿ ವಾಪಸು ಕರೆಸಿಕೊಳ್ಳುತ್ತಿರುವುದು ದೇಶದ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು.
ನನಗೆ ಕಿರಿಕಿರಿ ಮಾಡಬೇಡಿ!
ಜಲ ಸಂರಕ್ಷಣೆಯ ಸಂದೇಶ ಸಾರುವ ವೀಡಿಯೊ ಶೂಟಿಂಗ್‌ಗಾಗಿ ಆಟಗಾರರನ್ನು ಒದಗಿಸಬೇಕೆಂಬ ವಿನಂತಿಯೊಂದಿಗೆ ರಾಯಭಾರ ಕಚೇರಿ ಅಧಿಕಾರಿಗಳು ಸುನೀಲ್ ಸುಬ್ರಹ್ಮಣ್ಯಂ ಅವರನ್ನು ಸಂಪರ್ಕಿಸಿದ್ದರು. ಗಯಾನದ ಭಾರತೀಯ ಹೈಕಮಿಶನ್‌ನ ಹಿರಿಯ ಅಧಿಕಾರಿಯೊ ಬ್ಬರು ಸಹಕಾರ ಕೋರಿದಾಗ, ಸಂದೇಶ ಗಳನ್ನು ಕಳುಹಿಸಿ ನನಗೆ ಕಿರಿಕಿರಿ ಮಾಡ ಬೇಡಿ ಎಂದು ಸುಬ್ರಹ್ಮಣ್ಯಂ ಒರಟಾಗಿ ಉತ್ತರಿಸಿದ್ದರು.
ಅಧಿಕಾರಿಗಳು ಸರಕಾರದ ನಿರ್ದೇಶನದ ಮೇರೆಗೆ ಜಲ ಸಂರಕ್ಷಣೆಯ ವೀಡಿಯೊ ರೆಕಾರ್ಡಿಂಗ್ ಮಾಡಲು ಬಯಸಿದ್ದರು. ಆದರೆ ಸುಬ್ರಹ್ಮಣ್ಯಂ ಅವರ ಫೋನ್ ಕರೆಗಳಿಗೂ ಉತ್ತರಿಸದೆ ಅವಮಾನಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.
ಸುಬ್ರಹ್ಮಣ್ಯಂ ಕ್ಷಮೆ
ತನ್ನಿಂದಾಗಿರುವ ಪ್ರಮಾದಕ್ಕೆ ಸುನೀಲ್ ಸುಬ್ರಹ್ಮಣ್ಯಂ ಕ್ಷಮೆ ಯಾಚಿಸಿದ್ದಾರೆ. “ಸರಿಯಾಗಿ ನಿದ್ದೆಯಿಲ್ಲದ ಕಾರಣ ಮಾನಸಿಕ ಒತ್ತಡದಲ್ಲಿ ನಾನು ಈ ರೀತಿ ವರ್ತಿಸಿರಬಹುದು. ಇದಕ್ಕಾಗಿ ಬೇಷರತ್ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ. ಆದರೆ ಪ್ರಕರಣ ಈಗಾಗಲೇ ಸರಕಾರದ ಉನ್ನತ ಹಂತಕ್ಕೆ ತಲುಪಿದ್ದು, ನಾವೇನೂ ಮಾಡುವಂತಿಲ್ಲ ಎಂದು ಬಿಸಿಸಿಐ ಕೈಕೊಡವಿಕೊಂಡಿದೆ.
ಹುದ್ದೆಗೆ ಸಂಚಕಾರ
ಈ ವಿದ್ಯಮಾನದ ಹೊರತಾಗಿಯೂ ಭಾರತ ತಂಡ ವೀಡಿಯೊ ಶೂಟಿಂಗ್‌ನಲ್ಲಿ ಭಾಗವಹಿಸಿದೆ. ಇದನ್ನು ಸುಬ್ರಹ್ಮಣ್ಯಂ ವೀಕ್ಷಿಸುವ ಅಗತ್ಯವಿದ್ದು, ಇದಾದ ಕೂಡಲೇ ವಾಪಸಾಗಲು ಅವರಿಗೆ ಬಿಸಿಸಿಐ ಸೂಚಿಸಿದೆ. ಈ ಘಟನೆಯಿಂದಾಗಿ ಸುಬ್ರಹ್ಮಣ್ಯಂ ತನ್ನ ಹುದ್ದೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.