ವಿನಾಯಕನಿಗೇ ವಿಘ್ನ ತಂದ ನೆರೆ!

ಗಣೇಶ ಮೂರ್ತಿ ತಯಾರಕರಿಗೆ ಅಪಾರ ನಷ್ಟ

Team Udayavani, Aug 15, 2019, 12:11 PM IST

15-Agust-14

ಶಿವಮೊಗ್ಗ: ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬ ಗಾದೆಯಂತೆ. ನಾಲ್ಕು ತಿಂಗಳಿನಿಂದ ಕಷ್ಟಪಟ್ಟು ಮಾಡಿದ್ದ ಗಣೇಶ ಮೂರ್ತಿಗಳು ತುಂಗೆ ಪಾಲಾಗಿವೆ. ವಿಘ್ನ ನಿವಾರಕನಿಗೇ ವಿಘ್ನ ಆವರಿಸಿದೆ.

ಆ.9ರಂದು ತುಂಗೆ ಉಕ್ಕಿ ಹರಿದ ಪರಿಣಾಮ ಕುಂಬಾರಗುಂಡಿಯ ಮನೆಗಳಿಗೆ ನೀರು ನುಗ್ಗಿ ಗಣೇಶ ಚತುರ್ಥಿಗೆ ಸಿದ್ಧವಾಗಿದ್ದ ಮೂರ್ತಿಗಳು ನೀರಿನಲ್ಲಿ ಮುದ್ದೆಯಾಗಿವೆ. ಹಬ್ಬ ಹತ್ತಿರವಿರುವ ಕಾರಣ ಗಣೇಶ ಮೂರ್ತಿ ಮತ್ತೆ ತಯಾರು ಮಾಡಲಾಗದೆ ಅತಂತ್ರರಾಗಿದ್ದಾರೆ. ಪ್ರತಿ ವರ್ಷ ಮೂರರಿಂದ ನಾಲ್ಕು ಲಕ್ಷ ಮೌಲ್ಯದ ಗಣೇಶ ಮೂರ್ತಿಗಳನ್ನು ಒಬ್ಬೊಬ್ಬ ಕುಂಬಾರರು ಮಾರಾಟ ಮಾಡುತ್ತಾರೆ. ಹತ್ತಕ್ಕೂ ಹೆಚ್ಚು ಕುಂಬಾರರು ತಲೆಮಾರುಗಳಿಂದ ಇಲ್ಲಿ ನೆಲೆಸಿದ್ದಾರೆ. ನಾಲ್ಕು ತಲೆಮಾರುಗಳಿಂದ ಗಣೇಶ ಮೂರ್ತಿ ಮಾರಾಟದಿಂದ ಒಂದಿಷ್ಟು ಹಣ ಕಾಣುವ ಈ ಕುಟುಂಬಗಳು ಈ ಬಾರಿ ಬೀದಿಗೆ ಬಂದಿವೆ. ಮನೆಯಲ್ಲಿದ್ದ ಬಟ್ಟೆ, ವಸ್ತುಗಳು ಸಹ ನೀರು ಪಾಲಾಗಿದ್ದು ಈ ಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿವೆ.

ಹಿಂದೂ ಮಹಾಸಭಾ ಗಣೇಶನಿಗೂ ತೊಂದರೆ: ಶಿವಮೊಗ್ಗದ ಹಿಂದೂ ಮಹಾಸಭಾವು 75ನೇ ವರ್ಷ ಉತ್ಸವಕ್ಕೆ ಅದ್ಧೂರಿಯಾಗಿ ರೆಡಿಯಾಗುತ್ತಿದೆ. ಈ ಗಣೇಶ ಉತ್ಸವ ಇಡೀ ದೇಶಕ್ಕೆ ಹೆಸರುವಾಸಿ. ವಿ.ಡಿ. ಸಾವರ್‌ಕರ್‌ ಆರಂಭಿಸಿದ ಈ ಉತ್ಸವವು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನಡೆಯತ್ತಿದೆ. ಆದರೆ ಈ ಬಾರಿ ಪ್ರವಾಹದ ಕಾವು ಅದಕ್ಕೂ ತಗುಲಿದೆ. ಕುಂಬಾರ ಗುಂಡಿಯ ಗಣೇಶಪ್ಪ ಕುಟುಂಬವು ಸುಮಾರು ಶತಮಾನದಿಂದ ಗಣೇಶ ಮೂರ್ತಿ ತಯಾರು ಮಾಡುತ್ತಿದೆ. ಹಿಂದೂ ಮಹಾಸಭಾಗೆ 75ನೇ ವರ್ಷದಿಂದ ಮೂರ್ತಿ ತಯಾರು ಮಾಡಿಕೊಡುತ್ತಿರುವುದೂ ಅವರೇ. ಈ ಬಾರಿ 75ನೇ ಸಂಭ್ರಮಕ್ಕೆ ಹೆಚ್ಚು ಆಸ್ಥೆಯಿಂದ ಗಣೇಶ ಮೂರ್ತಿ ತಯಾರು ಮಾಡಿದ್ದರು. ಶುಕ್ರವಾರ ಮಧ್ಯರಾತ್ರಿ ಮನೆಯೊಳಗೆ ಮಳೆ ನೀರು ನುಗ್ಗಿದ್ದ ಪರಿಣಾಮ ಹುಟ್ಟಿದ ಬಟ್ಟೆಯಲ್ಲೇ ಮಧ್ಯರಾತ್ರಿ ಬೋಟ್‌ನಲ್ಲಿ ಗಂಜಿ ಕೇಂದ್ರ ಸೇರಿದ್ದಾರೆ. ಮರು ದಿನ ಬಂದು ನೋಡಿದರೆ ನಾಲ್ಕು ತಿಂಗಳಿನಿಂದ ಮಾಡಿದ್ದ ಶ್ರಮವೆಲ್ಲ ನೀರು ಪಾಲಾಗಿತ್ತು. 10 ದಿನ ಕಳೆದಿದ್ದರೆ ನಾಲ್ಕು ತಿಂಗಳ ಶ್ರಮ ಫಲ ಕೊಡುತಿತ್ತು. ಅಷ್ಟರಲ್ಲರಾಗಲೇ ತುಂಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ಅಪೋಶನ ತೆಗೆದುಕೊಂಡಿತ್ತು.

ಲಕ್ಷ ಲಕ್ಷ ಲಾಸ್‌: ಗಣೇಶಪ್ಪ ಕುಟುಂಬವೇ 75 ವರ್ಷದಿಂದ ಹಿಂದೂ ಮಹಾಸಭಾಗೆ ಗಣೇಶ ಮೂರ್ತಿ ತಯಾರು ಮಾಡಿಕೊಡುತ್ತಿರುವುದು. ಗಣೇಶ್‌ ಅವರ ಮುತ್ತಜ್ಜಿ ಚಂದಮ್ಮ ಗಣೇಶ ಮೂರ್ತಿ ತಯಾರು ಮಾಡುತ್ತಿದ್ದರು. ಅವರ ಮಗ ನಂಜುಂಡಪ್ಪ, ನಂತರ ಅವರ ಮಗ ನಾಗೇಶಪ್ಪ, ಪ್ರಸ್ತುತ ನಾಗೇಶಪ್ಪ ಅವರ ಮನ ಗಣೇಶ್‌ ಮುಂದುವರಿಸಿಕೊಂಡು ಬಂದಿದ್ದಾರೆ. ಮೂರು ಅಡಿ, ನಾಲ್ಕು ಅಡಿ 11 ಗಣಪತಿ ಹಾಗೂ 1 ಅಡಿ ಎತ್ತರದ 150 ಗಣೇಶ ಮೂರ್ತಿಗಳನ್ನು ತಯಾರು ಮಾಡಿ ಇಟ್ಟಿದ್ದರು. ಆದರೆ ವಿಧಿ ಎಲ್ಲವನ್ನೂ ನಾಶ ಮಾಡಿದೆ. 75 ವರ್ಷದ ಗಣೇಶ ಮಾಡಲೇಬೇಕೆಂಬ ಹಠ ತೊಟ್ಟ ಅವರು, ಮಂಗಳವಾರದಿಂದ ಗಣೇಶ ಮೂರ್ತಿ ತಯಾರು ಮಾಡಲು ಶುರುವಿಟ್ಟುಕೊಂಡಿದ್ದಾರೆ. ತಿಂಗಳ ಕೊನೆಯೊಳಗೆ ಮೂರ್ತಿ ಪೂರ್ತಿಯಾಗಲಿದೆ. ನನಗೆ ನಾಲ್ಕು ಲಕ್ಷ ಲಾಸ್‌ ಆಗಿದೆ. ಆದರೂ ಹಿಂದೂ ಮಹಾಸಭಾ ಗಣೇಶ ಮೂರ್ತಿ ಮಾಡುತ್ತಿದ್ದೇನೆ. ಅದೇ ನನಗೆ ಹೆಸರು ತಂದುಕೊಟ್ಟಿದೆ. ಹಾಗಾಗಿ ಅದೊಂದು ಗಣಪತಿ ಮೂರ್ತಿ ಮಾಡಿಕೊಡುವೆ ಎನ್ನುತ್ತಾರೆ ಗಣೇಶಪ್ಪ. ಗಣೇಶ್‌ ಅವರ ಸಂಪರ್ಕ ಸಂಖ್ಯೆ 9844850853.

ಮೂರು ಲಕ್ಷ ರೂ.ನಷ್ಟ
ನನ್ನ ತಂದೆ ಗಣೇಶ ಮೂರ್ತಿ ತಯಾರು ಮಾಡುತ್ತಿದ್ದರು. ಈಗ ನಾನು ಅದನ್ನು ಮುಂದುವರಿಸಿದ್ದೇನೆ. ಸಂಜೆ ಐಟಿಐ ಕಾಲೇಜು ಮುಗಿಸಿ ಬಂದು ನಾಲ್ಕು ತಿಂಗಳಿನಿಂದ ನಾನು, ನನ್ನ ತಾಯಿ ಕಷ್ಟಪಟ್ಟು ಗಣೇಶ ಮೂರ್ತಿ ತಯಾರು ಮಾಡಿದ್ದೆವು. 15 ದಿನ ಕಳೆದಿದ್ದರೆ ಎಲ್ಲವೂ ಮಾರಾಟವಾಗುತಿತ್ತು. ಮಳೆ ನಮ್ಮನ್ನ ಬೀದಿಗೆ ನಿಲ್ಲಿಸಿದೆ. ನಮಗೆ ಬೇರೆ ಆದಾಯದ ಮೂಲಗಳಿಲ್ಲ. ಇನ್ನೇನು ಹಣ ಕಾಣಬಹುದೆಂಬ ಸಂದರ್ಭದಲ್ಲಿ ಈ ರೀತಿಯಾಗಿದೆ. ನಮಗೆ ಏನು ಮಾಡುವುದು ತೋಚುತ್ತಿಲ್ಲ. ಸರಕಾರ ಇದಕ್ಕೆಲ್ಲ ಪರಿಹಾರ ಕೊಡುವುದಿಲ್ಲ. 9 ದೊಡ್ಡ, 100 ಚಿಕ್ಕ ಗಣೇಶ ಮೂರ್ತಿಗಳು ನೀರಲ್ಲಿ ಕರಗಿಹೋದವು. 3 ಲಕ್ಷ ರೂ. ನಷ್ಟವಾಗಿದೆ. ಇಂತಹ ಪರಿಸ್ಥಿತಿ ಯಾರಿಗೂ ಬರುವುದು ಬೇಡ. ಸರಕಾರ ನಮಗೂ ಸಹಾಯ ಮಾಡಲಿ ಎನ್ನುತ್ತಾರೆ ಕುಂಬಾರ ಕೇರಿಯ ಯುವಕ ಮನೋಜ್‌. ಇವರ ಸಂಪರ್ಕ ಸಂಖ್ಯೆ 9964791762.

ಸುಮಾರು 100 ವರ್ಷಗಳಿಂದ ನಮ್ಮ ಕುಟುಂಬ ಗಣೇಶ ಮೂರ್ತಿ ತಯಾರು ಮಾಡುತ್ತಿದೆ. 75 ವರ್ಷದಿಂದಲೂ ಹಿಂದೂ ಮಹಾಸಭಾ ಗಣೇಶ ಮೂರ್ತಿ ಮಾಡಿಕೊಂಡು ಬರುತ್ತಿದ್ದೇವೆ. ಇದೇ ಮೊದಲ ಬಾರಿ ಇಂತಹ ಪರಿಸ್ಥಿತಿ ಎದುರಾಗಿದೆ. ನಮಗೆ ಏನು ಮಾಡಬೇಕು ತೋಚದಾಗಿದೆ. 4 ಲಕ್ಷ ಮೌಲ್ಯದ ಗಣೇಶ ಮೂರ್ತಿ ನೀರು ಪಾಲಾಗಿದೆ. ಆದರೂ ಹಿಂದೂ ಮಹಾಸಭಾ ಗಣೇಶ ಮೂರ್ತಿ ಮರು ನಿರ್ಮಾಣ ಮಾಡಿ ಕೊಡುವೆ.
ಗಣೇಶ್‌,
ಗಣೇಶ ಮೂರ್ತಿ ತಯಾರಕರು

ಟಾಪ್ ನ್ಯೂಸ್

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

KND-Amber-greece

Whale: ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.