ಸಾಹಿತ್ಯ ವರ್ತಮಾನಕ್ಕೆ ಸಲ್ಲಬೇಕು, ಭವಿಷ್ಯಕ್ಕೆ ಬೆಳೆಯಬೇಕು


Team Udayavani, Aug 16, 2019, 3:00 AM IST

sahitya-var

ಹಾಸನ: ವರ್ತಮಾನಕ್ಕೆ ಪ್ರಯೋಜನವಿಲ್ಲದ ಸಾಹಿತ್ಯದಿಂದ ಭವಿಷ್ಯಕ್ಕೂ ಉಪಯೋಗವಿಲ್ಲ. ಬರಹ ಮೊದಲು ವರ್ತಮಾನಕ್ಕೆ ಸಲ್ಲಬೇಕು ನಂತರ ಭವಿಷ್ಯಕ್ಕೆ ಬೆಳೆಯಬೇಕು ಎಂದು ಹಿರಿಯ ಸಾಹಿತಿ, ನಟ ಎಸ್‌.ಎನ್‌. ಸೇತುರಾಂ ಹೇಳಿದರು. ನಗರದ ಮೆಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಲ್ಯುಮ್ನಿ ಸಭಾಂಗಣದಲ್ಲಿ ಕವಿ ಪಿ.ಕೆ.ಶರತ್‌ ಅವರ ಗುಂಪಿಗೆ ಸೇರದ ಪದಗಳು ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಭಾಷಣ ಮಾಡಿದ ಲೇಖಕರೊಬ್ಬರು ಸಾಹಿತ್ಯ ವರ್ತಮಾನಕ್ಕಲ್ಲ, ಭವಿಷ್ಯದ ಪೀಳಿಗೆಗೆ ಅಂದಿದ್ದರು. ಆದರೆ ನಾವು ಇಂದು ನಮ್ಮ ಅಜ್ಜನ ಹೆಸರನ್ನೇ ಹೇಳುವುದಿಲ್ಲ. ಹೀಗಿರುವಾಗ ಮುಂದಿನ ಪೀಳಿಗೆ ಇಂದಿನ ಸಾಹಿತ್ಯವನ್ನು ಓದುತ್ತದೆ ಎಂದುಕೊಳ್ಳಲು ಸಾಧ್ಯವಿಲ್ಲ. ನಾವು ಇಂದಿನವರಿಗಾಗಿ ಬರೆಯಬೇಕು ಎಂದರು.

ಸಿದ್ಧಾಂತದ ಅಗತ್ಯವಿಲ್ಲ: ಲೇಖಕರು ಮೊದಲು ಸಿದ್ಧಾಂತವಿಟ್ಟುಕೊಂಡು ನಂತರ ಬರೆಯಬೇಡಿ, ನಿಮ್ಮ ಬರಹಕ್ಕೆ ಸಿದ್ಧಾಂತ ಬರಬೇಕು ಎನ್ನುವ ಹಿರಿಯರ ಮಾತನ್ನು ಅನುಸರಿಸದ ಕಾರಣಕ್ಕಾಗಿ ನಮ್ಮ ನಡುವಿನ ಹಲವು ಕವಿಗಳು ಸೋತರು. ಎಂದು ಹೇಳಿದರು.ಸ್ವಾತಂತ್ರಾéನಂತರ ಬಂದ ನಮ್ಮ ಪೀಳಿಗೆಯವರಿಗೆ ರೋಲ್‌ ಮಾಡೆಲ್‌ಗ‌ಳೇ ಇಲ್ಲ ಎಂದು ವಿಷಾದಿಸಿದರು.

ಫೆಮಿನಿಸಂ ಗಂಡಿನ ವಿರೋಧಿಯಲ್ಲ: ಫೆಮಿನಿಸಂ ಎಂದ ತಕ್ಷಣ ಗಂಡಿನ ವಿರೋಧಿ ಎಂದು ಭಾವಿಸಬಾರದು. ನಮ್ಮ ದೇಶದಲ್ಲಿ ಹೆಣ್ಣು-ಗಂಡಿನ ನಡುವೆ ಅಸಮಾನತೆ ಸೃಷ್ಟಿಯಾಗಲು ಚಾರಿತ್ರಿಕ, ಪ್ರಾಕೃತಿಕ ಕಾರಣಗಳಿವೆ ಎಂದು ಹೇಳಿದರು. ಭಾವನಾತ್ಮಕವಾಗಿ ಹೆಣ್ಣಿಗೆ ಸಮಾನವಾದ ಸ್ಥಾನ ನೀಡಲು ಗಂಡು ಮಕ್ಕಳಿಗೆ ಇನ್ನೂ ಇಷ್ಟವಿಲ್ಲ. ಇದಕ್ಕೆ ಗಂಡು ಮಕ್ಕಳನ್ನು ಮನೆಯಲ್ಲಿ ಮುಚ್ಚಟ್ಟೆಯಾಗಿ ಸಾಕುವುದು ಕಾರಣವಿರಬಹುದು ಎಂದರು.

ಜಾಲ ತಾಣಗಳ ಹಾವಳಿ: ಕವಿ ವಾಸುದೇವ ನಾಡಿಗ್‌ ಮಾತನಾಡಿ, ಇಂದು ಫೇಸ್‌ಬುಕ್‌, ವಾಟ್ಸಾéಪ್‌ನಂತಹ ವಿದ್ಯುನ್ಮಾನ ಮಾಧ್ಯಮಗಳು ಓದುಗರನ್ನು ನಿಜವಾದ ಓದಿನಿಂದ ಸುಳ್ಳಿನ ಕಡೆಗೆ ಕರೆದೊಯ್ಯುತ್ತಿವೆ. ರಾತ್ರಿ ಬರೆದ ಪದ್ಯಕ್ಕೆ ಬೆಳಗ್ಗೆ ಪ್ರಶಸ್ತಿ ಬರುತ್ತಿದೆ. ಇಂತಹ ಸುಲಭದ ಓದಿನಿಂದ ಕವಿ ಸಮಾಧಿಯಾಗುತ್ತಾನೆ. ಮಣ್ಣಿನ ಕವಿ ಮರೆಯಾಗುತ್ತಿದ್ದಾನೆ.

ಇಂದು ಬರಹಗಳು ಶಾಪಿಂಗ್‌ ಮಾಲ್‌ನ ವಸ್ತುಗಳಾಗಿ ಬಿಟ್ಟಿವೆ. ಆದರೆ ಕವಿತೆ ಜನಪ್ರಿಯತೆಯನ್ನು ಬಯಸುವ ತೆಳುವಾದ ಮಾಧ್ಯಮವಲ್ಲ. ಕವಿ ಶಬ್ದಗಳನ್ನು ಹುಡುಕಬಾರದು, ಶಬ್ದವೇ ಅವರನ್ನು ಹುಡುಕಿಕೊಂಡು ಬರಬೇಕು. ಬಹುತೇಕ ಯುವ ಕವಿಗಳಿಗೆ ಪದಗಳ ಪರಿಜ್ಞಾನವೇ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕಿ ಶೈಲಜಾ ಹಾಸನ್‌ ಮಾತನಾಡಿ, ಪಿ.ಕೆ.ಶರತ್‌ ಹೆಣ್ಣಿನ ಭಾವನೆಗಳನ್ನು ಸಮರ್ಥವಾಗಿ ಚಿತ್ರಿಸಬಲ್ಲ ಸ್ತ್ರೀ ಸಂವೇದನೆ ಹೊಂದಿರುವ ಸೂಕ್ಷ್ಮ ಕವಿ. ಅಬ್ಬರ, ಆಡಂಬರವಿಲ್ಲದ ಅವರ ಕವಿತೆಗಳು ಮನಸ್ಸಿನಲ್ಲಿ ಉಳಿಯುತ್ತವೆ ಎಂದು ಶ್ಲಾಘಿಸಿದರು.ಕವಯತ್ರಿ ಕಲಾವತಿ ಮಧುಸೂದನ್‌, ಶಿಕ್ಷಕ ಚಂದ್ರಶೇಖರ್‌ ಮಾತನಾಡಿದರು. ಲೇಖಕ ಪಿ.ಕೆ.ಶರತ್‌, ಪ್ರಕಾಶಕ ಸುಹಾಸ್‌ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-blthangady

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!

1-gadag

Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

Hasanamabe

Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್‌ ರದ್ದು

HD-Revanna

Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್‌.ಡಿ.ರೇವಣ್ಣ ಕಿಡಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-blthangady

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!

1-gadag

Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.