ಓ ಕಾಲವೇ ಓಡದಿರು…!
Team Udayavani, Aug 16, 2019, 5:00 AM IST
ಕಾಲೇಜು ಲೈಫು ನಮಗೆಲ್ಲ ಸಾಕು, ಕ್ಯಾಂಪಸ್ಸಲ್ಲಿ ಸೈಟೊಂದು ಬರೆದಾಕೂ…’ ಆಹಾ! ಹಾಗೇನಾದರೂ ಇರುತ್ತಿದ್ದರೆ, ನಾವೆಲ್ಲಾ ಕಾಲೇಜಲ್ಲೇ ಸೈಟು ಖರೀದಿ ಮಾಡುತ್ತಿದ್ದೆವು!
ಹೌದಲ್ವಾ ಸ್ನೇಹಿತರೇ, ಕಾಲೇಜಿಗೆ ಹೋಲುವ ಸ್ವರ್ಗ ಬೇರೊಂದಿಲ್ಲ. ನೆನಪಿರಲಿ, ಕ್ಲಾಸೊಂದನ್ನು ಹೊರತುಪಡಿಸಿ! ಅ ಣ್ಣಾವ್ರು “ಸಾಯೋದರೊಳಗೆ ಒಮ್ಮೆ ನೋಡು ಜೋಗದ ಗುಂಡಿ’ ಅಂದ್ರು. ಆದರೆ, ನಾನು ಅವರ ಕ್ಷಮೆ ಕೋರಿ ಹೇಳ್ತೇನೆ, “ಸಾಯೋದರೊಳಗೆ ಒಮ್ಮೆ ಸೇರು ಕಾಲೇಜು ಕ್ಯಾಂಪಸ್’ ಅಂತ. ಮಗುವಿಗೆ ತಾಯಿಯ ಮಡಿಲು ಹೇಗೋ, ತರುಣರಿಗೆ ಕಾಲೇಜು ಹಾಗೇ. ಕಾಲೇಜಿನ ರಸನಿಮಿಷಗಳನ್ನು ಅನುಭವಿಸದೇ ಇದ್ದರೆ ಜೀವನವೇ ವೇಸ್ಟು. ಕಾಲೇಜು ಸೇರಿದವರಿಗೆ ಅದರಲ್ಲೂ ಅಂತಿಮ ವರ್ಷದಲ್ಲಿರುವವರ ದುಃಖದ ಪಾಡು ಹೇಳತೀರದು. ದಿನಾ ಬೆಳಗ್ಗೆ ಹೋಗಿ ಹಾಯ್ ಹೇಳುವುದರಿಂದ ಹಿಡಿದು, ಮೋಜು-ಮಸ್ತಿ ಮಾಡಿ, ಬರುವಾಗ ಬಾಯ್ ಹೇಳುವ ಆ ದಿನಗಳು ಮತ್ತೆ ಬರುತ್ತದೋ ಇಲ್ಲವೋ, ಅಬ್ಟಾ! ನೆನಪಿಸಿಕೊಂಡರೇ ಭಯ ಆಗುತ್ತೆ.
“ಪರಿಚಯ ಆಕಸ್ಮಿಕ, ಅಗಲುವಿಕೆ ಅನಿವಾರ್ಯ’ ಅಂತಾರೆ. ಒಮ್ಮೊಮ್ಮೆ ಈ ಸಮಯ ಯಾಕಾದರೂ ಸಾಗುತ್ತಪ್ಪಾ ಎಂದು ಅನ್ನಿಸುತ್ತದೆ. ಏನು ಮಾತು, ಆಡಿದಷ್ಟು ಮುಗಿಯುವುದಿಲ್ಲ. ತರಗತಿಗಳು ಮಲಗಿದರೂ ವಿಷಯಗಳು ಮುಗಿಯುವುದಿಲ್ಲ. ಹೇಳಿದಷ್ಟು ತೀರುವುದೂ ಇಲ್ಲ. ಪ್ರತಿದಿನ ಫ್ರೆಂಡ್ಸ್ ಜೊತೆ ಹೇಳಲು ವಿಷಯವಂತೂ ಇದ್ದೇ ಇರುತ್ತದೆ. ವಿಷಯ ತಿಳಿಸಲು ದಿನ ಬೆಳಗಾಗುವುದನ್ನೇ ಕಾಯುವ ನಮಗೆ ಮನೆ ತಲುಪಿದಾಗ ಹೇಳದೇ ಉಳಿದ ವಿಷಯ ನೆನೆದು ಮತ್ತೆ ಹತಾಶೆ. ಗೆಳತಿಯರಿಗೆ ಬರುವ ಪ್ರಮೋಸಲ್‌ಗಳು, ಅದನ್ನು ತಪ್ಪಿಸಲು ನಾವು ಕೊಡುವ ಡಬ್ಬ ಐಡಿಯಾಗಳು, ಮನೆಯಲ್ಲಿ ನಡೆದ ಹಾಸ್ಯಮಯ ಸಂಗತಿಗಳು, ರಾತ್ರಿಯೆಲ್ಲ ಕೂತು ಅತ್ತ ಕ್ಷಣಗಳು, ಕ್ಲಾಸ್ ತಪ್ಪಿಸಲು ಹೇಳುವ ಕುಂಟು ನೆಪಗಳು, ಸುಳ್ಳು ಹೇಳಿ ವಾಶ್‌ರೂಮಿಗೆ ಹೋಗಿ ಎಷ್ಟು ಹೊತ್ತಾದರೂ ಬಾರದ ಸೋಮಾರಿಗಳು, ಮಾಡಿದ ಕಿತಾಪತಿ ಮತ್ತೆ ಮತ್ತೆ ಹೇಳಿ ನಗುವ ಸನ್ನಿವೇಶಗಳು, ಇತರರನ್ನು ನೋಡಿ ಕಮೆಂಟ್ಸ್ ಮಾಡುವ ಮಾತುಗಳು ಪ್ರಿನ್ಸಿಪಾಲ್‌ನ್ನು ಕಂಡರೆ ಓಡುವ ಓಟಗಳು, ನ್ಪೋಟ್ಸ್ ಡೇ ದಿನ ಹಾಕುವ ಬೊಬ್ಬೆಗಳು, ಎಲೆಕ್ಷನ್ ದಿನ ಕೂಗುವ ಎನರ್ಜಿಗಳು, ಟಿಫಿನ್‌ನಲ್ಲೇ ಹಂಚುವ ತುತ್ತುಗಳು ಇನ್ನು ಬರಿಯ ನೆನಪುಗಳು ಮಾತ್ರ ಎನ್ನಿಸುತ್ತವೆ.
ಇಲ್ಲ ! ಸಾಧ್ಯವೇ ಇಲ್ಲ. ಈ ಕ್ಷಣಗಳನ್ನು ಬೀಳ್ಕೊಡಲು ನನ್ನಿಂದ ಸಾಧ್ಯವೇ ಇಲ್ಲ. ಕಣ್ಣಂಚಲ್ಲೇ ಹಾಗೇ ಗೊತ್ತಿಲ್ಲದೆ ನೀರು ಜಿನುಗುತ್ತಿದೆ. ಫ್ರೆಂಡ್ಸೆà ನನಗೆ ಎಲ್ಲ. ನನ್ನಲ್ಲೇನಾದರೂ ಟೈಮ್ ಮಿಷನ್ ಇರುತ್ತಿದ್ದರೆ ಹಾಗೇ ರಿವೈಂಡ್ ಮಾಡಿ ಮತ್ತೆ ಮೊದಲ ದಿನಕ್ಕೆ ಇಟ್ಟುಬಿಡುತ್ತಿದ್ದೆ. ಅಯ್ಯೋ! ಸಾಧ್ಯವಿಲ್ಲದ ಸಂಗತಿಗಳನ್ನು ಆಸೆ ಪಡುತ್ತಿದ್ದೇನೆ. ಕಾಲವೇ ನೀನು ನಿಶ್ಚಿಲವಾಗಿರು!
ಆಯಿಷತ್ತೂಲ್ ಮುನೀರಾ
ಅಂತಿಮ ಬಿ. ಎ., ಮಿಸ್ಬಾಸ್ ವುಮನ್ಸ್ ಕಾಲೇಜ್, ಕಾಟಿಪಳ್ಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.