ಸಿಹಿ ಜೋಳದ ಅಡುಗೆಗಳು

Team Udayavani, Aug 16, 2019, 5:00 AM IST

q-20

ಸಿಹಿ ಜೋಳವೆಂದರೆ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಇಷ್ಟವಾಗುವ ವಸ್ತು. ಇದರಿಂದ ದೋಸೆ, ರೊಟ್ಟಿ , ಪಾಯಸ, ಹಲ್ವಾ ಮುಂತಾದ ಅನೇಕ ಅಡುಗೆಗಳನ್ನು ಮಾಡಿ ಸವಿಯಬಹುದು.

ಸಿಹಿ ಬೇಲ್‌
ಬೇಕಾಗುವ ಸಾಮಗ್ರಿ: 2 ಚಮಚ ಬೆಣ್ಣೆ , 2 ಚಮಚ ನೆಲಗಡಲೆ ಬೀಜ, 1 ಈರುಳ್ಳಿ , 1 ಟೊಮೆಟೊ, 2 ಚಮಚ ಕ್ಯಾರೆಟ್‌ ತುರಿ, 2 ಚಮಚ ಹುರಿಯಕ್ಕಿ, 2 ಚಮಚ ಖಾರ ಸೇವು, 1 ಚಮಚ ನಿಂಬೆರಸ, ಸ್ವಲ್ಪ ಕೊತ್ತಂಬರಿಸೊಪ್ಪು , 1/4 ಕಪ್‌ ಸಿಹಿ ಜೋಳ, ಚಿಟಿಕೆ ಉಪ್ಪು , 1 ಚಮಚ ಬೆಲ್ಲ.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಬೆಣ್ಣೆ ಹಾಕಿ. ಬಿಸಿಯಾದಾಗ ನೆಲಗಡಲೆ ಬೀಜ ಹಾಕಿ ಹುರಿದು ಕೆಳಗಿಳಿಸಿ. ನಂತರ ಈರುಳ್ಳಿ ಚೂರು, ಟೊಮೆಟೊ ಚೂರು, ಸಿಹಿಜೋಳ ಹಾಕಿ ಹುರಿದು, ಬೆಲ್ಲ, ಚಿಟಿಕೆ ಉಪ್ಪು ಹಾಕಿ ಹುರಿದು ಕೆಳಗಿಳಿಸಿ. ನಂತರ ಪಾತ್ರೆಗೆ ಹಾಕಿ ಕ್ಯಾರೆಟ್‌ ತುರಿ, ನಿಂಬೆರಸ, ಕೊತ್ತಂಬರಿ ಸೊಪ್ಪು ಹಾಕಿ ಬೆರೆಸಿ. ನಂತರ ಹುರಿಯಕ್ಕಿ , ಖಾರ ಸೇವು ಹಾಕಿ ತೊಳಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ರುಚಿಯಾದ ಸಿಹಿಬೇಲ್‌ ಸವಿಯಲು ಸಿದ್ಧ.

ಸಿಹಿ ಜೋಳದ ಅಕ್ಕಿರೊಟ್ಟಿ
ಬೇಕಾಗುವ ಸಾಮಗ್ರಿ: 1 ಕಪ್‌ ಸಿಹಿಜೋಳ, ಒಂದೂವರೆ ಕಪ್‌ ಅಕ್ಕಿಹಿಟ್ಟು , 1/4 ಕಪ್‌ ಸಬ್ಬಸಿಗೆ ಸೊಪ್ಪು , 1/2 ಕಪ್‌ ತೆಂಗಿನತುರಿ, 1/2 ಕಪ್‌ ಈರುಳ್ಳಿ ಚೂರು, 1/4 ಚಮಚ ಅರಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು , ಜಜ್ಜಿದ ಶುಂಠಿ 1/4 ಚಮಚ, 1-2 ಹಸಿಮೆಣಸು, 3-4 ಚಮಚ ಎಣ್ಣೆ.

ತಯಾರಿಸುವ ವಿಧಾನ: ಸಿಹಿ ಜೋಳ, ಹಸಿಮೆಣಸು ಸೇರಿಸಿ ತರಿಯಾಗಿ ರುಬ್ಬಿ. ನಂತರ ಅಕ್ಕಿಹಿಟ್ಟು, ಸಬ್ಬಸಿಗೆ ಸೊಪ್ಪು, ತೆಂಗಿನತುರಿ, ಈರುಳ್ಳಿ ಚೂರು, ಅರಸಿನ ಪುಡಿ, ಜಜ್ಜಿದ ಶುಂಠಿ, ರುಬ್ಬಿದ ಸಿಹಿ ಜೋಳದ ಮಿಶ್ರಣ, ಉಪ್ಪು , ಬಿಸಿನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಉಂಡೆಮಾಡಿ ಎಣ್ಣೆ ಪಸೆ ಮಾಡಿದ ಬಾಳೆಲೆಯಲ್ಲಿ ತಟ್ಟಿ ಬಿಸಿಯಾದ ಕಾವಲಿಗೆಯಲ್ಲಿ ಹಾಕಿ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿ ತೆಗೆದರೆ ಸಿಹಿಜೋಳದ ಅಕ್ಕಿರೊಟ್ಟಿ ಸವಿಯಲು ಸಿದ್ಧ.

ಸಿಹಿಜೋಳ-ದ್ರಾಕ್ಷೆ ಸಲಾಡ್‌
ಬೇಕಾಗುವ ಸಾಮಗ್ರಿ: 2 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1 ಎಸಳು ಕರಿಬೇವು, 1/4 ಕಪ್‌ ಕ್ಯಾರೆಟ್‌ ತುರಿ, 1 ಕಪ್‌ ಸಿಹಿಜೋಳ, 1/4 ಕಪ್‌ ತೆಂಗಿನ ತುರಿ, 1/4 ಕಪ್‌ ಒಣದ್ರಾಕ್ಷೆ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಸಿಹಿಜೋಳ, ಕ್ಯಾರೆಟ್‌ ತುರಿ, ತೆಂಗಿನ ತುರಿ, ಒಣದ್ರಾಕ್ಷೆ , ಉಪ್ಪು ಸೇರಿಸಿ ಬೆರೆಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಕೊಡಿ.

ಸಿಹಿಜೋಳದ ಪರೋಟ
ಬೇಕಾಗುವ ಸಾಮಗ್ರಿ: 1 ಕಪ್‌ ಸಿಹಿಜೋಳ, 2 ಹಸಿಮೆಣಸು, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ , 1/2 ಚಮಚ ಖಾರದ ಪುಡಿ, 3 ಚಮಚ ಕೊತ್ತಂಬರಿಸೊಪ್ಪು , ರುಚಿಗೆ ತಕ್ಕಷ್ಟು ಉಪ್ಪು , 1 ಚಮಚ ಸಕ್ಕರೆ, 1/2 ಕಪ್‌ ಗೋಧಿಹಿಟ್ಟು , 2-3 ಚಮಚ ತುಪ್ಪ.

ತಯಾರಿಸುವ ವಿಧಾನ: ಸಿಹಿ ಜೋಳವನ್ನು ಬೇಯಿಸಿ. ನಂತರ ಸಕ್ಕರೆ, ಹಸಿಮೆಣಸು ಸೇರಿಸಿ ರುಬ್ಬಿ. ನಂತರ ಗೋಧಿಹಿಟ್ಟು ಸೇರಿಸಿ ಚಪಾತಿ ಹಿಟ್ಟಿನ ಹಧಕ್ಕೆ ಕಲಸಿ. ಕಲಸುವಾಗ ಉಪ್ಪು ಹಾಕಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಖಾರದ ಪುಡಿ, ಕೊತ್ತಂಬರಿಸೊಪ್ಪು ಸೇರಿಸಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಚಪಾತಿ ಹಿಟ್ಟಿನಿಂದ ಉಂಡೆ ಮಾಡಿ ಮೇಲೆ ಕೊತ್ತಂಬರಿಸೊಪ್ಪಿನ ಮಿಶ್ರಣ ಇಟ್ಟು ಮುಚ್ಚಿ ಚಪಾತಿ ಲಟ್ಟಿಸಿ ತವಾದಲ್ಲಿ ಹಾಕಿ 2 ಬದಿ ಬೇಯಿಸಿ ತೆಗೆಯಿರಿ.

ಸಿಹಿಜೋಳ ತುಕ್ಕುಡಿ
ಬೇಕಾಗುವ ಸಾಮಗ್ರಿ: 1/2 ಕಪ್‌ ಸಿಹಿಜೋಳ, 1 ಕಪ್‌ ಮೈದಾಹಿಟ್ಟು , 1 ಚಮಚ ಕೆಂಪುಮೆಣಸು ಪುಡಿ, 1/2 ಚಮಚ ಜೀರಿಗೆ ಪುಡಿ, 1 ಚಮಚ ಸಕ್ಕರೆ, ಉಪ್ಪು ರುಚಿಗೆ ತಕ್ಕಷ್ಟು , ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ: ಸಿಹಿ ಜೋಳವನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ನಂತರ ಮೈದಾಹಿಟ್ಟಿಗೆ ರುಬ್ಬಿದ ಮಿಶ್ರಣ, ಕೆಂಪುಮೆಣಸು ಪುಡಿ, ಜೀರಿಗೆ ಪುಡಿ, ಸಕ್ಕರೆ, ಉಪ್ಪು, ಬಿಸಿ ಮಾಡಿದ ಎಣ್ಣೆ ಹಾಕಿ ಚೆನ್ನಾಗಿ ಕಲಸಿ ಹದ ಮಾಡಿ. ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿ ಚಪಾತಿ ಮಣೆಯಲ್ಲಿ ತೆಳ್ಳಗೆ ಲಟ್ಟಿಸಿ ಅಂಟದಂತೆ ಮೈದಾ ಹಿಟ್ಟಿಗೆ ಮುಟ್ಟಿಸಿ. ನಂತರ ತುಕ್ಕುಡಿ ಮಾಡುವ ಚಕ್ರದ ಸಹಾಯದಿಂದ ಡೈಮಂಡ್‌ ಆಕಾರದಲ್ಲಿ ತುಂಡು ಮಾಡಿ ಬಿಸಿ ಎಣ್ಣೆಗೆ ಹಾಕಿ ಕರಿದು ತೆಗೆಯಿರಿ. ಈಗ ರುಚಿಯಾದ ಜೋಳದ ತುಕ್ಕುಡಿ ತಿನ್ನಲು ಸಿದ್ಧ.

ಸರಸ್ವತಿ ಎಸ್‌. ಭಟ್‌

ಟಾಪ್ ನ್ಯೂಸ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.