ಪೊಲೀಸ್‌ ಮುಖ್ಯಸ್ಥರ ಹುದ್ದೆಗೆ ಸಮಾಜಘಾತುಕರ ಲಾಬಿ?


ಅರಕೆರೆ ಜಯರಾಮ್‌, Aug 16, 2019, 5:30 AM IST

q-42

ಉನ್ನತ ಪೊಲೀಸ್‌ ಅಧಿಕಾರಿಗಳ ಮೇಲೆ ಇಂತಹ ಆರೋಪ ವ್ಯಕ್ತವಾಗಿರುವುದು ಇದೇ ಮೊದಲು. ಈವರೆಗೆ ಲಾಭದಾಯಕ ಹಾಗೂ ಘನತೆಯ ಹುದ್ದೆಗಳಿಗಾಗಿ ಐಎಎಸ್‌, ಐಪಿಎಸ್‌ ಹಾಗೂ ಇತರ ಅಧಿಕಾರಿಗಳು ಲಾಬಿ ಮಾಡುತ್ತಿದ್ದರು. ಸಚಿವರು, ಹಿರಿಯ ರಾಜಕಾರಣಿಗಳು ಅಥವಾ ತಮ್ಮದೇ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ನೇಮಕಾತಿಗೆ ಪ್ರಯತ್ನಿಸುತ್ತಿದ್ದರು. ಜಾತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಸಂಕುಚಿತ ಮನೋಭಾವದ ಕೆಲವು ಧಾರ್ಮಿಕ ಮುಖಂಡರೂ ಇಂಥ ವಿಚಾರಗಳಲ್ಲಿ ಮಧ್ಯಪ್ರವೇಶಿಸಿ, ತಮ್ಮ ಸಮುದಾಯದವರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತಿದ್ದರು.

ಹಿರಿಯ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ನೇಮಕಾತಿ ಹಾಗೂ ವರ್ಗಾವಣೆಯನ್ನು ಕನ್ನಡದ ಪತ್ರಿಕೆಗಳು ಬಹಳ ಹಿಂದಿನಿಂದಲೂ ಒಂದು ಸಾಮಾನ್ಯ ಪ್ರಕ್ರಿಯೆ ಎಂಬಂತೆ ಪರಿಭಾವಿಸುತ್ತಿವೆ. ನಗರದಲ್ಲಿಂದು ಅಥವಾ ಇಂದಿನ ಕಾರ್ಯಕ್ರಮಗಳ ಪಟ್ಟಿಯಂತೆಯೇ ಇದನ್ನೂ ವಿಶೇಷ ಆದ್ಯತೆಯೇನೂ ಇಲ್ಲದೆ ಪ್ರಕಟಿಸುತ್ತಿವೆ. ಹೀಗಿದ್ದರೂ ಕೆಲವು ನೇಮಕಾತಿಗಳು ವಿವಾದಾತ್ಮಕವಾಗಿದ್ದಾಗ ಆದ್ಯತೆಯ ಮೇರೆಗೆ ಹಾಗೂ ವಿವರವಾಗಿ ಬರೆಯುವುದುಂಟು.

ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರಕ್ಕೆ ಬಂದ ಬಳಿಕ ಹಲವು ವಿಚಾರಗಳು ಬದಲಾಗಿವೆ. ರಾಮಕೃಷ್ಣ ಹೆಗಡೆ ಅವರ ಸರಕಾರವು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಹಾಗೂ ಮಹಾ ನೀರಿಕ್ಷಕರು ಅವರನ್ನು ಬದಲಿಸಿತು. ಕೆಲವೇ ಅವಧಿಗೆ ಆಡಳಿತ ನಡೆಸಿದ್ದ ಪೊಲೀಸ್‌ ಮುಖ್ಯಸ್ಥ ದಿ| ಕೆ.ಸಿ.ಕೆ. ರಾಜಾ ಅವರನ್ನು ಕೆಳಗಿಳಿಸಿ, ಅವರ ಜಾಗಕ್ಕೆ ಬಿ.ಎನ್‌. ಗರುಡಾಚಾರ್‌ ಅವರನ್ನು ನಿಯುಕ್ತಿಗೊಳಿಸಿತು. ಸೌಮ್ಯ ಸ್ವಭಾವದ, ಆದರೆ ಅತ್ಯಂತ ಚತುರರಾಗಿದ್ದ ರಾಜಾ ಅವರು ತಮ್ಮ ಹುದ್ದೆಯಲ್ಲಾದ ಬದಲಾವಣೆಯನ್ನು ಸಹಜವಾಗಿಯೇ ಸ್ವೀಕರಿಸಿದರು. ನ್ಯಾಯಾಲಯದ ಮೊರೆ ಹೋಗಲೂ ಇಲ್ಲ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ (1975-77) ರಾಜ್ಯದ ಸೆನ್ಸಾರ್‌ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಅವರು ಎಲ್ಲ ಪತ್ರಿಕೆಗಳ ‘ಸುದ್ದಿ ಸಂಪಾದಕ’ರಾಗಿಯೇ ನೆನಪಿನಲ್ಲಿ ಉಳಿದಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಬೆಂಗಳೂರು ನಗರದ ನೂತನ ಪೊಲೀಸ್‌ ಆಯುಕ್ತರ ನೇಮಕಾತಿ ವಿವಾದಾತ್ಮಕ ವಿಚಾರವಾಗಿ ಬದಲಾಗಿದೆ. ಪ್ರಶ್ನಾರ್ಹವೂ ಆಗಿದೆ. ನೂತನ ಪೊಲೀಸ್‌ ಮುಖ್ಯಸ್ಥ ಭಾಸ್ಕರ್‌ ರಾವ್‌ ಹಾಗೂ ಇತರ ಕೆಲವು ಹಿರಿಯ ಅಧಿಕಾರಿಗಳ ದೂರವಾಣಿಗಳನ್ನು (ಸ್ಥಿರ ಹಾಗೂ ಮೊಬೈಲ್) ಇಲಾಖೆಯಲ್ಲೇ ಒಬ್ಬರು ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪ ಒಂದು ರೋಚಕ ಪತ್ತೇದಾರಿ ಕಥಾನಕಕ್ಕೆ ಸೂಕ್ತವಾಗಿದೆ. ಈ ಆರೋಪಗಳ ಕುರಿತಾಗಿ ರಾವ್‌ ಅವರು ತನಿಖೆಗೂ ಆದೇಶಿಸಿದ್ದಾರೆ.

ನಿರ್ಗಮಿತ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ಬೇಸರಿಸಿಕೊಳ್ಳಲು ಕಾರಣವಿದೆ. ಅವರು ಕೇವಲ 47 ದಿನಗಳ ಅವಧಿಗೆ ಬೆಂಗಳೂರು ಪೊಲೀಸ್‌ ಆಯುಕ್ತರಾಗಿದ್ದರು. ಅನೇಕ ಸಹೋದ್ಯೋಗಿಗಳ ಸೇವಾ ಹಿರಿತನವನ್ನು ಅವಗಣಿಸಿಯೇ ಅಲೋಕ್‌ ಕುಮಾರ್‌ ಅವರನ್ನು ಕುಮಾರಸ್ವಾಮಿ ಸರಕಾರ ನೇಮಿಸಿತ್ತು ಎಂಬುದನ್ನು ಯಾರೂ ಮರೆಯುವಂತಿಲ್ಲ. ಸೇವಾ ಹಿರಿತನ, ಅನುಭವ, ಅರ್ಹತೆ ಎಲ್ಲವನ್ನೂ ಮರೆತು ವೈಯಕ್ತಿಕ ನೆಚ್ಚಿಕೆಯ ನೆಲೆಯಲ್ಲಿ ಈ ನೇಮಕಾತಿ ನಡೆದಿತ್ತು. ಇದಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಭಾಸ್ಕರ್‌ ರಾವ್‌ ಅವರು ಅಲೋಕ್‌ ಕುಮಾರ್‌ ಅವರಿಗಿಂತ ನಾಲ್ಕು ವರ್ಷ ಹಿರಿಯರು. ಐಪಿಎಸ್‌ ಹುದ್ದೆಗೆ 1990ರಲ್ಲಿ ಆಯ್ಕೆಯಾದವರು. ಅಲೋಕ್‌ ಕುಮಾರ್‌ ಅವರಿಗೆ ಈಗ ಕೇವಲ 50ರ ಹರೆಯ. ಕೇಂದ್ರ ಹಾಗೂ ರಾಜ್ಯದ ಪೊಲೀಸ್‌ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಗೇರಲು ಇನ್ನೂ ಹತ್ತು ವರ್ಷಗಳ ಕಾಲಾವಕಾಶವಿದೆ. 2015ರ ಮೇ ತಿಂಗಳಲ್ಲಿ ಅಕ್ರಮ ಲಾಟರಿ ಯೋಜನೆಯೊಂದರಲ್ಲಿ ಅವರ ಹೆಸರು ತಳಕು ಹಾಕಿಕೊಂಡಿದ್ದರಿಂದ ಅಲೋಕ್‌ ಕುಮಾರ್‌ ಅಮಾನತಿಗೂ ಒಳಗಾಗಿದ್ದರು.

ಕದ್ದಾಲಿಕೆ ಗುಮ್ಮ
ದೂರವಾಣಿ ಕದ್ದಾಲಿಕೆ ವಿಚಾರ ಕರ್ನಾಟಕಕ್ಕೆ ಹೊಸದೇನೂ ಅಲ್ಲ. ಇಂಥ ಆರೋಪ ರಾಮಕೃಷ್ಣ ಹೆಗಡೆ ಅವರ ರಾಜಕೀಯ ಜೀವನದಲ್ಲಿ ಚೇತರಿಸಿಕೊಳ್ಳಲಾಗದಷ್ಟು ದೊಡ್ಡ ಆಘಾತವನ್ನೇ ನೀಡಿತು. 1988ರಲ್ಲಿ ವಿಪಕ್ಷ ನಾಯಕರು ಹಾಗೂ ಕೆಲವು ಉದ್ಯಮಿಗಳ ದೂರವಾಣಿಗಳ ಕದ್ದಾಲಿಕೆ ಮಾಡಿದ್ದಾರೆಂಬ ಆರೋಪ ವ್ಯಕ್ತವಾದಾಗ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಈ ವಿಚಾರವನ್ನು ಅನಗತ್ಯವಾಗಿ ಕೆದಕಿದರೆಂದು ಎಚ್.ಡಿ. ದೇವೇಗೌಡರ ಆಗಿನ ಒಡನಾಡಿ ಡಾ| ಸುಬ್ರಹ್ಮಣ್ಯಂ ಸ್ವಾಮಿ ಅವರ ಮೇಲೆ ರಾಮಕೃಷ್ಣ ಹೆಗಡೆ ಕಿಡಿಕಾರಿದರು. ಡಾ| ಸ್ವಾಮಿ ವಿರುದ್ಧ ಹೆಗಡೆ ಅವರು ಸುಪ್ರೀಂ ಕೋರ್ಟಿಗೂ ಮೊರೆಹೋದರು.

ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಹಾಗೂ ವಿಪಕ್ಷಗಳ ನಾಯಕರಿಗೆ ಮೂಗುದಾರ ಹಾಕಲು ಪೊಲೀಸರು ದೂರವಾಣಿ ಕದ್ದಾಲಿಕೆ ಹಾಗೂ ಸಂದೇಶಗಳನ್ನು ಕದ್ದು ಓದುವುದನ್ನು ಅಸ್ತ್ರವಾಗಿ ಬಳಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ. ಕೆಲವು ಆರೋಪಿಗಳನ್ನು ಬಂಧಿಸಿದ ಸಂದರ್ಭದಲ್ಲಿ ಪೊಲೀಸರು ಅವರ ಬಾಯಿ ಬಿಡಿಸಲು ಮೂರನೇ ದರ್ಜೆಯ ಉಪಚಾರವನ್ನು ಅನಿವಾರ್ಯವಾಗಿ ಬಳಸುತ್ತಿದ್ದರೂ ಸಾರ್ವಜನಿಕವಾಗಿ ಅದನ್ನು ನಿರಾಕರಿಸುತ್ತಾರೆ. ದೂರವಾಣಿ ಕದ್ದಾಲಿಕೆ ಕುರಿತಾಗಿ ಕೇಳಿದಾಗಲೂ ಇಲ್ಲವೆನ್ನುತ್ತಾರೆ.

ಪೊಲೀಸರು ಈಗ ಹಿಂದಿನಂತೆ ಕಳ್ಳರು ಹಾಗೂ ಇತರ ಆರೋಪಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಿಲ್ಲ ಎಂದೂ ತಮಾಷೆಯಾಗಿ ಹೇಳುವುದುಂಟು. ಇದಕ್ಕೆ ಬದಲಾಗಿ ಆರೋಪಿಗಳ ಜತೆಗೆ ನೇರವಾಗಿ ದಂಧೆಗಿಳಿದು ತಮ್ಮ ಪಾಲನ್ನು ಪಡೆಯುತ್ತಾರೆ. ದೂರು ಬಂದಾಗ ದಾಖಲಿಸುವುದನ್ನು ಬಿಟ್ಟು ಪೊಲೀಸರು ದೂರುದಾರರು ಹಾಗೂ ಆರೋಪಿಗಳನ್ನು ಸಮಕ್ಷಮ ಕರೆದು ಸಂಧಾನಕ್ಕೆ ಪ್ರಯತ್ನಿಸುತ್ತಾರೆ. ಸಿವಿಲ್ ಪ್ರಕರಣಗಳಲ್ಲಿ ಮಧ್ಯಪ್ರವೇಶಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಪೊಲೀಸರು ಮೂಗು ತೂರಿಸದೆ ಬಿಡುವುದಿಲ್ಲ.

ಉನ್ನತ ಪೊಲೀಸ್‌ ಅಧಿಕಾರಿಗಳ ನಡುವಿನ ಖಾಸಗಿ ಸಂಭಾಷಣೆಯನ್ನು ಕದ್ದಾಲಿಸಲಾಗಿದೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ. ಈ ಕದ್ದಾಲಿಕೆಯನ್ನು ಮಾಡಿರುವ ವ್ಯಕ್ತಿಗೆ ಸಹೋದ್ಯೋಗಿಗಳ ಖಾಸಗಿತನದ ಹಕ್ಕುಗಳನ್ನು ತಾನು ಉಲ್ಲಂಘಿಸುತ್ತಿದ್ದೇನೆ ಎಂಬ ಅರಿವೂ ಇದ್ದಂತಿಲ್ಲ.

ರಕ್ಷಕರ ಹುದ್ದೆಗೆ ಭಕ್ಷಕರ ನೆರವು?
ಮೇಲ್ನೋಟಕ್ಕೆ ಹೇಳುವುದಾದರೆ, ಒಬ್ಬ ಹಿರಿಯ ಐಎಎಸ್‌ ಅಧಿಕಾರಿ ಒಂದು ನಿರ್ದಿಷ್ಟ ಹುದ್ದೆಗೆ ನೇಮಕಗೊಳ್ಳಲು ಸಮಾಜಘಾತುಕ ಶಕ್ತಿಯೊಂದರ ನೆರವು ಪಡೆಯುವ ಸಾಧ್ಯತೆ ಇಲ್ಲ. ವಿಧಾನಸೌಧದ ಮಟ್ಟದಲ್ಲೂ ಆಡಳಿತ ವ್ಯವಸ್ಥೆಯಲ್ಲಿ ಕೆಲವು ಮಧ್ಯವರ್ತಿಗಳು ಹಾಗೂ ಫಿಕ್ಸರ್‌ಗಳು ಸಕ್ರಿಯವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾದರೂ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿಯ ನೇಮಕಾತಿ ವಿಚಾರದಲ್ಲಿ ಒಬ್ಬ ಮುಖ್ಯಮಂತ್ರಿ ಅಥವಾ ಮಂತ್ರಿ ಸಮಾಜಘಾತುಕ ಶಕ್ತಿಯೊಂದರ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಶಕ್ತಿ ಸೌಧದ ಜಗಲಿಗಳನ್ನು ದಲಾಲ್ ಸ್ಟ್ರೀಟ್‌ಗಳಾಗಿ ಪರಿವರ್ತಿಸಿದ್ದು ರಾಜಕೀಯ ನಾಯಕರು, ಮಂತ್ರಿಗಳು, ಅವರ ಸಂಬಂಧಿಕರು, ಸ್ನೇಹಿತರು, ಪಕ್ಷಗಳ ಕಾರ್ಯಕರ್ತರು ಹಾಗೂ ಬಾಲಬಡುಕರು ಎಂಬ ಸತ್ಯವನ್ನು ಮರೆತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೆಲವು ಪತ್ರಕರ್ತರ ಮೇಲೆ ದಲ್ಲಾಳಿಗಳೆಂಬ ಆರೋಪ ಹೊರಿಸಿದರು. ಇದು ಸರಿಯೇ?

ಉನ್ನತ ಪೊಲೀಸ್‌ ಅಧಿಕಾರಿಗಳ ಮೇಲೆ ಇಂತಹ ಆರೋಪವೊಂದು ವ್ಯಕ್ತವಾಗಿರುವುದು ಇದೇ ಮೊದಲು. ಇದು ವಿಚಿತ್ರವೂ ಆಘಾತಕಾರಿಯೂ ಆಗಿದೆ. ಈ ವರೆಗೆ ಉನ್ನತ, ಲಾಭದಾಯಕ ಹಾಗೂ ಘನತೆಯ ಹುದ್ದೆಗಳಿಗಾಗಿ ಐಎಎಸ್‌, ಐಪಿಎಸ್‌ ಹಾಗೂ ಇತರ ಅಧಿಕಾರಿಗಳು ಲಾಬಿ ಮಾಡುತ್ತಿದ್ದರು. ಸಚಿವರು, ಹಿರಿಯ ರಾಜಕಾರಣಿಗಳು ಅಥವಾ ತಮ್ಮದೇ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ನೇಮಕಾತಿಗೆ ಪ್ರಯತ್ನಿಸುತ್ತಿದ್ದರು. ಜಾತಿ ಹಾಗೂ ಸಮುದಾಯವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಸಂಕುಚಿತ ಮನೋಭಾವದ ಕೆಲವು ಧಾರ್ಮಿಕ ಮುಖಂಡರೂ ಇಂಥ ವಿಚಾರಗಳಲ್ಲಿ ಮಧ್ಯಪ್ರವೇಶಿಸಿ, ತಮ್ಮ ಸಮುದಾಯದವರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತಿದ್ದರು.

ಕೆಲವು ದಿನಗಳಿಂದ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಗಳು ಕೇಂದ್ರದ ಆಡಳಿತಾತ್ಮಕ ನ್ಯಾಯಮಂಡಳಿಗಳು, ಉಚ್ಚ ನ್ಯಾಯಾಲಯಗಳು ಹಾಗೂ ಸುಪ್ರೀಂ ಕೋರ್ಟಿನಲ್ಲೂ ಮುಂಚೂಣಿಯಲ್ಲಿದ್ದಾರೆ. ಅವರೆಲ್ಲ ನಿರ್ದಿಷ್ಟ ನೇಮಕಾತಿಗಳ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಂಡದ್ದಿಲ್ಲ. ಪ್ರಕಾಶ್‌ ಸಿಂಗ್‌ ವರ್ಸಸ್‌ ಭಾರತ ಸರಕಾರ (2006) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ರಾಜ್ಯಗಳ ಪೊಲೀಸ್‌ ಮುಖ್ಯಸ್ಥರ ಹುದ್ದೆಗೆ ನೇಮಕವಾಗುವ ಅಧಿಕಾರಿಗೆ ಕನಿಷ್ಠ ಎರಡು ವರ್ಷಗಳ ಸೇವಾವಧಿ ನಿಗದಿಗೊಳಿಸಬೇಕು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರಾಮರ್ಶೆ ಬಳಿಕವೇ ನೇಮಕಾತಿ ನಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಇದನ್ನು ಜಾರಿಗೆ ತರುವಲ್ಲಿ ವಿಫ‌ಲವಾದ ಕೇಂದ್ರ ಸರಕಾರ ತನ್ನನ್ನು ತಾನೇ ಬೈದುಕೊಳ್ಳಬೇಕಿದೆ. ಸರಕಾರ ಯುಪಿಎಸ್ಸಿಗೆ ಮೂವರು ಅರ್ಹರ ಯಾದಿಯನ್ನು ಕಳುಹಿಸಬೇಕು. ಸುಪ್ರೀಂ ಕೋರ್ಟ್‌ ಆದೇಶವನ್ನು ಭಾಗಶಃ ಜಾರಿ ಮಾಡಲಾಗಿದೆ ಎನ್ನುವುದನ್ನು ನಿಸ್ಸಂಶಯವಾಗಿ ಒಪ್ಪಿಕೊಳ್ಳಬೇಕು. ಜುಲೈ 2018ರಲ್ಲಿ ಸುಪ್ರೀಂ ಕೋರ್ಟ್‌ (ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ) ಪೊಲೀಸ್‌ ಮುಖ್ಯಸ್ಥನಾಗಿ ನೇಮಕಗೊಳ್ಳುವ ಅಧಿಕಾರಿ ಗಣನೀಯವಾದ ಸೇವಾವಧಿಯನ್ನು ಹೊಂದಿರಬೇಕು ಎಂದು ನಿರ್ದೇಶನ ನೀಡಿದೆ. ಪ್ರಕಾಶ್‌ ಸಿಂಗ್‌ ಪ್ರಕರಣದ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದೆ.

ಡಿಜಿ-ಐಜಿಪಿ ಹುದ್ದೆಗೆ ಪ್ರಭಾರಿ ಅಧಿಕಾರಿಗಳನ್ನು ನೇಮಿಸಬಾರದು ಎಂದೂ ಸರ್ವೋಚ್ಚ ನ್ಯಾಯಾಲಯ ಹೇಳಿದೆ. 2011ರಲ್ಲಿ ಕರ್ನಾಟಕ ಸರಕಾರ ಎಸ್‌.ಟಿ. ರಮೇಶ್‌ ಅವರಿಗೆ ಹುದ್ದೆಯನ್ನು ಪ್ರಭಾರವಾಗಿ ನೀಡಿದ ನಿದರ್ಶನವಿದೆ. ಪೊಲೀಸ್‌ ಮುಖ್ಯಸ್ಥರಾಗಿ ಅವರು ಕಾಯಂಗೊಳ್ಳಲೇ ಇಲ್ಲ. ಉತ್ತರ ಪ್ರದೇಶದ ಮಾಜಿ ಪೊಲೀಸ್‌ ಮುಖ್ಯಸ್ಥ ಪ್ರಕಾಶ್‌ ಸಿಂಗ್‌ ಅವರು ಗಡಿ ಭದ್ರತಾ ಪಡೆಯ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಿದೆ.

ಯುಪಿಎಸ್ಸಿಗೆ ಅರ್ಹರ ಯಾದಿ ಸಲ್ಲಿಕೆಯೂ ವಿವಾದದ ವಿಷಯವಾಗುತ್ತಿದೆ. 2011ರಲ್ಲಿ ಮಾಜಿ ಡಿಜಿಪಿ ಡಿ.ವಿ. ಗುರುಪ್ರಸಾದ್‌ ಅವರು ಡಿಜಿ ದರ್ಜೆಯ ಅಧಿಕಾರಿಗಳನ್ನು ಮಾತ್ರ ನೇಮಕಾತಿಗೆ ಪರಿಗಣಿಸುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣದ ಮೊರೆಹೋಗಿದ್ದರು.

30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಎಡಿಜಿಪಿಗಳನ್ನೂ ಪರಿಗಣಿಸಬೇಕೆಂಬ ತಮ್ಮ ಸಹೋದ್ಯೋಗಿ ಶಂಕರ್‌ ಬಿದರಿ ಅವರ ನಿಲುವನ್ನು ಗುರುಪ್ರಸಾದ್‌ ವಿರೋಧಿಸಿದ್ದರು. ಎನ್‌. ಅಚ್ಯುತ ರಾವ್‌ ಅವರನ್ನು ಪೊಲೀಸ್‌ ಮುಖ್ಯಸ್ಥರಾಗಿ ನೇಮಿಸುವ ಮೊದಲೇ ಈ ಪ್ರಕ್ರಿಯೆ ನಡೆದು, ಗುರುಪ್ರಸಾದ್‌ ನಿರಾಶೆ ಅನುಭವಿಸಬೇಕಾಯಿತು.

ಆ ಬಳಿಕ ಈ ಹುದ್ದೆಗಾಗಿ ಶಂಕರ್‌ ಬಿದರಿ ಹಾಗೂ ಎ.ಆರ್‌. ಇನ್‌ಫ್ಯಾಂಟ್ ಅವರ ನಡುವೆ ದೊಡ್ಡ ಕಾನೂನು ಸಂಘರ್ಷವೇ ನಡೆಯಿತು. ಒಬ್ಬರಾದ ಬಳಿಕ ಒಬ್ಬರಂತೆ ಈ ಇಬ್ಬರೂ ಉನ್ನತ ಹುದ್ದೆಯನ್ನು ಅಲಂಕರಿಸಿ ಪೊಲೀಸ್‌ ದಂಡವನ್ನು ಒಂದಕ್ಕಿಂತ ಹೆಚ್ಚು ಬಾರಿ ಹಸ್ತಾಂತರಿಸಿಕೊಂಡರು. ಸುದೀರ್ಘ‌ ಸೇವಾವಧಿ, ಅತ್ಯುತ್ತಮ ಸೇವಾ ದಾಖಲೆ ಹಾಗೂ ಅನುಭವದ ಆಧಾರದಲ್ಲಿ ತಮ್ಮ ನೇಮಕ ಆಗಬೇಕೆಂದು ಬಿದರಿ ಬಯಸಿದ್ದರು. ಹಲವು ಕಾರಣಗಳಿಂದ ಈ ಉನ್ನತ ಹುದ್ದೆ ಕೈತಪ್ಪಿದ ಹಲವು ಅಧಿಕಾರಿಗಳ ವಿಚಾರದಲ್ಲೂ ಇದನ್ನೇ ಹೇಳಬಹುದು.

ಬೆಂಗಳೂರಿನ ಉನ್ನತ ಪೊಲೀಸ್‌ ಅಧಿಕಾರಿಗಳೇ ಹುದ್ದೆಗಾಗಿ ನಡೆಸಿದ ಪ್ರಯತ್ನಗಳು ಹಾಗೂ ಕೆಸರೆರಚಾಟಗಳು ರಾಜಕೀಯ ಸಂಪರ್ಕಗಳಿರುವ ಅವರ ಕೈಕೆಳಗಿನ ಅಧಿಕಾರಿಗಳ ಮೇಲೆ ಪರಿಣಾಮ ಬೀರಿವೆ. ಹುದ್ದೆಗಳು ಸಣ್ಣವಾದರೂ ತಮ್ಮ ಆರ್ಥಿಕ ಹಾಗೂ ರಾಜಕೀಯ ಪ್ರಾಬಲ್ಯದ ಕಾರಣದಿಂದ ಇವರೆಲ್ಲ ಹಿರಿಯ ಐಪಿಎಸ್‌ ಅಧಿಕಾರಿಗಳ ಮೇಲೆ ಅಂತಹ ಗೌರವವನ್ನೇನೂ ಹೊಂದಿಲ್ಲ ಎಂಬುದು ಗಮನಾರ್ಹ.

ಟಾಪ್ ನ್ಯೂಸ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.