ಮಕ್ಕಳ ಕಲಾತ್ಮಕತೆಯನ್ನು ಗುರುತಿಸುವುದು ಪೋಷಕರ ಕರ್ತವ್ಯ: ಅಲಪಾಟಿ ವಿಠ್ಠಲೇಶ್ವರ್
ಮಣಿಪಾಲದ ತ್ರಿವರ್ಣ ಕಲಾ ಕೇಂದ್ರದಲ್ಲಿ ‘ಕಲಾ ಸ್ಪೂರ್ತಿ’ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ
Team Udayavani, Aug 16, 2019, 2:07 AM IST
ಉಡುಪಿ : ಮಕ್ಕಳಲ್ಲಿರುವ ಕಲಾತ್ಮಕತೆಯನ್ನು ಗುರುತಿಸುವುದು ಪ್ರತೀ ಹೆತ್ತವರ ಕರ್ತವ್ಯ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಹ್ಯುಮಾನಿಟೀಸ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥರಾದ ಪ್ರೋಫೆಸರ್ ಅಲಪಾಟಿ ವಿಠ್ಠಲೇಶ್ವರ್ ಅವರು ಅಭಿಪ್ರಾಯಪಟ್ಟರು.
ಮಣಿಪಾಲದಲ್ಲಿರುವ ತ್ರಿವರ್ಣ ಕಲಾ ಕೇಂದ್ರದ ‘ಕಲಾ ಸ್ಪೂರ್ತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ವೇದಿಕೆ ವಿದ್ಯಾರ್ಥಿಗಳಿಗೆ ಮುಂದಿನ ಯಶಸ್ವಿಗೆ ಅವಕಾಶ ಕಲ್ಪಿಸಿದೆ ಹಾಗಾಗಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಅವರು ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಕುಂಜಿಬೆಟ್ಟು ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಶನ್ ನ ಪ್ರಾಂಶುಪಾಲರಾದ ಶ್ರೀಮತಿ ಸುನೀತಾ, ಉಡುಪಿಯ ಇನ್ಫಿನಿಟ್ ಪವರ್ ಸೊಲ್ಯುಶನ್ಸ್ ನ ಉಧ್ಯಮಿ ಪ್ರಶಾಂತ್ ರಾವ್, ಉಡುಪಿ – ಇಂದ್ರಾಳಿ ಜೆಸಿಐ ಸ್ಥಾಪಕಾಧ್ಯಕ್ಷೆ ಶೆರ್ಲಿ ಮನೋಜ್ ಹಾಗೂ ತ್ರಿವರ್ಣ ಕಲಾ ಕೇಂದ್ರದ ಮುಖ್ಯಸ್ಥ, ಕಲಾಲಯದ ಹರೀಶ್ ಸಾಗಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ 70 ಜ್ಯೂನಿಯರ್ ವಿದ್ಯಾರ್ಥಿಗಳ ಕಲಾಕೃತಿ ಪ್ರದರ್ಶನ, 46 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಪೋಷಕರಿಗೆ ಕಲೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ದಿಯಾ ಕುಂದರ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಲಾ ಕೇಂದ್ರದ ಶಿಕ್ಷಕಿ ಪವಿತ್ರಾ ಸಿ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಲಾವಿದ ಹರೀಶ್ ಸಾಗಾ ಅವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅದಿಥಿ ಎ. ರಾಜ್ ವಂದನಾರ್ಪಣೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.