ಇಂದಿನಿಂದ ರಾಘವೇಂದ್ರ ಸ್ವಾಮಿ ಆರಾಧನೆ ಮಹೋತ್ಸವ
Team Udayavani, Aug 16, 2019, 3:12 PM IST
ಮಾಗಡಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗೆ ವಿಶೇಷ ಅಲಂಕಾರ.
ಮಾಗಡಿ: ಗುರುರಾಜ ಸೇವಾ ಟ್ರಸ್ಟ್ ವತಿಯಿಂದ ರಾಘವೇಂದ್ರ ಸ್ವಾಮೀಜಿಗಳ 348ನೇ ಆರಾಧನೆ ಮಹೋತ್ಸವ ಆ.16ರಿಂದ ಆ.18ರವರೆಗೆ ನಡೆಯಲಿದೆ ಎಂದು ಬಿ.ಎಸ್.ಹಿರಿಯಣ್ಣ ತಿಳಿಸಿದ್ದಾರೆ.
ಆರಾಧನೆ ಮಹೋತ್ಸವದ ಪ್ರಯುಕ್ತ ಆ.16ರ ಶುಕ್ರವಾರ ಪೂರ್ವಾರಾಧನೆ, ಇದರ ಅಂಗವಾಗಿ ರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ, ಕನಕಾಭಿಷೇಕ ಸೇವೆ, ವಿಶೇಷ ಅಲಂಕಾರ, ಮಂಗಳವಾಧ್ಯ ಸೇವೆ ನಂತರ ಮಧ್ಯಾಹ್ನ 11 ಗಂಟೆಗೆ ಗುರುಗಳ ಪಾದ ಪೂಜೆ, ಕನಕಾಭಿಷೇಕ, ವಿಶೇಷ ಪೂಜೆ, ಪ್ರಸಾದ ನಿಯೋಗ ನಡೆಯಲಿದೆ. ಸಂಜೆ ಶ್ರೀಮಾತಾ ಮಹಿಳಾ ಮಂಡಲಿ ವತಿಯಿಂದ ದೇವರ ನಾಮ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ.
ಶನಿವಾರ ರಾಯರ ಮಧ್ಯಾರಾಧನೆ: ಆ.17ರಂದು ನಡೆಯುವ ಮಧ್ಯಾರಾಧನೆ ಅಂಗವಾಗಿ ರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ, ಕನಕಾಭಿಷೇಕ ಸೇವೆ, ವಿಶೇಷ ಅಲಂಕಾರ, ಸುಪ್ರಭಾತ ಸೇವೆ, ರಾಯರಿಗೆ ನಿರ್ಮಲ್ಯ ಸೇವೆ, ಮಧ್ಯಾಹ್ನ 11 ಗಂಟೆಗೆ ಗುರುರಾಯರ ರಥೋತ್ಸವ ಹಾಗೂ ವಿಶೇಷ ಪೂಜೆ, ಪ್ರಸಾದ ನಿಯೋಗ ನಡೆಯಲಿದೆ. ಸಂಜೆ ಶ್ವೇತ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
18ರಂದು ಉತ್ತರಾಧನೆ: ಆ.18ರ ಭಾನುವಾರ ನಡೆಯುವ ಉತ್ತರಾಧನೆ ಅಂಗವಾಗಿ ರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ, ಕನಕಾಭಿಷೇಕ ಸೇವೆ, ಸುಪ್ರಭಾತ ಸೇವೆ, ಕನಕಭಿಷೇಕ ಪೂಜೆ ನಡೆಯಲಿದೆ. ಸಂಜೆ ಆರ್ಯವೈಶ್ಯ ಮಹಿಳಾ ಮಂಡಲಿ ವತಿಯಿಂದ ಲಲಿತಾ ಸಹಸ್ರನಾಮ ಪಾರಾಯಣ ಮತ್ತು ದೇವರ ನಾಮ ಹಾಗೂ ಪ್ರಕಾರೋತ್ಸವ ನೆರವೇರಲಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.