ನೆರೆ ಇಳಿಮುಖ; ಎಲ್ಲೆಡೆ ಕಸದ ರಾಶಿ ರಾಶಿ!
ಕಸ ಸಾಗಿಸಲು ಜಿಲ್ಲಾಡಳಿತದಿಂದ ಹರಸಾಹಸ
Team Udayavani, Aug 16, 2019, 3:51 PM IST
ಶಿವಮೊಗ್ಗ: ಮಂಜುನಾಥ ಟಾಕೀಸ್ ರಸ್ತೆಯಲ್ಲಿ ಬಿದ್ದಿರುವ ಕಸ.
ಶಿವಮೊಗ್ಗ: ಪ್ರವಾಹ ಇಳಿಮುಖವಾದ ನಂತರ ಜನ ಮನೆಗಳತ್ತ ಧಾವಿಸುತ್ತಿದ್ದು, ನೀರು ಪಾಲಾದ ಹಾಸಿಗೆ, ಬಟೆ, ಪೇಪರ್, ಟಿವಿ, ಫ್ರಿಡ್ಜ್ ಇನ್ನಿತರ ವಸ್ತುಗಳು ರಸ್ತೆಗೆ ಬೀಳುತ್ತಿವೆ. ಎಲ್ಲಿ ನೋಡಿದರೂ ಕಸವ ಪರ್ವತವೇ ಕಾಣುತ್ತಿದೆ.
ಮಂಗಳವಾರ ಬಹಳಷ್ಟು ಜನ ಮನೆಗೆ ವಾಪಸಾಗಿದ್ದರು. ಮನೆಯೊಳಗೆ ಕೊಳಚೆ ನೀರು ನುಗ್ಗಿದ ಕಾರಣ ಬಹುತೇಕ ವಸ್ತುಗಳು ಮರುಬಳಕೆಗೆ ಬರದಂತಾಗಿದೆ. ಮಹಾನಗರ ಪಾಲಿಕೆಯು ಪ್ರತಿದಿನವೂ ಸರಕು ಸಾಗಣೆ ವಾಹನ ಮತ್ತು ಲಾರಿಗಳಲ್ಲಿ ಕಸ ಸಾಗಿಸಿದರೂ ಪ್ರತಿದಿನವೂ ಭಾರಿ ಪ್ರಮಾಣದ ಕಸ ಬೀಳುತ್ತಲೇ ಇದೆ.
ನಗರದೊಳಗೆ ಸುಮಾರು 30 ಬಡಾವಣೆಗಳಿಗೆ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿದ್ದವು. ಮನೆಯೊಳಗೆ ಎಲ್ಲ ಸಾಮಗ್ರಿಗಳು ನೀರಿನಲ್ಲಿ ಮುಳುಗಿದ್ದವು. ಅವುಗಳಲ್ಲಿ ದುಬಾರಿ ಬೆಲೆಯ ಹಾಸಿಗೆಗಳು, ಹತ್ತಿ ಹಾಸಿಗೆಗಳು, ಬಟ್ಟೆಗಳು, ಪುಸ್ತಕ, ಪೇಪರ್ ತೊಯ್ದು ತೊಪ್ಪೆಯಾಗಿವೆ. ಪ್ರವಾಹ ಇಳಿದ
ಬಳಿಕ ಭಾನುವಾರ ಬೆಳಗ್ಗೆಯಿಂದ ನಿವಾಸಿಗಳು ಮನೆಯೊಳಗೆ ತೊಯ್ದ ಸಾಮಗ್ರಿಗಳನ್ನು ತಂದು ರಸ್ತೆಗೆ ಹಾಕುತ್ತಿದ್ದಾರೆ.
ಪ್ಲೇವುಡ್‌ನಿಂದ ಮಾಡಿದ ಪೀಠೊಪಕರಣಗಳೂ ತೋಯ್ದು ಶಿಥಿಲಗೊಂಡಿರುವುದರಿಂದ ಅವುಗಳು ಬಳಕೆಗೆ ಅಯೋಗ್ಯವಾಗಿವೆ. ಹೀಗಾಗಿ ಮುರಿದು ಒಲೆಗೆ ಹಾಕಲು ಸಹ ಅವಕಾಶ ಇಲ್ಲದಿರುವುದರಿಂದ ನಿರ್ವಾಹವಿಲ್ಲದೆ ಹೊರಗೆ ಹಾಕಿದ್ದಾರೆ. ಹೊರಗೆ ಬಿದ್ದಿರುವ ಕಸದ ರಾಶಿಯಲ್ಲಿ ಹಾಸಿಗೆಗಳೇ ಹೆಚ್ಚಾಗಿವೆ. ಕೆಲವೆಡೆಯಂತೂ ಒಂದು ಲಾರಿ ತುಂಬುವಷ್ಟಿದೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ. ನಿತ್ಯ ಕಸಕ್ಕಿಂತ ಮೂರ್‍ನಾಲ್ಕುಪಟ್ಟು ಅ ಧಿಕ ಕಸ ಬೀಳುತ್ತಿದೆ. ಒಂದು ಮನೆಯವರು ಹಾಕಿದ ಕಸವನ್ನು ಸಾಗಿಸಿದ ಬಳಿಕ ಮತ್ಯಾವುದೋ
ಸಮಯದಲ್ಲಿ ಮತ್ತೂಂದು ಮನೆಯವರು ರಸ್ತೆ ಬದಿಗೆ ತಂದು ತುಂಬುತ್ತಿರುವುದರಿಂದ ಅಲ್ಲಲ್ಲಿ ಕಸ ಉಳಿಯುತ್ತಿದೆ.
ಮತ್ತೂಂದು ಕಡೆ ಕಸ ವಿಲೇವಾರಿಗೆ ಅಕ ಸಂಖ್ಯೆಯಲ್ಲಿ ವಾಹನಗಳನ್ನು ನಿಯೋಜಿಸಲು ಸಹ ಅವಕಾಶ ಇಲ್ಲದಂತಾಗಿದೆ. ನಗರದಲ್ಲಿ ಜಲಾವೃತಗೊಂಡ ಬಡಾವಣೆಗಳಲ್ಲಿ ಪೌರ ಕಾರ್ಮಿಕರ ಮನೆಗಳೂ ಇವೆ. ಹೀಗಾಗಿ ಅವರು ನಿತ್ಯ ಕಾಯಕದ ಜತೆಗೆ ತಮ್ಮ ಮನೆಯನ್ನೂ ಉಳಿಸಿಕೊಳ್ಳುವ ಧಾವಂತದಲ್ಲಿ ಇರುವುದರಿಂದ ಅವರನ್ನು ಹೆಚ್ಚುವರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು
ಆಗುತ್ತಿಲ್ಲ. ಕಸ ವಿಲೇವಾರಿಗೆ ಹೊಸಬರು ಬರುತ್ತಿಲ್ಲ. ಹೀಗಾಗಿ ಅಲ್ಲಲ್ಲಿ ಕಸ ಬೀಳುತ್ತಿದೆ.
ವಿದ್ಯಾನಗರದೊಳಗೆ ಜಲಾವೃತಗೊಂಡ ಬಡಾವಣೆಗಳ ರಸ್ತೆಗಳು, ಸಿದ್ದೇಶ್ವರನಗರ, ಶಾಂತಮ್ಮ ಬಡಾವಣೆ ಸೇರಿದಂತೆ ಹಲವೆಡೆ
ಬುಧವಾರ ಬಹಳಷ್ಟು ಕಸ ಬಿದ್ದಿತ್ತು. ನಿತ್ಯ ಕಸದಂತೆ ಇವುಗಳನ್ನು ಗುದ್ದಲಿಯಲ್ಲಿ ತುಂಬಲು ಸಹ ಸಾಧ್ಯವಿಲ್ಲ. ಕೈಯಿಂದ ಎತ್ತಿ, ಇಲ್ಲವೆ ಜೆಸಿಬಿ ಬಳಸಿ ತುಂಬಬೇಕು. ಅಲ್ಲದೆ ಈ ಕಸ ಎತ್ತಲು ದೊಡ್ಡ ಲಾರಿಯೇ ಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.