ಮೂಲದಲ್ಲೇ ಪಾರ್ಥೇನಿಯಂ ನಿಯಂತ್ರಿಸಿ
Team Udayavani, Aug 17, 2019, 3:00 AM IST
ದೊಡ್ಡಬಳ್ಳಾಪುರ: ಪಾರ್ಥೇನಿಯಂ ಜಗತ್ತಿನ ಅತಿ ದೊಡ್ಡ ಹಾಗೂ ಬಹಳ ದುಷ್ಪರಿಣಾಮಕಾರಿ ಕಳೆ. ಇದರಿಂದಾಗಿ ಶೇ.40ರಷ್ಟು ಇಳುವರಿ ಕಡಿಮೆಯಾಗುತ್ತದೆ. ಆರಂಭದಲ್ಲೇ ಕಳೆ ನಿಯಂತ್ರಿಸದಿದ್ದರೆ ನಂತ ರ ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಪಿ. ಮಲ್ಲಿಕಾರ್ಜುನಗೌಡ ತಿಳಿಸಿದರು. ಪಾರ್ಥೇನಿಯಂ ಜಾಗೃತಿ ಸಪ್ತಾಹದ ನಿಮಿತ್ತ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ, ಹೆಬ್ಟಾಳದ ಕಳೆ ನಿರ್ವಹಣೆ ವಿಭಾಗದಿಂದ ನ ಡೆದ ಪಾರ್ಥೇನಿಯಂ ಕಳೆ ನಿರ್ಮೂಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯರು, ಪ್ರಾಣಿಗಳ ಆರೋಗ್ಯಕ್ಕೆ ತೊಂದರೆ: ಕಾಂಗ್ರೆಸ್ ಕಸ, ಬಿಳಿ ಟೋಪಿ, ಗಜ್ಜರಿ ಕಸ ಎಂಬ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಇದು, ಬೆಳೆಗಳಿಗೆ ಹಾನಿ ಮಾಡುತ್ತದೆ. ಜತೆಗೆ ಮನುಷ್ಯರ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಒಂದಲ್ಲ ಒಂದು ಕಡೆ ವರ್ಷವೆಲ್ಲ ಸಸ್ಯದ ಬೀಜೋತ್ಪಾದನೆಯಾಗುತ್ತದೆ. ಇದರ ನಿಯಂತ್ರಣಕ್ಕಾಗಿ ರೈತರು, ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಮಹಿಳಾ ಸಂಘಗಳು ಸರ್ಕಾರಿ ಸಂಶೋಧನೆ ವಿಭಾಗಗಳೊಂದಿಗೆ ಸಾಮೂಹಿಕವಾಗಿ ಸಹಕರಿಸಿದ್ದಲ್ಲಿ ಮಾತ್ರ ಕಳೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಸಸ್ಯನಿಯೋಗಿ ಗಿಡ ಬೆಳೆಸಲು ಸಲಹೆ: ಅಖೀಲ ಭಾರತ ಸುಸಂಘಟಿತ ಸಂಶೋಧನೆ ಪ್ರಾಯೋಜನೆಯ ಕಿರಿಯ ಬೇಸಾಯ ಶಾಸ್ತ್ರಜ್ಞೆ ಡಾ. ಎಸ್.ಕಮಲಾಬಾಯಿ ಮಾ ಹಿತಿ ನೀಡಿ, ಪಾರ್ಥೇನಿಯಂ ಕಳೆಯನ್ನು ನಾಶಗೊಳಿಸಲು ಜೈವಿಕ ಕ್ರಮಗಳು ಮತ್ತು ಸಸ್ಯ ನಿಯೋಗಿ ಗಿಡಗಳನ್ನು ಬೆಳೆಸಬೇಕು. ಇದರಿಂದ ಪಾರ್ಥೇನಿಯಂ ಕಳೆಯ ಸಂತತಿ ಕಡಿಮೆಯಾಗುತ್ತದೆ. ಸಸ್ಯ ನಿಯೋಗಿ ಗಿಡಗಳಿಂದ ಕಾಂಪೋಸ್ಟ್ ತಯಾರಿಸಬಹುದು. ಜೈವಿಕ ವಿಧಾನದಲ್ಲಿ ವಿಶಾಲತೆ ಕಾಪಾಡಿಕೊಂಡು ಪರಿಣಾಮಕಾರಿ ಹಾಗೂ ಪ್ರಭಾವಶಾಲಿ ಸಸ್ಯಗಳನ್ನು (ಅಗಸೆ, ಕಾಡು ಹುರುಳಿ ಇತ್ಯಾದಿ) ಬೆಳೆಸುವುದರಿಂದ ಪಾರ್ಥೇನಿಯಂ ಕಳೆ ನಿಯಂತ್ರಿಸಬಹುದು ಎಂದು ತಿಳಿ ಹೇಳಿದರು.
ಪಾರ್ಥೇನಿಯಂ ಮಾತ್ರ ತಿನ್ನುವ ಮೆಕ್ಸಿಕನ್ ದುಂಬಿ: ಮೆಕ್ಸಿಕನ್ ದುಂಬಿ (ಜೈಗೊಗ್ರಾಮ ಬೈಕೋಲೋರೇಟ)ಗಳನ್ನು ಪಾರ್ಥೇನಿಯಂ ಕಳೆ ಹೆಚ್ಚು ಬೆಳೆದಿರುವ ಬಂಜರು ಅಥವಾ ಬೀಡು ಜಮೀನಿನಲ್ಲಿ ಬಿಟ್ಟಾಗ ಮೆಕ್ಸಿಕನ್ ದುಂಬಿಗಳು ನೈಸರ್ಗಿಕ ವಾತಾವರಣ ಕಾಪಾಡಿಕೊಂಡು ಪಾರ್ಥೇನಿಯಂ ಕಳೆ ಮಾತ್ರ ತಿನ್ನುತ್ತವೆ ಎಂದು ವಿವರಿಸಿದರು.
ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆಯ (ಕಳೆ ನಿರ್ವಹಣಾ ವಿಭಾಗ, ಹೆಬ್ಟಾಳ), ಮುಖ್ಯಸ್ಥ ಡಾ. ಜಿ.ಎನ್. ಧನಪಾಲ್ ಪಾರ್ಥೇನಿಯಂ ಬಗ್ಗೆ ಅರಿವು ಮೂಡಿಸಿ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟರು. ಪಾರ್ಥೇನಿಯಂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರು ಕೈಗವಸುಗಳನ್ನು ಧರಿಸಿ ಉತ್ಸಾಹದಿಂದ ಪಾರ್ಥೇನಿಯಂ ಕಳೆಯನ್ನು ಕಿತ್ತುಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.