ಮನೆಯ ಸ್ವಚ್ಛತೆಗೆ ಆಲಿವ್ ಎಣ್ಣೆ
Team Udayavani, Aug 17, 2019, 5:10 AM IST
ಅನೇಕ ಆರೋಗ್ಯ ಅಂಶಗಳನ್ನು ಹೊಂದಿರುವ ಆಲಿವ್ ಎಣ್ಣೆಯನ್ನು ಮನೆಯ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಕೆ ಮಾಡಬಹುದು ಎಂದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಕಲೆ, ಗ್ರೀಸ್ ಇತ್ಯಾದಿಗಳನ್ನು ತೆಗೆದು ಹಾಕಲು ಆಲಿವ್ ಎಣ್ಣೆಯನ್ನು ಉಪಗೋಗಿಸಬಹುದು.
1 ಮನೆಯಲ್ಲಿ ಕ್ಯಾಂಡಲ್ ಅಥವಾ ಮೇಣದ ಬತ್ತಿ ಉಪಯೋಗವನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಮೇಣ ಉರಿದಂತೆ ನೆಲದ ಮೇಲೆ ಅಥವಾ ಮೇಣ ಇಟ್ಟ ಸ್ಟಿಲ್ ತಳದಲ್ಲಿ ಮೇಣದ ಅಂಟು ಅಂಟಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಆಲಿವ್ ಎಣ್ಣೆಯನ್ನು ತಳಕ್ಕೆ ಹಚ್ಚಿದರೆ, ಮೇಣ ಅಂಟುವುದಿಲ್ಲ ಮತ್ತು ಯಾವುದೇ ಕಲೆ ಉಳಿಯುವುದಿಲ್ಲ.
2 ಆಲಿವ್ ಎಣ್ಣೆ ಗೆ ಸ್ವಲ್ಪ ವಿನೆಗೆರ್ ಬೆರೆಸಿ ಗ್ರೀಸ್ ಅಂಟಿಕೊಂಡಿರುವ ಜಾಗದಲ್ಲಿ ಜೋರಾಗಿ ತಿಕ್ಕಿದರೆ ಗ್ರೀಸ್ ಕಲೆ ಮಾಯವಾಗುತ್ತದೆ.
3 ಲೆದರ್ ಕುರ್ಚಿ, ಸೋಫಾ ಇತ್ಯಾದಿಗಳಲ್ಲಿ ಧೂಳು, ಕಲೆಗಳು ಇದ್ದರೆ ಒಂದು ಬಟ್ಟೆಗೆ ಆಲಿವ್ ಎಣ್ಣೆ ಹಾಕಿ ಉಜ್ಜಿದರೆ ಸ್ವಚ್ಛವಾಗುವುದು ಮತ್ತು ಉತ್ತಮ ಹೊಳಪು ಬರುವುದು.
4 ಕೆಲವೊಂದು ಅಡುಗೆ ಮಾಡಿದ ಅನಂತರ ಬಾಣಲೆ ತಳದಲ್ಲಿ ದಪ್ಪಕ್ಕೆ ಆಹಾರ ಅಂಟಿಕೊಳ್ಳುತ್ತದೆ. ಅದನ್ನು ತೊಳೆಯಲು ಗೃಹಿಣಿಯರು ಅಧಿಕ ಶ್ರಮಪಡಬೇಕಾಗುತ್ತದೆ. ಆಲಿವ್ ಎಣ್ಣೆಯ ಜತೆ ಉಪ್ಪು ಸೇರಿಸಿ ತಿಕ್ಕಿದರೆ ಕಲೆಗಳು ಹೋಗುತ್ತವೆ.
5 ಆಲಿವ್ ಎಣ್ಣೆಯಿಂದ ಬೆಳ್ಳಿ ಪಾತ್ರೆಗಳನ್ನು ತೊಳೆದರೆ ಅದರ ಹೊಳಪು ಹೆಚ್ಚುತ್ತದೆ.
6 ತರಕಾರಿ ಕತ್ತರಿಸುವ ಮರದ ತುಂಡಿನಲ್ಲಿ ಕಲೆಗಳು ಇದ್ದರೆ ಅದನ್ನು ಆಲಿವ್ ಎಣ್ಣೆ ಬಳಸಿ ತೊಳೆಯಬಹುದು
7 ಚಾಕು, ಕತ್ತರಿಗಳಲ್ಲಿ ಇರುವ ತುಕ್ಕು, ಕಲೆಗಳನ್ನು ನಿವಾರಿಸಲು ಆಲಿವ್ ಎಣ್ಣೆ ಸಹಕಾರಿ.
8 ವುಡ್ ಪಾಲಿಶ್ ಆಗಿ ಕೂಡ ಈ ತೈಲವನ್ನು ಬಳಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.