ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ
ಇಂದಿನಿಂದ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ • ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಜಾಗೃತಿ
Team Udayavani, Aug 17, 2019, 12:57 PM IST
ಕುದೂರು ಮುಖ್ಯ ರಸ್ತೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಸಂಚಾರ ನಿಯಮದ ಜಾಗೃತಿ ಮೂಡಿಸಿದರು.
ಕುದೂರು: ಸಂಚಾರ ನಿಯಮಗಳ ಉಲ್ಲಂಘನೆ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಶನಿವಾರದಿಂದ ನಿಯಮ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು ಎಂದು ಪಿಎಸ್‌ಐ ಕಿರಣ್ ತಿಳಿಸಿದರು.
ಕುದೂರು ಗ್ರಾಮದ ಬಸ್ ನಿಲ್ದಾಣ ಮತ್ತು ಮುಖ್ಯ ರಸ್ತೆಯಲ್ಲಿ ಪೊಲೀಸರು ಹೆಲ್ಮೆಟ್ ಧರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಬೈಕ್ ಸವಾರರು ಮಾತ್ರವಲ್ಲ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಈಗಾಗಲೇ ರಾಮನಗರ ಜಿಲ್ಲೆಯಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ವರಿಷ್ಠಧಿಕಾರಿಗಳೇ ಅಖಾಡಕ್ಕೆ ಇಳಿದಿದ್ದಾರೆ. ಈವರೆವಿಗೂ ಸಂಚಾರ ನಿಯಮಗಳನ್ನು ಗಾಳಿಗೆ ತೂರಿದ್ದ ವಾಹನ ಸವಾರರಿಗೆ ದಂಡ ಪ್ರಯೋಗಿಸಲಾಗಿದೆ. ರಸ್ತೆ ಅಪಘಾತದಿಂದ ಮೃತಪಡುವವರ ಸಂಖ್ಯೆ ಇಳಿಮುಖಗೊಳಿಸುವ ಸಲುವಾಗಿ ಸಂಚಾರ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಮೊದಲು ಅರಿವಿನ ಪಾಠ: ದ್ವಿಚಕ್ರ ವಾಹನ ಸವಾರರ ಮೇಲೆ ಪೊಲೀಸರು ದಂಡ ಪ್ರಯೋಗಿಸುವುದಿಲ್ಲ. ಮೊದಲಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಲ್ಮೆಟ್ ಜಾಗೃತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಿ ನ್ಯಾಯಾಲಯ ಮೂರು ವರ್ಷಗಳೇ ಕಳೆದರೂ ಇದುವರೆವಿಗೂ ಸರಿಯಾಗಿ ಅನುಷ್ಠಾನ ಗೊಂಡಿಲ್ಲ. ವಾಹನ ಸವಾರರಿಗೆ ಅಪಘಾತ ಸಂದರ್ಭ ದಲ್ಲಿ ಹೆಲ್ಮೆಟ್ ಧರಿಸದಿದ್ದರೆ ಅವರಿಗೆ ವಿಮಾ ಸೌಲಭ್ಯ ನೀಡದಿರಲು ವಿಮಾ ಕಂಪನಿಗಳು ನಿರ್ಧರಿಸಿದ್ದವು. ಅದರೂ ಹೆಲ್ಮೆಟ್ ಬಗ್ಗೆ ವಾಹನ ಸವಾರರು ನಿರ್ಲಕ್ಷ್ಯ ವಹಿಸಿದ್ದರು. ಇದನ್ನು ನಿವಾರಿಸಲು ಇಲಾಖೆ ಮುಂದಾ ಗಿದೆ ಎಂದು ಹೇಳಿದರು.
ವಾಹನ ಸವಾರರಿಗೆ ಎಚ್ಚರಿಕೆ: ಹೆಲ್ಮೆಟ್, ಸೀಟ್ ಬೆಲ್r ಧರಿಸದೇ ವಾಹನ ಚಾಲನೆ, ಮಿತಿಮೀರಿದ ವೇಗ, ಅಡ್ಡಾದಿಡ್ಡಿ ವಾಹನ ನಿಲುಗಡೆ, ಎಲ್ಲಂದರಲ್ಲಿ ವಾಹನ ನಿಲ್ಲಿಸುವುದು, ದಾಖಲೆಗಳಿಲ್ಲದೇ ವಾಹನ ಚಾಲನೆ, ವಾಹನಗಳಿಗೆ ವಿಮೆ ಇಲ್ಲದೇ ಚಾಲನೆ ಹೀಗೆ ಎಲ್ಲಾ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿ ಸುವ ಜೊತೆಗೆ ಇನ್ನೊಮ್ಮೆ ಉಲ್ಲಂಘಿಸಿದರೆ ಪರವಾನಗಿ ರದ್ದು ಪಡಿಸಲಾಗುವುದು ಎಂದರು.
ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಕಡಿವಾಣ: ಗ್ರಾಮದ ಮುಖ್ಯ ರಸ್ತೆಗಳಲ್ಲಿ ಅಕ್ಕಪಕ್ಕದಲ್ಲಿ ಎಲ್ಲೆಂದರಲ್ಲಿ ಅಡ್ಡಾ ದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿದರೆ, ಮುಂದಿನ ದಿನಗಳಲ್ಲಿ ಕಡಿವಾಣ ಹಾಕಲಾಗುವುದು.
ದಂಡದ ಪ್ರಮಾಣ: ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದರೆ 500 ರೂ., 2ನೇ ಬಾರಿಗೆ 1000 ರೂ., ಚಾಲನೆ ವೇಳೆ ಮೊಬೈಲ್ ಬಳಸಿದರೆ 1000 ರೂ., ಎರಡನೇ ಬಾರಿಗೆ 2000 ರೂ., ವಿಮಾ ಇಲ್ಲದೇ ವಾಹನೆ ಚಾಲನೆ 1000 ರೂ., ನೋಂದಣಿ ಮಾಡಿ ಸದೇ ವಾಹನ ಚಲಾಯಿಸಿದರೆ 5000 ರೂ., 2ನೇ ಬಾರಿಗೆ 10.000 ಸಾವಿರ ದಂಡ, ಎಫ್‌ಸಿ ಪ್ರಮಾಣ ಪತ್ರ ಇಲ್ಲದಿದ್ದರೆ 2000 ರೂ., 2ನೇ ಬಾರಿಗೆ 5000 ರೂ., ನಿಷೇಧಿತ ಪ್ರದೇಶದಲ್ಲಿ ವಾಹನ ನಿಲ್ಲಿಸಿದರೆ 1000 ರೂ., ಅದಕ್ಕೂ ಮೀರಿದರೆ ಚಾಲನಾ ಪರ ವಾನಗಿ ರದ್ದು ಪಡಿಸಲು ಆರ್‌ಟಿಒ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.
ಪ್ರತಿಯೊಬ್ಬರ ಜೀವ ಅಮೂಲ್ಯವಾ ಗಿದ್ದು, ಅಪಘಾತವನ್ನು ತಪ್ಪಿಸಲು ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ನಗರ ವೃತ್ತ ನಿರೀಕ್ಷಕ ಗೋವಿಂದರಾಜು ಸಲಹೆ ನೀಡಿದರು.
ಪಟ್ಟಣದ ಪುರ ಪೊಲೀಸ್ ಠಾಣೆಯ ಮುಂಭಾಗ ಆಯೋಜಿಸಲಾಗಿದ್ದ ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್ ಕಡ್ಡಾಯ ಸಂಬಂಧ ಪೊಲೀಸರ ಬೈಕ್ ಅಭಿಯಾನಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಯಾವುದೇ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರು ಸಾವಿನ ಪ್ರಕರಣಗಳೇ ಹೆಚ್ಚಾಗಿವೆ. ಅದರಲ್ಲಿಯೂ ಹೆಲ್ಮೆಟ್ ಧರಿಸದೇ ಸಾವನಪ್ಪಿರುವರ ಸಂಖ್ಯೆಯ ಹೆಚ್ಚಾಗಿದೆ. ಹಾಗಾಗಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದರು.
ಹೆಲ್ಮೆಟ್ ಬಿಸಿಲು, ಮಳೆಗೂ ಅಸರೆ: ಹೆಲ್ಮೆಟ್ ಬಿಸಿಲು, ಮಳೆಗೂ ಅಸರೆಯಾಗುವುದಲ್ಲದೇ ನಿಮ್ಮ ಪ್ರಾಣವನ್ನು ಉಳಿಸಲು ಸಹಾಯ ಮಾಡುತ್ತದೆ. ನಿಮ್ಮನ್ನು ನಂಬಿ ಕುಟುಂಬ ಇರುತ್ತದೆ ಎಂಬುದನ್ನು ಮರೆಯಬಾರದು. ನಿಮ್ಮವರಿಗಾಗಿ ನೀವು ಹೆಲ್ಮೆಟ್ ಧರಿಸಲೇಬೇಕು ಎಂದು ಮನವಿ ಮಾಡಿದರು.
ತಲೆಗೆ ಪೆಟ್ಟಾದರೆ ಬದುಕುವುದೇ ಕಷ್ಟ: ಸಂಚಾರ ಪೊಲೀಸ್ ಠಾಣೆಯ ಎಸ್‌ಐ ಶಿವಕುಮಾರ್ ಮಾತನಾಡಿ, ಅಪಘಾತಗಳು ನಡೆದ ಸಂದರ್ಭದಲ್ಲಿ ದೇಹದ ಯಾವುದೇ ಭಾಗಕ್ಕೆ ಪೆಟ್ಟಾದರೂ ಅದನ್ನು ಗುಣಪಡಿಸಬಹುದು. ಆದರೆ, ತಲೆಗೆ ಪೆಟ್ಟಾದರೆ ಬದುಕುವುದೇ ಕಷ್ಟ. ಸಾವು ಸಂಭವಿಸುವ ಜತೆಗೆ, ಶಾಶ್ವತವಾಗಿ ಮಾನಸಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ದ್ವಿಚಕ್ರ ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಪ್ರಾಣ ಹೋದರೆ ಮತ್ತೂಮ್ಮೆ ಬರುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು. ಪೊಲೀಸರ ಬೈಕ್ ರ್ಯಾಲಿ ಮಹಾತ್ಮ ಗಾಂಧಿ ರಸ್ತೆ, ಜೆ.ಸಿ. ರಸ್ತೆ, ಅಂಚೆ ಕಚೇರಿ ರಸ್ತೆ, ಕೋರ್ಟ್ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಶೇರ್ವಾ ಹೋಟೆಲ್ ರಸ್ತೆ, ಬೆಂಗಳೂರು- ಮೈಸೂರು ರಸ್ತೆ, ಸಾತನೂರು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಡೆಯಿತು.
ಪೂರ್ವ ಪೊಲೀಸ್ ಠಾಣೆಯ ಎಸ್‌ಐ ಹೇಮಂತ್‌ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಪುರ ಹಾಗೂ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.