ವಿಶಿಷ್ಟ ಸಂಪ್ರದಾಯ: ಶ್ರಾವಣ ಹೊಸ್ತಿಲ ಪೂಜೆ
Team Udayavani, Aug 18, 2019, 5:10 AM IST
ಹೆಬ್ರಿ: ಶ್ರಾವಣ ಹಬ್ಬಗಳು ಶುರುವಾಗುವ ಮಾಸ. ಈ ಮಾಸದಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ, ಮಹಿಳೆಯರಿಗೆ ವಿಶೇಷವಾದ ವರ ಮಹಾಲಕ್ಷ್ಮೀ ಪೂಜೆ, ಚೂಡಿಪೂಜೆಗಳು ನಡೆಯುತ್ತವೆ. ಇದರೊಂದಿಗೆ ಹೊಸ್ತಿಲ ಪೂಜೆಯೂ ಮಹತ್ವದ್ದು.
ಹೊಸ್ತಿಲು ಪೂಜೆ ವಿಶೇಷವೇನು?
ಮುತ್ತೈದೆಯರು ತಮಗೆ ಮುತ್ತೈದೆ ಭಾಗ್ಯ ಸದಾ ಇರಲಿ, ಕುಟುಂಬಕ್ಕೆ ಒಳಿತಾಗಲಿ ಎಂಬ ಉದ್ದೇಶದಿಂದ ಈ ಪೂಜೆಯನ್ನು ಮಾಡುತ್ತಾರೆ.
ಸೋಣ ಸಂಕ್ರಾಂತಿ ಅಂದರೆ ಆ.17ರ ಸಿಂಹ ಸಂಕ್ರಮಣ ಆರಂಭಗೊಂಡು ಒಂದು ತಿಂಗಳ ಕಾಲ ಈ ಪೂಜೆ ನಡೆಯುತ್ತದೆ. ಮುತ್ತೈದೆಯರು ನಿತ್ಯ ತಲೆ ಸ್ನಾನ ಮಾಡಿ, ಹೊಸ್ತಿಲನ್ನು ಸ್ವಚ್ಛಗೊಳಿಸಿ ಜೇಡಿ ಮಣ್ಣಿನ ಉಂಡೆಯಿಂದ ಹೊಸ್ತಿಲಿಗೆ ಚಿತ್ತಾರ ಬಿಡಿಸಿ, ಅರಶಿನ ಕುಂಕುಮದಿಂದ ಸಿಂಗಾರ ಮಾಡುತ್ತಾರೆ.
ಹುರುಳಿ ಹೂವಿನ ಶೃಂಗಾರ
ಒಂದು ತಿಂಗಳು ಆಚರಿಸುವ ಹೊಸ್ತಿಲ ಪೂಜೆಗೆ ಹುರುಳಿ ಹೂವಿಗೆ ವಿಶೇಷ ಮಾನ್ಯತೆಯಿದೆ. ಶ್ರಾವಣ ಸಂಕ್ರಾಂತಿಗೆ ಮೂರ್‍ನಾಲ್ಕು ದಿನಗಳಿರುವಾಗ ಮುತ್ತೈದೆ ಯರು ಹುರುಳಿಯನ್ನು ಅರಶಿನ ದೊಡನೆ ಸ್ವಲ್ಪ ನೀರಿನೊಂದಿಗೆ ಕಲಸಿ ನೆನೆಸಿಟ್ಟು ಸಂಕ್ರಾಂತಿಗೆ 2 ದಿನಗಳಿರುವಾಗ ಅದನ್ನು ತೋಟಗಳಲ್ಲಿ ಬಿತ್ತಿ ಹಾಕಿ ಅದಕ್ಕೆ ಗಾಳಿ ತಾಗದಂತೆ ಮುಚ್ಚಿಡುತ್ತಾರೆ. ಎರಡು ದಿನಗಳಲ್ಲಿ ಅರಶಿನ ಬಣ್ಣ ಮೆತ್ತಿಕೊಂಡ ಹುರುಳಿ ಗಿಡ ಮೊಳಕೆಯೊಡೆಯುತ್ತದೆ. ಹಳದಿ ಬಣ್ಣದ ಹೂವಿನಂತೆ ಕಾಣುವ ಇದು ಹೊಸ್ತಿಲು ಪೂಜೆಯಲ್ಲಿ ಮುಖ್ಯ ಸ್ಥಾನ ಪಡೆಯುತ್ತದೆ.
ನೀರ್ ಕಡ್ಡಿ
ಹಿಂದೆ ಮಕ್ಕಳು ಸ್ಲೇಟು ಒರೆಸಲು ಬಳಸುತ್ತಿದ್ದ ನೀರ್‌ಕಡ್ಡಿಯನ್ನೂ ಪೂಜೆಗೆ ಉಪಯೋಗಿಸುತ್ತಾರೆ. ಗದ್ದೆ ಬದಿಗಳಲ್ಲಿ ಬೆಳೆಯುವ ಇದನ್ನು ಶುಭ್ರಗೊಳಿಸಿ ಹುರುಳಿ ಹೂವಿನೊಂದಿಗೆ ಹೊಸ್ತಿಲ ಅಲಂಕಾರ ಮಾಡುತ್ತಾರೆ.
ಅಜ್ಜಿ ಓಡಿಸುವ ಕ್ರಮ
ಮಳೆಗಾಲದಲ್ಲಿ ಸಮೃದ್ಧವಾಗಿರುವ ಹುಧ್ದೋಳ್ ಹೂ, ರಥ ಪುಷ್ಪವೂ ಪೂಜೆ ಯಲ್ಲಿ ಸ್ಥಾನ ಪಡೆಯುತ್ತದೆ. ತುಳಸಿಗೂ ರಂಗೋಲಿ, ಚಿತ್ತಾರ ಬಿಡಿಸಿ, ಹೂವಿಟ್ಟು ನಮಸ್ಕರಿಸುತ್ತಾರೆ. ಈ ಹೊಸ್ತಿಲು ಪೂಜೆ ಅಜ್ಜಿ ಓಡಿಸುವ ಕ್ರಮದೊಂದಿಗೆ ಸಂಪನ್ನ ಗೊಳ್ಳುವುದಕ್ಕೆ ಅಜ್ಜಿ ಓಡಿಸುವ ಕೋಲನ್ನು ಬಳಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.