ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ಸಂಭ್ರಮ
Team Udayavani, Aug 18, 2019, 1:04 PM IST
ಕಲಬುರಗಿ: ಬಿದ್ದಾಪುರ ಕಾಲೋನಿಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ನಿಮಿತ್ತ ನಡೆದ ರಥೋತ್ಸವಕ್ಕೆ ಸದಾಶಿವ ಮಹಾರಾಜರು, ಸಂಸದ ಡಾ| ಉಮೇಶ ಜಾಧವ ಚಾಲನೆ ನೀಡಿದರು.
ಕಲಬುರಗಿ: ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ನಿಮಿತ್ತ ನಗರದ ಮಠಗಳಲ್ಲಿ ಶನಿವಾರ ಮಧ್ಯಾರಾಧನೆ ಸಂಭ್ರಮದಿಂದ ನೆರವೇರಿತು.
ಜೇವರ್ಗಿ ರಸ್ತೆಯ ಎನ್‌ಜಿಒ ಕಾಲೋನಿಯಲ್ಲಿರುವ ರಾಘವೇಂದ್ರಸ್ವಾಮಿ ಮಠದ ರಾಯರ ರಥ ಬೀದಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಜತ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಗಾಯತ್ರಿ ಯುವ ಸಂಘ, ಪ್ರಸನ್ನ ಮಾರುತಿ ಭಜನಾ ಸಂಘ ಮಂಡಳಿ, ಧ್ಯಾನಾಂಜನೇಯ ಭಜನಾ ಮಂಡಳಿಯವರು ರಥೋತ್ಸವದಲ್ಲಿ ಪಾಲ್ಗೊಂಡು ಗಾಯನ ಸೇವೆ ಸಲ್ಲಿಸಿದರು.
ಬೆಳಗ್ಗೆ ಫಲ, ಪಂಚಾಮೃತ ಅಭಿಷೇಕ, ಅಲಂಕಾರ, ವಿಶೇಷ ಪೂಜೆ-ಪುನಸ್ಕಾರಗಳು ಪಂ. ಗಿರೀಶಾಚಾರ್ಯ ಅವದಾನಿ ಅವರಿಂದ ನಡೆದವು. ನಂತರ ನೈವೇದ್ಯ, ಹಸ್ತೋದಕ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ರಥ ಬೀದಿಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಲಾಗಿತ್ತು.
ರಾಘವೇಂದ್ರಾಚಾರ್ಯ, ಮಾಧವರಾವ್ ತಾವರಗೇರಿ, ವಾಸುದೇವರಾವ್ ಮುಂಡರಗಿ, ಪ್ರಹ್ಲಾದ ಮಟಮಾರಿ, ನರೇಂದ್ರ ಫಿರೋಜಾಬಾದಕರ್, ವೆಂಕಟರಾವ್ ಜೋಗೂರ, ರಘು, ಎನ್.ವಿ. ಕುಲಕರ್ಣಿ, ಪವನ ಕೋರವಿ, ಪ್ರಸನ್ನ ದೇಶಾಪಂಡೆ, ಪ್ರಮೋದ ಕೋರವಿ, ಮುರಳಿ ಕೆ., ಗುರುರಾಜ ಕೆ., ಶ್ರೀಧರ ಪಾಟೀಲ, ವಾಣಿಶ್ರೀ ಸಾಲಿಮಠ ಹಾಗು ಮತ್ತಿತರರು ಇದ್ದರು.
ಬಿದ್ದಾಪುರ ಕಾಲೋನಿಯಲ್ಲಿ ಇರುವ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ವೈಭವದಿಂದ ಜರುಗಿತು. ಬೆಳಗ್ಗೆ ಸುಪ್ರಭಾತ, ವೇದಪಾರಾಯಣ, ಕ್ಷೀರಾಭಿಷೇಕ, ಫಲ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ ನೆರವೇರಿತು. ಬಳಿಕ ಭಕ್ತ ಸಮೂಹದ ಮಧ್ಯೆ ರಥೋತ್ಸವ ಜರುಗಿತು. ಲಕ್ಷ್ಮೀನಾರಾಯಣ ದೇವಸ್ಥಾನದ ಸದಾಶಿವ ಮಹಾರಾಜರು, ಸಂಸದ ಡಾ| ಉಮೇಶ ಜಾಧವ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಲಾಯಿತು.
ಇದಕ್ಕೂ ಮುನ್ನ ಗುರುಸಾರ್ವಭೌಮರ ಆಶೀರ್ವಾದ ಪಡೆದು ಮಾತನಾಡಿದ ಉಮೇಶ ಜಾಧವ, ಬಿದ್ದಾಪುರ ಕಾಲೋನಿಯಲ್ಲಿ ನಮ್ಮ ಕುಟುಂಬ ವಾಸವಿದ್ದು, ಶ್ರೀಮಠದ ಸೇವೆಯನ್ನು ನಾನು ಸೇವಕನಂತೆ ಸಲ್ಲಿಸುತ್ತಿದ್ದೇನೆಂದು ಹೇಳಿದರು. ನವಲಿ ಕೃಷ್ಣಾಚಾರ್ಯ, ರಾಜೇಂದ್ರ ಕೆಲ್ಲೂರು, ಗಿರೀಶ ಕುಲಕರ್ಣಿ, ಶ್ರೀಕಾಂತ ದೇಸಾಯಿ, ಶ್ರೀನಿವಾಸ, ಗುರುರಾಜ ಕನಕಗಿರಿ, ಮಹಾಲಕ್ಷ್ಮೀ ಭಜನಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಪ್ರಯುಕ್ತ ಪಲ್ಲಕ್ಕಿ ಸೇವೆ ಜರುಗಿತು. ಗುಂಡಾಚಾರ್ಯ ನರಿಬೋಳ, ಡಿ.ವಿ.ಕುಲಕರ್ಣಿ, ಅನಿಲ ಕಕ್ಕರೆ, ಶಾಮರಾವ್ ಕುಲಕರ್ಣಿ ಹಾಗೂ ಮಹಿಳಾ ಮಂಡಳದ ಸದಸ್ಯರು ಇನ್ನಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.