ಎಲ್ಲಾ ಕಚೇರಿಗಳನ್ನು ಸೌಂದರೀಕರಣಗೊಳಿಸಿ
Team Udayavani, Aug 18, 2019, 4:31 PM IST
ಮೈಸೂರು: ದಸರಾ ಸಮೀಪಿಸುತ್ತಿದ್ದು, ಎಲ್ಲಾ ಕಚೇರಿಗಳು ಸಿದ್ಧವಾಗಬೇಕಿದೆ. ಗ್ರಾಪಂ ಕಚೇರಿ, ಆವರಣವನ್ನು ಶುಚಿಯಾಗಿ ಸುಂದರ ವಾಗಿಟ್ಟುಕೊಳ್ಳಬೇಕು. ಎಲ್ಲಾ ಕಚೇರಿಗಳನ್ನು ಸೌಂದರೀಕರಣ ಗೊಳಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಾಪಂ ಇಒ ಕೃಷ್ಣಕುಮಾರ್ ಸೂಚಿಸಿದರು.
ಮೈಸೂರು ತಾಪಂ ಕಾರ್ಯಾಲಯದ ಮಿನಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ತಾಪಂ ಇಒ ಕೃಷ್ಣಕುಮಾರ್, ತಾಪಂನ 37 ಗ್ರಾಪಂಗಳಿಗೆ ಭೇಟಿ ನೀಡಿದ ಸಂದರ್ಭ ಗ್ರಾಪಂ ಕಚೇರಿ ಕಟ್ಟಡ ಹಾಗೂ ಆವರಣ ತೀರ ಹದಗೆಟ್ಟಿದೆ. ಇತರೆ ತಾಲೂಕು ಪಂಚಾಯಿತಿಗಳಿಗೆ ಹೋಲಿಕೆ ಮಾಡಿಕೊಂಡರೆ ಮೈಸೂರು ತಾಲೂಕು ಪಂಚಾಯಿತಿ ಬಹಳ ಹಿಂದುಳಿದಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಬೇಕಾಗಿದೆ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇತ್ತೀಚಿಗೆ ಮೈಸೂರು ತಾಪಂ ಇಒ ಆಗಿ ವರ್ಗಾವಣೆಗೊಂಡು ಕೃಷ್ಣಕುಮಾರ್ ಮೊದಲ ಸಭೆಯಲ್ಲಿ ತಾಲೂಕಿನ ಅಭಿವೃದ್ಧಿ ಹಾಗೂ ಅನುದಾನ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ನಾನು ರಾಮನಗರ, ಚನ್ನಪಟ್ಟಣ ಹಾಗೂ ಹುಣಸೂರು ಸೇರಿದಂತೆ ಮುಂತಾದ ತಾಪಂ ಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಈ ತಾಲೂಕಿನ ಕಾರ್ಯ ಕ್ರಮಗಳು, ಅಭಿವೃದ್ಧಿ ಹಾಗೂ ಅನುದಾನ ಪಡೆಯುವಲ್ಲಿ, ರೈತರಿಗೆ ಕೃಷಿಗೆ ಅನುದಾನ ನೀಡುವಲ್ಲಿ ಹಿಂದುಳಿದಿದೆ. ಹೆಚ್ಚು ಅನುದಾನ ತರಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಪಿಎಚ್ಸಿಗಳಲ್ಲಿ ಉದ್ಯಾನ: ಮೈಸೂರು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ಉದ್ಯಾನ ರೂಪಿಸ ಬೇಕಿದೆ. ನೀರಿನ ಸೌಲಭ್ಯ ಇರುವ ಪಿಎಚ್ಸಿ ಕೇಂದ್ರಗಳಲ್ಲಿ ಉದ್ಯಾನ ಮಾಡಲಾಗು ವುದು. ನೀರಿನ ಸೌಲಭ್ಯಗಳಿರುವ ಪಿಎಚ್ಸಿ ಬಗ್ಗೆ ವರದಿ ನೀಡಲು ತಾಲೂಕು ವೈದ್ಯಾಧಿಕಾರಿ ಡಾ. ಮಹದೇವ ಪ್ರಸಾದ್‌ಗೆ ತಿಳಿಸಿದರು.
ತಾಲೂಕಿನಲ್ಲಿ ಖಾಲಿ ಇರುವ ಸಿಎ ನಿವೇಶನ ಒತ್ತುವರಿ ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಇದನ್ನು ನಿಯಂತ್ರಿಸಲು ಖಾಲಿ ನಿವೇಶನಗಳನ್ನು ಸಾಮಾಜಿಕ ಅರಣ್ಯ ಯೋಜನೆಯಡಿ ಉದ್ಯಾನ ಅಭಿವೃದ್ಧಿ ಪಡಿಸಬೇಕೆಂದು ತಿಳಿಸಿದರು.
ಆದ್ಯತೆ: ತಾಲೂಕಿನಲ್ಲಿ ಬಿಸಿಎಂ ಹಾಸ್ಟೆಲ್ಗಳಲ್ಲಿ ಪ್ರವೇಶ ಪಡೆಯಲು ಅಂಕ ಆಧಾರಿತವಾಗಿ ಪ್ರವೇಶ ನೀಡಲಾಗುತ್ತಿದ್ದು, ಕುಗ್ರಾಮಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡ ಬೇಕು. ನಗರದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಹತ್ತಿರವಾಗ ಲಿದೆ ಎಂದು ತಾಲೂಕಿನ ಬಿಸಿಎಂ ಹಾಸ್ಟೆಲ್ಗೆ ಸೇರಲು ಇಚ್ಛಿಸುತ್ತಾರೆ. ಆದರೆ, ಅದಕ್ಕೆ ಮೇರಿಟ್ ತೊಡಕ್ಕಾಗಿದೆ. ನಿಯಮ ದಂತೆ ಮೇರಿಟ್ ಆಧಾರಿತದ ಮೇಲೆ ಪ್ರವೇಶಾತಿ ನೀಡಿ ಎಂದು ಬಿಎಂಸಿ ಅಧಿಕಾರಿಗೆ ಸಲಹೆ ನೀಡಿದರು.
ಹುಣಸೂರಿಗಿಂತ ಮೈಸೂರು ತಾಲೂಕಿನಲ್ಲಿ ಹೆಚ್ಚು ಹಾಸ್ಟೇಲ್ಗಳಿವೆ. ಆದರೆ ಅಲ್ಲಿ 4-6 ಲಕ್ಷ ರೂ. ನೀಡಲಾಗುತ್ತಿತು. ಇಲ್ಲಿ 2 ಲಕ್ಷ ರೂ. ನೀಡಲಾಗುತ್ತದೆ. ಇದು ಸಾಲದು. ಹೆಚ್ಚು ಅನುದಾನ ನೀಡಲು ಕ್ರಮ ವಹಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.