ಉತ್ತರಾಖಂಡದಲ್ಲಿ ಮೇಘ ಸ್ಪೋಟಕ್ಕೆ 38 ಬಲಿ
Team Udayavani, Aug 18, 2019, 6:07 PM IST
ಡೆಹ್ರಾಡೂನ್: ಉತ್ತರಾಖಂಡ ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಭಾರೀ ಮಳೆಗೆ ಮತ್ತು ಮಳೆಸಂಬಂಧಿತ ಪ್ರವಾಹ ಮತ್ತು ಭೂಕುಸಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಗರ್ಹವ್ವಾಲ್ ಮತ್ತು ಕುಮಾಂವ್ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಬಹುದೆಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಮೋಲಿ ಜಿಲ್ಲೆಯೊಂದರಲ್ಲೇ ಮಳೆ ಸಂಬಂಧಿತ ದುರಂತಗಳಿಗೆ 15 ಜನ ಸಾವೀಗೀಡಾಗಿದ್ದಾರೆ.
ಇಲ್ಲಿನ ಅಲಕಾನಂದ ನದಿಯು ತನ್ನ ಅಪಾಯದ ಮಟ್ಟಕ್ಕಿಂತ 30 ಅಡಿ ಎತ್ತರದಲ್ಲಿ ಹರಿಯುತ್ತಿರುವುದು ಈ ಭಾಗದಲ್ಲಿನ ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ. ಇನ್ನು ಭೂ ಕುಸಿತದ ಕಾರಣದಿಂದ ಉತ್ತರ ಕಾಶಿ – ಡೆಹ್ರಾಡೂನ್ ಹೆದ್ದಾರಿಯು ಮುಚ್ಚಲ್ಪಟ್ಟಿದೆ. ಇನ್ನು ಕೈಲಾಸ್ ಮಾನಸ ಸರೋವರ ಯಾತ್ರಾರ್ಥಿಗಳೂ ಸಹ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ರಾಜ್ಯ ವಿಪತ್ತು ನಿರ್ವಹಣಾ ದಳಗಳು ಈ ಭಾಗಲದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
Uttarakhand: Uttarkashi-Dehradun highway closed due to landslide pic.twitter.com/IfIKCZsUSl
— ANI (@ANI) August 18, 2019
ಪೌರಿ ಗರ್ಹವ್ವಾಲ್, ಚಮೋಲಿ, ಉತ್ತರಕಾಶಿ, ಮತ್ತು ರುದ್ರಪ್ರಯಾಗ್, ಪಿತೋರಾಗಢ್, ಚಂಪಾವತ್, ಭಗೇಶ್ವರ್ ಮತ್ತು ನೈನಿತಾಲ್ ಪ್ರದೇಶಗಳು ಮಳೆಯಿಂದಾಗಿ ಹೆಚ್ಚಿನ ಹಾನಿಯನ್ನು ಅನಭವಿಸಿವೆ. ಆಗಸ್ಟ್ 19ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಉತ್ತರಾಖಂಡ ಹಮಾಮಾನ ಇಲಾಖೆಯ ನಿರ್ದೇಶಕ ಬಿಕ್ರಂ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
ರುದ್ರಪ್ರಯಾಗದಲ್ಲಿ ಎಲ್ಲಾ ಘಾಟ್ ಗಳೂ ನೆರೆ ನೀರಿನಲ್ಲಿ ಮುಳುಗಲ್ಪಟ್ಟಿವೆ. ಜೋಶಿ ಮಠದಿಂದ ಬದರಿನಾಥ್ ಕಡೆಗೆ ಸಾಗುವ ಯಾತ್ರಾರ್ಥಿಗಳಿಗೆ ಲಂಬಾಗರ್ ಎಂಬ ಪ್ರದೇಶದಲ್ಲಿ ಉಂಟಾಗುತ್ತಿರುವ ಭೂಕುಸಿತದಿಂದ ಆತಂಕ ಉಂಟಾಗಿದೆ. ಆದರೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ಥಳೀಯ ಆಡಳಿತವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
Uttarakhand: State Disaster Response Force (SDRF) team helps pilgrims cross damaged path on the route of Kailash Mansarovar Yatra. pic.twitter.com/AkpbjVh2tJ
— ANI (@ANI) August 18, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.