ಟೈಟಾನ್ಸ್ ದಾಳಿಗೆ ಹೈರಾಣಾದ ಹರ್ಯಾಣ
ತಮಿಳ್ ತಲೈವಾಸ್-ಪುನೇರಿ ಪಲ್ಟಾನ್ ಪಂದ್ಯ 31-31 ಟೈ
Team Udayavani, Aug 19, 2019, 5:58 AM IST
ಚೆನ್ನೆ: ಏಳನೇ ಆವೃತ್ತಿ ಪ್ರೊ ಕಬಡ್ಡಿಯ ಚೆನ್ನೈ ಚರಣದ ರವಿವಾರದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 40-29 ಅಂಕಗಳ ಅಂತರದಿಂದ ಹರ್ಯಾಣ ಸ್ಟೀಲರ್ಸ್ ತಂಡವನ್ನು ಕೆಡವಿದೆ. ಇದು 9 ಪಂದ್ಯಗಳಲ್ಲಿ ತೆಲುಗು ಸಾಧಿಸಿದ ಕೇವಲ 2ನೇ ಜಯವಾಗಿದೆ. ಉಳಿದ 5 ಪಂದ್ಯಗಳಲ್ಲಿ ಸೋತು, ಎರಡರಲ್ಲಿ ಟೈ ಫಲಿತಾಂಶ ದಾಖಲಿಸಿದೆ. ಸದ್ಯ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಆತ್ಯಂತ ರೋಚಕವಾಗಿ ಸಾಗಿದ ಆತಿಥೇಯ ತಮಿಳ್ ತಲೈವಾಸ್-ಪುನೇರಿ ಪಲ್ಟಾನ್ ನಡುವಿನ ದ್ವಿತೀಯ ಮುಖಾಮುಖೀ 31-31 ಅಂಕಗಳಿಂದ ಟೈ ಆಯಿತು.
ಸಿದ್ಧಾರ್ಥ್ ಮಿಂಚಿನ ದಾಳಿ
ತೆಲುಗು ತಂಡದ ಗೆಲುವಿಗೆ ಕಾರಣವಾದವರು ಸಿದ್ಧಾರ್ಥ್ ದೇಸಾಯಿ. 18 ಬಾರಿ ಎದುರಾಳಿ ಕೋಟೆಗೆ ನುಗ್ಗಿದ ಅವರು ಅಷ್ಟೂ ಬಾರಿ ಯಶಸ್ವಿಯಾಗಿ 18 ಅಂಕ ಗಳಿಸಿದರು. ಈ ದಾಳಿ ವೇಳೆ ಅವರು 16 ಟಚ್ ಪಾಯಿಂಟ್ ಜತೆಗೆ ಹೆಚ್ಚುವರಿಯಾಗಿ 2 ಅಂಕ ಗಳಿಸಿದರು. ಇದು ಎದುರಾಳಿ ಹರ್ಯಾಣವನ್ನು ಆತಂಕಕ್ಕೆ ಸಿಲುಕಿಸಿತು. ಸತತವಾಗಿ ಆಕ್ರಮಣ ನಡೆಸಿದ ಅವರನ್ನು ತಡೆಯಲು ಸಾಧ್ಯವಾಗದೆ ಪರದಾಡಿತು. ದೇಸಾಯಿಗೆ ಸೂರಜ್ ಉತ್ತಮ ಸಾಥ್ ನೀಡಿ 6 ಅಂಕ ಗಳಿಸಿದರು. ಆದರೆ ರಕ್ಷಣೆಯಲ್ಲಿ ಟೈಟಾನ್ಸ್ ಹೇಳಿಕೊಳ್ಳುವಂಥ ಪ್ರದರ್ಶನ ನೀಡಲಿಲ್ಲ. ಅಬೊಜರ್ ಮಿಘಾನಿ 3 ಅಂಕ ಗಳಿಸಿದ್ದೇ ಉತ್ತಮ ಸಾಧನೆ.
ಹರ್ಯಾಣ ಪರ ವಿಕಾಸ್ ಕಂಡೊಲ ಎಂದಿನಂತೆ ಉತ್ತಮವಾಗಿ ಆಡಿದರು. 17 ಬಾರಿ ದಾಳಿ ನಡೆಸಿದ ಅವರು ಯಶಸ್ವಿಯಾದದ್ದು 9 ಬಾರಿ ಮಾತ್ರ. ತಂಡ ಸಾಂ ಕವಾಗಿ ವಿಫಲವಾದದ್ದೇ ತಂಡದ ಸೋಲಿಗೆ ಕಾರಣವಾಯಿತು. ಹರ್ಯಾಣ 8 ಪಂದ್ಯಗಳಲ್ಲಿ 4ನೇ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.