ರಾಜ್ಯದ ನೆರೆ ಪರಿಹಾರ ನಿಧಿಗೆ 34 ಲಕ್ಷ ರೂ.

ಬಹ್ರೇನ್‌ನಲ್ಲಿ ಕನ್ನಡ ಭವನ ನಿರ್ಮಿಸಲು 25 ಲಕ್ಷ ರೂ. • ಕಸಾಪ ರಾಜ್ಯಾಧ್ಯಕ್ಷ ಮನುಬಳಿಗಾರ್‌

Team Udayavani, Aug 19, 2019, 4:05 PM IST

Udayavani Kannada Newspaper

ಕೋಲಾರ: ಕನ್ನಡದ ಹೆಸರಾಂತ ಕವಿಗಳ 51 ಕವನ ‌ಗಳನ್ನು ನೇಪಾಳಿ ಭಾಷೆಗೆ ಅನುವಾದಿಸಿ ‘ಭಾರತ್‌ ಶಾಶ್ವತ್‌ ಆವಾಜ್‌’ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ಮನುಬಳಿಗಾರ್‌ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ದಲಿತ ಸಾಹಿತ್ಯ ಸಮ್ಮೇ ಳನದಲ್ಲಿ ಭಾಗವಹಿಸಲು ಆಗಮಿಸಿರುವ ಅವರು, ಕಸಾಪ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕಸಾಪದ ಮುಂದಿನ ಯೋಜನೆಗಳ ಕುರಿತಂತೆ ವಿವರಿಸಿದರು.

ಈಗಾಗಲೇ ಕುವೆಂಪು, ಬೇಂದ್ರೆಯಂತ ಹೆಸರಾಂತ ಕವಿಗಳ 51 ಕನ್ನಡದ ಕವನಗಳು ನೇಪಾಳಿ ಭಾಷೆಯಲ್ಲಿ ಈಗಾಗಲೇ ಅನುವಾದಗೊಂಡು ಅಲ್ಲಿನ ರಾಷ್ಟ್ರಪತಿ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ನೇಪಾಳಿ ಭಾಷೆಯ 50 ಕವನಗಳನ್ನು ಆಧುನಿಕ ನೇಪಾಳಿ ಕವನ ಗಳು ಹೆಸರಿನಲ್ಲಿ ಅನುವಾದವಾಗಿದ್ದು, ಬಿಡುಗಡೆಗೆ ಕಾಯಲಾಗುತ್ತಿದೆ ಎಂದು ವಿವರಿಸಿದರು.

ಬಹ್ರೇನ್‌ನಲ್ಲಿ ಕನ್ನಡ ಭವನ: ಆರು ತಿಂಗಳ ಹಿಂದೆ ಬಹ್ರೇನ್‌ನಲ್ಲಿ ಅಂತಾರಾಷ್ಟ್ರೀಯ ಕನ್ನಡಸಾಹಿತ್ಯ ಸಮ್ಮೇ ಳನವನ್ನು ಯಶಸ್ವಿಯಾಗಿ ನಡೆಸಲಾಗಿತ್ತು, 100 ಮಂದಿ ಪ್ರತಿನಿಧಿಗಳು ರಾಜ್ಯದಿಂದಲೂ ಭಾಗವಹಿಸಿ ದ್ದರು. ಬಹ್ರೇನ್‌ ಸರಕಾರ ಸಮ್ಮೇಳನದ ಅರ್ಧ ಖರ್ಚನ್ನು ವಹಿಸಿಕೊಂಡಿತ್ತು. ಇದೀಗ ಬಹ್ರೇನ್‌ ಕನ್ನಡಿಗರು ಅಲ್ಲಿ ಕನ್ನಡ ಭವನವೊಂದನ್ನು ನಿರ್ಮಿಸಲು ಮುಂದಾಗಿದ್ದು, ಕನ್ನಡ ಸಾಹಿತ್ಯ ಪರಿಷತ್‌ನಿಂದ 25 ಲಕ್ಷ ರೂ. ನೀಡಲು ಕೋಲಾರದಲ್ಲಿ ನಡೆದ ಕಾರ್ಯ ಕಾರಿಣಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲಿ ನಿರ್ಮಾಣವಾಗುವ ಸಭಾಂಗಣಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಭವನವೆಂದೇ ನಾಮಕರಣ ಮಾಡಲು ಕೋರಲಾಗಿದೆ ಎಂದರು.

ಉದ್ಯೋಗ ಪೋರ್ಟಲ್: ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಉದ್ಯೋಗ ಮಾಹಿತಿಯನ್ನು ಕನ್ನಡದಲ್ಲಿ ಯುವಕ ಯುವತಿ ಯರಿಗೆ ನೀಡುವ ಸಲುವಾಗಿ ಉದ್ಯೋಗ ಹೆಸರಿನ ಪೋರ್ಟಲ್ ಅರಂಭಿಸಲಾಗಿದೆ. ಇದರಿಂದ ಬಹು ರಾಷ್ಟ್ರೀಯ ಕಂಪನಿಗಳ ಉದ್ಯೋಗ ಮಾಹಿತಿ ನಿರುದ್ಯೋಗಿಗಳಿಗೆ ಸುಲಭವಾಗಿ ಸಿಗುವಂತಾಗಿದೆ. ಕೆಲವು ಹೆಸರಾಂತ ಬಹುರಾಷ್ಟ್ರೀಯ ಕಂಪನಿಗಳು ಕಸಾಪದೊಂದಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸಂಪರ್ಕ ಸಾಧಿಸಿರುವುದು ಹೆಗ್ಗಳಿಕೆಯ ವಿಚಾರವಾಗಿದೆ ಎಂದು ವಿವರಿಸಿದರು.

ಸದ್ಯಕ್ಕೆ ಸದಸ್ಯತ್ವಕ್ಕೆ ಆದ್ಯತೆ ಇಲ್ಲ: ಕನ್ನಡ ಸಾಹಿತ್ಯ ಪರಿಷತ್‌ಗೆ ಪ್ರಸ್ತುತ 3.26 ಲಕ್ಷ ಅಜೀವ ಸದಸ್ಯರಿದ್ದು, ಸದ್ಯಕ್ಕೆ ಸದಸ್ಯತ್ವ ಅಭಿಯಾನ ನಡೆಸುವ ಉದ್ದೇಶ ಕಸಾಪಕ್ಕೆ ಇಲ್ಲ. ಏಕೆಂದರೆ, ಕನ್ನಡಕ್ಕಾಗಿ ಮಾಡಬೇಕಾದ ಮಹತ್ವದ ಕೆಲಸಗಳು ಹೆಚ್ಚಾಗಿವೆ. ಕನ್ನಡ ಶಾಸ್ತ್ರೀಯ ಸ್ಥಾನ ಮಾನ ಕಲ್ಪಿಸುವ, ಕನ್ನಡ ತಂತ್ರಾಂಶ ಅಭಿವೃದ್ಧಿ ಪಡಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ನೂತನ ಬೈಲಾ ಅನುಷ್ಠಾನ: ಕಸಾಪ ನೂತನ ಬೈಲಾ ಪ್ರಕಾರ ಮಹಿಳಾ ಮತ್ತು ಪರಿಶಿಷ್ಟ ಸದಸ್ಯರ ಪ್ರಾತಿ ನಿಧಿತ್ವವನ್ನು ಒಂದು ಸದಸ್ಯರಿಂದ ಎರಡು ಸದಸ್ಯ ಸ್ಥಾನಗಳಿಗೆ ಹೆಚ್ಚಿಸಲಾಗಿದ್ದು, ಹೊಸದಾಗಿ ಪರಿಶಿಷ್ಟ ಪಂಗಡ ಸದಸ್ಯರಿಗೂ ಅವಕಾಶ ಕಲ್ಪಿಸಲಾಗಿದೆ. ಹೊಸ ಬೈಲಾ ಪ್ರಕಾರವೇ ಈಗಾಗಲೇ ಪರಿಷತ್‌ನ ಎಲ್ಲಾ ಘಟಕಗಳಿಗೆ ಹೊಸ ಸದಸ್ಯರ ಸೇರ್ಪಡೆಯಾಗಿದೆ. ರಾಜ್ಯಸಮಿತಿಗೆ ನೇಮಕಗೊಂಡಿರುವ ಮಹಿಳಾ ಸದಸ್ಯೆ ಡಾ.ಎಸ್‌.ಪಿ.ಉಮಾದೇವಿ, ಪರಿಶಿಷ್ಟ ಪಂಗಡದ ಸದಸ್ಯ ಡಾ.ನೀಲಗಿರಿ ತಳವಾರ್‌ ಮತ್ತು ಪರಿಶಿಷ್ಟ ಜಾತಿಯ ಸದಸ್ಯ ಮೇಘಣ್ಣನವರ್‌ ಅವರನ್ನು ಕೋಲಾರದ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ರೆಂದರು.

ನೆರೆ ಪರಿಹಾರ: ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ನೆರೆ ಏರ್ಪಟ್ಟು ಅಪಾರ ಹಾನಿಯಾಗಿರು ವುದರಿಂದ ಕಸಾಪ ಪರಿಷತ್‌ ನಿಧಿಯಿಂದ 30 ಲಕ್ಷ ರೂ., ಪದಾಧಿಕಾರಿಗಳು ಹಾಗೂ ನೌಕರರ ವೇತನದ 4 ಲಕ್ಷ ರೂ. ಅನ್ನು ಸೇರಿಸಿ 34 ಲಕ್ಷ ರೂ. ಮುಖ್ಯ ಮಂತ್ರಿಗಳ ನೆರೆ ಸಂತ್ರಸ್ತ ನಿಧಿಗೆ ನೀಡಲು ನಿರ್ಧರಿಸಲಾಯಿತು ಎಂದು ಹೇಳಿದರು.

ದಲಿತ ಸಂಪುಟಗಳ ಅರ್ಧ ಬೆಲೆಗೆ ಮಾರಾಟ: ಕೋಲಾರದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ದಲಿತ ಸಾಹಿತ್ಯ ಸಮಗ್ರ ಐದು ಸಂಪುಟಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಲು ತೀರ್ಮಾನಿಸಲಾಗಿದ್ದು, ಪ್ರತಿಗಳು ಇರುವವರೆಗೂ ಈ ರಿಯಾಯಿತಿ ದರದ ಮಾರಾಟ ಇರುತ್ತದೆಯೆಂದು ಹೇಳಿದರು.

ಹಾಲಿ ವಿದೇಶ ಮತ್ತು ನೆರೆ ರಾಜ್ಯಗಳಲ್ಲಿ ಪರಿಷತ್ತಿನ ಹೊಸ ಘಟಕಗಳನ್ನು ಆರಂಭಿಸಬೇಕಾದರೆ 500 ಸದಸ್ಯರು ಕಡ್ಡಾಯವೆಂಬ ನಿಯಮವಿತ್ತು, ಆದರೆ, ಇಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇದನ್ನು 250 ಕ್ಕೆ ಇಳಿಸಲು ತೀರ್ಮಾನಿಸಲಾಗಿದೆಯೆಂದರು.

ಸಾಮಾಜಿಕ ನ್ಯಾಯ: ಕನ್ನಡ ಸಾಹಿತ್ಯ ಪರಿಷತ್‌ನ ಪ್ರಥಮ ದಲಿತಸಾಹಿತ್ಯ ಸಮ್ಮೇಳನವನ್ನು ಮುಂದಿನ ವರ್ಷ ಎಲ್ಲಿ ನಡೆಸಲಾಗುವುದು ಎಂಬ ಕುರಿತು ಪ್ರಶ್ನೆಗಳು ಎದ್ದಿದ್ದು, ತಮ್ಮ ಅವಧಿ ಇರುವವರೆವಿಗೂ ಇದನ್ನು ಮುಂದುವರೆಸಿಕೊಂಡು ಹೋಗಲಾಗು ವುದು. ಮುಂದೆ ಯಾರೇ ಬಂದರೂ ಅವರು ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತೆ ನಿರ್ಣಯ ಮಾಡಲಾಗುವುದು ಎಂದು ಅವರು ಹೇಳಿದರು.

ತಾವು ಕಸಾಪಕ್ಕೆ ಅಧ್ಯಕ್ಷರಾದ ನಂತರ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಹಾಗೂ ಪ್ರತಿಭಾ ನ್ಯಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆಯೆಂದು ಅವರು ವಿವರಿಸಿದರು.

ಕೃತಜ್ಞತೆ: ಕೋಲಾರ ನಗರದಲ್ಲಿ ಅಚ್ಚುಕಟ್ಟಾಗಿ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಡೆಸಲು ಸಹಕರಿಸಿದ ಜಿಲ್ಲಾಡಳಿತ, ಕೋಲಾರ ಜಿಲ್ಲಾ ಕಸಾಪ ಅಧ್ಯಕ್ಷ ನಾಗನಂದ ಕೆಂಪರಾಜ್‌ ಮತ್ತವರ ತಂಡ, ಜಿಲ್ಲಾಡಳಿತದ ಅಧಿಕಾರಿಗಳಿಗೆ ಅವರು ಕೃತಜ್ಞತೆಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್‌, ಕಸಾಪ ಸದಸ್ಯರಾದ ಡಾ.ಸಂತೋಷ್‌ ಹಾನಗಲ್, ವ.ಚ.ಚನ್ನೇಗೌಡ, ರಾಜಶೇಖರ ಹತಗುಂದಿ, ಲಿಂಗರಾಜು ಅಂಗಡಿ, ಲಿಂಗಯ್ಯ ಹಿರೇಮs್ ಹಾಜರಿದ್ದರು.

 

● ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ

Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ

Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ

Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ

Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ

ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಕ್ಕೆ ವಿದ್ಯಾರ್ಹತೆ ಸಡಿಲ: ಹೈಕೋರ್ಟ್‌ಗೆ ಅರ್ಜಿ

ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಕ್ಕೆ ವಿದ್ಯಾರ್ಹತೆ ಸಡಿಲ: ಹೈಕೋರ್ಟ್‌ಗೆ ಅರ್ಜಿ

Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ

Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.