ಪೆಟ್ರೋಲ್‌ ಅಂಕಲ್‌ಗೆ ಧನ್ಯವಾದ


Team Udayavani, Aug 20, 2019, 5:00 AM IST

w-6

ಅಂದು ಕಾಲೇಜಿಗೆ ರಜೆ ಇತ್ತು. ಹೀಗಾಗಿ, ಅಜ್ಜಿ ಊರಿಗೆ ಹೊರಟಿದ್ದೆ. ಆ ಊರೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ನನ್ನ ಅದೆಷ್ಟೊ ನೆನಪುಗಳು ಅಲ್ಲಿವೆ. ನದಿಗೆ ಹೋಗಿ ಈಜಾಡಿದ್ದು, ಬೇರೆಯವರ ಹೊಲದಲ್ಲಿ ಕದ್ದು ಕಲ್ಲಂಗಡಿ ಹಣ್ಣು ತಿಂದದ್ದು, ಬೆಂಕಿಪೆಟ್ಟಿಗೆಯಿಂದ ಲಾರಿ ತಯಾರಿಸಿ ಆಟ ಆಡಿದ್ದು. ಇಂಥ ಅನೇಕ ನೆನಪುಗಳ ಗಣಿಯಾಗಿದ್ದ ಆ ಊರಿಗೆ ಹೋಗಲು ಉತ್ಸುಕನಾಗಿದ್ದೆ. ಹಾಗಾಗಿ, ಬೈಕ್‌ ಹೊಟ್ಟೆಗೆ ಒಂದು ಲೀಟರ್‌ ಪೆಟ್ರೊಲ್‌ ತುಂಬಿಸಿಕೊಂಡು ಹೊರಟೆ. ಅಲ್ಲಿ ನನ್ನ ಅಜ್ಜಿ ಪ್ರೀತಿಯಿಂದ ಬರಮಾಡಿಕೊಂಡು ಸತ್ಕರಿಸಿದರು. ನನಗಿಷ್ಟವಾದ ಸಿಹಿ ತಿನಿಸುಗಳನ್ನು ಕೊಟ್ಟರು. ಅಲ್ಲಿಂದ ವಾಪಸ್‌ ನನ್ನೂರಿಗೆ ಹೊರಡಲು ಅನುವಾದೆ. ಅದು ಪುಟ್ಟ ಹಳ್ಳಿಯಾದ್ದರಿಂದ ಬಂಕ್‌ ಇರಲಿಲ್ಲ. ಮುಂದೆ ಪಟ್ಟಣದಲ್ಲಿ ಪೆಟ್ರೊಲ್‌ ತುಂಬಿಸಿಕೊಂಡರಾಯ್ತು ಅಂತ ಅಲ್ಲಿಂದ ಹೊರಟೆ. ಸ್ವಲ್ಪ ದೂರ ಬಂದ ಮೇಲೆ ನನ್ನ ಮೋಟಾರ್‌ ಬೈಕ್‌ ಮುಂದಕ್ಕೆ ಚಲಿಸದೆ ಸ್ಥಬ್ದವಾಗಿ ನಿಂತುಬಿಟ್ಟಿತು. ಏನೇ ಪ್ರಯತ್ನಪಟ್ಟರೂ ಸ್ಟಾರ್ಟ್‌ ಆಗಲಿಲ್ಲ. ಪೆಟ್ರೊಲ್‌ ಟ್ಯಾಂಕಿನ ಮುಚ್ಚಳ ತೆಗೆದು ಬೈಕ್‌ ಅನ್ನು ಅಲ್ಲಾಡಿಸಿ ನೋಡಿದಾಗ ಪೆಟ್ರೊಲ್‌ ತಳಕಂಡಿದ್ದು ಖಾತ್ರಿಯಾಯಿತು. ಇನ್ನು ಪಟ್ಟಣ, ಅಲ್ಲಿದ್ದ ಬಂಕ್‌ ದೂರವಿದ್ದರಿಂದ ರಸ್ತೆಯ ಮಧ್ಯೆ ಕಂಗಾಲಾಗಿ ನಿಂತೆ. ಅದೇ ದಾರಿಯಲ್ಲಿ ಸಂಚರಿಸುತಿದ್ದ ಒಂದೆರಡು ಬೈಕ್‌ ಸವಾರರನ್ನು ತಡೆದು ಸಹಾಯ ಮಾಡಲು ಕೋರಿಕೊಂಡರೂ, ಯಾರೂ ನೆರವಿಗೆ ಬಾರದೆ ಬರ್‌ನೆ ಹೋಗುತಿದ್ದರು. ನನಗೆ ಆತಂಕ ಶುರುವಾಯಿತು. ಏನು ಮಾಡಬೇಕೆಂದು ತಿಳಿಯದೆ ಚಿಂತಿಸುತ್ತಾ ನಿಂತೆ. ಆಗ ದೂರದಲ್ಲಿ ಬೈಕ್‌ ಸವಾರರೊಬ್ಬರು ಬರುವುದು ಕಾಣಿಸಿತು. ಕಡೇ ಪ್ರಯತ್ನ ಅಂತ, ಕೈ ಹಾಕಿದೆ. ನಿಲ್ಲಿಸಿದರು. ಪರಿಸ್ಥಿತಿಯನ್ನು ವಿವರಿಸಿ ನನ್ನ ಕಷ್ಟವನ್ನು ತೋಡಿಕೊಂಡೆ.

ಸಹೃದಯರಾಗಿದ್ದ ಅವರು ಮಾಡಿದ್ದೇನು ಗೊತ್ತೆ? ಕುಡಿಯಲು ಇಟ್ಟುಕೊಂಡಿದ್ದ ಬಾಟಲು ನೀರನ್ನು ಚೆಲ್ಲಿ, ಅವರ ಬೈಕನಲ್ಲಿದ್ದ ಸ್ವಲ್ಪ ಪೆಟ್ರೊಲ್‌ ತೆಗೆದುಕೊಟ್ಟರು. ಮುಂದೆ ಪೆಟ್ರೋಲ್‌ ಬಂಕ್‌ ಇದೆ. ಇದನ್ನು ಹಾಕಿಕೊಂಡು ಹೋಗು ಅಂದರು. ನಾನು ಅದಷ್ಟೆ ಪೆಟ್ರೊಲ್‌ ಹಾಕಿಕೊಂಡು ಅವಸರದಲ್ಲಿ ಬೈಕ್‌ ಓಡಿಸಿಕೊಂಡು ಪೆಟ್ರೊಲ್‌ ಬಂಕ್‌ ತುಲುಪುವ ಹೊತ್ತಿಗೆ ನಿಟ್ಟುಸಿರು ಬಂತು. ಅಂತಹ ಪರಿಸ್ಥಿತಿಯಲ್ಲಿ ಸಹಾಯ ಮಾಡಿದ ಆ ಅಂಕಲ್‌ಗೆ ಒಂದು ಧನ್ಯವಾದ ಹೇಳಲಿಲ್ಲವಲ್ಲವೆಂದು ನನ್ನೊಳಗೆ ಮರುಗಿದೆ. ಆಪತ್ತಿನಲ್ಲಿ ನನಗೆ ಸಹಾಯ ಮಾಡಿದ ಅಂಕಲ್‌ಗೆ ದೊಡ್ಡ ಥ್ಯಾಂಕ್ಸ್‌….

-ಅಂಬಿ ಮುದ್ದೂರು

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

4

Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.