ನೀವು ಇಂಟೆಲಿ ಜೆನ್ಸ್‌ ಆಗ್ರೀ…


Team Udayavani, Aug 20, 2019, 5:00 AM IST

w-8

ಪ್ರಸ್ತುತ ಎಲ್ಲೆಲ್ಲೂ ಕೃತಿಕ ಬುದ್ಧಿ ಮತ್ತೆಗೆ ಬೆಲೆ ಸಿಗುತ್ತಿದೆ. ಅಂದರೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌. ಹೀಗಾಗಿ, ಅನೇಕ ಕಾಲೇಜುಗಳಲ್ಲಿ ಕೋರ್ಸ್‌ಗಳು ಆರಂಭವಾಗಿವೆ. ಇವನ್ನು ಆನ್‌ಲೈನ್‌, ಆಫ್ಲೈನ್‌ ಎರಡೂ ವಿಧದಲ್ಲಿ ಕೋರ್ಸ್‌ ಪೂರೈಸಬಹುದು. ಸಾಮಾನ್ಯವಾಗಿ ಈ ಕೋರ್ಸ್‌ನ ಜೊತೆಗೆ ಮೆಶೀನ್‌ ಲರ್ನಿಂಗ್‌ ಅನ್ನು ಪ್ರಧಾನವಾಗಿ ಕಲಿಯಲೇಬೇಕಾಗುತ್ತದೆ.

ಈಗ ಎಲ್ಲೆಲ್ಲೂ ಕೃತಕ ಬುದ್ಧಿಮತ್ತೆಯ ಹವಾ. ಇದಕ್ಕೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅಂತ ಕರೆಯುತ್ತಾರೆ. ನಾವೇ ತಯಾರಿಸಿದ ನಮ್ಮ ಸಾಫ್ಟ್ವೇರನ್ನೇ ಹೊಟ್ಟೆಯೊಳಗಿಟ್ಟುಕೊಂಡು, ನಮ್ಮಂತೆಯೇ ಯೋಚಿಸಿ, ಕೆಲಸ ಮಾಡುವ ಯಂತ್ರಗಳ ಚಮತ್ಕಾರವನ್ನು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಎನ್ನುತ್ತೇವೆ. ಇಂಥ ಯಂತ್ರಗಳ ಉತ್ಪನ್ನ ಬಿಲಿಯನ್‌ ಡಾಲರ್‌ನಷ್ಟಾಗಿದೆ. ತನ್ನ ವಯೋಸಹಜ ಮನೋ-ದೈಹಿಕ ದೌರ್ಬಲ್ಯಗಳಿಂದ, ಮರೆವು, ಮುಂದಾಲೋಚನೆಯ ಕೊರತೆಯಿಂದ ಮನುಷ್ಯನ ಕೆಲಸಗಳು ಹಳ್ಳ ಹಿಡಿಯುವ ಸಾಧ್ಯತೆ ಇರುತ್ತದೆ. ಆದರೆ, ಯಂತ್ರಗಳು ಹಾಗಲ್ಲ. ಅಳವಡಿಸಿಕೊಂಡಿರುವ ಸೂತ್ರ – ತಂತ್ರಾಂಶಗಳಿಂದ ಒಂದಿಂಚೂ ಆಚೀಚೆ ಸರಿಯದೆ ಕರಾರುವಾಕ್ಕಾಗಿ ಕೆಲಸ ಮಾಡುತ್ತವೆ. ಅವುಗಳಿಂದ ಕೆಲಸ ಸುಲಭ ಮತ್ತು ಸಮಯ ಉಳಿತಾಯ ಆಗುವುದರಿಂದ ಉತ್ಪಾದನಾ ಮಟ್ಟ ಹೆಚ್ಚುತ್ತದೆ. ಹೀಗಾಗಿ, ಕೃತಕ ಬುದ್ಧಿಮತ್ತೆಯ ಕುರಿತಾದ ಕುತೂಹಲ ಇಮ್ಮಡಿಯಾಗಿದೆ.

ಸಂಶೋಧನಾ ಕೇಂದ್ರ, ಮಿಲಿಟರಿ, ಆಸ್ಪತ್ರೆ, ಬಾಹ್ಯಾಕಾಶ, ಮಾರ್ಕೆಟಿಂಗ್‌, ಉನ್ನತ ತಂತ್ರಜ್ಞಾನ ಬಳಕೆಯ ಉದ್ಯಮಗಳಲ್ಲೆಲ್ಲಾ ಅದರ ಬಳಕೆ ಪ್ರಾರಂಭಗೊಂಡಿದೆ. ಇದರ ಜೊತೆಗೆ ಉತ್ಪಾದನಾ ರಂಗದಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ನಿರ್ವಹಣೆಗೆ ದಕ್ಷ ಕೆಲಸಗಾರರ ಅವಶ್ಯಕತೆ ಇದೆ. ಆದ್ದರಿಂದ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕುರಿತ ಹಲವು ಕೋರ್ಸ್‌, ತರಬೇತಿಗಳು, ಕಾರ್ಯಗಾರಗಳು ಪ್ರಾರಂಭಗೊಂಡಿವೆ. ಸದಾ ಬದಲಾಗುತ್ತಿರುವ ಉನ್ನತ ತಂತ್ರಜ್ಞಾನ ಆಧರಿಸಿ ಕೆಲಸ ಮಾಡುವ ಬಹುಪಾಲು ಸಂಸ್ಥೆಗಳಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮತ್ತು ಮೆಶೀನ್‌ ಲರ್ನಿಂಗ್‌ ಕಲಿತವರನ್ನು ದೊಡ್ಡ ಸಂಖ್ಯೆಯಲ್ಲಿ ಸೇರಿಸಿಕೊಳ್ಳಲಾಗುತ್ತಿದೆ.

ಯಾವ್ಯಾವ ಕೋರ್ಸ್‌?
ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ನ ಕೋರ್ಸ್‌ಗಳು ಆನ್‌ಲೈನ್‌ ಮತ್ತು ಆಫ್ಲೈನ್‌ ಎರಡೂ ವಿಧದಲ್ಲಿ ದೊರಕುತ್ತವೆ. ಸಾಮಾನ್ಯವಾಗಿ ಈ ಕೋರ್ಸ್‌ನ ಜೊತೆಗೆ ಮೆಶೀನ್‌ ಲರ್ನಿಂಗ್‌ ಅನ್ನು ಪ್ರಧಾನವಾಗಿ ಕಲಿಯಲೇಬೇಕಾಗುತ್ತದೆ. ಜಾವಾ, ಪೈಥಾನ್‌, ಸಿ ++ ನಂಥ ಸಾಫ್ಟ್ವೇರ್‌ ಜ್ಞಾನವನ್ನು ಕಲಿಸುವ ಎಲ್ಲ ಕೋರ್ಸ್‌ಗಳು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ನ ಒಂದು ಭಾಗ. ಇವುಗಳ ಜೊತೆ ಮೆಶೀನ್‌ ಲರ್ನಿಂಗ್‌ಗೆ ಬೇಕಾಗುವ ಸ್ಕೇಲಾ, ಪೆರ್ಲ್ ದತ್ತಾಂಶ ವಿಶ್ಲೇಷಣೆಗೆ ನೆರವಾಗುವ ಹೈವ್‌, ಹಡೂಪ್‌, ಮ್ಯಾಪ್‌ ರೆಡ್ನೂಸ್‌, ಪಿಗ್‌, ಸ್ಟಾರ್ಕ್‌ ಪ್ರೋಗ್ರಾಮಿಂಗ್‌ ಲಾಂಗ್ವೇಜ್‌ಗಳು ಮತ್ತು ಎಸ್‌ಕ್ಯುಎಲ್‌ಗ‌ಳನ್ನು ಸಿಲಬಸ್‌ನ್ನಾಗಿ ಅಧ್ಯಯನ ಮಾಡಿರುವ ಕಂಪ್ಯೂಟರ್‌ ಸೈನ್ಸ್‌, ಎಂಜಿನಿಯರಿಂಗ್‌ ಮತ್ತು ಇನ್ಫರ್‌ವೆುàಶನ್‌ ಸೈನ್ಸ್‌ ವಿದ್ಯಾರ್ಥಿಗಳು ಈ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕೋರ್ಸ್‌ ಸುಲಭವಾಗಿ ಮುಗಿಸಬಹುದು. ಸಂಖ್ಯಾಶಾಸ್ತ್ರ, ಅನ್ವಯಿಕ ವಿಜ್ಞಾನ, ಅನ್ವಯಿಕ ಗಣಿತದ ಸ್ನಾತಕೋತ್ತರ ಪದವಿ, ಬಯೋಸಿಯನ್‌ ನೆಟ್‌ವರ್ಕಿಂಗ್‌, ಕಾಗ್ನಿಟಿವ್‌ ಸೈನ್ಸ್‌ ಥಿಯರಿ, ಭೌತಶಾಸ್ತ್ರ, ಕಂಪ್ಯೂಟರ್‌ ಸೈನ್ಸ್‌, ರೊಬಾಟಿಕ್ಸ್‌, ಸೈಕಾಲಜಿ, ಫಿಶಿಯಾಲಜಿ ಆಫ್ ನರ್ವಸ್‌ ಸಿಸ್ಟಮ್‌ ಹಾಗೂ ಗಣಿತದ ಎಲ್ಲ ಶಾಖೆಗಳ ತಿಳುವಳಿಕೆ ಹೊಂದಿದ ಯಾರೇ ಆದರೂ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕೋರ್ಸ್‌ ಕಲಿಯಬಹುದು. ಮೂರು ತಿಂಗಳಿನ ಸರ್ಟಿಫಿಕೇಟ್‌ ಕೋರ್ಸ್‌ಗಳ ಜೊತೆ 3 ವರ್ಷಗಳ ಸುದೀರ್ಘ‌ ಅಧ್ಯಯನದ ಕೋರ್ಸ್‌ಗಳೂ ಲಭ್ಯವಿವೆೆ. ಕೋರ್ಸ್‌ ಮಾಡಿದವರಿಗೆ ದೊಡ್ಡ ಸಂಬಳದ ಕೆಲಸ ಸಿಗುತ್ತವಾದ್ದರಿಂದ ಅದನ್ನು ಕಲಿಯಲೂ ಸಹ ತುಸು ಹೆಚ್ಚೇ ಎನಿಸುವ ಶುಲ್ಕ ಭರಿಸಬೇಕಾಗುತ್ತದೆ. ಕಂಪ್ಯೂಟರ್‌ ಜ್ಞಾನ, ಮೂಲ ಮತ್ತು ಅನ್ವಯಕ ವಿಜ್ಞಾನ ಹಾಗೂ ಗಣಿತದಲ್ಲಿ ಪದವಿ ಪಡೆದವರು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಗೆ ಸಂಬಂಧಿಸಿದ ಉನ್ನತ ಕೋರ್ಸ್‌ಗಳನ್ನು ಸುಲಭವಾಗಿ ಕಲಿಯಬಹುದು. ಕಂಪ್ಯೂಟರ್‌ ಡಿಪ್ಲೊಮಾ ಮಾಡಿ ಎಲ್‌ಎಸ್‌ಐ ಪರಿಣತಿ ಹೊಂದಿದವರು, ಮೆಕೆಟ್ರಾನಿಕ್ಸ್‌, ಇಂಡಸ್ಟ್ರಿಯಲ್‌ ರೊಬಾಟಿಕ್ಸ್‌ ಕಲಿತ ವಿದ್ಯಾರ್ಥಿಗಳಿಗೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸಿಲಬಸ್‌ನಲ್ಲೇ ಇರುತ್ತದೆ. ಹೀಗಾಗಿ, ಇದನ್ನು ಕಲಿತವರಿಗೆ ಉದ್ಯೋಗದಲ್ಲಿ ಆದ್ಯತೆ ಹೆಚ್ಚು. ಕೋರ್ಸ್‌ಗಳು ಹೀಗಿವೆ.

1. ಪೋಸ್ಟ್‌ ಗ್ರಾಜುಯೇಟ್‌ ಇನ್‌ ಮೆಶೀನ್‌ ಲರ್ನಿಂಗ್‌ ಅಂಡ್‌ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌
2. ಫೌಂಡೇಶನ್ಸ್‌ ಆಫ್ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅಂಡ್‌ ಮೆಶೀನ್‌ ಲರ್ನಿಂಗ್‌
3. ಎಂ.ಟೆಕ್‌ ಇನ್‌ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌
4. ಎಂ.ಟೆಕ್‌ ಕಂಪ್ಯೂಟರ್‌ ಸೈನ್ಸ್‌ ವಿಥ್‌ ಸ್ಪೆಷ‌ಲೈಜೇಶನ್‌ ಇನ್‌ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌
ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ನ್ಯಾನೊ ಡಿಗ್ರಿ

ಕೋರ್ಸ್‌ ಎಲ್ಲೆಲ್ಲಿ ಲಭ್ಯ?
ಬೆಂಗಳೂರಿನ ಹಲವು ಸಂಸ್ಥೆಗಳು, ಉದ್ಯಮಗಳು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕುರಿತ ವಿದ್ಯಾಭ್ಯಾಸ ಮತ್ತು ತರಬೇತಿ ನೀಡುತ್ತವೆ. ExcelR ಕಂಪನಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ಗೆ ಸಂಬಂಧಿಸಿದ ವಿವಿಧ 12 ಕೋರ್ಸ್‌ಗಳ ತರಬೇತಿ ನೀಡುತ್ತದೆ. ಉಡಾಸಿಟಿ, ಝೆಕೆಲ್ಯಾಬ್ಸ್, ಮೈಟೆಕ್ಟ್ರಾ, ಝೆನ್‌ರೇಸ್‌ ಸಂಸ್ಥೆಗಳು 45 ತಾಸುಗಳಿಂದ ಹಿಡಿದು, ಆರು ತಿಂಗಳ ಅವಧಿಯ ಆನ್‌ಲೈನ್‌ ಕೋರ್ಸ್‌ಗಳ ಶಿಕ್ಷಣ ಹಾಗೂ ತರಬೇತಿ ಎರಡನ್ನೂ ನೀಡುತ್ತಿವೆ. ವಾರಂಗಲ್‌ನ ಎನ್‌ಐಟಿ 9 ತಿಂಗಳ ಪೋಸ್ಟ್‌ಗ್ರ್ಯಾಜುಯೇಟ್‌ ಪ್ರೋಗ್ರಾಂ ಇನ್‌ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅಂಡ್‌ ಮೆಶೀನ್‌ ಲರ್ನಿಂಗ್‌ನ ಆನ್‌ಲೈನ್‌ ಕೋರ್ಸ್‌ನ ಮೂಲಕ ಸುಮಾರು 500 ಗಂಟೆಗಳ ನೇರ ಕಲಿಕೆಯ ಸೌಲಭ್ಯ ಒದಗಿಸುತ್ತದೆ. ಬೆಂಗಳೂರಿನ ಇಂಟರ್‌ ನ್ಯಾಷನಲ್‌ ಇನ್ಸಿಟ್ಯುಟ್‌ ಆಫ್ ಇನ್‌ಫ‌ರ್ಮೆàಷನ್‌ ಟೆಕ್ನಾಲಜಿ ಸಂಸ್ಥೆಯು 11 ತಿಂಗಳ ಪಿಜಿ ಡಿಪ್ಲೊಮಾ ಇನ್‌ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅಂಡ್‌ ಮೆಶೀನ್‌ ಲರ್ನಿಂಗ್‌ ಕೋರ್ಸ್‌ಅನ್ನು ಆನ್‌ಲೈನ್‌ ಮೂಲಕ ಕಲಿಸಿಕೊಡುತ್ತದೆ. ಇವಲ್ಲದೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಮುಂಬೈ ಹಾಗೂ ಮದ್ರಾಸ್‌ನ ಐಐಖ ಗಳು, ಯುನಿವರ್ಸಿಟಿ ಆಫ್ ಹೈದ್ರಾಬಾದ್‌, ಕೊಲ್ಕತ್ತಾದ (ಇಂಡಿಯನ್‌ ಸ್ಟಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ ) ಐಖಐ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ನ ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತವೆ.

ಎಲ್ಲೆಲ್ಲಿ ಕೆಲಸ ?
ಎ.ಐ ಕೋರ್ಸ್‌ ಮಾಡಿದವರು ಶೈಕ್ಷಣಿಕ ಅಥವಾ ಔದ್ಯೋಗಿಕ ರಂಗಗಳೆರಡರಲ್ಲೂ ಕೆಲಸ ಸಂಪಾದಿಸಬಹುದು. ತಾವು ಕಲಿತದ್ದನ್ನು ಇತರರಿಗೆ ಕಲಿಸುವ ಶೈಕ್ಷಣಿಕ ಕೆಲಸಗಳಿಗೂ ಬೇಡಿಕೆ ಇದೆ. ಸರ್ಕಾರ ಮತ್ತು ಖಾಸಗೀ ಕ್ಷೇತ್ರಗಳೆರಡೂ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕಲಿತವರನ್ನು ಕೈಬೀಸಿ ಕರೆಯುತ್ತಿವೆ. ಉದ್ಯೋಗ ವ್ಯವಹಾರ ರಂಗದ ದೈತ್ಯ ಕಂಪನಿಗಳಾದ ಅಮೆಜಾನ್‌, ಮೈಕ್ರೋಸಾಫ್ಟ್, ಐಬಿಎಮ್‌, ಅಕ್ಸೆಂಚರ್‌, ಫೇಸ್‌ಬುಕ್‌, ಇಂಟೆಲ್‌, ಸ್ಯಾಮ್‌ಸಂಗ್‌, ಲೆನೋವೊ, ಅಡೋಬ್‌, ಮೊಟಿಕ್‌ ಟೆಕ್ನಾಲಜೀಸ್‌, ಉಬರ್‌, ಪಿಸಿಓ ಇನ್ನೋವೇಶನ್‌, ರಕುಟೆನ್‌ ಮಾರ್ಕೆಟಿಂಗ್‌, ವೆಲ್ಸ್‌ ಫ‌ರ್ಗೊಗಳಲ್ಲಿ ಎಐ ಕಲಿತವರಿಗೆ ಅವಕಾಶಗಳಿವೆ.

ಗುರುರಾಜ್‌ ಎಸ್‌. ದಾವಣಗೆರೆ

ಟಾಪ್ ನ್ಯೂಸ್

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.