ವಾಕ್ಸಮರ ವೇದಿಕೆಯಾದ ವಿಶೇಷ ಸಭೆ


Team Udayavani, Aug 20, 2019, 3:07 AM IST

vaksamara

ಬೆಂಗಳೂರು: ರಾಜ್ಯ ಸರ್ಕಾರವು ಬಿಬಿಎಂಪಿಯ ಬಜೆಟ್‌ ತಡೆಹಿಡಿದಿರುವುದರ ಬಗ್ಗೆ ಸೋಮವಾರ ನಡೆದ ಕೌನ್ಸಿಲ್‌ ಸಭೆಯು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದದ ವೇದಿಕೆಯಾಗಿ ಬದಲಾಯಿತು. ಎರಡೂ ಪಕ್ಷಗಳ ಸದಸ್ಯರು “ಅಯೋಗ್ಯ’, “ದುರಂತ ನಾಯಕ’, ನಿಮ್ಮ “ಖೇಲ್‌ ಖತಂ; ದುಕಾನ್‌ ಬಂದ್‌’ ಆಗಲಿದೆ ಎಂದು ಪರಸ್ಪರ ಆಕ್ರೋಶ ವ್ಯಕ್ತಪಡಿಸಿದರು.

ಚರ್ಚೆ ಪ್ರಾರಂಭವಾಗುತ್ತಿದ್ದಂತೆ ಬಜೆಟ್‌ನ ಬಗ್ಗೆ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದನಾಯಕ ಅಬ್ದಲ್‌ವಾಜಿದ್‌, “ಸರ್ಕಾರ 2017-18 ಮತ್ತು 2019-20ನೇ ಸಾಲಿನ ಬಜೆಟ್‌ ತಡೆಹಿಡಿರುವುದರಿಂದ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.

ಬಜೆಟ್‌ ತಡೆಹಿಡಿಯುವ ಹೊಸ ಸಂಪ್ರದಾಯವನ್ನು ಬಿಜೆಪಿ ಸರ್ಕಾರ ಪ್ರಾರಂಭಿಸಿದೆ ಎಂದು ಡಳಿತ ಪಕ್ಷದ ಸದಸ್ಯರು ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, 2019-20ನೇ ಸಾಲಿನ ಬಜೆಟ್‌ ಕಾನೂನು ಬಾಹಿರವಾಗಿದೆ. ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳದೆ ಇರುವುದೇ ಇಷ್ಟೆಲ್ಲ ತೊಂದರೆಯಾಗಿರುವುದಕ್ಕೆ ಕಾರಣ. ಈ ಹಿಂದಿನ ಸಮ್ಮಿಶ್ರ ಸರ್ಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದರು.

ಈ ಹಂತದಲ್ಲಿ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ಶುರುವಾಯಿತು. ಮಾಜಿ ಆಡಳಿತ ಪಕ್ಷದ ನಾಯಕ ಎಂ. ಶಿವರಾಜು, ನೀವು ಸುಳ್ಳು ಹೇಳಬೇಡಿ, ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನೀವು ಎಂದು ಆರೋಪಿಸಿದರು. “ನಾವು ಬೆಂಗಳೂರು ಅಭಿವೃದ್ಧಿಗೆ ಕಾಳಜಿ ಹೊಂದಿದ್ದೇವೆ’ ಎಂದು ಪದ್ಮನಾಭರೆಡ್ಡಿ ಅವರ ಸರ್ಮಥನೆಗೆ ಮುಂದಾಗಿದ್ದನ್ನು ಮತ್ತೇ ವಿರೋಧಿಸಿದ ಎಂ.ಶಿವರಾಜು ಕಾಳಜಿ ಇದ್ದಿದ್ದರೆ ಬಜೆಟ್‌ಗೆ ಅನುಮೋದನೆ ನೀಡಬೇಕಿತ್ತು. ಬೆಂಗಳೂರಿನ ಅಭಿವೃದ್ಧಿ ಆಗಿರುವುದು ನಮ್ಮ ಸರ್ಕಾರದ ಅವಧಿಯಲ್ಲಿ. ಹೆಚ್ಚು ಅನುದಾನವನ್ನು ನೀಡಿದ್ದೇವೆ ಎಂದರು.

ಪದ್ಮನಾಭ ರೆಡ್ಡಿ, ಈ ಹಿಂದಿನ ಸರ್ಕಾರಗಳದ್ದು ಘೋಷಣೆಯಷ್ಟೇ ನೋ ಆ್ಯಕ್ಷನ್‌ ಪ್ಲಾನ್‌ ಎಂದು ದೂರಿದರು. ಈ ಹಂತದಲ್ಲಿ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಅವರು, “ಪದ್ಮನಾಭ ರೆಡ್ಡಿ ದುರಂತ ನಾಯಕ, ಅವರು ಬಿಜೆಪಿ ಸದಸ್ಯರನ್ನು ಕತ್ತಲೆ ಕೋಣೆಗೆ ದೂಡುತ್ತಿದ್ದಾರೆ’ ಎಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪದ್ಮನಾಭ ರೆಡ್ಡಿ, “ನೀವು ಅಯೋಗ್ಯ ಮೇಯರ್‌’ ನಿಮ್ಮ ಆಡಳಿತದಲ್ಲಿ ಬಿಬಿಎಂಪಿ ಹಿನ್ನಡೆ ಸಾಧಿಸಿತ್ತು ಎಂದು ನಿಂದಿಸಿದರು.

ಬಜೆಟ್‌ ಅನುಷ್ಟಾನ ಸರ್ಕಾರದ ಮಟ್ಟದಲ್ಲಿ ಲೋಪವಾಗಿದೆ: ಬಜೆಟ್‌ ಅನುಮೋದನೆಯಲ್ಲಿ ಉಂಟಾಗಿರುವ ಗೊಂದಲಗಳಿಗೆ ಉತ್ತರಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, “ಫೆ.23ರಂದು ಬಜೆಟ್‌ಗೆ ಪಾಲಿಕೆಯಲ್ಲಿ ಅನುಮೋದನೆ ಪಡೆದು, ಮಾ.1ಕ್ಕೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಪತ್ರದಲ್ಲಿ ಬಿಬಿಎಂಪಿಯ ಹಣಕಾಸು ವ್ಯವಸ್ಥೆಯ ಬಗ್ಗೆ ಅಂಕಿ-ಅಂಶ ಸಮೇತವಾಗಿ ವಿವರಿಸಲಾಗಿತ್ತು.

ಆದಾಯಕ್ಕಿಂತ ಹೆಚ್ಚು ಮೊತ್ತದ ಬಜೆಟ್‌ಗೆ ಅನುಮೋದನೆ ನೀಡಿದರೆ, ಹಳೆಯ ಕಾಮಗಾರಿಗಳಿಗೆ ಮುಂದುವರಿಸುವುದಕ್ಕೆ ಕಷ್ಟವಾಗಲಿದ್ದು, ಇದು ಬಿಬಿಎಂಪಿಗೆ ಹೊರೆಯಾಗಲಿದೆ. ಹೀಗಾಗಿ, ಬಿಬಿಎಂಪಿ ಬಜೆಟ್‌ಅನ್ನು 9 ಸಾವಿರ ಕೋಟಿ. ರೂಗೆ ಮೀಸಲಿರಿಸುವಂತೆಯೂ ಮನವಿ ಮಾಡಲಾಗಿತ್ತು. ಸರ್ಕಾರ 11,500 ಕೋಟಿ. ರೂ ಬಜೆಟ್‌ಗೆ ಅನುಮೋದನೆ ನೀಡಿತ್ತು. ಮುಂದೆ ಬಿಬಿಎಂಪಿಯ ಆದಾಯಕ್ಕೆ ಅನುಗುಣವಾಗಿ ಪೂರಕ ಬಜೆಟ್‌ ರೂಪಿಸಿಕೊಳ್ಳುವಂತೆ ಸರ್ಕಾರ ಆದೇಶ ನೀಡಿತ್ತು.

ಸರ್ಕಾರದ ಆದೇಶದ ಮೇಲೆ ಬಿಬಿಎಂಪಿಯಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿತ್ತು. ಈ ಬಜೆಟ್‌ಅನ್ನು ಹಣಕಾಸು ಇಲಾಖೆ 9 ಸಾವಿರ ಕೋಟಿ.ರೂಗೆ ಸೀಮಿತಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಅನುಮೋದನೆ ನೀಡಿತ್ತು. ಹಣಕಾಸು ಇಲಾಖೆಯ ಆದೇಶವನ್ನು ತಿರಸ್ಕರಿ, ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುವುದು ಸಚಿವ ಸಂಪುಟಕ್ಕೆ ಮಾತ್ರ. ಸಚಿವ ಸಂಪುಟದಲ್ಲಿ ಅನುಮೋದನೆ ಸಿಗದೆ ಇರುವುದರಿಂದ ಬಜೆಟ್‌ ತಡೆಹಿಡಿಯಲಾಗಿದೆ. ಯಾವುದೇ ಹಂತದಲ್ಲೂ ಬಿಬಿಎಂಪಿಯಿಂದ ಲೋಪವಾಗಿಲ್ಲ. ಸರ್ಕಾರದ ಮಟ್ಟದಲ್ಲಿ ಲೋಪವಾಗಿದೆ’ಎಂದು ಸ್ಪಷ್ಟನೆ ನೀಡಿದರು.

ಕಾಲಚಕ್ರ ತಿರುಗುತ್ತೆ ನೆನಪಿಟ್ಟುಕೊಳ್ಳಿ: ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಡಿ. ಸಮಯ ಒಂದೇ ರೀತಿಯಲ್ಲಿ ಇರುವುದಿಲ್ಲ ಎಂದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ವಾಗುವುದಕ್ಕೆ ಪರೋಕ್ಷ ವಿರೋಧ ವ್ಯಕ್ತಪಡಿಸಿದ ಸ್ವಾರಸ್ಯಕರ ಘಟನೆ ನಡೆಯಿತು. ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಮಾತನಾಡಿ, ನಾಲ್ಕು ವರ್ಷಗಳಿಂದ ಅನುದಾನ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ.

ಕಾಂಗ್ರೆಸ್‌ ಶಾಸಕರು, ಸದಸ್ಯರಿಗೆ ಹೆಚ್ಚು ಅನುದಾನ ಕೊಟ್ಟು, ಬಿಜೆಪಿ ಶಾಸಕರು ಮತ್ತು ಸದಸ್ಯರಿಗೆ ಲಕ್ಷದ ಲೆಕ್ಕದಲ್ಲಿ ಅನುದಾನ ಕೊಡಲಾಗಿದೆ. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಂದೆ ಬಿಬಿಎಂಪಿಯಲ್ಲೂ ನಾವು ಅಧಿಕಾರಕ್ಕೆ ಬರಬಹುದು. ನಾವು ನಿಮ್ಮ ಹಾಗೆ ಅನುದಾನಕ್ಕೆ ತಾರತಮ್ಯ ಮಾಡುವುದಿಲ್ಲ. ಎಲ್ಲರಿಗೂ ಅಮಾನವಾಗಿ ಅನುದಾನ ನೀಡುತ್ತೇವೆ. ಕಾಲ ಚಕ್ರ ಬದಲಾಗುತ್ತೆ ಎನ್ನುವುದು ನೆನಪಿರಲಿ ಎಂದರು. ನಾವೂ ಅದನ್ನೇ ಹೇಳುತ್ತಿದ್ದೇವೆ ಎಂದು ಎಂ. ಶಿವರಾಜು ಮತ್ತು ಪದ್ಮಾವತಿ ಅವರು ತಿರುಗೇಟು ನೀಡಿದರು.

ನುಡಿದಂತೆ ನಡೆಯುತ್ತಿದ್ದೇವೆ: ಬಿಬಿಎಂಪಿಯ ಸಮ್ಮಿಶ್ರ ಆಡಳಿತ ನುಡಿದಂತೆ ನಡೆಯುತ್ತಿದೆ. ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಅಡಮಾನವಿಟ್ಟಿದ್ದ ಆಸ್ತಿಗಳನ್ನು ನಾವು ಬಿಡಿಸಿಕೊಂಡಿದ್ದೇವೆ. ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಹೇಳಿದರು. ಬಿಬಿಎಂಪಿಯಲ್ಲಿ 2008-13ರವರೆಗೆ ಬಿಜೆಪಿ ಆಡಳಿತದಲ್ಲಿತ್ತು. ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇತ್ತು. ಆಗ ಬಜೆಟ್‌ಗಾತ್ರ ಬಿಬಿಎಂಪಿ ಆದಾಯಕ್ಕಿಂತ ಹೆಚ್ಚಾಗಿತ್ತು. ಬಿಬಿಎಂಪಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ 11 ಆಸ್ತಿಗಳನ್ನು ಅಡಮಾನವಿಟ್ಟು 3 ಸಾವಿರ ಕೋಟಿ ರೂ.ಗೂ ಹೆಚ್ಚಿನ ಸಾಲವನ್ನೂ ಪಡೆದಿತ್ತು. ಆಗ ಇಲ್ಲದ ವಿರೋಧ ಈಗೇಕೆ ಎಂದು ಪ್ರಶ್ನೆ ಮಾಡಿದರು.

ಬಜೆಟ್‌ ಅನುಮೋದಿಸದಿದ್ದರೆ ಪ್ರತಿಭಟನೆ: ರಾಜ್ಯ ಸರ್ಕಾರ ಬಜೆಟ್‌ಗೆ ಅನುಮೋದನೆ ನೀಡದೆ ರಾಜಕೀಯ ಮಾಡುತ್ತಿದೆ. ಬೆಂಗಳೂರಿನ ಜನರು ಬಿಜೆಪಿಯ ನಾಲ್ವರು ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ನೀಡುವ ಕೊಡುಗೆ ಇದೇನಾ ಎಂದು ಎಂ.ಶಿವರಾಜು ಅವರು ಪ್ರಶ್ನೆಮಾಡಿದರು. ಇನ್ನೊಂದು ವಾರದಲ್ಲಿ ಬಜೆಟ್‌ಗೆ ಅನುಮೋದನೆ ನೀಡಿದ್ದರೆ ಕಾಂಗ್ರೆಸ್‌ನ ಶಾಸಕರು, ಬಿಬಿಎಂಪಿ ಸದಸ್ಯರು ಪ್ರತಿಭಟನೆ ನಡೆಸುತ್ತೆವೆ ಎಂದು ಎಚ್ಚರಿಕೆ ನೀಡಿದರು.

ಗಣೇಶ ವಿಸರ್ಜನೆ ಮಾಡುವುದು ಹೇಗೆ?: ಸರ್ಕಾರ ಬಜೆಟ್‌ಗೆ ತಡೆ ಹಿಡಿದಿರುವುದರಿಂದ ಗಣೇಶ ಮೂರ್ತಿಗಳನ್ನು ಕೆರೆಗಳಲ್ಲಿ, ಸಂಚಾರಿ ಟ್ಯಾಂಕರ್‌ಗಳಲ್ಲಿ ವಿಸರ್ಜನೆ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಬಜೆಟ್‌ ಅನುಮೋದನೆ ನೀಡದೆ ಇರುವುದರಿಂದ ಬಿಬಿಎಂಪಿಗೆ ಪ್ರತಿ ಹಂತದಲ್ಲೂ ಸಮಸ್ಯೆಯಾಗುತ್ತಿದೆ ಎಂದು ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆ ಸಭೆಯಲ್ಲಿ ಕೇಳಿ ಬಂದದ್ದು…
ಸಮ್ಮಿಶ್ರ ಸರ್ಕಾರ ಅಸ್ತಿರಗೊಳಿಸಿ, ನೀವು ಸರ್ಕಾರ ರಚನೆ ಮಾಡಿದ್ದೀರಿ. ಜನಾದೇಶವಿಲ್ಲದಿದ್ದರೂ ಅಧಿಕಾರಕ್ಕೆ ಬಂದಿದ್ದೀರಿ.
-ಎಂ.ಶಿವರಾಜು, ಆಡಳಿತ ಪಕ್ಷದ ಮಾಜಿ ನಾಯಕ

ಬಿಜೆಪಿ ಅವಧಿಯಲ್ಲೇ ವೈಟ್‌ಟಾಪಿಂಗ್‌ ಯೋಜನೆ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಪ್ರಶಸ್ತಿಯನ್ನೂ ನೀಡಿದೆ.
-ಮಂಜುನಾಥ ರೆಡ್ಡಿ, ಮಾಜಿ ಮೇಯರ್‌

ಇನ್ನು ಮುಂದೆ ನಿಮ್ಮ ಖೇಲ್‌ ಖತಂ ದುಖಾನ್‌ ಬಂದ್‌! (ಆಡಳಿತ ಪಕ್ಷವನ್ನು ಉದ್ದೇಶಿಸಿ)
-ಪದ್ಮನಾಭ ರೆಡ್ಡಿ, ವಿರೋಧ ಪಕ್ಷದ ನಾಯಕ

ನಿಮ್ಮ (ಬಿಜೆಪಿ) ಅವಧಿಯಲ್ಲಿ ಕಲರ್‌ ಇಂಕ್‌ ಬಳಸಿ ಚೆಕ್‌ಗಳಿಗೆ ಸಹಿ ಹಾಕಿ ಹಣ ಬಿಡಿಸಿಕೊಂಡಿದ್ದು ಗೊತ್ತಿದೆ. ಅದೇ ರೀತಿ ಮ್ಯಾಜಿಕ್‌ ಬಾಕ್ಸ್‌ ನಿರ್ಮಾಣ, ರಾತ್ರಿ ಟೆಂಡರ್‌ ಆಹ್ವಾನಿಸಿ ಲೂಟಿ ಮಾಡಿದ್ದೀರಿ.
-ಪದ್ಮಾವತಿ, ಮಾಜಿ ಮೇಯರ್‌

ಟಾಪ್ ನ್ಯೂಸ್

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

3

Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.