ಬಾಡಿಗೆಗೆ ಸಿಗಲಿದೆ ಪಿಒಪಿ ಗಣೇಶ!
Team Udayavani, Aug 20, 2019, 3:07 AM IST
ಬೆಂಗಳೂರು: ಬೈಸಿಕಲ್‌ಗಳು, ಬೈಕ್‌ಗಳು, ಅಷ್ಟೇ ಯಾಕೆ ಐಷಾರಾಮಿ ಕಾರುಗಳೂ ಬಾಡಿಗೆ ಸಿಗುವುದು ಸರ್ವೇಸಾಮಾನ್ಯ. ಆದರೆ, ಈಗ ದೇವರು ಅದರಲ್ಲೂ ಗಣೇಶ ಕೂಡ ಬಾಡಿಗೆಗೆ ಸಿಗುತ್ತಾನೆ! ನಿಮಗಿಷ್ಟವಾದ ಗಣೇಶನ ಮೂರ್ತಿಗಳನ್ನು ಬೇಕಾದಷ್ಟು ದಿನ ಬಾಡಿಗೆ ಪಡೆದು, ನಂತರ ಆಯಾ ಮೂರ್ತಿಗಳ ಮಾಲಿಕರಿಗೆ ವಾಪಸ್ ನೀಡಬಹುದು.
ಹೀಗೆ ದೇವರನ್ನು ಬಾಡಿಗೆ ಪಡೆಯಲು ಸಾಕಷ್ಟು ಬೇಡಿಕೆಗಳೂ ಬರುತ್ತಿದ್ದು, ಈಗಾಗಲೇ ಮುಂಗಡ ಪಾವತಿಸಿ ಬುಕಿಂಗ್ ಮಾಡುವ ಪ್ರಕ್ರಿಯೆ ಶುರುವಾಗಿದೆ. ಆದರೆ, ಬಾಡಿಗೆ ದರ ದಿನಕ್ಕೆ ಕನಿಷ್ಠ ಐದು ಸಾವಿರ ರೂ. ಇಂತಹದ್ದೊಂದು ಟ್ರೆಂಡ್ ಈಗ ಸಿಲಿಕಾನ್ ಸಿಟಿಯಲ್ಲಿ ಶುರುವಾಗಿದೆ. ಪಿಒಪಿ ಗಣೇಶ ಮೂರ್ತಿಗಳಿಂದ ಕೆರೆಗಳು ಹಾಳಾಗುತ್ತಿದ್ದು, ಈ ಪ್ರಕಾರದ ಮೂರ್ತಿಗಳನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪಿಒಪಿ ಗಣೇಶನ ತಯಾರಕರು ರಂಗೋಲಿ ಕೆಳಗೆ ತೂರುವ ಐಡಿಯಾ ಮಾಡಿದ್ದಾರೆ.
ಪಿಒಪಿ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆಯಿದ್ದು, ಇವುಗಳ ಮಾರಾಟ ಮತ್ತು ಪೂರೈಕೆ ಸದ್ಯಕ್ಕೆ ನಿಲ್ಲಿಸಲಾಗಿದೆ. ಹಾಗಾಗಿ, ಪಿಒಪಿ ಗಣೇಶ ಮೂರ್ತಿಗಳನ್ನು ಗ್ರಾಹಕರಿಗೆ ಬಾಡಿಗೆಗೆ ನೀಡುತಿದ್ದು, ಉತ್ಸವದ ಬಳಿಕ ಮತ್ತೆ ತಯಾರಿಕರೇ ವಾಪಸು ಪಡೆದು ಮರುಬಳಕೆ ಮಾಡುವ ಪದ್ಧತಿ ಪರಿಚಯಿಸಲಾಗಿದೆ. ಕಳೆದ ವರ್ಷದಿಂದ ಬಾಡಿಗೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ದಿನವೊಂದಕ್ಕೆ ಕನಿಷ್ಠ ಐದು ಸಾವಿರದಿಂದ ಶುರುವಾಗುವ ಬಾಡಿಗೆ ದರ 10 ಸಾವಿರದ ತನಕ ಇದೆ ಎನ್ನಲಾಗಿದೆ.
ಮಾರುಕಟ್ಟೆಯಲ್ಲಿ ಪಿಒಪಿ ಮತ್ತು ಫೈಬರ್‌ನಿಂದ ತಯಾರಿಸುವ ದೊಡ್ಡ ಮೂರ್ತಿಗಳು ಬಾಡಿಗೆಗೆ ಲಭ್ಯವಿದ್ದು, 16 ಅಡಿ ಪಿಒಪಿ ಗಣೇಶ ಮೂರ್ತಿಯ ಮಾರುಕಟ್ಟೆ ಬೆಲೆ 70-80 ಸಾವಿರ ರೂ.ಗಳಾದರೆ, ಇದೇ ಗಾತ್ರದ ಫೈಬರ್ ಗಣೇಶ ಮೂರ್ತಿ 5 ಲಕ್ಷಕ್ಕೆ ಮಾರಾಟ ಮಾಡಲಾಗುತ್ತದೆ. ಇಷ್ಟು ದುಬಾರಿ ಗಣೇಶ ಮೂರ್ತಿಗಳನ್ನು ಖರೀದಿಸುವುದು ಕಷ್ಟವಾಗಿದ್ದು, ಇವುಗಳನ್ನು ಕನಿಷ್ಠ ಮೂರು ದಿನಗಳ ಕಾಲ ತಯಾರಕರಿಂದ ಗ್ರಾಹಕರು ಬಾಡಿಗೆಗೆ ಪಡೆಯುತ್ತಾರೆ.
ಬಾಡಿಗೆ ಪಡೆಯುವವರು ತಯಾರಿಕಾ ಘಟಕಗಳಲ್ಲಿ ಮೂರ್ತಿಯ ಅಸಲು ಮೊತ್ತವನ್ನು ಠೇವಣಿಯಿಟ್ಟು, ಸಂಚಾರ ವೆಚ್ಚವನ್ನು ಗ್ರಾಹಕರೇ ನೀಡಬೇಕು. ದಿನವೊಂದಕ್ಕೆ ಕನಿಷ್ಠ 5 ಸಾವಿರ ಬಾಡಿಗೆ ನೀಡಿದರೆ ಐದು ದಿನಗಳಿಗೆ 25 ಸಾವಿರ ರೂ. ಬಾಡಿಗೆ ಮತ್ತು 5 ಸಾವಿರ ರೂ. ಸಾಗಾಣಿಕ ವೆಚ್ಚ ಸೇರಿ 30 ಸಾವಿರ ಖರ್ಚಾಗಲಿದೆ. ಕೆಲವರು ಮೂರು ದಿನ, ಐದು ದಿನ ಗರಿಷ್ಠ ಏಳು ದಿನಗಳ ಕಾಲ ಈ ಬಾಡಿಗೆ ಮೂರ್ತಿಗಳನ್ನು ಪಡೆಯುತ್ತಾರೆ.
ಈ ಮೂಲಕ ಕಡಿಮೆ ಬಜೆಟ್‌ನಲ್ಲಿ ಅದ್ದೂರಿ ಗಣೇಶ ಉತ್ಸವ ಮಾಡುವ ಸಾವಿರಾರು ಗಣೇಶ ಉತ್ಸವ ಸಮಿತಿಗಳು ಗಣೇಶ ಮೂರ್ತಿಗಳನ್ನು ಬಾಡಿಗೆಗೆ ಪಡೆಯಲು ಬಯಸುತ್ತವೆ ಎಂದು ಗಣೇಶ ಮೂರ್ತಿ ಮಾರಾಟಗಾರ ಶ್ರೀನಿವಾಸ್ ಮಾಹಿತಿ ನೀಡಿದರು. ಸಾಮಾನ್ಯವಾಗಿ ಉತ್ಸವಗಳಿಗೆ ದೊಡ್ಡ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನೇ ಬಳಸುವುದು ವಾಡಿಕೆಯಾಗಿದ್ದು, ಪ್ರತಿ ಉತ್ಸವ ಗಣಪತಿ ಕನಿಷ್ಠ 10 ರಿಂದ 18 ಅಡಿ ಎತ್ತರ ಹೊಂದಿರುತ್ತದೆ.
ಇಷ್ಟು ಗಾತ್ರದ ಮೂರ್ತಿಯನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹೊತ್ತೂಯ್ಯಲು ಮತ್ತು ಮಣ್ಣಿನಲ್ಲಿ ತಯಾರಿಸುವುದು ಕಷ್ಟವಾಗುತ್ತದೆ. ಮಣ್ಣಿನ ಮೂರ್ತಿಗಳು ಹೆಚ್ಚು ಆಕರ್ಷಕವಾಗಿ ತಯಾರಿಸಲು ಆಗುವುದಿಲ್ಲ. ಹಾಗಾಗಿ, ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ಪಿಒಪಿ ಅಥವಾ ಫೈಬರ್‌ನಿಂದ ತಯಾರಿಸಲಾಗುತ್ತದೆ ಎನ್ನುತ್ತಾರೆ ಪಿಒಪಿ ಗಣೇಶ ತಯಾರಕರು.
ಪಿಒಪಿ ಜತೆ ಮಣ್ಣಿನ ಗಣಪ ಫ್ರೀ: ಪಿಒಪಿ ಅಥವಾ ಫೈಬರ್ ಗಣೇಶ ಮೂರ್ತಿಯನ್ನು ಬಾಡಿಗೆಗೆ ಪಡೆದರೆ, ಪೂಜೆಗಾಗಿ ಮಣ್ಣಿನ ಗಣೇಶನನ್ನು ಉಚಿತವಾಗಿ ನೀಡಲಾಗುವುದು. ಅಲಂಕಾರ, ಸಂಭ್ರಮ ಮತ್ತು ಉತ್ಸವಗಳಿಗೆ ಪಿಒಪಿ ಅಥವಾ ಫೈಬರ್ ಗಣೇಶ ಮೂರ್ತಿಗಳನ್ನು ಬಾಡಿಗೆಗೆ ನೀಡುವುದರ ಜತೆಗೆ ಪೂಜೆ ಮತ್ತು ನೀರಿನಲ್ಲಿ ವಿಸರ್ಜಿಸಲು ಸಾಮಾನ್ಯ ಗಾತ್ರದ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಕರು ಉಚಿತವಾಗಿ ನೀಡುತಿದ್ದಾರೆ.
ಗಣೇಶ ಮೂರ್ತಿಗಳನ್ನು ಬಾಡಿಗೆಗೆ ಪಡೆಯುವುದು ಟ್ರೆಂಡ್ ಆಗಿದ್ದು, ಹಬ್ಬ ಸಮೀಪಿಸುತಿದ್ದಂತೆ ದೊಡ್ಡ ಗಣೇಶ ಮೂರ್ತಿಗಳ ಖರೀದಿಗೆ ಬರುವವರ ಪೈಕಿ ಶೇ.10 ಮಂದಿ ಬಾಡಿಗೆಗೆ ಪಡೆಯಲು ಇಚ್ಛಿಸುತ್ತಾರೆ. ಇದೇ ಮೂರ್ತಿಗಳನ್ನು ಸಿನಿಮಾ ಶೂಟಿಂಗ್, ವಸ್ತು ಪ್ರದರ್ಶನ ಮತ್ತು ಮದುವೆ ಸಮಾರಂಭಗಳಿಗೆ ನೀಡುತ್ತೇವೆ. ಈಗಾಗಲೇ 30ಕ್ಕೂ ಹೆಚ್ಚು ಮೂರ್ತಿಗಳು ಬುಕ್ ಆಗಿವೆ.
-ಪಿ.ಗುರುದೇವ್, ಪಿಒಪಿ ಗಣೇಶ ಮಾರಾಟಗಾರ
ಪಿಒಪಿ ಗಣೇಶನನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಪಾಲಿಕೆಗೆ ಸೂಚಿಸಿದೆ. ಗಣೇಶನನ್ನು ಬಾಡಿಗೆಗೆ ನೀಡುವ, ತಯಾರಿಸಿ ಮಾರಾಟ ಮಾಡುವ ಯಾವುದೇ ಪ್ರಸ್ತಾವನೆ ಇದ್ದರೂ ಮಂಡಳಿಗೆ ಸಲ್ಲಿಸಬೇಕು ಪಾಲಿಕೆ ಯಾವುದೇ ತೀರ್ಮಾನ ಕೈಗೊಳ್ಳಲು ಬರುವುದಿಲ್ಲ.
-ಗಂಗಾಂಬಿಕೆ, ಮೇಯರ್
ಮಂಗಳವಾರದಿಂದ ಪಾಲಿಕೆ ಅಧಿಕಾರಿಗಳು ಟ್ರಕ್‌ಗಳ ಜತೆ ನಗರದೆಲ್ಲೆಡೆ ಸಂಚರಿಸಬೇಕು, ಎಲ್ಲೇ ಪಿಒಪಿ ಗಣೇಶ ಕಂಡುಬಂದರೂ ಮೂರ್ತಿಗಳನ್ನು ವಶಕ್ಕೆ ಪಡೆಯಬೇಕು. ವಶಕ್ಕೆ ಪಡೆದ ಗಣೇಶ ಮೂರ್ತಿಗಳನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದ ಹಾಗೆ ವೈಜ್ಞಾನಿಕವಾಗಿ ವಿಸರ್ಜಿಸುವ ಹೊಣೆಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ವಹಿಸಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ.
-ಡಾ.ಕೆ.ಸುಧಾಕರ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಜಿ.ಪಂ-ತಾ.ಪಂ ಮೀಸಲು: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ
Bengaluru: ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.