ತ್ರಿಶಂಕು ಸ್ಥಿತಿಯಲ್ಲಿ ಮೀನುಗಾರಿಕಾ ಬೋಟ್‌ಗಳು

•ಶುರುವಾಗಿದೆ ಆಳ ಸಮುದ್ರ ಮೀನುಗಾರಿಕೆ •ಮೀನುಗಾರರಿಗೆ ಬಗೆಹರಿಯದ ಅಳವೆ ಹೂಳಿನ ಸಮಸ್ಯೆ

Team Udayavani, Aug 20, 2019, 1:34 PM IST

uk-tdy-2

ಬೇಟೆಯಾಡಿದ ಮೀನುರಾಶಿ.

ಹೊನ್ನಾವರ: ಗಾಳಿ ಮಳೆಯಿಂದ ಸ್ಥಗಿತವಾಗಿದ್ದ ಮೀನುಗಾರಿಕೆ ಇದೀಗ ಆರಂಭವಾಗಿದೆ. ಮೊದಲ ದಿನ 30 ಬೋಟ್‌ಗಳು ಕಡಲಿಗಿಳಿದಿದ್ದವು. ಭರ್ಜರಿ ಮೀನು ಬೇಟೆ ನಡೆಸಿದರೂ ಅಳವೆ ಸಮಸ್ಯೆಯಿಂದಾಗಿ ಒಳಬರಲು ಸಾಧ್ಯವಾಗಿಲ್ಲ.

ಕೇವಲ 3 ಬೋಟ್‌ಗಳು ಮೀನು ತಂದವು. ಇಂದೂ 25ಬೋಟ್‌ಗಳು ಕಡಲಿಗಿಳಿದಿವೆ. ಕೇವಲ 2ಬೋಟ್‌ಗಳು ಬಂಗಡೆ ಮೀನು ತಂದಿವೆ.

ಪ್ರತಿರ್ಷದಂತೆ ಶರಾವತಿ ಸಂಗಮದ ಅಳವೆಯಲ್ಲಿ ಹೂಳು ತುಂಬಿದೆ. ಪ್ರವಾಹದ ವೇಗವನ್ನು ಅವಲಂಬಿಸಿ ನೀರಿನಡಿ ಹೂಳು ಸ್ಥಿತ್ಯಂತರವಾಗುವುದರಿಂದ ಕಾಳಜಿ ಪೂರ್ವಕವಾಗಿ ಹೊರಹೋದರೂ ಮೀನು ತುಂಬಿಕೊಂಡು ಭಾರವಾದ ಬೋಟ್‌ಗಳನ್ನು ಒಳತರುವುದು ಸವಾಲು. ರಸ್ತೆಯಲ್ಲಿ ಹೊಂಡಗಳು ಕಾಣುತ್ತವೆ. ಹೊಂಡ ತಪ್ಪಿಸಲು ಹೋಗಿ ಅಪಘಾತಗಳಾಗುತ್ತವೆ. ನೀರಿನಡಿ ಹೊಯ್ಗೆದಿಬ್ಬಗಳು ಕಾಣುವುದಿಲ್ಲ. ಯಾವ ಲೆಕ್ಕಾಚಾರ ಹಾಕಿಬಂದರೂ ಬೋಟ್ದಿಬ್ಬಕ್ಕೆ ಅಪ್ಪಳಿಸಿದರೆ ಕಥೆ ಮುಗಿದಂತೆ. ಹಲವಾರು ವರ್ಷಗಳ ಈ ಸಮಸ್ಯೆಗೆ ಕೇಂದ್ರ ಸರ್ಕಾರ ಶಾಶ್ವತ ಪರಿಹಾರಕ್ಕಾಗಿ ಹಣ ಮಂಜೂರು ಮಾಡಿತ್ತು. ಬಂದರಿನ 100 ಎಕರೆ ಭೂಮಿಯನ್ನು ಗುತ್ತಿಗೆ ಪಡೆದವರು ಅಳವೆ ವಹಿಸಿಕೊಂಡರು. ಅಳವೆಗೆ ಬಂದ ಸರ್ಕಾರಿ ಹಣ ಮರಳಿ ಹೋಯಿತು.

ನಾಲ್ಕುವರ್ಷ ಕಳೆದರೂ ಅಳವೆ ಹೂಳೆತ್ತಲಿಲ್ಲ, ಮೀನುಗಾರರ ಕಷ್ಟ ಬಗೆಹರಿಯಲಿಲ್ಲ. ರವಿವಾರ ಯಾಂತ್ರಿಕೃತ ನಾಡದೋಣಿಯಲ್ಲಿ ಮೀನುಗಾರಿಕೆಗೆ ಹೊರಟ ಇಬ್ಬರಲ್ಲಿ ಒಬ್ಬ ಮರಳಲಿಲ್ಲ. ಇನ್ನೊಬ್ಬ ಕಷ್ಟಪಟ್ಟು ದಡ ಸೇರಿದ. ಅಳವೆ ಸಮಸ್ಯೆ ಬಗ್ಗೆ ಮೀನುಗಾರರು ಸಿಟ್ಟುಗೊಂಡಿದ್ದಾರೆ. ಹೇಗೆ ಹೋರಾಡಬೇಕೋ ತಿಳಿಯುತ್ತಿಲ್ಲ. ಜೊತೆಯಲ್ಲಿ ಬಂದರು ಗುತ್ತಿಗೆದಾರರು ನಿರ್ಮಾಣ ಕಾರ್ಯ ಆರಂಭಿಸಿದ್ದು ಮೀನುಗಾರಿಕಾ ರಸ್ತೆ ವಾಹನ ಓಡಿಸಲು ಸಾಧ್ಯವಿಲ್ಲದಷ್ಟು ಹಾಳಾಗಿದೆ. ಒಂದೆಡೆ ಕುಸಿದಿದೆ. ಮೀನುಗಾರರ ವಾಹನಗಳು ಓಡಾಡಲು ಕಷ್ಟವಾಗುತ್ತಿದೆ. ಕಳೆದ ಹಂಗಾಮಿನಲ್ಲಿ ಮೀನು ಉತ್ಪಾದನೆ ಕಡಿಮೆ ಇತ್ತು. ಈ ಬಾರಿ ಭಾರೀ ಮೀನು ಬೀಳುತ್ತಿದೆ. ದಂಡೆಗೆ ತರುವುದೇ ಸಮಸ್ಯೆ. ಮತ್ತೆ ಹೋರಾಟ ಆರಂಭಿಸುತ್ತೇವೆ ಎನ್ನುತ್ತಾರೆ ಮೀನುಗಾರರು.

ಟಾಪ್ ನ್ಯೂಸ್

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.