ಕೆರೆ, ಕಟ್ಟೆಗಳತ್ತಹರಿಯುತ್ತಿದ್ದಾಳೆ ಹೇಮೆ


Team Udayavani, Aug 20, 2019, 5:04 PM IST

001

ಚನ್ನರಾಯಪಟ್ಟಣ: ಪಟ್ಟಣದ ಅಮಾನಿಕೆರೆ ಸೇರಿದಂತೆ ತಾಲೂಕಿನ ಹಲವು ಕೆರೆಗಳಿಗೆ ಗೊರೂರು ಅಣೆಕಟ್ಟೆಯ ಎಡದಂಡೆ ನಾಲೆಯಿಂದ ಹೇಮಾವತಿ ನೀರು ಹರಿದು ಬರುತ್ತಿದ್ದು, ಬರದಿಂದ ತತ್ತಿಸುತ್ತಿದ್ದ ತಾಲೂಕಿನ ಹಲವು ರೈತರ ಮೊಗದಲ್ಲಿ ಮಂದಾಹಸ ಮೂಡುತ್ತಿದೆ. ಜಿಲ್ಲೆ ಹೇಮಾವತಿ ಅಣೆಕಟ್ಟೆ‌ ತುಂಬಿರುವ ಪರಿಣಾಮ ತುಮಕೂರು ಹಾಗೂ ಮಂಡ್ಯ ಜಿಲ್ಲೆಗೆ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.

ಏತ ನೀರಾವರಿ ಮೂಲಕ ನೀರು: ಇದೇ ವೇಳೆ ತಾಲೂಕಿನ ಹಲವು ಏತನೀರಾವರಿ ಮೂಲಕ ಕೆರೆ ಕಟ್ಟೆಗೆ ನೀರು ತುಂಬಿಸಲು ಕ್ಷೇತ್ರದ ಶಾಸಕ ಸಿ.ಎನ್‌. ಬಾಲಕೃಷ್ಣ ಈಗಾಗಲೇ ಸ್ವಿಚ್ಆನ್‌ ಮಾಡಿದ್ದು ಕೆರೆಗಳತ್ತ ನೀರು ಹರಿದು ಬರುತ್ತಿದೆ. ನವಿಲೆ, ಅಣತಿ, ಓಬಳಾಪುರ, ಕಾರೇಹಳ್ಳಿ ಸೇರಿದಂತೆ ಹವಲು ಭಾಗದಲ್ಲಿ ತೀವ್ರ ಬರದಿಂದ ಕಂಗ್ಗೆಟ್ಟಿದ್ದ ರೈತರು ಮುಖದಲ್ಲಿ ಕೊಂಚ ಸಂತಸ ಮೂಡಿದೆ.

ಈಗಾಗಲೆ ಕಳೆದ 10 ದಿವಸದಿಂದ ಉತ್ತಮವಾಗಿ ಮಳೆಯಾಗಿದ್ದು ಕೃಷಿ ಭೂಮಿ ತಂಪಾಗಿರುವುದಲ್ಲದೆ ಕೆರೆ ಕಟ್ಟೆಯ ಗುಂಡಿಗಳಲ್ಲಿ ಅಲ್ಪ ಸ್ವಲ್ಪ ನೀರು ನಿಂತಿದೆ. ಏತನೀರಾವರಿ ಹಾಗೂ ಎಡದಂಡೆ ನಾಲೆಯಲ್ಲಿ ತೂಬಿನ ಮೂಲಕ ಕೆರೆ ಕಟ್ಟೆಗೆ ನೀರು ಹರಿಯುತ್ತಿದ್ದು ಆದಷ್ಟು ಬೇಗ ಕೆರೆಗಳು ತುಂಬವ ಲಕ್ಷಣಗಳು ಕಾಣುತ್ತಿವೆ. ನಾಲೆ ನೀರು ಕೆರೆಗೆ ಹರಿಯುತ್ತಿರುವುದರಿಂದ ಕೆರೆ ಭಾಗದ ಕೃಷಿ ಭೂಮಿ ಜನತೆ ತಮ್ಮ ಭೂಮಿ ಹದಮಾಡಿಕೊಂಡು ಭತ್ತದ ನಾಟಿಗೆ ಸಕಲ ತಯಾರಿ ನಡೆಸುತ್ತಿದ್ದಾರೆ.

ಮಂಡ್ಯ ತಾಲೂಕಿಗೆ ಹೇಮೆ ನೀರು: ಹೇಮೆ ತುಂಬಿ ಹರಿಯುತ್ತಿರುವ ಕಾರಣ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ನೀರುಹರಿಸಲಾಗುತ್ತಿದೆ. ಇದರಿಂದ ತಾಲೂಕಿನ ರೈತ ಮಾತ್ರ ಸಂತಸವಾಗುತ್ತಿಲ್ಲ, ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ, ನಾಗಮಂಗಲ ಹಾಗೂ ಪಾಂಡವಪುರ ತಾಲೂಕುಗಳ ವ್ಯಾಪ್ತಿಯ ಕೆಲ ಗ್ರಾಮದ ರೈತರೂ ಸಂತಸ ಪಡುತ್ತಿದ್ದಾರೆ.

ಬೇರೆ ಜಿಲ್ಲೆಗಳಿಗೇ ಹೆಚ್ಚು ನೀರು: ಇನ್ನು ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಕುಣಿಗಲ್, ಗುಬ್ಬಿ ಸೇರಿದಂತೆ ಹಲವು ತಾಲೂಕಿಗೆ ಹೇಮೆ ಹರಿ ಯುತ್ತಿದ್ದು, ಜಿಲ್ಲೆಗೆ ಹೋಲಿಸಿದರೆ ತುಮಕೂರು ಹಾಗೂ ಮಂಡ್ಯ ಜಿಲ್ಲೆಯ ರೈತರು ಹೇಮಾವತಿ ನೀರನ್ನು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರ ನಿಗದಿ ಮಾಡಿರುವಷ್ಟು ಹೇಮಾವತಿ ನೀರು ತುಮಕೂರಿಗೆ ಹರಿದರು ಅಲ್ಲಿನ ಜನಪ್ರತಿನಿಧಿಗಳು ಮಾತ್ರ ರೈತರನ್ನು ಕಟ್ಟಿಕೊಂಡು ಹೇಮಾವತಿ ಎಡದಂಡ ನಾಲೆ ವೀಕ್ಷಣೆ ಮಾಡುವ ಮೂಲಕ ನೀರಾವರಿ ಇಲಾಖೆ ಅಧಿಕಾರಿ ಗಳ ಮೇಲೆ ಒತ್ತಡ ಹೇರುವುದನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಜಿಲ್ಲೆಯ ಹಿತ ಕಾಪಾಡದ ರಾಜಕಾರಣಿಗಳು: ರಾಜ್ಯ ದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ ಆ ಜಿಲ್ಲೆ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಸಂಸದರು ಮಾತ್ರ ತಮ್ಮ ಪ್ರಭಾವ ಬಳಸಿಕೊಂಡು ಹೇಮಾವತಿ ನೀರನ್ನು ಪಡೆಯುವ ಮೂಲಕ ಅಲ್ಲಿನ ರೈತರಿಗೆ ಹಾಗೂ ಸಾರ್ವಜನಿಕ ಬಾಳಿಗೆ ಭಗೀರಥರಾಗುತ್ತಿದ್ದಾರೆ.

ಈ ಬಗ್ಗೆ ಜಿಲ್ಲೆಯ ಪ್ರಭಾವಿ ರಾಜ ಕಾರಣಿಗೆ ಮಾಹಿತಿ ಇದ್ದರೂ ಜಿಲ್ಲೆಯ ಹಾಗೂ ತಾಲೂಕಿನ ಏತನೀರಾವರಿ ಕಾಮಗಾರಿಯನ್ನು ಚುರುಕಾಗಿ ಮಾಡಿಸಿ ತಾಲೂಕಿನ ರೈತರ ಬಾಳಿಗೆ ಬೆಳಕಾಗದೆ ನಿರಾಸಕ್ತಿ ತೋರುತ್ತಿರುವುದು ವಿಪರ್ಯಾಸವೇ ಸರಿ.

ತಾಲೂಕಿನಲ್ಲಿ ಬರ ಪರಿಸ್ಥಿತಿ: ಹೇಮಾವತಿ ಅಣೆಕಟ್ಟೆ ಯಿಂದ ಎಡದಂಡೆ ನಾಲೆ ಹಾಗೂ ಶ್ರೀರಾಮದೇವರ ನಾಲೆ ಹೀಗೆ ತಾಲೂಕಿನಲ್ಲಿ ಎರಡು ನಾಲೆಗಳು ಹತ್ತಾರು ಕಿ.ಮೀ. ಉದ್ದದಲ್ಲಿ ಹರಿಯುತ್ತಿದ್ದು, ತಾಲೂಕು ಮಾತ್ರ ಪ್ರತಿ ವರ್ಷವೂ ಬರಗಾಲಕ್ಕೆ ತುತ್ತಾಗುತ್ತಿದೆ. ನಾಲೆ ಹರಿಯವ ಭಾಗದಲ್ಲಿ ಮಾತ್ರ ಕುಡಿವ ನೀರಿನ ಸಮಸ್ಯೆ ಇಲ್ಲ ಉಳಿದ ಕಡೆಯಲ್ಲಿ ಇಂದಿಗೂ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಏತ ನೀರಾವರಿ ಯೋಜನೆಗಳು ಮಾತ್ರ ಚುನಾವಣೆಗೆ ಸೀಮಿತವಾಗಿದೆ.

ಪೊಳ್ಳು ಭರವಸೆ: ಪ್ರತಿ ವಿಧಾನಸಭಾ ಚುನಾವಣೆ ಯಲ್ಲಿ ಎಚ್.ಡಿ.ರೇವಣ್ಣ ದಂಡಿಗನಹಳ್ಳಿ ಹೋಬಳಿ ಯನ್ನು ಸಂಪೂರ್ಣವಾಗಿ ನೀರಾವರಿ ಮಾಡುತ್ತೇನೆ ಎಂದು ಭರವಸೆ ನೀಡುತ್ತಾರೆ. ಇವರ ಭರವಸೆಗೆ ಮತದಾರ ಮಾರುಹೋಗಿ ರೇವಣ್ಣನ ಪರವಾಗಿ ನಿಲ್ಲುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ಹೋಬ ಳಿಯ ಒಂದು ಕೆರೆಯನ್ನು ಈ ವರೆಗೆ ಪ್ರಯೋಗಿಕವಾಗಿ ತುಂಬಿಸಲು ಮನಸ್ಸು ಮಾಡುತ್ತಿಲ್ಲ.

ರಾಜಕೀಯ ನಿವೃತ್ತಿ ಯಾವಾಗ?: ಶಾಸಕ ಸ್ಥಾನಕ್ಕೆ ಆಯ್ಕೆಯಾಗಿ 6 ತಿಂಗಳಲ್ಲಿ ಕಾಚೇಹಳ್ಳಿ ಏತನೀರಾವರಿ ಕಾಮಗಾರಿ ಪೂರ್ಣ ಮಾಡುತ್ತೇನೆ. ಇಲ್ಲದೇ ಹೋದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ರೇವಣ್ಣ ಸ್ವಯಂ ಸವಾಲು ಹಾಕಿಕೊಂಡಿದ್ದರು.ವೇದಿಕೆ ಮೇಲೆ ಕುಳಿತು ಇವರ ಮಾತು ಆಲಿಸಿದ ಎಚ್.ಡಿ. ಕುಮಾರಸ್ವಾಮಿ ಕೂಡ ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ ಕಾಚೇಹಳ್ಳಿ ಏತನೀರಾವರಿ ಮಾಡಿಯೇ ತಿರುತ್ತೇನೆ ಎಂದು ಭರವಸೆ ನೀಡಿದ್ದರು, ಕೊಟ್ಟ ಮಾತಿನಂತೆ ಸಹೋದರು ನಡೆದುಕೊಂಡಿಲ್ಲ ಎಂದು ಹೋಬಳಿ ಜನತೆ ಶಾಪ ಹಾಕುತ್ತಿದ್ದಾರೆ.

 

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.