![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 21, 2019, 3:00 AM IST
ಆನ್‌ಲೈನ್‌ನಲ್ಲಿ ಆಗಾಗ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅದು ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಸೆಲೆಬ್ರಿಟಿಗಳ ಹೆಸರಲ್ಲಿ ಹಲವು ಪ್ರಕರಣಗಳು ನಡೆದಿರುವುದುಂಟು. ಈಗ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಸುರೇಶ್ ಹೆಬ್ಳೀಕರ್ ಅವರಿಗೂ ಅಂಥದ್ದೊಂದು ಘಟನೆ ಅಚ್ಚರಿ ಮೂಡಿಸಿದೆ.
ಅಷ್ಟಕ್ಕೂ ಏನಿದು ಪ್ರಕರಣ: ವಿಷಯವಿಷ್ಟೇ, ಹಿರಿಯ ನಟ ಮತ್ತು ನಿರ್ದೇಶಕ ಸುರೇಶ್ ಹೆಬ್ಳೀಕರ್ ಹೆಸರಿನಲ್ಲಿ ಹಣ ಕೇಳಲಾಗುತ್ತಿದೆ ಎಂಬುದೇ ಈ ಸುದ್ದಿಯ ವಿಶೇಷ. ಹೌದು, ಸುರೇಶ್ ಹೆಬ್ಳೀಕರ್ ಹೆಸರಲ್ಲಿ ಅವರ ಗೆಳೆಯರ ಹಾಗೂ ಹಿತೈಷಿಗಳ ಬಳಿ ಹಣ ಕೇಳಲಾಗುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಹೌದು, ಫೇಸ್‌ಬುಕ್, ಇಮೇಲ್ ಮೂಲಕ ಸುರೇಶ್ ಅವರ ಕಾಂಟ್ಯಾಕ್ಟ್‌ನಲ್ಲಿರುವ ಜನರಿಗೆಲ್ಲ ಸಂದೇಶಗಳನ್ನು ಕಳುಹಿಸಿ, ಹಣ ಕೊಡಿ ಎಂದು ಕೇಳಲಾಗುತ್ತಿದೆ.
ಈ ವಿಷಯ ಸ್ವತಃ ಸುರೇಶ್ ಹೆಬ್ಳೀಕರ್ ಅವರಿಗೆ ಗೊತ್ತಾಗುತ್ತಿದ್ದಂತೆಯೇ ಅವರು, ತಮ್ಮ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ, “ಯಾರೋ ನನ್ನ ಜಿ ಮೆಲ್, ರೆಡಿಫ್ ಅಕೌಂಟ್ ಹ್ಯಾಕ್ ಮಾಡಿದ್ದಾರೆ. ಆ ಮೂಲಕ ನನ್ನ ಕಾಂಟ್ಯಾಕ್ಟ್‌ನಲ್ಲಿರುವ ಜನರಿಗೆಲ್ಲ ಹಣ ಕೊಡಿ ಎಂದು ಸಂದೇಶ ಕಳುಹಿಸಿದ್ದಾರೆ. ಇಂಥದ್ದೊಂದು ಸಂದೇಶ ನನ್ನ ಪರಿಚಯದವರಿಗೆ, ಗೆಳೆಯರಿಗೆಲ್ಲಾ ಹೋಗಿದೆ. ನನ್ನ ಆಕೌಂಟ್ ಹ್ಯಾಕ್ ಆಗಿರುವುದರಿಂದ. ಎಲ್ಲರೂ ಆ ರೀತಿಯ ಸಂದೇಶ ಬಂದರೆ, ನಿರ್ಲಕ್ಷಿಸಿ’ ಎಂದು ಹೇಳಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.