ಯುವ ಜನತೆಯನ್ನು ಸೆಳೆಯುವ ಟ್ಯಾಟೂ ಕೋರ್ಸ್
Team Udayavani, Aug 21, 2019, 5:00 AM IST
ತಾವು ಯಾವುದರಲ್ಲಿ ಡಿಗ್ರಿ ಮಾಡಿದ್ದೇವೋ ಅದಕ್ಕೆ ತಕ್ಕಂತೆ ಕೆಲಸ ಸಿಗಬೇಕೆಂದು ಕಾದು ಕುಳಿತುಕೊಳ್ಳುವ ಕಾಲ ಅಲ್ಲ ಇದು. ಇವತ್ತು ಪದವಿ, ಸ್ನಾತಕೋತ್ತರ ಪದವಿಗಳು ತಮ್ಮ ಬೆಲೆಯನ್ನು ಕಳೆದುಕೊಂಡು ವಿದ್ಯಾರ್ಥಿಗಳು ಬಗೆ ಬಗೆಯ ಕೋರ್ಸ್ಗಳತ್ತ ಮುಖ ಮಾಡುತ್ತಿರುವ ಕಾಲ. ಅಂತಹ ಕೋಸ್ಗಳಲ್ಲಿ ಟ್ಯಾಟೂ ಕೋರ್ಸ್ ಕೂಡ ಒಂದು.
ಟ್ಯಾಟೂ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ತಮಗೆ ಇಷ್ಟವಿರುವ ಒಂದು ವಸ್ತು ಅಥವಾ ವಾಕ್ಯ ಅಥವಾ ಸುಂದರವಾರ ಚಿತ್ರಗಳನ್ನು ತಮ್ಮ ಮೈಯಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಎಲ್ಲರಿಗೂ ಇಷ್ಟ. ಹಿಂದೆ ಭಾರತದಲ್ಲಿ ಚಾಲ್ತಿಯಲ್ಲಿದ್ದ ಹಚ್ಚೆ ಹಾಕುವಿಕೆಯೇ ಇಂದು ಆಧುನಿಕತೆಯಲ್ಲಿ ಟ್ಯಾಟೂ ಎಂದು ಮಾರ್ಪಟ್ಟಿದೆ. ಮೈಗೆಲ್ಲ ಟ್ಯಾಟೂ ಹಾಕಿಸಿಕೊಂಡವರು ನಮ್ಮ ಕಣ್ಣಿಗೆ ಕಾಣಸಿಗುತ್ತಾರೆ. ಟ್ಯಾಟೂ ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ಇರುವವರಿಗೆ ಈ ಟ್ಯಾಟೂ ಕೋರ್ಸ್ ಒಂದು ಉತ್ತಮ ಶಿಕ್ಷಣವಾಗಿದೆ.
ಈ ಟ್ಯಾಟೂ ಕೋರ್ಸ್ ಅನ್ನುವುದು ಎಲ್ಲರಿಗೂ ಅಷ್ಟು ಸುಲಭದಲ್ಲಿ ಒಲಿದು ಬರುವುದಿಲ್ಲ. ಇದಕ್ಕೆ ಉತ್ತಮ ಚಿತ್ರ ಕಲಾಕಾರನಾಗಿದ್ದರೆ ಮಾತ್ರ ಸಾಧ್ಯವಿರುತ್ತದೆ. ಮುಂದುವರಿದ ಎಲ್ಲ ದೇಶಗಳಲ್ಲೂ ಈ ಟ್ಯಾಟೂಗೆ ಅತೀವ ಬೇಡಿಕೆ ಇದೆ. ಅಂದ ಹಾಗೆ ಈ ಟ್ಯಾಟೂ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಅದರ ಬಗ್ಗೆ ಇನಷ್ಟು ಕಲಿಯಬೇಕೆನ್ನುವವರಿಗೆ ಟ್ಯಾಟೂ ಕೋರ್ಸ್ಗಳ ಮಾಹಿತಿ ಇಲ್ಲಿದೆ.
ಟ್ಯಾಟೂ ಕೋರ್ಸ್ಗಳಲ್ಲಿ ಏನನ್ನು ಕಲಿಸುತ್ತಾರೆ?
ಇದರಲ್ಲಿ ಪ್ರಮುಖವಾಗಿ ಡ್ರಾಯಿಂಗ್ನ ಮೂಲಭೂತ ಅಂಶಗಳು, ಟ್ಯಾಟೂ ಆರ್ಟ್ ಪರಿಚಯ, ಹಚ್ಚೆ ಪ್ರಕ್ರಿಯೆಯ ತಿಳವಳಿಕೆ, ಹಚ್ಚೆ ಉಪಕರಣಗಳ ಪರಿಚಯ, ವಿವಿಧ ರೀತಿಯ ಸೂಜಿಗಳನ್ನು ಅರ್ಥೈಸಿಕೊಳ್ಳುವುದು, ವಿವಿಧ ರೀತಿಯ ಹಚ್ಚೆ ಯಂತ್ರಗಳ ಪರಿಚಯ. ಸುರಕ್ಷತೆ, ನೈರ್ಮಲ್ಯ ಮಾನದಂಡಗಳು, ಉಪಕರಣಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ನಿರ್ವಹಿಸುವುದು, ಚರ್ಮದ ಪ್ರಕಾರಗಳು, ಸಾಂಕ್ರಾಮಿಕ ರೋಗಗಳು ಮತ್ತು ತಡೆಗಟ್ಟುವಿಕೆಗಳು ಹಚ್ಚೆ ತರಬೇತಿ ಪಠ್ಯಕ್ರಮದ ಭಾಗವಾಗಿದೆ.
ಈ ಟ್ಯಾಟೂ ಕೋರ್ಸ್ 18 ವರ್ಷ ಮೇಲ್ಪಟ್ಟವರಿಗೆ ಲಭ್ಯವಿದ್ದು. ಇದು 2 ತಿಂಗಳು, ನಾಲ್ಕು ತಿಂಗಳು ಮತ್ತು ಕೆಲವು ಕಡೆ ಒಂದು ವರ್ಷದವರೆಗೆ ಲಭ್ಯವಿದೆ. ಈ ಕೋರ್ಸ್ ಗುಣಮಟ್ಟದ ಆಧಾರದ ಮೇಲೆ ಫೀಸ್ಗಳು ಅಂದಾಜು 60,000 ರೂ.ಗಳಿಂದ ಆರಂಭಗೊಂಡು, 1. ಲಕ್ಷ ರೂ.ಗಳವರೆಗೆ ಇದೆ.
ಈ ಟ್ಯಾಟೂ ತರಬೇತಿ ಯಶಸ್ವಿಯಾಗಿ ಮುಗಿದ ಅನಂತರ ಹಚ್ಚೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಸ್ವತಃ ಟ್ಯಾಟೂ ಶಾಪ್ ಹಾಕಿಕೊಳ್ಳುವುದಾದರೆ ಈ ಪ್ರಮಾಣ ಪತ್ರ ಅತೀ ಮುಖ್ಯವಾಗಿದೆ.
•ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.