ಬೆಳ್ತಂಗಡಿ: ನೆರೆ ಪ್ರದೇಶದ ಬಾವಿಗಳ ಸ್ವಚ್ಛತೆಗೆ ಕ್ಲೋರಿನೇಶನ್
ಸಾಂಕ್ರಾಮಿಕ ರೋಗ ತಡೆಗೆ ಆರೋಗ್ಯ ಇಲಾಖೆ ಪಣ
Team Udayavani, Aug 21, 2019, 5:00 AM IST
ಬೆಳ್ತಂಗಡಿ: ಪ್ರವಾಹ ಪೀಡಿತ ತಾಲೂಕು ಪ್ರದೇಶದಲ್ಲಿ ಕುಡಿಯುವ ನೀರಿನ ಬಾವಿಗಳು ಸಂಪೂರ್ಣ ಕಲುಷಿತಗೊಂಡಿವೆ. ಕಲುಷಿತಗೊಂಡ ಬಾವಿ ನೀರಿನ ಸ್ಯಾಂಪಲ್ ಪಡೆದು ಆರೋಗ್ಯ ಕೇಂದ್ರಗಳಲ್ಲಿ ಪರಿಶೀಲನೆಗೆ ಒಳಪಡಿಸಲಾಗಿದೆ.
ಚಾರ್ಮಾಡಿ, ಮುಂಡಾಜೆ, ಲಾೖಲ, ಇಂದಬೆಟ್ಟು ಪ್ರದೇಶಗಳ 48 ಬಾವಿಗಳ ನೀರನ್ನು ಸ್ಯಾಂಪಲ್ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಲುಷಿತಗೊಂಡ ಬಾವಿ ನೀರು ಸ್ಯಾಂಪಲ್ ಪಡೆದು 24 ಗಂಟೆ ಒಳಗಾಗಿ ಬಳಕೆಗೆ ಯೋಗ್ಯ ಇರುವ ಕುರಿತು ವರದಿ ನೀಡಲಾಗುತ್ತಿದೆ.
ಆರೋಗ್ಯ ಇಲಾಖೆ ತಂಡ
ನೆರೆಗೆ ತುತ್ತಾದ ಪ್ರದೇಶಗಳಲ್ಲಿ ನಿರಂತರ ಫಾಗಿಂಗ್ ಸಹಿತ ನೀರಿನ ಸ್ಯಾಂಪಲ್ ಜಾಗೃತಿ ಮೂಡಿಸಲು 70 ಆಶಾ ಕಾರ್ಯಕರ್ತೆಯರು, 5 ಮಂದಿ ಕಿ.ಆ. ಸಹಾಯಕಿಯರು, 5 ಕಿ.ಆ. ಸಹಾಯಕರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.
ಚಾರ್ಮಾಡಿ, ಮುಂಡಾಜೆ, ಲಾೖಲ, ಇಂದಬೆಟ್ಟು ಪ್ರದೇಶದ 48 ಬಾವಿಗಳಿಗೆ ಕ್ಲೊರಿನೇಶನ್ ಮಾಡಲಾಗಿದೆ. ಶೇ. 90 ಬಳ ಕೆಗೆ ಯೋಗ್ಯವಲ್ಲದ ಬಾವಿಗಳಿದ್ದು, ಕೆಸರಿರುವ ಬಾವಿ ಸಂಪೂರ್ಣ ಸ್ವಚ್ಛತೆಗೆ ಸ್ಥಳೀಯ ಗ್ರಾ.ಪಂ. ಪಿಡಿಒಗಳಿಗೆ, ಮನೆ ಮಂದಿಗೆ ಆಧಿಕಾರಿಗಳು ಸೂಚಿಸಿದ್ದಾರೆ. ಪರೀಕ್ಷೆಗೊಳಪಡಿಸಿದಾಗ ನೀರು ಕಪ್ಪು ಬಣ್ಣಕ್ಕೆ ತಿರುಗಿದರೆ 2ನೇ ಬಾರಿಗೆ ಬಾವಿಯನ್ನು ಸೂಪರ್ ಕ್ಲೋರಿನೇಶನ್‌ಗೆಒಳಪಡಿಸಬೇಕಾಗುತ್ತದೆ ಎಂದರು.
25 ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ
ಈಗಾಗಲೇ 48 ಬಾವಿಗಳ ಪೈಕಿ 25 ಬಾವಿಗಳು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದ್ದು, ಈ ಬಾವಿಗಳಿಗೆ ಸೂಪರ್ ಕ್ಲೋರಿನೇಶನ್ ಅವಶ್ಯವಾಗಿದೆ. ಒಂದು ಸಾವಿರ ಲೀಟರ್ ನೀರನ್ನು ಶುದ್ಧೀಕರಿಸಲು 2.5 ಗ್ರಾಂ. (ಶೇ. 30 ಸಾಂದ್ರತೆಯುಳ್ಳ) ಬ್ಲೀಚಿಂಗ್ ಪೌಡರ್ ಅವಶ್ಯವಿರುತ್ತದೆ. ಸೂಪರ್ ಕ್ಲೋರಿನೇಶನ್‌ಗೆ 5 ಗ್ರಾಂ. ಬಳಸಿ ನೀರನ್ನು ಶುದ್ಧಪಡಿಸುವ ಅವಶ್ಯವಿದೆ. ಬಹುತೇಕ ಬಾವಿಗಳು ಹೂಳು ತುಂಬಿ ಕೆಟ್ಟು ಹೋಗಿವೆ. ಕೆಸರು ನೀರು ತುಂಬಿದ ಬಾವಿಗಳ ಸ್ಯಾಂಪಲ್ ಪಡೆಯಲಾಗುತ್ತಿದ್ದು, ನೀರು ಸಂಪೂರ್ಣ ಆವಿ ಮಾಡಿ ಬಳಕೆಗೆ ಯೋಗ್ಯವಿರುವ ಕುರಿತು ವರದಿ ನೀಡಿದ ಬಳಿಕವಷ್ಟೇ ಮನೆಮಂದಿ ಬಳಸಲು ಸೂಚನೆ ನೀಡಲಾಗಿದೆ.
ನೆರೆ ಪ್ರದೇಶದ ಮನೆ ಮಂದಿ ಯಾವುದೇ ಕಾರಣಕ್ಕೂ ಬಾವಿ ನೀರು ಬಳಸದಂತೆಯೂ ನೀರಿನ ಆವಶ್ಯಕತೆಗೆ ಪಂ.ಗೆ ತಿಳಿಸಿದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಿದೆ.
ಅವಶ್ಯ ಕ್ರಮ
– ಡಾ| ಕಲಾಮಧು
ಬಾವಿಗಳ ನೀರಿನ ಸ್ಯಾಂಪಲ್
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.