ಹೊಲವೇ ಕೊಚ್ಚಿ ಹೋದ್ರೆ ಯಾರಿಗೆ ಹೇಳ್ಳೋದು?


Team Udayavani, Aug 21, 2019, 9:24 AM IST

huballi-tdy-1

ಧಾರವಾಡ: ಎಲ್ಲೆಂದರಲ್ಲಿ ನುಗ್ಗಿ ಕೊರಕಲು ಉಂಟು ಮಾಡಿದ ಮಹಾಮಳೆ, ದಾರಿಗಳನ್ನು ಸರೋವರ ಮಾಡಿದ ಹಳ್ಳಗಳು, ತಗ್ಗು ಪ್ರದೇಶಕ್ಕೆ ನುಗ್ಗಿ ಹರಿದ ಹಳ್ಳಕ್ಕೆ ಸಿಲುಕಿ ಬೆಳೆನಾಶ, ತೇಲಿಕೊಂಡು ಹೋದ ಮರ ಮತ್ತು ದಿಮ್ಮೆಗಳು. ಇವೆಲ್ಲವೂ ಜಿಲ್ಲೆಯಲ್ಲಿ ಮಹಾಮಳೆ ಸೃಷ್ಟಿಸಿದ ಅವಾಂತರ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಮಳೆಯಿಂದಾದ ಬೆಳೆಹಾನಿ, ಮನೆಹಾನಿ, ಆಸ್ತಿ ಹಾನಿಯನ್ನೆನೋ ಸರಿ ಮಾಡಬಹುದು. ಆದರೆ ಹೊಲಕ್ಕೆ ಹೋಲಗಳೇ ಕೊಚ್ಚಿ ಕಿನಾರೆಗಳು ಬಿದ್ದಿರುವುದನ್ನು ಸರಿ ಮಾಡುವವರು ಯಾರು?

ಇಂತಹದೊಂದು ಪ್ರಶ್ನೆಯನ್ನು ಜಿಲ್ಲೆಯಲ್ಲಿ ನೆರೆ ಪ್ರವಾಹಕ್ಕೆ ತಮ್ಮ ಹೊಲಗಳನ್ನೇ ಕಳೆದುಕೊಂಡ ನೂರಾರು ರೈತರು ಕೇಳುತ್ತಿದ್ದಾರೆ. ಬೇಡ್ತಿ, ತುಪರಿ ಮತ್ತು ಬೆಣ್ಣೆ ಹಳ್ಳ ಸೇರಿದಂತೆ 23ಕ್ಕೂ ಅಧಿಕ ಹಳ್ಳಗಳ ಅಕ್ಕಪಕ್ಕದ ಹೊಲಗಳಲ್ಲಿ ರಭಸವಾಗಿ ನುಗ್ಗಿದ ನೀರು ಮಾಡಿದ ಅವಾಂತರಕ್ಕೆ ರೈತರು ಬೇಸತ್ತು ಹೋಗಿದ್ದಾರೆ. ಹೊಲದಲ್ಲಿನ ಬೆಳೆ ಕೊಚ್ಚಿ ಹೋದರೆ ಅದಕ್ಕೆ ಸರ್ಕಾರ ಒಂದಿಷ್ಟು ಪರಿಹಾರ ಕೊಡುತ್ತದೆ. ರೈತರು ಒಂದಿಷ್ಟು ಕಣ್ಣೀರು ಸುರಿಸಿ ಸೈರಿಸಿಕೊಳ್ಳಬಹುದು. ಆದರೆ ಹಳ್ಳಗಳು ಹರಿದ ರಭಸಕ್ಕೆ ಹೊಲಕ್ಕೆ ಹೊಲಗಳೇ ಗುರುತು ಸಿಕ್ಕದಷ್ಟು ಕೊಚ್ಚಿಕೊಂಡು ಹೋಗಿದ್ದು ಮಾಲೀಕರನ್ನು ಕಂಗಾಲು ಮಾಡಿಟ್ಟಿದೆ.

ಡೋರಿ-ಬೆಣಚಿ ಹಳ್ಳದಲ್ಲಿ 100 ಎಕರೆಗೂ ಹೆಚ್ಚು ಹೊಲ ಕೊಚ್ಚಿಕೊಂಡು ಹೋಗಿದೆ. ಇಲ್ಲಿ ದೈತ್ಯ ಗುಂಡಿಗಳು ಬಿದ್ದಿವೆ. ಇನ್ನು ಕರೆಮ್ಮನ ಹಳ್ಳದಲ್ಲಿ ವೀರಾಪುರ, ರಾಮಾಪುರ ಗ್ರಾಮಗಳ 20ಕ್ಕೂ ಹೆಚ್ಚು ರೈತರ 40 ಎಕರೆ ಭೂಮಿ ಕೊರಕಲಾಗಿದೆ. ಬೇಡ್ತಿ ಹಳ್ಳದುದ್ದಕ್ಕೂ 150 ರೈತರ ಅಂದಾಜು 230 ಎಕರೆಯಷ್ಟು ಭೂಮಿ ಕೊರಕಲಾಗಿದ್ದು, ಅಲ್ಲಲ್ಲಿ ಮಣ್ಣಿನ ರಸ್ತೆಗಳೇ ಕೊಚ್ಚಿಕೊಂಡು ಹೋಗಿವೆ. ತುಪರಿ ಹಳ್ಳದ ಅಕ್ಕಪಕ್ಕದ 35ಕ್ಕೂ ಹೆಚ್ಚು ರೈತರ 200 ಎಕರೆ ಭೂಮಿ ಕೊರಕಲಾಗಿದೆ. ಬೆಣ್ಣೆ ಹಳ್ಳದ ಪಕ್ಕದಲ್ಲಿನ 37ಕ್ಕೂ ಹೆಚ್ಚು ರೈತರ 180 ಎಕರೆಗೂ ಅಧಿಕ ಭೂಮಿ ಕೊರಕಲು ಬಿದ್ದಿದೆ ಎಂದು ರಾಜ್ಯ ರೈತ ಸಂಘದ ಮುಖಂಡರು ಅಂದಾಜು ಮಾಡಿದ್ದು, ಇದಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

 

ಚೆಕ್‌ಡ್ಯಾಂ ಸ್ಥಳಗಳಲ್ಲಿ ಹೆಚ್ಚು ಹಾನಿ:

ಹಳ್ಳಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ನಿರ್ಮಿಸಿದ ಚೆಕ್‌ಡ್ಯಾಂಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡದಿರುವುದೇ ಹೊಲಗಳು ಹೆಚ್ಚು ಕೊಚ್ಚಿಕೊಂಡು ಹೋಗಲು ಕಾರಣ ಎಂದು ರೈತರು ಆಪಾದಿಸುತ್ತಿದ್ದಾರೆ. ನೂತನ ಚೆಕ್‌ಡ್ಯಾಂಗಳನ್ನು ನಿರ್ಮಿಸುವಾಗ ಹಳ್ಳದಲ್ಲಿ ತೋಡಿದ ಮಣ್ಣನ್ನು ಚೆಕ್‌ಡಾಂ ನಿರ್ಮಾಣದ ನಂತರ ಬಿಗಿಯಾಗಿ ಹಾಕಲಿಲ್ಲ. ಅಷ್ಟೇಯಲ್ಲ, ಚೆಕ್‌ಡ್ಯಾಂಗಳ ಅಕ್ಕ ಪಕ್ಕ ತೋಡಿದ ಮಣ್ಣನ್ನು ಬರೀ ಜೆಸಿಬಿ ಬಳಸಿಕೊಂಡು ನೂಕಲಾಗಿತ್ತು. ಮೇಲಿನಿಂದ ಹಳ್ಳ ಪ್ರವಾಹದ ರೀತಿಯಲ್ಲಿ ಹರಿದು ಬಂದಿದ್ದರಿಂದ ಈ ಚೆಕ್‌ಡ್ಯಾಂಗಳು ನೀರು ತಡೆದಿವೆ. ಹೀಗಾಗಿ ಅದರ ಅಕ್ಕಪಕ್ಕದ ಭೂಮಿ ಕತ್ತರಿಸಿಕೊಂಡು ಹೊಲಗಳಿಗೆ ಪ್ರವಾಹದ ನೀರು ನುಗ್ಗಿದೆ. ಇದು ರೈತರ ಹೊಲಗಳಲ್ಲಿ ಕಿನಾರೆ ಮತ್ತು ದೈತ್ಯ ಗುಂಡಿಗಳು ನಿರ್ಮಾಣವಾಗುವಂತೆ ಮಾಡಿದೆ. ತುಪರಿ ಹಳ್ಳಕ್ಕೆ ಲೋಕೂರು, ಗರಗ, ತಡಕೋಡ, ಬೆಟಗೇರಿ, ಕಲ್ಲೆ, ಕಬ್ಬೂರಿನಲ್ಲಿ ನಿರ್ಮಿಸಿದ್ದ ಚೆಕ್‌ಡ್ಯಾಂಗಳ ಅಕ್ಕ ಪಕ್ಕದ ಹೊಲಗಳು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದು, ಅಲ್ಲಿ ದೈತ್ಯ ಗುಂಡಿಗಳು ನಿರ್ಮಾಣವಾಗಿವೆ. ಈ ಹೊಲಗಳಲ್ಲಿ ಟನ್‌ಗಟ್ಟಲೇ ಮಣ್ಣು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.
ಹೊಲ ಸರಿಮಾಡುವವರು ಯಾರು?: ಬೆಳೆ ಹಾನಿಗೆ ಪರಿಹಾರದ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಇನ್ನು ಮನೆ ಜಖಂಗೊಂಡಿದ್ದಕ್ಕೆ ಪೋಟೋಗಳ ಮೂಲಕ ಪರಿಹಾರ ನೀಡಲಾಗುತ್ತಿದೆ. ಆದರೆ ರೈತರ ಹೊಲಕ್ಕೆ ಹೊಲಗಳೇ ಕೊಚ್ಚಿ ಹೋಗಿರುವುದನ್ನು ಮರಳಿ ನಿರ್ಮಿಸಿಕೊಡುವವರು ಯಾರು? ಇದಕ್ಕೆ ಸರ್ಕಾರದ ಮಟ್ಟದಲ್ಲಿ ಅವಕಾಶವಿದೆಯೇ? ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ. ಇಷ್ಟಕ್ಕೂ ಹೊಲಗಳೇ ಹಾನಿಯಾದರೆ ಅದನ್ನು ಮರಳಿ ನಿರ್ಮಿಸಿಕೊಳ್ಳಲು ಲಕ್ಷಗಟ್ಟಲೇ ಹಣಬೇಕು. ಹೀಗಾಗಿ ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ನಮ್ಮೂರಿನಲ್ಲಿ ಡೋರಿ-ಬೆಣಚಿ ಹಳ್ಳ ಹರಿದ ರಭಸಕ್ಕೆ ಹಳ್ಳದ ಪಕ್ಕದಲ್ಲಿನ ಹೊಲಗಳೇ ಕೊಚ್ಚಿಕೊಂಡು ಹೋಗಿವೆ. ಬೆಳೆಹಾನಿ ಕೊಡಬಹುದು, ಆದರೆ ಹೊಲವೇ ಹಾನಿಯಾದರೆ ಯಾರಿಗೇ ಹೇಳುವುದು. ಅದನ್ನು ಮರಳಿ ನಿರ್ಮಿಸಿಕೊಳ್ಳುವುದು ಹೇಗೆ? ಹೀಗಾಗಿ ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು.•ಶಿವಾಜಿ ದೇವಪ್ಪನವರ, ಡೋರಿ ರೈತ

ತುಪರಿ ಹಳ್ಳ ಈ ಹಿಂದೆ ಯಾವಾಗಲೂ ಇಷ್ಟೊಂದು ಅವಾಂತರಗಳನ್ನು ಮಾಡಿಲ್ಲ. ಈ ಬಾರಿ ಹೊಲಕ್ಕೆ ಹೊಲಗಳೇ ಕೊಚ್ಚಿಕೊಂಡು ಹೋಗಿವೆ. ಅಂತಹ ರೈತರಿಗೆ ಸರ್ಕಾರ ಹೆಚ್ಚಿನ ಪರಿಹಾರ ಕೊಡಬೇಕು.•ವೀರೇಶ ಚಿಕಣಿ, ಲೋಕೂರು ಗ್ರಾಮಸ್ಥ

ಜಿಲ್ಲೆಯಲ್ಲಿ ಸುಜಲ ಜಲಾನಯನ ಯೋಜನೆಯಡಿ ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನ ಹಳ್ಳಗಳ ಪಕ್ಕದಲ್ಲಿ ಲಕ್ಷಗಟ್ಟಲೇ ಗಿಡಮರಗಳನ್ನು ಬೆಳೆಯಲಾಗಿದೆ. ಆದರೆ ಪ್ರಾಣಿಗಳಿಂದ ರೈತರ ಬೆಳೆ, ಗಿಡ ಹಾನಿಯಾದರೆ ಮಾತ್ರ ಅರಣ್ಯ ಇಲಾಖೆಯಿಂದ ಪರಿಹಾರ ಕೊಡುತ್ತೇವೆ. ನೈಸರ್ಗಿಕ ವಿಕೋಪಗಳಿಂದ ಹಾನಿಯಾದರೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲು ಅವಕಾಶವಿಲ್ಲ.•ಮಹೇಶಕುಮಾರ್‌, ಡಿಎಫ್‌ಒ

ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಹೊಲಗಳು ಅಲ್ಲಲ್ಲಿ ಕಿತ್ತುಕೊಂಡು ಹೋಗಿರುವ ಕುರಿತು ರೈತರೇ ಮಾಹಿತಿ ನೀಡಿದ್ದಾರೆ. ಎನ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ ಬೆಳೆಗಳಲ್ಲಿ ಭಾರಿ ನೀರು ನಿಂತಿದ್ದರೆ ಅದನ್ನು ಮೇಲಕ್ಕೆತ್ತಲು ಪರಿಹಾರ ನೀಡುತ್ತೇವೆ. ಹೊಲಕ್ಕೆ ಹೊಲವೇ ಕಿತ್ತು ಹೋದರೆ ಅದಕ್ಕೆ ಪರಿಹಾರ ನೀಡುವ ಕುರಿತು ಇರುವ ಕಾನೂನು ಅವಕಾಶಗಳನ್ನು ಪರಿಶೀಲನೆ ನಡೆಸಿ ಕ್ರಮ ವಹಿಸುತ್ತೇವೆ.•ದೀಪಾ ಚೋಳನ್‌, ಜಿಲ್ಲಾಧಿಕಾರಿ

ಗಿಡಗಳಿಗೆ ಪರಿಹಾರವಿಲ್ಲ: ಅರಣ್ಯ ಇಲಾಖೆ ಸ್ಪಷ್ಟನೆ

ನೆರೆ ಪೀಡಿತ ಪ್ರದೇಶಗಳಲ್ಲಿ ಅದರಲ್ಲೂ ಹಳ್ಳ ಮತ್ತು ನದಿ ಪಕ್ಕದ ರೈತರ ಹೊಲಗಳಲ್ಲಿನ ಬೆಲೆಬಾಳುವ ತೇಗ, ಗಂಧ, ಬಿಳಿಮತ್ತಿ, ಕರಿಮತ್ತಿ ಸೇರಿದಂತೆ ಬೆಲೆಬಾಳುವ ಮರಗಳು ಬೇರು ಸಮೇತ ಕಿತ್ತು ಬಿದ್ದಿವೆ. ಕೆಲವು ಕಡೆಗಳಲ್ಲಿ ತೇಲಿಕೊಂಡು ಕೂಡ ಹೋಗಿವೆ. ಇನ್ನು ಕೆಲವು ಜಮೀನುಗಳಲ್ಲಿ ನೆಟ್ಟ ಸಾಗವಾನಿ ಮರಗಳು ನೀರಿನ ಸೆಲೆಯಿಂದಾಗಿ ಕೊಳೆತು ಹೋಗುತ್ತಿವೆ. ಇವುಗಳಿಗೆ ಅರಣ್ಯ ಇಲಾಖೆ ಪರಿಹಾರ ಕೊಡಲು ಸಾಧ್ಯವಿಲ್ಲ ಎನ್ನುತ್ತಿದೆ. ತೋಟಗಾರಿಕೆ ಇಲಾಖೆ ಬರೀ ಮಾವು, ಮೆಣಸಿನಕಾಯಿಗೆ ಮಾತ್ರ ಪರಿಹಾರ ಎನ್ನುತ್ತಿದೆ. ಇನ್ನು ಜಿಲ್ಲಾಡಳಿತ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ಗಿಡಮರಗಳಿಗೆ ಪರಿಹಾರ ಯಾರು ಕೊಡುವರು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಟಾಪ್ ನ್ಯೂಸ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Chhattisgarh: 20 coaches of goods train derail

Chhattisgarh: ಹಳಿ ತಪ್ಪಿದ  ಗೂಡ್ಸ್‌ ರೈಲಿನ 20 ಬೋಗಿಗಳು

accident

Bantwal: ಕೆಎಸ್‌ಆರ್‌ಟಿಸಿ ಬಸ್‌-ಬೈಕ್‌ ಢಿಕ್ಕಿ; ದಂಪತಿಗೆ ಗಾಯ

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.