ಮೊದಲ ಸುತ್ತಲ್ಲಿ ರಾಯಚೂರಿಗಿಲ್ಲ ಪ್ರಾತಿನಿಧ್ಯ
Team Udayavani, Aug 21, 2019, 5:15 PM IST
ರಾಯಚೂರು: ಹಿಂದುಳಿದ ಜಿಲ್ಲೆಗೆ ಪ್ರಾತಿನಿಧ್ಯ, ಪರಿಶಿಷ್ಟ ಪಂಗಡದ ಕೋಟಾದಡಿ ಜಿಲ್ಲೆಗೆ ಸಿಗಬಹುದು ಎಂಬ ಸಚಿವ ಸ್ಥಾನ ಕೈ ತಪ್ಪಿದೆ. ಆದರೆ, ಈಗ 17 ಶಾಸಕರು ಮಾತ್ರ ಸಂಪುಟ ಸೇರಿದ್ದು, ಎರಡನೇ ಹಂತದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಒಲಿಯಬಹುದು ಎಂಬ ಆಶಾಭಾವ ಮಾತ್ರ ಉಳಿದಿದೆ.
ಹಿಂದುಳಿದ ಎಂಬ ಕಾರಣಕ್ಕೆ ಹೈ-ಕ ಭಾಗಕ್ಕೆ ನಂಜುಂಡಪ್ಪ ವರದಿ ಅನ್ವಯ ಸಿಗಬೇಕಿದ್ದ ಸಚಿವ ಸ್ಥಾನಗಳಲ್ಲಿ ಅರ್ಧದಷ್ಟು ಕೂಡ ಸಿಗದಿರುವುದು ವಿಪರ್ಯಾಸ. ಹೈ-ಕ ಭಾಗದ ಆರು ಜಿಲ್ಲೆಗಳಿಗೆ ಒಂದು ಮಾತ್ರ ಸಚಿವ ಸ್ಥಾನ ಲಭಿಸಿದೆ.
ಬಿ.ಶ್ರೀರಾಮುಲು ಬಳ್ಳಾರಿಯವರಾದರೂ ಗೆದ್ದಿದ್ದು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದಿಂದ. ಹೀಗಾಗಿ ಅವರಿಗೆ ಸಿಕ್ಕ ಸಚಿವ ಸ್ಥಾನ ಹೈ-ಕಕ್ಕೆ ಸಿಕ್ಕಿದ್ದು ಎನ್ನಲಾಗದು. ಆದರೆ, ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೆ ಒಂದು ಸಚಿವ ಸ್ಥಾನದ ಜತೆಗೆ ಮೂರು ನಿಗಮ ಮಂಡಳಿ ಸ್ಥಾನಗಳು ಲಭಿಸಿದ್ದವು. ಅದಕ್ಕೆ ಹೋಲಿಸಿದರೆ ಹೊಸ ಸರ್ಕಾರದಿಂದ ಜಿಲ್ಲೆಗೆ ಭಾರೀ ಅನ್ಯಾಯವಾಗಿರುವುದು ಖಚಿತ. ಹಿಂದಿನ ಸರ್ಕಾರ ಬೀಳಲು ಕಾರಣರಾದ ಶಾಸಕರಲ್ಲಿ ಜಿಲ್ಲೆಯ ಮಸ್ಕಿ ಕ್ಷೇತ್ರದ ಪ್ರತಾಪಗೌಡ ಪಾಟೀಲ ಕೂಡ ಒಬ್ಬರು. ಒಂದು ವೇಳೆ ಅವರ ರಾಜೀನಾಮೆ ಅಂಗೀಕಾರವಾಗಿದ್ದೇ ಆದಲ್ಲಿ ಅವರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರೋ ಏನೋ? ಆದರೆ, ಈಗ ಅವರು ಅಡಕತ್ತರಿಯಲ್ಲಿ ಸಿಲುಕಿದ್ದು, ಅವರ ಶಾಸಕತ್ವ ಅನರ್ಹ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಮುಂದೆ ಅವರ ರಾಜೀನಾಮೆ ಅಂಗೀಕಾರವಾಗಿ ಉಪಚುನಾವಣೆ ನಡೆದು ಅವರೇ ಗೆಲುವು ಸಾಧಿಸುವರೋ, ಸ್ಪೀಕರ್ ನಿರ್ಧಾರ ಎತ್ತಿ ಹಿಡಿದು ಶಾಸಕರು ಅನರ್ಹಗೊಳ್ಳುವರೋ ಎಂಬ ಕುತೂಹಲ ಮೂಡಿದೆ. ಬಹುಶಃ ಈ ಪ್ರಕರಣ ಮುಂದಿಟ್ಟುಕೊಂಡು ಸಿಎಂ ಬಿ.ಎಸ್.ಯಡಿಯೂರಪ್ಪ ಜಿಲ್ಲೆಯನ್ನು ಸಚಿವ ಸ್ಥಾನದಿಂದ ಹೊರಗಿಟ್ಟಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.
ಹೈ-ಕಮಾಂಡ್ ನಿರ್ಧಾರ: ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಅನೇಕ ಆಕಾಂಕ್ಷಿಗಳಿರುವ ಕಾರಣ ಹೈಕಮಾಂಡ್ ನಿರ್ಧಾರದ ಪ್ರಕಾರ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ವರಿಷ್ಠರತ್ತ ಬೆರಳು ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದ ಯಾರು ಕೂಡ ಚಕಾರ ಎತ್ತದಂತಾಗಿದೆ. ಅಲ್ಲದೇ, ಈಗ ಹಂಚಿಕೆಯಾಗಿರುವ ಸಚಿವ ಸ್ಥಾನದಲ್ಲಿ ಕೂಡ ಜಾತಿ ಲೆಕ್ಕಾಚಾರ ಅಡಗಿದ್ದು, ನಿಮ್ಮ ಸಮುದಾಯದ ನಾಯಕರಿಗೆ ನೀಡಿದ್ದೇವಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಈಗಾಗಲೇ ಕೆಲ ಶಾಸಕರು ರಾಜೀನಾಮೆ ಪ್ರಹಸನ ಮಾಡಿ ಇಕ್ಕಟ್ಟಿಗೆ ಸಿಲುಕಿರುವುದನ್ನು ಕಂಡಿದ್ದು, ಬಂಡಾಯದ ಹಾದಿಗೆ ಯಾರು ಇಳಿಯಕ್ಕಿಲ್ಲ ಎಂಬ ಲೆಕ್ಕಾಚಾರ ಬಿಜೆಪಿ ವರಿಷ್ಠರದ್ದು ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.