ಬಿಎಸ್‌ವೈ ಸೇಡಿನ ರಾಜಕೀಯ: ಖಾದರ್
Team Udayavani, Aug 22, 2019, 6:41 AM IST
ಕಾಪು: ಯಡಿಯೂರಪ್ಪ ಸೇಡಿನ ರಾಜಕೀಯದ ಮೂಲಕ ವಿಪಕ್ಷವನ್ನು ಹಣಿಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಹಳಷ್ಟುಸಮಸ್ಯೆಗಳು ಇರುವ ಈ ಸಂದರ್ಭದಲ್ಲಿ ಇದು ಅವರಿಗೆ ಶೋಭೆಯಲ್ಲ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಕಾಪು ರಾಜೀವ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟೆಲಿಫೋನ್ ಕದ್ದಾಲಿಕೆಪ್ರಕರಣವನ್ನು ರಾಜ್ಯ ಸರಕಾರ ಅವಸರದಲ್ಲಿ ಸಿಬಿಐ ತನಿಖೆಗೆ ನೀಡಿದೆ.ತನಿಖೆಯಲ್ಲಿ ಸತ್ಯಾಂಶ ಹೊರಬರುತ್ತದೆ. ಅಷ್ಟರವರೆಗೆ ಕಾಯೋಣ ಎಂದರು.
ಸರಕಾರ ಹೆಚ್ಚು ಬಾಳದು
ಈ ಸರಕಾರ ಹೆಚ್ಚು ಬಾಳುತ್ತದೆ ಎಂಬ ನಿರೀಕ್ಷೆ ನಮಗಿಲ್ಲ. ಸಮ್ಮಿಶ್ರ ಸರಕಾರವನ್ನು ಬೀಳಿಸಿದ ಬಳಿಕ ಅಧಿಕಾರ ಸ್ವೀಕಾರಕ್ಕೆ ಮೂರು ದಿನ ತೆಗೆದುಕೊಂಡ ಅವರು 20 ದಿನ ಕಳೆದ ಅನಂತರ ಮಂತ್ರಿಮಂಡಲ ರಚಿಸಿದ್ದಾರೆ. ಈಗ ಮತ್ತೆ ಗೊಂದಲ ಆರಂಭವಾಗಿದೆ ಎಂದರು.
ಸ್ಥಾನ ಸಿಗದ ಬೇಸರ
ಸಂಪುಟದಲ್ಲಿ ಎಸ್. ಅಂಗಾರ ಅವರಂತಹ ಹಿರಿಯ ಮತ್ತು ದಲಿತ ಶಾಸಕರನ್ನು ಅವಗಣಿಸಿರುವುದು ಖಂಡನೀಯ. ಬಿಜೆಪಿ ಕರಾವಳಿಗೆ ಅನ್ಯಾಯ ಮಾಡಿದೆ ಎಂದು ಅವರು ಹೇಳಿದರು.
ಕರಾವಳಿಯ ಹೆಮ್ಮೆ
ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿರುವುದು ಸ್ವಾಗತಾರ್ಹ. ನಳಿನ್ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದೂ ಕರಾವಳಿಗೆ ಹೆಮ್ಮೆ ಎಂದು ಖಾದರ್ ತಿಳಿಸಿದರು. ಮುಖಂಡರಾದ ವಿನಯ ಕುಮಾರ್ ಸೊರಕೆ, ಅಶೋಕ್ ಕುಮಾರ್ ಕೊಡವೂರು, ನವೀನ್‌ಚಂದ್ರ ಸುವರ್ಣ, ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.