ವಾಟ್ಸಾಪ್ ನಲ್ಲಿ ಇದೀಗ ಫಿಂಗರ್ ಪ್ರಿಂಟ್ ಧೃಢೀಕರಣ ಸೇರಿ 5 ಹೊಸ ಫೀಚರ್
Team Udayavani, Aug 22, 2019, 11:49 AM IST
ಜಗತ್ತಿನಾದ್ಯಂತ ಅತೀ ಹೆಚ್ಚು ಪ್ರಸಿದ್ಧಿ ಪಡೆದ ಮೆಸೇಜಿಂಗ್ ಆ್ಯಪ್ ಗಳಲ್ಲಿ ವಾಟ್ಸಾಪ್ ಕೂಡ ಒಂದು. ಕಂಪೆನಿ ಬಿಡುಗಡೆಗೊಳಿಸಿದ ಅಧಿಕೃತ ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ ಒಂದು ತಿಂಗಳಲ್ಲಿ 1.5 ಬಿಲಿಯನ್ ಸಕ್ರಿಯ ಬಳಕೆದಾರರಿದ್ದು, ಭಾರತದಲ್ಲೆ 400 ಮಿಲಿಯನ್ ಬಳಕೆದಾರರಿದ್ದಾರೆ.
ತನ್ನ ಉನ್ನತ ಸ್ಥಾನವನ್ನು ಕಾಯ್ದುಕೊಂಡಿರುವ ವಾಟ್ಸಾಪ್ ಬಳಕೆದಾರರಿಗೆ ಅನುಕೂಲವಾಗುವಂತೆ ಹೊಸ ಫೀಚರ್ ಗಳನ್ನು ಬಿಡುಗಡೆಗೊಳಿಸಿದೆ. ಅದರ ಜೊತೆಗೆ ಆ್ಯಂಡ್ರಾಯ್ಡ್ ಮತ್ತು ಐಓಎಸ್ ಗಾಗಿ ತನ್ನ ಬೀಟಾ ಅಪ್ಲಿಕೇಶನ್ ನಲ್ಲಿ ಹೊಸ ಹೊಸ ಫೀಚರ್ ಗಳನ್ನು ಸದ್ಯದಲ್ಲೆ ಬಿಡುಗಡೆಗೊಲಿಸಲಿದ್ದು ಪರೀಕ್ಷಾರ್ಥ ಪ್ರಕ್ರಿಯೆಯಲ್ಲಿದೆ.
ಟಾಪ್ 5 ಹೊಸ ಫೀಚರ್ ಗಳು:
1) ಫಿಂಗರ್ ಪ್ರಿಂಟ್ ಧೃಢಿಕರಣ : ಈಗಾಗಲೇ ಐಓಎಸ್ ನಲ್ಲಿ ಲಭ್ಯವಿರುವ ಫಿಂಗರ್ ಪ್ರಿಂಟ್ ದೃಢೀಕರಣ ವ್ಯವಸ್ಥೆಯಲ್ಲಿ ಬಳಕೆದಾರರು ಟಚ್ ಐಡಿ ಅಥವಾ ಫೇಸ್ ಐಡಿ ಬಳಸಿ ತಮ್ಮ ಚಾಟ್ ಗಳನ್ನು ಅನ್ ಲಾಕ್ ಮಾಡಬಹುದಿತ್ತು. ಈ ಫೀಚರ್ ಅನ್ನು ಇತ್ತೀಚಿಗೆ ಆ್ಯಂಡ್ರಾಯ್ಡ್ ಬೀಟಾ ಅವೃತ್ತಿಗೂ ವಿಸ್ತರಿಸಲಾಗಿದೆ. ಇದರ ಜೊತೆಗೆ ನೋಟಿಫಿಕೇಶನ್ ಗಳನ್ನು ಹೈಡ್ ಮಾಡಲು ಕೂಡ ಅವಕಾಶವಿದೆ. ಈ ಫೀಚರ್ ನ್ನು ಬಳಸಲು ವ್ಯಾಟ್ಸಾಪ್ > ಸೆಟ್ಟಿಂಗ್ >ಅಕೌಂಟ್ > ಪ್ರೈವೆಸಿ >ಫಿಂಗರ್ ಪ್ರಿಂಟ್ ಲಾಕ್ .
2) ಸ್ವಯಂ ಚಾಲಿತ ವಾಯ್ಸ್ ಸಂದೇಶ : ಈ ಮೊದಲು ಯಾರಾದರೂ ನಮಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದರೆ ಪ್ರತಿಯೊಂದನ್ನು ಪ್ರತ್ಯೇಕವಾಗಿ ಡೌನ್ ಲೋಡ್ ಮಾಡಿ ಕೇಳಬೇಕಿತ್ತು. ಈಗ ವಾಟ್ಸಾಪ್ ಮೂಲಕ ಕಳುಹಿಸುವ ವಾಯ್ಸ್ ಮೆಸೇಜ್ ಒಂದಕ್ಕಿಂತ ಹೆಚ್ಚಿದ್ದರೆ, ಒಂದು ಮೆಸೇಜ್ ಮುಗಿಯುತ್ತಿದ್ದಂತೆ ಮತ್ತೊಂದು ಪ್ಲೇ ಆಗುವಂತಹ ಪೀಚರ್ ಬೀಟಾದಲ್ಲಿ ಬಂದಿದೆ. ಈ ಆಯ್ಕೆ ಇದುವರೆಗೆ ಆ್ಯಪಲ್ ಫೋನ್ ಗಳಲ್ಲಿ ಮಾತ್ರವೇ ಲಭ್ಯವಿತ್ತು. ಇದೀಗ ಈ ಆಯ್ಕೆಯನ್ನು ಆ್ಯಂಡ್ರಾಯ್ಡ್ ನಲ್ಲೂ ಕಾಣಬಹುದು.
3) ಗ್ರೂಪ್ “ಇನ್ ವೈಟ್ಸ್” : ವಾಟ್ಸಾಪ್ ಹೊಸ ಗ್ರೂಪ್ ಇನ್ ವೈಟ್ಸ್ ಫೀಚರ್ ಅನ್ನು ಪರಿಚಯಿಸಿದ್ದು ಅದರ ಪ್ರಕಾರ ನಮ್ಮ ಕಾಂಟ್ಯಾಕ್ಟ್ ನಲ್ಲಿರುವವರು ಮಾತ್ರ, ಇತರ ಗ್ರೂಪ್ ಗಳಿಗೆ ನಮ್ಮನ್ನು ಸೇರಿಸಬಹುದು. ಅದರೆ ಒಂದು ಬಾರಿ ಗ್ರೂಪ್ ಗೆ ಜಾಯಿನ್ ಅಗುವ ಮೊದಲು ಇನ್ವಿಟೇಷನ್ ನನ್ನು ಪಡೆಯುತ್ತೇವೆ, ಅದರ ಮುಕ್ತಾಯ (expiry) ಅವಧಿ 72 ಗಂಟೆಗಳು. ಈ ಇನ್ವಿಟೇಷನ್ ಆ್ಯಸೆಪ್ಟ್(Accept) ಮಾಡದಿದ್ದರೆ ಗ್ರೂಪ್ ಗೆ ಜಾಯಿನ್ ಆಗಲು ಸಾಧ್ಯವಿಲ್ಲ. ಇದರಿಂದ ಅನಗತ್ಯ ಕಿರಿ ಕಿರಿ ನೀಡುವ ಗ್ರೂಪ್ ಗಳಿಂದ ನೀವು ಹೊರಬಂದರೆ, ಮತ್ತೆ ನಿಮ್ಮನ್ನು ಆ್ಯಡ್ ಮಾಡುವ ಅವಕಾಶ ಇರುವುದಿಲ್ಲ.
4) ಫಾರ್ವಡೆಡ್ ಟ್ಯಾಗ್ : ಸುಳ್ಳು ಸುದ್ದಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಕ್ರಮಕೈಗೊಂಡಿರುವ ವಾಟ್ಸಾಪ್ ಫಾರ್ವಡೆಡ್ ಟ್ಯಾಗ್ ಅನ್ನು ಪರಿಚಯಿಸುತ್ತಿದೆ. ಇದರ ಪ್ರಕಾರ ಒಂದು ಸಂದೇಶ ಹಲವಾರು ಭಾರೀ ಫಾರ್ವಡ್ ಆಗಿದ್ದರೆ ಬಳಕೆದಾರರಿಗೆ ಅದರ ಕುರಿತು ಸೂಚನೆ ನೀಡುತ್ತದೆ. ಐದಕ್ಕಿಂತ ಹೆಚ್ಚು ಭಾರೀ ಫಾರ್ವಡ್ ಆದ ಸಂದೇಶಗಳಿಗೆ “ಫಾರ್ವಡೆಡ್ “ ಎಂಬ ಲೇಬಲ್ ಜೊತೆಗೆ ಒಂದು ಬಾಣದ ಐಕಾನ್ ಕಾಣಿಸುತ್ತದೆ. ಪದೇ ಪದೇ ಫಾರ್ವರ್ಡ್ ಆದರೇ ಎರಡು ಬಾಣದ ಐಕಾನ್ ಕಾಣಿಸುತ್ತದೆ. ಇದು ವೀಡಿಯೋ, ಫೋಟೋ, ಸೇರಿದಂತೆ ಎಲ್ಲಾ ಸಂದೇಶಗಳಿಗೂ ಅನ್ವಯವಾಗುತ್ತದೆ.
5) ಪ್ರೈವೇಟ್ ವಾಯ್ಸ್ ನೋಟ್ಸ್ : ಹಲವಾರು ಬಳಕೆದಾರರಿಗೆ ತಿಳಿಯದ ಹೊಸ ಫೀಚರ್ ಇದು. ಸುತ್ತಮತ್ತಲು ಜನರಿದ್ದಾರೆ, ನಿಮ್ಮ ಬಳಿ ಇಯರ್ ಪೋನ್ ಕೂಡ ಇಲ್ಲ. ಅದೇ ಸಮಯದಲ್ಲಿ ನಿಮ್ಮ ಮೊಬೈಲ್ ಗೆ ವಾಯ್ಸ್ ಮೆಸೇಜೊಂದು ಬರುತ್ತದೆ. ಹೇಗೆ ಅದನ್ನು ಕೇಳಲಿ ಎಂದು ಇನ್ಮುಂದೆ ಚಿಂತಿಸಬೇಕಾಗಿಲ್ಲ. ಆ ಮೆಸೇಜನ್ನು ಆನ್ ಮಾಡಿ ಕಿವಿ ಬಳಿ ಪೋನನ್ನು ಇರಿಸಿಕೊಂಡರೆ ಸಾಕು. ವಾಟ್ಸಾಪ್ ರೂಟ್ ಆ ಆಡಿಯೋವನ್ನು ಲೌಡ್ ಸ್ಪೀಕರ್ ನಿಂದ ಇಯರ್ ಪೀಸ್ ಗೆ ಆಟೋಮ್ಯಾಟಿಕ್ ಆಗಿ ವರ್ಗಾವಣೆ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.