ಉಡುಂಬನಿಗೆ ಜೊತೆಯಾದ ಕಡಲೂರ ಹುಡುಗಿ ಚಿರಶ್ರೀ!
Team Udayavani, Aug 22, 2019, 3:33 PM IST
ಈ ಹಿಂದೆ ಅರವಿಂದ ಕೌಶಿಕ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಹುಲಿರಾಯ ಚಿತ್ರದ ಮೂಲಕವೇ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಚಿರಶ್ರೀ ಅಂಚನ್. ಆ ಸಿನಿಮಾದಲ್ಲಿ ನಾಯಕಿಯರಲ್ಲೊಬ್ಬರಾಗಿ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅದಾದ ಬಳಿಕ ತನ್ನಿಚ್ಛೆಯಂಥಾದ್ದೇ ಕಥೆ ಮತ್ತು ಪಾತ್ರಕ್ಕಾಗಿ ಕಾದು ಕುಳಿತಿದ್ದ ಚಿರಶ್ರೀ ಪಾಲಿಗೆ ಸರ್ಪ್ರೈಸಿನಂತೆ ಒಲಿದು ಬಂದಿದ್ದ ಚಿತ್ರ ಉಡುಂಬಾ!
ನಿರ್ದೇಶಕ ಶಿವರಾಜ್ ಅಚ್ಚುಕಟ್ಟಾಗಿ ಈ ಕಥೆ ರೆಡಿ ಮಾಡಿಕೊಂಡು ಪ್ರತೀ ಪಾತ್ರಗಳಿಗೂ ಅದಕ್ಕೊಪ್ಪುವಂಥಾ ನಟ ನಟಿಯರ ಆಯ್ಕೆಯತ್ತ ಹೆಚ್ಚು ಗಮನ ನೆಟ್ಟಿದ್ದರಂತೆ. ಆದರೆ ತಾರಾಗಣವೆಲ್ಲ ಫೈನಲ್ ಆದರೂ ನಾಯಕಿಯಾಗಿ ಮಾತ್ರ ಯಾರನ್ನೂ ಆಯ್ಕೆ ಮಾಡಿಕೊಳ್ಳಲಾಗಿರಲಿಲ್ಲ. ಉಡುಂಬಾ ಚಿತ್ರದಲ್ಲಿ ನಾಯಕಿಯ ಪಾತ್ರ ಮುಗ್ಧತೆಯೇ ಮೈದಳೆದಂಥಾದ್ದು. ಆದರೆ ತುಸು ಅಂಥಾ ಛಾಯೆ ಇರೋ ಮುಖದ ಹುಡುಕಾಟದಲ್ಲಿದ್ದ ಶಿವರಾಜ್ರ ಕಣ್ಣಿಗೆ ಬಿದ್ದವರು ಕಡಲೂರಿನ ಚೆಲುವೆ ಚಿರಶ್ರೀ ಅಂಚನ್!
ಚಿರಶ್ರೀ ಕೂಡಾ ತನಗೆ ಪರಿಚಿತವಾಗಿರುವ ವಾತಾವರಣದಲ್ಲಿ ಘಟಿಸುವ ಈ ಕಥೆ ಮತ್ತು ತನಗೊಪ್ಪುವಂಥಾ ಸುಂದರವಾದ ಪಾತ್ರವನ್ನು ಮೆಚ್ಚಿಕೊಂಡು ಖುಷಿಯಿಂದಲೇ ಒಪ್ಪಿಕೊಂಡಿದ್ದರಂತೆ. ಆ ಬಳಿಕ ನಿರ್ದೇಶಕರ ನಿರೀಕ್ಷೆಗೂ ಮೀರಿದಂತೆ ಅವರ ಸಹಜಾಭಿನಯ ನೀಡಿದ್ದಾರೆ. ಇಲ್ಲಿ ಚಿರಶ್ರೀಯದ್ದು ಮಗ್ಧ ಹುಡುಗಿಯ ಪಾತ್ರ. ಇಂಥಾ ಹುಡುಗಿ ಪ್ರೀತಿಸಿದ ಸಾದಾ ಸೀದಾ ಹುಡುಗ ಘಟನೆಯೊಂದರಿಂದ ಉಡುಂಬನಾಗಿ ಅಬ್ಬರಿಸಿದಾಗ ಏನಾಗುತ್ತದೆ ಅನ್ನೋದರ ಸುತ್ತಲಿನ ರೋಚಕ ಕಥೆ ಈ ಚಿತ್ರದಲ್ಲಿದೆ. ಉಡುಂಬಾದಲ್ಲಿ ತಾನು ನಿರ್ವಹಿಸಿರುವ ಪಾತ್ರದ ಬಗ್ಗೆ ಚಿರಶ್ರೀಯವರಿಗೂ ಗಾಢವಾದ ಭರವಸೆಯಿದೆ. ಈ ಪಾತ್ರವೇ ತಮ್ಮನ್ನು ಚಿತ್ರರಂಗದಲ್ಲಿ ನೆಲೆಗೊಳ್ಳುವಂತೆ ಮಾಡುತ್ತದೆ ಎಂಬ ವಿಶ್ವಾಸವೂ ಅವರಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.