ತೆರೆಮರೆಯಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟ
ಮಾರಾಟಗಾರರಿಂದ ಕದ್ದು ಮುಚ್ಚಿ ಬುಕ್ಕಿಂಗ್ • ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆಗೆ ಸೂಚನೆ
Team Udayavani, Aug 22, 2019, 4:32 PM IST
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಂಡ್ಯದ ಒಳಾಂಗಣ ಕ್ರೀಡಾಂಗಣ ಪಕ್ಕ ವೈವಿಧ್ಯಮಯ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಟ್ಟಿರುವುದು.
ಮಂಡ್ಯ: ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಒಪಿ) ಗಣೇಶ ಮೂರ್ತಿಗಳನ್ನು ರಾಜ್ಯದಲ್ಲಿ ನಿಷೇಧ ಮಾಡಿದ್ದರೂ ಜಿಲ್ಲಾ ವ್ಯಾಪ್ತಿಯೊಳಗೆ ತೆರೆಮರೆಯಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಂಡು ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.
ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಅಡಗಿಸಿಟ್ಟಿರುವ ಕೆಲವು ಗಣಪತಿ ವಿಗ್ರಹ ಮಾರಾಟಗಾರರು ಮೇಲ್ನೋಟಕ್ಕೆ ಕಾಗದ ಹಾಗೂ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಪಿಒಪಿ ಮೂರ್ತಿಗಳಿಗೆ ಬೇಡಿಕೆ ಬಂದವರಿಂದ ಮುಂಗಡವಾಗಿ ಹಣ ಪಡೆದುಕೊಂಡು ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದು, ಹಬ್ಬಕ್ಕೆ ಒಂದೆರಡು ದಿನಗಳಿರುವಾಗ ಆ ಮೂರ್ತಿಗಳನ್ನು ಕೊಡುವ ಭರವಸೆ ನೀಡಿ ಕಳುಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಮಣ್ಣಿನ ಮೂರ್ತಿಗಳೇ ಹೆಚ್ಚು: ಗೌರಿ-ಗಣೇಶ ಹಬ್ಬಕ್ಕೆ ಹತ್ತು ದಿನಗಳಿರುವಾಗಲೇ ಮಂಡ್ಯದ ಒಳಾಂಗಣ ಕ್ರೀಡಾಂಗಣದ ಪಕ್ಕ, ನೂರಡಿ ರಸ್ತೆ, ಪೇಟೆಬೀದಿ, ಬಂದೀಗೌಡ ಬಡಾವಣೆ ಸೇರಿದಂತೆ ವಿವಿಧೆಡೆ ವೈವಿಧ್ಯಮಯ ಗಣೇಶ ಮೂರ್ತಿಗಳು ಬಂದು ಠಿಕಾಣಿ ಹೂಡಿವೆ. ಎಲ್ಲೆಡೆ ಕಾಗದ ಹಾಗೂ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನೇ ಮಾರಾಟಕ್ಕೆ ಇಡಲಾಗಿದೆ. ಪುಟ್ಟ ಗಣೇಶನಿಂದ ಹಿಡಿದು ಏಳರಿಂದ ಎಂಟು ಅಡಿ ಎತ್ತರದ ಮಣ್ಣಿನ ಗಣೇಶ ಮೂರ್ತಿಗಳು ಹಾಗೂ 12 ರಿಂದ 15 ಅಡಿ ಎತ್ತರದ ಕಾಗದದಿಂದ ತಯಾರಿಸಿದ ಗಣೇಶ ವಿಗ್ರಹಗಳು ವಿವಿಧ ಆಕೃತಿಯಲ್ಲಿ ಮೂಡಿದ್ದು ನೋಡುಗರನ್ನು ಆಕರ್ಷಿಸುತ್ತಿವೆ.
ಮುಂಗಡ ಹಣ: ಈಗಾಗಲೇ ಸುತ್ತಮುತ್ತಲ ಊರುಗಳಿಂದ ಯುವಕರು ಬಂದು ಗಣೇಶ ವಿಗ್ರಹಗಳನ್ನು ನೋಡಿ ಇಷ್ಟಪಟ್ಟು ಮುಂಗಡ ಹಣ ಕೊಟ್ಟು ಹೋಗುತ್ತಿದ್ದಾರೆ. ಕೆಲವು ಯುವಕರು ಪಿಒಪಿ ಗಣೇಶ ಮೂರ್ತಿಗಳನ್ನು ಎಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದು ವರ್ತಕರನ್ನು ಸಂಪರ್ಕಿಸುತ್ತಿದ್ದಾರೆ.
ಅವರ ಮೂಲಕ ಪಿಒಪಿ ಗಣೇಶ ಮೂರ್ತಿಗಳಿರುವ ಜಾಗಗಳಿಗೆ ತೆರಳಿ ಅಲ್ಲಿ ತಮಗಿಷ್ಟವಾದ ಮೂರ್ತಿಗಳನ್ನು ಆಯ್ಕೆ ಮಾಡಿ ಬುಕ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಾಗದದ ಗಣೇಶ ವಿಗ್ರಹ: ಪಿಒಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿರುವುರಿಂದ ಯಾರೂ ಅವುಗಳನ್ನು ಬಹಿರಂಗವಾಗಿ ಮಾರಾಟಕ್ಕಿಡುವ ಧೈರ್ಯ ಮಾಡಿಲ್ಲ. ಮಣ್ಣಿನ ಮೂರ್ತಿಗಳನ್ನು ಕೊಂಡೊಯ್ಯುವುದು ಕಷ್ಟ. ಅವುಗಳನ್ನು ಸಾಗಿಸುವ ಸಮಯದಲ್ಲಿ ಸ್ವಲ್ಪ ಜಾಗ್ರತೆ ತಪ್ಪಿದರೂ ಬಿರುಕು ಬಿಡುತ್ತವೆ. ಕಾಗದದಿಂದ ತಯಾರಿಸಿದ ವಿಗ್ರಹಗಳನ್ನು ರಕ್ಷಣೆ ಇನ್ನೂ ಕಷ್ಟವಾಗಿದ್ದು, ಮಳೆ ನೀರಿನಿಂದ ಸಂರಕ್ಷಣೆ ಮಾಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಯುವಕರು ಪಿಒಪಿ ಗಣೇಶಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.
ಮಾರಾಟಗಾರರ ಬಳಿ ಪಿಒಪಿಗಳನ್ನೇ ಕೇಳುತ್ತಿದ್ದಾರೆಯಾದರೂ ಅವುಗಳು ಸುಲಭಕ್ಕೆ ಸಿಗುತ್ತಿಲ್ಲವಾಗಿವೆ. ಅದಕ್ಕಾಗಿ ಕೆಲವು ಯುವಕರು ವಿಧಿಯಿಲ್ಲದೆ ಮಣ್ಣು ಅಥವಾ ಕಾಗದದ ಗಣೇಶ ಮೂರ್ತಿಗಳ ಖರೀದಿಗೆ ಮೊರೆ ಹೋಗುತ್ತಿದ್ದಾರೆ.
ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರೀಸ್, ಬಣ್ಣ ಲೇಪಿತ ವಿಗ್ರಹಗಳನ್ನು ಕಡೆಗಣಿಸಬೇಕು. ಬಣ್ಣ ಹಚ್ಚಿಲ್ಲದ ಮಣ್ಣಿನಿಂದ ಮಾಡಿರುವ ಗಣಪತಿ ವಿಗ್ರಹಗಳನ್ನು ಖರೀದಿಸಿ ಹಬ್ಬ ಆಚರಿಸಬೇಕು. ಪಿಒಪಿ ಅಥವಾ ಬಣ್ಣ ಲೇಪಿತ ವಿಗ್ರಹಗಳನ್ನು ನಿಯ ಮಬಾಹೀರವಾಗಿ ನದಿ, ಕಾಲುವೆ, ಬಾವಿ, ಕೆರೆ ಸೇರಿದಂತೆ ಇನ್ನಿತರ ಜಲಮೂಲಗಳಿಗೆ ಬಿಡುವುದು ಕಂಡುಬಂದಲ್ಲಿ ಅಂತಹವರಿಗೆ ಜಲ ಮಾಲಿನ್ಯ ತಡೆ ಮತ್ತು ನಿಯಂ ತ್ರಣ ಕಾಯ್ದೆ 1974ರ ಕಲಂ 45-ಎ ಅನ್ವಯ 10 ಸಾವಿರ ರೂ.ವರೆಗೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾ ಗುತ್ತದೆ ಎಂಬ ಎಚ್ಚರಿಕೆ ಯನ್ನು ಜಿಲ್ಲಾಡಳಿತ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.