ಮಹಾನಗರಿಯಲ್ಲಿ ಪ್ರಮೀಳೆಯರ ಕುಮಾರ ವಿಜಯ
ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿ ಪ್ರಸ್ತುತಿ
Team Udayavani, Aug 23, 2019, 5:00 AM IST
ಅಜಮುಖಿಯು ಯುವ ದೂರ್ವಾಸ ಮುನಿಯನ್ನು ಕಂಡು ಮಾಯಾರೂಪದಲ್ಲಿ ಮೋಹಿಸಿ , ಮುನಿಯ ಮೂಲಕ ಶಚಿ ದೇವಿಯ ತಾಣವನ್ನು ಪತ್ತೆ ಹಚ್ಚುತ್ತಾಳೆ. ಅಜಮುಖೀಯಿಂದ ಬಂಧಿಯಾದ ಶಚಿಯು ಉಪಾಯದಿಂದ ತಪ್ಪಿಸಿಕೊಂಡು ರಕ್ಷಣೆಗಾಗಿ ಶಿವ-ಪಾರ್ವತಿಯ ಮೊರೆ ಹೋಗುತ್ತಾಳೆ.
ಮುಂಬಯಿಗೆ ಮಳೆಗಾಲದಲ್ಲಿ ತಿರುಗಾಟಕ್ಕೆ ಬರುವ ಯಕ್ಷಗಾನ, ತಾಳಮದ್ದಳೆ ತಂಡಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಯಕ್ಷಗಾನದ ಮಟ್ಟಿಗೆ ಒಳ್ಳೆಯ ಬೆಳವಣಿಗೆ. ಜು.27 ರಂದು ಮೀರಾರೋಡ್‌ನಲ್ಲಿ ಕುಮಾರ ವಿಜಯ ಎಂಬ ಯಕ್ಷಗಾನ ಪ್ರದರ್ಶನವು ಶ್ರೀ ಲಕ್ಷ್ಮೀ ಜನಾರ್ದನ ಬ್ರಹ್ಮಸಿರಿ ಯಕ್ಷಗಾನ ಬಳಗ ಕೊಟ್ರಪಾಡಿ ಇದರ ವ್ಯವಸ್ಥಾಪನೆಯಿಂದ ನೆರವೇರಿತು .
ಕವಿ ಮುದ್ದಣ ವಿರಚಿತ ಕುಮಾರ ವಿಜಯ ಒಂದು ಪೌರಾಣಿಕ ಪ್ರಸಂಗ. ಸ್ವರ್ಗದ ಮೇಲೆ ದಾಳಿ ಮಾಡಿದ ಶೂರ ಪದ್ಮಾಸುರ ದೇವೇಂದ್ರನ ಹೆಂಡತಿ ಸಚಿದೇವಿಯ ಮೇಲೆ ಕಾಮುಕನಾಗುತ್ತಾನೆ . ಇದನ್ನು ಅರಿತ ದೇವೇಂದ್ರ ಬ್ರಹಸ್ಪತಿಯ ಸೂಚನೆಯಂತೆ ಅರಣ್ಯವೊಂದರಲ್ಲಿ ಅಡಗಿಕೊಳ್ಳುತ್ತಾನೆ . ದೇವಲೋಕದಲ್ಲಿ ದೇವೇಂದ್ರ-ಶಚಿದೇವಿಯ ಪುತ್ರ ಜಯಂತ, ಶೂರ ಪದ್ಮಾಸುರನ ಬಂಧಿಯಾಗುತ್ತಾನೆ . ಶಚೀದೇವಿಯ ಸುಳಿವು ಸಿಗದೇ ಹತಾಶನಾದ ದೈತ್ಯ ನಿಗೆ ಅವನ ತಂಗಿ ಅಜಮುಖೀ ನೆರವಾಗುತ್ತಾಳೆ . ಕಾನನದಲ್ಲಿ ಹುಡುಕುವ ವೇಳೆ ಅಜಮುಖೀಯು ಯುವ ದೂರ್ವಾಸ ಮುನಿಯನ್ನು ಕಂಡು ಮಾಯಾರೂಪದಲ್ಲಿ ಮೋಹಿಸಿ , ಮುನಿಯ ಮೂಲಕ ಶಚಿ ದೇವಿಯ ತಾಣವನ್ನು ಪತ್ತೆ ಹಚ್ಚುತ್ತಾಳೆ. ಅಜಮುಖೀಯಿಂದ ಬಂಧಿಯಾದ ಶಚಿಯು ಉಪಾಯದಿಂದ ತಪ್ಪಿಸಿಕೊಂಡು ರಕ್ಷಣೆಗಾಗಿ ಶಿವ-ಪಾರ್ವತಿಯ ಮೊರೆ ಹೋಗುತ್ತಾಳೆ. ಶಿವ ಮಗ ಕುಮಾರಸ್ವಾಮಿಯನ್ನು ದುಷ್ಟ ದಮನಕ್ಕೆ ಕಳುಹಿಸಿಕೊಡುತ್ತಾನೆ. ಕುಮಾರಸ್ವಾಮಿ ದುಷ್ಟರನ್ನು ಸಂಹರಿಸಿ ಲೋಕಕಲ್ಯಾಣ ಮಾಡುತ್ತಾನೆ .
ಪೂರ್ಣಿಮಾ ಯತೀಶ್ ರೈ ನಿರ್ದೇಶನದ ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿ ಸುರತ್ಕಲ್ ಕಾಟಿಪಳ್ಳ ಇವರಿಂದ ಈ ಪ್ರಸಂಗವು ಪ್ರದರ್ಶನಗೊಂಡಿತು .
ಮಹೇಶ್ ಕನ್ಯಾಡಿಯವರ ಭಾಗವತಿಕೆ ಸುಮಧುರವಾಗಿ ಮೂಡಿ ಬಂದಿತ್ತು . ಚೆಂಡೆಯಲ್ಲಿ ಸುಬ್ರಮಣ್ಯ ಭಟ್ ದೇಲಂತ ಮಜಲು ಹಾಗೂ ಶಿತಿಕಂಠ ಭಟ್ ಉಜಿರೆ ಸಹಕರಿಸಿದ್ದಾರೆ. ಮದ್ದಳೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು ಹಾಗೂ ಚಕ್ರತಾಳದಲ್ಲಿ ಕಾರುಣ್ಯನಿಧಿ ಇಡ್ಯ ಕೈಚಳಕ ತೋರಿದರು .
ಪಾತ್ರವರ್ಗದಲ್ಲಿ ದೇವೇಂದ್ರನಾಗಿ ಕು| ಛಾಯಾಲಕ್ಷ್ಮೀ ಆರ್. ಕೆ. , ಶಚಿದೇವಿಯಾಗಿ ಕು| ದಿವ್ಯಾ , ಅಗ್ನಿ ಹಾಗೂ ರೇಣುಕಾ ಪಾತ್ರದಲ್ಲಿ ಕು| ಪ್ರತಿಷ್ಠಾ ರೈ , ವರುಣ ಹಾಗೂ ಭಾನುಕನ ಪಾತ್ರದಲ್ಲಿ ಕು| ಪೃಥ್ವೀ ಹೆಗ್ಡೆ ಪಾತ್ರಕ್ಕೆ ಜೀವ ತುಂಬಿದ್ದಾರೆ . ಶೂರ ಪದ್ಮಾಸುರನಾಗಿ ಸಾಯಿಸುಮ ಮೆರೆದಿದ್ದಾರೆ . ಉತ್ತಮ ಸಂಭಾಷಣೆ ಮತ್ತು ದೈತ್ಯ ಕಿರೀಟ ಪಾತ್ರದ ಶೋಭೆಯಾಗಿತ್ತು . ನೀಲಕೇಶನಾಗಿ ಕು| ನವ್ಯಾ , ದೃಢ ಕೇಶನಾಗಿ ಕು| ವೈಷ್ಣವಿ ರಾವ್ , ನಾರದ , ಬೃಹಸ್ಪತಿ , ಶಾಸ್ತಾರ ಈ ಮೂರು ಪಾತ್ರಗಳನ್ನು ಕು| ಅಶ್ವಿನಿ ಆಚಾರ್ಯ ನಿಭಾಯಿಸಿದ್ದಾರೆ . ವಸುಂಧರಾ ಹರೀಶ್ ಶೆಟ್ಟಿ ಜಯಂತನಾಗಿ ಉತ್ತಮ ಕುಣಿತ ಹಾಗೂ ವಾಕ್ಚತುರ್ಯವನ್ನು ಪ್ರದರ್ಶಿಸಿದ್ದಾರೆ . ಭಾನುಕೋಪ ನಾಗಿ ಮಾಲತಿ ವೆಂಕಟೇಶ್ , ಈಶ್ವರನಾಗಿ ಕು| ವೈಷ್ಣವಿ ರಾವ್ , ಪಾರ್ವತಿಯಾಗಿ ಕು| ಪ್ರತಿಷ್ಠಾ ರೈ , ಸಿಂಹಸ್ಯ ನಾಗಿ ಕು| ಪೃಥ್ವಿ ಹೆಗ್ಡೆ , ಹಿರಣ್ಯಕನಾಗಿ ಕು| ಶ್ರೀ ರಕ್ಷಾ ಟಿ .ಎನ್. ಯಶಸ್ವಿ ಪ್ರದರ್ಶನ ನೀಡಿದ್ದಾರೆ . ಘೋರ ಅಜಮುಖೀಯಾಗಿ ಪೂರ್ಣಿಮಾ ಯತೀಶ್ ಶೆಟ್ಟಿ ಯವರ ಅಭಿನಯ ಪಾತ್ರದ ಘೋರತೆಯನ್ನು ಜೀವಂತವಾಗಿರಿಸಿತ್ತು . ಮಾಯಾ ಅಜಮುಖೀಯಾಗಿ ಸುಷ್ಮಾ ಮೈರ್ಪಾಡಿಯವರ ಮೋಹಕ ನೃತ್ಯ ಮೈ ನವಿರೇಳಿಸಿತು. ಕು| ಮೈತ್ರಿ ಭಟ್ ಮವ್ವಾರ್‌ರ ದೂರ್ವಾಸ – ಮಾಯಾ ಅಜಮುಖೀಯ ಶೃಂಗಾರ ಮಾತುಕತೆ ಚೆನ್ನಾಗಿ ಮೂಡಿ ಬಂದಿತ್ತು . ಕುಮಾರ ನಾಗಿ ಕು| ದಿವ್ಯಾ ಹೊಳ್ಳ ಅವರ ಕುಣಿಕೆ ಮತ್ತು ಮಾತುಗಾರಿಕೆ ಚೆನ್ನಾಗಿ ಮೂಡಿ ಬಂದಿತ್ತು .
ಅಶೋಕ್ ವಳದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.