ಅಪಾಯ ಆಹ್ವಾನಿಸುತ್ತಿರುವ ಒಣ ಮರಗಳು
ರಸ್ತೆ ಬದಿಯಲ್ಲೇ ಇರುವ ವಿದ್ಯುತ್ ತಂತಿ
Team Udayavani, Aug 23, 2019, 5:35 AM IST
ಪಳ್ಳಿ: ನಿಟ್ಟೆ ಗ್ರಾ.ಪಂ. ವ್ಯಾಪ್ತಿಯ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿಟ್ಟೆ ಕಾಲೇಜು ಬಳಿಯಿಂದ ದೂಪದಕಟ್ಟೆ ವರೆಗೆ ರಸ್ತೆ ಬದಿ ಒಣಗಿದ ಮರಗಳು ಅಪಾಯಕಾರಿ ಸ್ಥಿತಿಯಲ್ಲಿವೆ.
ರಸ್ತೆ ಬದಿಯಲ್ಲೇ ವಿದ್ಯುತ್ ತಂತಿಗಳೂ ಸಾಗಿದ್ದು ಜೋರಾದ ಗಾಳಿಗೆ ಒಣಗಿದ ಮರಗಳು ತುಂಡಾದಲ್ಲಿ ಭಾರೀ ಪ್ರಮಾಣದ ನಷ್ಟ ಸಂಭವಿಸಲಿದೆ. ಈ ರಸ್ತೆಯು ಕಾರ್ಕಳದಿಂದ ಪಡುಬಿದ್ರಿ ಮೂಲಕವಾಗಿ ಮಂಗಳೂರು ಸಂಚರಿಸಲು ಮುಖ್ಯ ರಸ್ತೆ. ನಿರಂತರ ವಾಗಿ ಸಾವಿರಾರು ವಾಹನಗಳು ಈ ಮಾರ್ಗವಾಗಿಯೇ ಸಂಚರಿಸುತ್ತವೆ.
ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳು ಎಚ್ಚೆತ್ತು ತೆರವು ಕಾರ್ಯ ಕೈಗೊಳ್ಳದಿದ್ದಲ್ಲಿ ಅಪಾರ ಪ್ರಮಾಣದ ನಷ್ಟದ ಜತೆಗೆ ಜೀವಹಾನಿ ಸಂಭವಿಸ ಬಹುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ತೆರವು ಕಾರ್ಯ ನಡೆಸಿ
ಅಪಾಯಕಾರಿ ಮರಗಳು ರಸ್ತೆಯಂಚಿನಲ್ಲಿದ್ದು ಯಾವುದೇ ಕ್ಷಣದಲ್ಲಿ ಉರುಳಿ ಬೀಳುವ ಹಂತದಲ್ಲಿವೆ. ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದು ಭಾರೀ ನಷ್ಟ ಸಂಭವಿಸುವ ಮುನ್ನ ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತು ಇವುಗಳ ತೆರವು ಕಾರ್ಯ ನಡೆಸಬೇಕು. -ನಿತೀನ್ ಸಾಲ್ಯಾನ್, ನಿಟ್ಟೆ ಗ್ರಾ.ಪಂ. ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.