ಯುಎಸ್ ಓಪನ್ ಟೆನಿಸ್: ಜೊಕೋ, ಒಸಾಕಾಗೆ ಅಗ್ರ ಶ್ರೇಯಾಂಕ
Team Udayavani, Aug 23, 2019, 5:49 AM IST
ನ್ಯೂಯಾರ್ಕ್: ವಿಶ್ವದ ನಂಬರ್ ವನ್ ಟೆನಿಸಿಗರಾದ ನೊವಾಕ್ ಜೊಕೋವಿಕ್ ಮತ್ತು ನವೋಮಿ ಒಸಾಕಾ ಅವರಿಗೆ ಯುಎಸ್ ಓಪನ್ ಚಾಂಪಿಯನ್ಶಿಪ್ನಲ್ಲಿ ಅಗ್ರ ಶ್ರೇಯಾಂಕ ಲಭಿಸಿದೆ. ಇವರಿಬ್ಬರೂ ಈ ಕೂಟದ ಹಾಲಿ ಚಾಂಪಿಯನ್ ಕೂಡ ಆಗಿದ್ದು, ಇವರಲ್ಲಿ ಜೊಕೋ 17ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ಸ್ಪೇನಿನ ರಫೆಲ್ ನಡಾಲ್ ಅವರಿಗೆ 2ನೇ ಶ್ರೇಯಾಂಕ, 21ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯ ಹಾದಿಯಲ್ಲಿರುವ ರೋಜರ್ ಫೆಡರರ್ಗೆ 3ನೇ ಶ್ರೇಯಾಂಕ ಲಭಿಸಿದೆ. ಡೊಮಿನಿಕ್ ಥೀಮ್, ಡ್ಯಾನಿಲ್ ಮೆಡ್ವಡೇವ್, ಅಲೆಕ್ಸಾಂಡರ್ ಜ್ವೆರೇವ್ ಕ್ರಮವಾಗಿ 4ರಿಂದ 6ರ ವರೆಗಿನ ಶ್ರೇಯಾಂಕ ಪಡೆದಿದ್ದಾರೆ.
ಸೆರೆನಾ ವಿಲಿಯಮ್ಸ್ ನಂ.8
ವನಿತಾ ಸಿಂಗಲ್ಸ್ನಲ್ಲಿ ಒಸಾಕಾಗೆ ಅಗ್ರ ಶ್ರೇಯಾಂಕ ಸಿಕ್ಕಿದೆ. ಕಳೆದ ವರ್ಷದ ಫೈನಲ್ ನಲ್ಲಿ ಈ ಜಪಾನಿ ಆಟಗಾರ್ತಿಗೆ ಶರಣಾದ ಸೆರೆನಾ ವಿಲಿಯಮ್ಸ್ ಗೆ ದೊರಕಿದ್ದು 8ನೇ ಶ್ರೇಯಾಂಕ. ಕೆಲವೇ ದಿನಗಳ ಕಾಲ ವಿಶ್ವದ ನಂ.1 ಸ್ಥಾನ ಅಲಂಕರಿಸಿದ ಆ್ಯಶ್ಲಿ ಬಾರ್ಟಿಗೆ 2ನೇ, ಮಾಜಿ ನಂ.1 ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾಗೆ 3ನೇ ಹಾಗೂ ವಿಂಬಲ್ಡನ್ ಚಾಂಪಿಯನ್ ಸಿಮೋನಾ ಹಾಲೆಪ್ಗೆ 4ನೇ ಶ್ರೇಯಾಂಕ ಲಭಿಸಿದೆ.
ವರ್ಷದ ಕೊನೆಯ ಗ್ರ್ಯಾನ್ಸ್ಲಾಮ್ ಪಂದ್ಯಾವಳಿ ಆಗಿರುವ ಯುಎಸ್ ಓಪನ್ ಆ. 26ರಿಂದ ಸೆ. 8ರ ತನಕ ನ್ಯೂಯಾರ್ಕ್ನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.