ನಗರದ ನಾಗರಿಕ ಸೇವಾ ಸಂಸ್ಥೆಗಳ ‘ಸರಳ’ ಸೂತ್ರ
ಬಿಬಿಎಂಪಿ, ಬೆಸ್ಕಾಂ, ಬಿಡಿಎ, ಬಿಎಂಟಿಸಿಯಿಂದ ಪರಿಸರ ಸ್ನೇಹಿ ಹಬ್ಬ
Team Udayavani, Aug 23, 2019, 9:17 AM IST
ಬೆಂಗಳೂರು: ನಗರದಲ್ಲಿ ನಾಗರಿಕರಿಗೆ ಸೇವೆ ನೀಡುತ್ತಿರುವ ಬಿಎಂಟಿಸಿ, ಬಿಬಿಎಂಪಿ, ಬಿಡಬ್ಲೂಎಸ್‌ಎಸ್‌ಬಿ, ಬೆಸ್ಕಾಂ ಮತ್ತು ಬಿಡಿಎ ಸಂಸ್ಥೆಗಳು ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತವೆ. ಈ ನಾಗರಿಕ ಸೇವಾ ಸಂಸ್ಥೆಗಳು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಸುತ್ತಿದ್ದು, ಎಲ್ಲೆಡೆ ಮಣ್ಣಿನ ಗಣೇಶನನ್ನು ಪೂಜೆಗೆ ಬಳಸುತ್ತಿವೆ.
ಹತ್ತಾರು ವರ್ಷಗಳಿಂದ ಗಣೇಶ ಹಬ್ಬವನ್ನು ಆಚರಿಸುತ್ತಿರುವ ಈ ಸಂಸ್ಥೆಗಳು ಆಚರಣೆ ಜತೆಗೆ ಸಾರ್ವಜನಿಕರಿಗೆ ಜಾಗೃತಿ ಸಂದೇಶ ನೀಡುತ್ತಿವೆ. ಡಿಪೋ ಹಂತದಲ್ಲಿ ಗಣೇಶನ ಹಬ್ಬ ಆಚರಿಸುವ ಬಿಎಂಟಿಸಿ ಸಿಬ್ಬಂದಿ, ಈ ಬಾರಿ ರಾಜ್ಯದಲ್ಲಿ ಉಂಟಾಗಿರುವ ನೆರೆಗೆ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ನೆರವಿಗೆ ಕೈ ಜೋಡಿಸಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಣೇಶ ಹಬ್ಬದ ಆಚರಣೆಗೆ ಸಂಗ್ರಹಿಸಿರುವ ಹಣವನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡಲು ಚರ್ಚೆ ನಡೆಯುತ್ತಿದೆ.
36 ಸಾವಿರ ಸಿಬ್ಬಂದಿಯನ್ನು ಹೊಂದಿರುವ ಬಿಎಂಟಿಸಿ ಪ್ರತಿ ವರ್ಷ ವೈಭವದಿಂದ ಗಣೇಶ ಹಬ್ಬ ಆಚರಿಸುತ್ತದೆ. ಆದರೆ ಈ ಬಾರಿ ಸರಳವಾಗಿ ಆಚರಿಸಲು ಚಿಂತನೆ ನಡೆಸಿದೆ. ಬಿಎಂಟಿಸಿಯಲ್ಲಿ ಒಟ್ಟು 48 ಡಿಪೋಗಳಿದ್ದು, ಪ್ರತಿ ಡಿಪೋದಲ್ಲಿ 500ರಿಂದ 600 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಹಾಗಾಗಿ ಒಂದು ಡಿಪೋದಲ್ಲಿ 70 ಸಾವಿರದಿಂದ ಒಂದು ಲಕ್ಷ ರೂ. ಹಣ ಸಂಗ್ರಹವಾಗುತ್ತದೆ. ಇದರ ಒಟ್ಟು ಮೊತ್ತ 40 ಲಕ್ಷ ರೂ.ಗೆ ತಲುಪಲಿದ್ದು, ಅಷ್ಟೂ ಹಣವನ್ನು ನೆರೆ ಪರಿಹಾರಕ್ಕೆ ನೀಡಿ ಸರಳವಾಗಿ ಮಣ್ಣಿನ ಮೂರ್ತಿ ಇಟ್ಟು ಗಣೇಶ ಹಬ್ಬ ಆಚರಿಸಲು ಡಿಪೋ ಮ್ಯಾನೆಜರ್‌ಗಳ ಹಂತದಲ್ಲಿ ಚಿಂತನೆ ನಡೆಯುತ್ತಿದೆ.
ಉಚಿತ ಮಣ್ಣಿನ ಗಣಪ: ಪಿಒಪಿ ಗಣೇಶ ನಿಷೇಧಿಸಿರುವ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಇಲ್ಲ. ಕಾರಣ, ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ನೌಕರರ ಸಂಘದಿಂದ 300 ಮಣ್ಣಿನ ಗಣೇಶ ಮೂರ್ತಿಗಳನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ. ಈ ಗಣೇಶ ಮೂರ್ತಿಗಳು ಎರಡು ಅಡಿ ಎತ್ತರ ಇರಲಿವೆ. 3,200 ನೌಕರರನ್ನು ಹೊಂದಿರುವ ಬಿಬಿಎಂಪಿ ನೌಕರರ ಸಂಘ, ಸೆ.1ರಂದು ಸರಳವಾಗಿ ಗಣೇಶ ಹಬ್ಬ ಆಚರಿಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.