ಇಂದಿನಿಂದ ಫಲ-ಪುಷ್ಪ ಪ್ರದರ್ಶನ

•ಗಾಜಿನಮನೆಯಲ್ಲಿ ಸಿದ್ಧವಾಗಿವೆ ಆಕರ್ಷಕ ಕಲಾಕೃತಿ•ಸಸ್ಯ ಸಂತೆ-ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

Team Udayavani, Aug 23, 2019, 10:25 AM IST

23-April-3

ದಾವಣಗೆರೆ: ಐದು ದಿನಗಳ ಫಲ-ಪುಷ್ಪ ಪ್ರದರ್ಶನಕ್ಕೆ ಪ್ಯಾರಿಸ್‌ ಮಹಾನಗರದಲ್ಲಿರುವ ಐಫೆಲ್ ಟವರ್‌ ಮಾದರಿಯನ್ನು ಗುಲಾಬಿ ಹೂವುಗಳಿಂದ ನಿರ್ಮಿಸಲಾಗುತ್ತಿದೆ

ದಾವಣಗೆರೆ: ನಗರದ ಹೊರವಲಯದಲ್ಲಿರುವ ಗಾಜಿನಮನೆಯಲ್ಲಿ ತೋಟಗಾರಿಕೆ ಇಲಾಖೆ ಇಂದಿನಿಂದ ಆ. 27ರ ವರೆಗೆ ಐದು ದಿನಗಳ ಕಾಲ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಿದೆ.

ಗುರುವಾರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಫಲ-ಪುಷ್ಪ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಗದೀಶ್‌, ತೋಟಗಾರಿಕೆ ಬಗ್ಗೆ ಅಭಿರುಚಿ ಹೆಚ್ಚಿಸಲು, ಮನೆಗಳಲ್ಲಿ ಅಲಂಕಾರಿಕ ಹಾಗೂ ಹೂವಿನ ಗಿಡಗಳನ್ನು ಬೆಳೆಸಲು ಪ್ರೋತ್ಸಾಹ, ಮಕ್ಕಳಿಗೆ ತೋಟಗಾರಿಕೆ ಬಗ್ಗೆ ಅರಿವಿನ ಜತೆಗೆ ಮನೆಮಂದಿ ದಿನನಿತ್ಯದ ಜೀವನದ ಒತ್ತಡದಿಂದ ಹೊರಬಂದು ಮನಸ್ಸಿನ ಉಲ್ಲಾಸಕ್ಕೆ ಫಲ-ಪುಷ್ಪ ಪ್ರದರ್ಶನ ಸಹಕಾರಿಯಾಗಲಿದೆ ಎಂದರು.

ಬೆಂಗಳೂರಿನ ಲಾಲ್ಬಾಗ್‌ನಲ್ಲಿನ ರೀತಿ ವರ್ಷಕ್ಕೆ 2 ಬಾರಿ ದಾವಣಗೆರೆ ಗಾಜಿನಮನೆಯಲ್ಲೂ ಫಲ-ಪುಷ್ಪ ಪ್ರದರ್ಶನ ಆಯೋಜಿಸಲಾಗುವುದು. ಆ ನಿಟ್ಟಿನಲ್ಲಿ ಈ ಬಾರಿ ಆ.15ರಿಂದ ಏರ್ಪಡಿಸಲು ಸಿದ್ಧತೆ ಕೈಗೊಳ್ಳಲಾಗಿತ್ತು. ಸ್ವಾತಂತ್ರ ದಿನಾಚರಣೆಯಂದು ಪ್ರದರ್ಶನ ಉದ್ಘಾಟಿಸಬೇಕಿತ್ತು. ಅತಿವೃಷ್ಟಿಯಿಂದಾಗಿ ಪ್ರದರ್ಶನ ಮುಂದೂಡಲಾಯಿತು. ಹಾಗಾಗಿ ಆ.22ರಿಂದ 27ರವರೆಗೆ ಏರ್ಪಡಿಸಲಾಗಿದೆ ಎಂದು ಹೇಳಿದರು.

ತೋಟಗಾರಿಕೆ ಉಪ ನಿರ್ದೇಶಕ ಲಕ್ಷ್ಮಿಕಾಂತ ಬೊಮ್ಮನ್ನರ್‌ ಮಾತನಾಡಿ, ಈ ಬಾರಿ ಫಲ-ಪುಷ್ಪ ಪ್ರದರ್ಶನದಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ ಮಹಾನಗರದಲ್ಲಿರುವ ಐಫೆಲ್ ಟವರ್‌ ಮಾದರಿಯನ್ನು 30 ಅಡಿ ಎತ್ತರ ಹಾಗೂ 23 ಅಡಿ ಅಗಲದಲ್ಲಿ ವಿವಿಧ ಬಣ್ಣದ 80,000ಕ್ಕೂ ಹೆಚ್ಚು ಗುಲಾಬಿ ಹೂವುಗಳಿಂದ ನಿರ್ಮಿಸಲಾಗುವುದು. 20,000 ಸೇವಂತಿಗೆ ಹೂವುಗಳಿಂದ ಹೃದಯದ ಆಕಾರದ ಕಲಾಕೃತಿ, ಮಿಕ್ಕಿ ಮೌಸ್‌, ಅಣಬೆ, ಡಾಲ್ಫಿನ್‌ ಆಕಾರ ಸೇರಿದಂತೆ ಅನೇಕ ಹೂವಿನಿಂದ ಸಿದ್ಧಪಡಿಸಿದ ಕಲಾಕೃತಿಗಳು, ಸಿರಿಧಾನ್ಯದಲ್ಲಿ ಅರಳಿಸಿದ ಬುದ್ಧ, ಬಸವಣ್ಣ, ಡಾ|ಬಿ.ಆರ್‌.ಅಂಬೇಡ್ಕರ್‌, ಸ್ವಾಮಿ ವಿವೇಕಾನಂದ, ತೋಟಗಾರಿಕೆ ಪಿತಾಮಹ ಡಾ| ಎಂ.ಎಚ್.ಮರೀಗೌಡರ ಮೂರ್ತಿಗಳನ್ನು ಪ್ರದರ್ಶದಲ್ಲಿರಿಸಲಾಗುವುದು.ಅಪರೂಪದ ಹಣ್ಣು-ತರಕಾರಿ, ಸಸ್ಯ ಸಂತೆ ಜತೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಆರ್ಕಿಡ್‌, ಆಂಥೂರಿಯಮ್‌, ಕಾರ್ನೇಷನ್‌, ಲಿಲಿಯಮ್‌, ಬರ್ಡ್‌ ಆಫ್‌ ಪ್ಯಾರಡೈಸ್‌, ಜಿಂಜರ್‌ ಲಿಲ್ಲಿ ಮತ್ತು ಹಸಿರು ಎಲೆ ಬಳಸಿ ಇಕೆಬಾನ ಶೈಲಿಯ 50 ವಿವಿಧ ಹೂ ಜೋಡಣೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.

ವಿವಿಧ ತಳಿಯ 5000 ಗಿಡಗಳನ್ನು ಪ್ಲಾಸ್ಟಿಕ್‌ ಕುಂಡದಲ್ಲಿ ಬೆಳೆಸಲಾಗಿದ್ದು, ಹಳದಿ, ಕೇಸರಿ, ಬಿಳಿ, ಕೆಂಪು ಪರ್ಪಲ್, ಬಣ್ಣದ ಹೂಗಳ ಸಾಲ್ವಿಯಾ, ಮ್ಯಾರಿಗೋಲ್ಡ್, ಕಲರ್‌ ಪೆಟ್ಯುನಿಯಾ, ಸೆಲ್ಯುಷಿಯಾ, ಟೆಟ್ಯುನಿಯಾ, ಪೆರಿವಿಂಕಲ್, ಜೀನಿಯಾ, ಬಾಲ್ಸಮ್‌, ವರ್ಬೇನಿಯಾ ಮತ್ತು ಅಸ್ಟರ್‌ ಹೂವಿನ ಗಿಡಗಳನ್ನು ಪ್ರದರ್ಶನದಲ್ಲಿಡಲಾಗುವುದು ಎಂದು ಹೇಳಿದರು.

ರೈತರಿಗೆ ನಾಟಿ ಮಾಡಲು ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಬೆಳೆದ ಉತ್ತಮ ಗುಣಮಟ್ಟದ ತೋಟಗಾರಿಕೆ ಸಸಿ/ಕಸಿ ಗಿಡಗಳನ್ನು ಇಲಾಖಾ ದರದಲ್ಲಿ ಒದಗಿಸಲು ಸಸ್ಯ ಸಂತೆ ಆಯೋಜಿಸಿ, ಗ್ರಾಹಕರಿಗೆ ನೇರವಾಗಿ ಸಸಿ ಇತರೆ ಗಿಡಗಳನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.

ಗಾಜಿನ ಮನೆಯ ಆವರಣದಲ್ಲಿ ಅಪರೂಪದ ಅಲಂಕಾರಿಕ ಮರಗಳನ್ನು ನಾಟಿ ಮಾಡಿದ್ದು, ಈ ಮರಗಳಿಗೆ ಮತ್ತು ಗಾಜಿನ ಮನೆಯ ಒಳಗಿನ ಭಾಗಗಳಿಗೆ ಬಣ್ಣಗಳ ವಿದ್ಯುತ್‌ ದೀಪಾಲಂಕಾರ ಮಾಡಲಾಗುವುದು. ಕಲಾಕೃತಿ ಸಿದ್ಧತೆಯಲ್ಲಿ ನುರಿತ 10 ರಿಂದ 15 ಸಿಬ್ಬಂದಿ ಈಗಾಗಲೇ ಕಾರ್ಯನಿರತರಾಗಿದ್ದು, ವಿಶೇಷವಾದ ಐಫೆಲ್ ಟವರ್‌ ಪುಷ್ಪ ಕಲಾಕೃತಿಯನ್ನು ಬೆಂಗಳೂರಿನ ಅಗರ್‌ವಾಲ್ ಫ್ಲೋರಿಸ್ಟ್‌ ನವರು ನಿರ್ಮಿಸುತ್ತಿದ್ದಾರೆ ಎಂದು ಹೇಳಿದರು.

ಫಲ-ಪುಷ್ಪ ಪ್ರದರ್ಶನ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಅನುಕೂಲಕ್ಕೆ ನಗರ ಸಾರಿಗೆ ಬಸ್‌ ಸೌಲಭ್ಯ ಕಲ್ಪಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಪ್ರದರ್ಶನದ ಹಿನ್ನೆಲೆಯಲ್ಲಿ ತಿಂಡಿ-ತಿನಿಸು ಮಾರಾಟ ಮಳಿಗೆ ಸೇರಿದಂತೆ ಒಟ್ಟು 20 ಮಳಿಗೆಗಳಿಗೆ ಅವಕಾಶ ಇದೆ. ಬೇಡಿಕೆ ಇದ್ದರೆ ಇನ್ನೂ ಹೆಚ್ಚಿನ ಮಳಿಗೆ ತೆರೆಯಲಾಗುವುದು ಎಂದು ತಿಳಿಸಿದರು.

ಫಲ-ಪುಷ್ಪ ಪ್ರದರ್ಶನ ಹಿನ್ನೆಲೆಯಲ್ಲಿ ಐದು ದಿನಗಳ ಕಾಲವೂ ಪ್ರತಿದಿನ ಸಂಜೆ 5.30 ರಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ಸಂಘ ಸಂಸ್ಥೆಗಳು, ಶಾಲಾ/ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರಿಂದ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಗಾಜಿನಮನೆಗೆ ಉತ್ತಮ ರಸ್ತೆ, ಟನಲ್ ಅಕ್ವೇರಿಯಂ, ಶಾಶ್ವತ ದೀಪಾಲಂಕಾರ, ಇತರೆ ಕಾಮಗಾರಿಗಳಗೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಂದಾಜು 10 ಕೋಟಿ ರೂ. ಗಳ ಡಿಪಿಆರ್‌ ತಯಾರಿಸಲಾಗಿದೆ. ಅನುಮೋದನೆ ನಂತರ ಕೆಲಸ ಆರಂಭಿಸಲಾಗುವುದು ಎಂದರು.

ಟಾಪ್ ನ್ಯೂಸ್

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Bantwal: ಅಪಘಾತ; ಗಾಯಾಳು ಸಾವು

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.