ಬೀಳುವ ಹಂತದಲ್ಲಿ ಸ್ವಾಗತ ಕಮಾನು
ಪ್ರವಾಸಿಗರ ಅನುಕೂಲಕ್ಕಾಗಿ ನಿರ್ಮಿಸಿರುವ ಮಾರ್ಗಸೂಚಿ ಫಲಕ
Team Udayavani, Aug 23, 2019, 3:18 PM IST
ಬೀಳುವ ಸ್ಥಿತಿಯಲ್ಲಿ ಪ್ರವಾಸಿ ತಾಣಗಳ ಮಾರ್ಗ ಸೂಚಿಸುವ ಕಬ್ಬಿಣದ ಕಮಾನು ಗೇಟು.
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪ್ರಸಿದ್ಧ ಪ್ರವಾಸಿ ಕೇಂದ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ವಿವಿಧೆಡೆಗಳಿಂದ ಬರುವ ಪ್ರವಾಸಿಗರ ಅನುಕೂಲಕ್ಕೆ ಶ್ರೀರಂಗಪಟ್ಟಣದಲ್ಲಿ ಕೆಲ ಪ್ರವಾಸಿ ತಾಣಗಳ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿತ್ತು. ಬಹುತೇಕ ಸ್ವಾಗತ ಕಮಾನುಗಳು ನಿರ್ವಹಣೆ ಕೊರತೆಯಿಂದ ಕುಸಿದು ಬೀಳುವ ಹಂತದಲ್ಲಿವೆ.
ಮೈಸೂರು – ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ ಶ್ರೀರಂಗಪಟ್ಟಣದ ಸುತ್ತಲೂ ಕಾವೇರಿ ನದಿ ಸುತ್ತಲೂ ಹರಿಯುವುದರಿಂದ ಇದೊಂದು ದ್ವೀಪವೆಂದೇ ಹೇಳಬಹುದು. ಪ್ರತಿದಿನ ದೇಶ ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಾರೆ.
ಪ್ರವಾಸಿಗರ ಅನುಕೂಲಕ್ಕೆಂದು ಕಳೆದ 15 ವರ್ಷಗಳ ಹಿಂದೆ ಆಯಾ ಪ್ರವಾಸಿ ತಾಣಗಳ ರಸ್ತೆ ಸಮೀಪ ಪ್ರವಾಸೋದ್ಯಮ ಹಾಗೂ ಪುರಸಭೆ ಕಬ್ಬಿಣದ ಸ್ವಾಗತ ಕಮಾನುಗಳನ್ನು ನಿರ್ಮಿಸಿ ಪ್ರವಾಸಿ ತಾಣಗಳಿಗೆ ಹೋಗುವ ಮಾರ್ಗ ಸೂಚನೆಗಳ ಹೆಸರುಗಳನ್ನೂ ಬರೆಯಲಾಗಿತ್ತು.
ಯಾವ್ಯಾವ ಫಲಕಗಳು: ಮೈಸೂರು – ಬೆಂಗಳೂರು ಹೆದ್ದಾರಿಯ ಕಿರಂಗೂರು ವೃತ್ತ, ಪಟ್ಟಣದ ಕೋಟೆ ಬಾಗಿಲು ವೃತ್ತ, ಗಂಜಾಂ ರಸ್ತೆ, ಪಿಎಂಸಿ ಗೇಟ್‌ನ ಆನೆಕೋಟೆ ರಸ್ತೆ ಹಾಗೂ ಪಶ್ಚಿಮವಾಹಿನಿ ಬಳಿ ಮಾರ್ಗ ಸೂಚಿ ಫಲಕಗಳು ಹಾಗೂ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿತ್ತು.
ಕೋಟೆ ಬಾಗಿಲ ವೃತ್ತದಲ್ಲಿ ಕಳೆದ 5 ವರ್ಷಗಳ ಹಿಂದ ತುಕ್ಕು ಹಿಡಿದ್ದಿದ್ದ ಕಂಬಗಳು ಗಾಳಿ, ಮಳೆಗೆ ನೆಲಕ್ಕುರುಳಿವೆ. ಉಳಿದಿರುವ ಕಮಾನು ಗೇಟುಗಳು ಅಧಿಕಾರಿಗಳ ನಿರ್ವಹಣೆ ಕೊರತೆಯಿಂದ ಶಿಥಿಲ ಗೊಂಡು ಯಾವುದೇ ಸಂದರ್ಭದಲ್ಲಾದರೂ ಬೀಳುವ ಹಂತ ತಲುಪಿವೆ.
ಅಧಿಕಾರಿಗಳ ನಿರ್ಲಕ್ಷ್ಯ: ರಸ್ತೆಯ ಎರಡೂ ಬದಿಯಲ್ಲಿ ಕಬ್ಬಿಣದ ಕಮಾನುಗಳನ್ನು ನೆಟ್ಟು ನಿರ್ಮಿಸಲಾಗಿತ್ತು. ಈಗ ಈ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ಯಾವ ಸಂದರ್ಭದಲ್ಲಾದರೂ ಮುರಿದು ಬೀಳುವ ಅಪಾಯದ ಅಂಚಿನಲ್ಲಿವೆ. ಆದರೂ, ಪ್ರವಾಸೋದ್ಯಮ ಹಾಗೂ ಪುರಸಭೆ ಗಮನಹರಿಸುತ್ತಿಲ್ಲ.
ಈಗಾಗಲೇ ಪುರಸಭೆಯ ಅಧಿಕಾರಿಗಳಿಗೆ ಹಲವಾರು ಬಾರಿ ಪ್ರಗತಿಪರ ಸಂಘಟನೆಗಳ ಮುಖಂಡರು ದೂರು ನೀಡಿದ್ದರು ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸಿ ನಿರ್ಲಕ್ಷಿಸುತ್ತಿದ್ದಾರೆ.
ಬೀಳುವ ಹಂತದಲ್ಲಿ: ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿನ ಬೇಸಿಗೆ ಅರಮನೆ, ಗುಂಬಸ್, ಶ್ರೀನಿಮಿಷಾಂಬ ದೇವಾಲಯ, ಗೋಸಾಯಿ ಘಾಟ್ ಹಾಗೂ ಸಂಗಮಕ್ಕೆ ಹೋಗಬೇಕಿದ್ದು, ಇದೀಗ ಕಮಾನು ಗೇಟಿರುವ ಬಳಿಯಲ್ಲಿ ಆಟೋ ನಿಲ್ದಾಣಗಳಿವೆ.
ಆಟೋ ಚಾಲಕರು ಪ್ರಯಾಣಿಕರು ಆ ಸ್ಥಳದಲ್ಲೇ ಯಾವಾಗಲು ಇರುವುದರಿಂದ ಜನನಿಬಿಡದ ಪ್ರದೇಶವಾಗಿದೆ. ಅಕಸ್ಮಾತ್ ತುಕ್ಕು ಹಿಡಿದಿರುವ ಕಂಬಗಳು ಗಾಳಿ ಮಳೆಗೆ ಯಾವಾಗ ಬೇಕಾದರೂ ಬೀಳಬಹುದು. ಈಗಲಾದರೂ ಪುರಸಭೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.