ತೇಜಸ್ 2 ವಿನ್ಯಾಸ 2022ಕ್ಕೆ ಸಿದ್ಧ
2025ರಿಂದ ಎಚ್ಎಎಲ್ನಲ್ಲಿ ಉತ್ಪಾದನೆ ಶುರು
Team Udayavani, Aug 24, 2019, 5:26 AM IST
ನವದೆಹಲಿ: ದೇಶದ ರಕ್ಷಣಾ ವಲಯ ಬಹುಕಾಲದಿಂದ ನಿರೀಕ್ಷೆ ಮಾಡುತ್ತಿರುವ ತೇಜಸ್ ಎಂಕೆ 2 ಲಘು ಯುದ್ಧ ವಿಮಾನದ ವಿನ್ಯಾಸ 2022ಕ್ಕೆ ಸಿದ್ಧವಾಗಲಿದೆ.
ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅದರ ವಿನ್ಯಾಸ ಸಿದ್ಧಪಡಿಸಲಿವೆ. 2025-2026ನೇ ಸಾಲಿನಿಂದ ಬೆಂಗಳೂರಿನ ಎಚ್ಎಎಲ್ನಲ್ಲಿ ಉತ್ಪಾದನೆ ಶುರುವಾಗಲಿದೆ. ಪ್ರಸ್ತಾವಿತ ಲಘು ಯುದ್ಧ ವಿಮಾನ 17.5 ಟನ್ ತೂಕ ಇರಲಿದೆ. ಅದರಲ್ಲಿ ಎಇಎಸ್‌ಎ ರಾಡಾರ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
2009ರಲ್ಲಿ ಎಕೆ 2 ಮಾದರಿ ಯುದ್ಧ ವಿಮಾನ ಹೊಂದುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಹೊಸ ಯುದ್ಧ ವಿಮಾನದಲ್ಲಿ ಜಿಇ 414 ಮಾದರಿ ಎಂಜಿನ್ ಇರಲಿದೆ. ಅದು ಮಿರಾಜ್, ಜಾಗ್ವಾರ್ ಮತ್ತು ಗ್ರಿಪನ್ ಯುದ್ಧ ವಿಮಾನಗಳ ಎಂಜಿನ್‌ಗಿಂತ ಹೆಚ್ಚು ಭಾರ ಇರಲಿದೆ. ಅದು ಮಿಗ್ 21 ಯುದ್ಧ ವಿಮಾನಗಳ ಸ್ಥಾನದಲ್ಲಿ ಬರಲಿದೆ. ಇದರ ಜತೆಗೆ ಏರಾನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಅತ್ಯಾಧುನಿಕ ಮಧ್ಯಮ ಕ್ರಮಾಂಕದ ಯುದ್ಧ ವಿಮಾನ (ಎಎಂಸಿಎ) ಉತ್ಪಾದನೆ ಮಾಡುವ ನಿಟ್ಟಿನಲ್ಲಿಯೂ ಕ್ಷಿಪ್ರಗತಿಯ ಹೆಜ್ಜೆ ಇಡಲು ನಿರ್ಧರಿಸಿದೆ. ಅದರಲ್ಲಿ ಎರಡು ಎಂಜಿನ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.