ಇಶಾಂತ್ ಬೊಂಬಾಟ್ ಬೌಲಿಂಗ್ ಗೆ ವಿಂಡೀಸ್ ಉಡೀಸ್
Team Udayavani, Aug 24, 2019, 7:59 AM IST
ಆಂಟಿಗುವಾ: ಮೊದಲಾರ್ಧದಲ್ಲಿ ಜಡೇಜಾ – ಇಶಾಂತ್ ತಾಳ್ಮೆಯ ಬ್ಯಾಟಿಂಗ್, ದ್ವಿತೀಯಾರ್ಧದಲ್ಲಿ ಇಶಾಂತ್ ಶರ್ಮಾ ಮಾರಕ ಬೌಲಿಂಗ್ ನಿಂದಾಗಿ ಪ್ರಥಮ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ, ವಿಂಡೀಸ್ ವಿರುದ್ಧ ಮೇಲುಗೈ ಸಾಧಿಸಿದೆ.
ಮೊದಲ ದಿನದಾಟದಲ್ಲಿ ಆರು ವಿಕೆಟ್ ಗೆ 206 ರನ್ ಗಳಿಸಿದ್ದ ಭಾರತ ನಿನ್ನೆ ಎರಡನೇ ದಿನದಲ್ಲಿ ಮೊದಲ ವಿಕೆಟ್ ನ್ನು ಬೇಗನೇ ಕಳೆದುಕೊಂಡಿತ್ತು. ಮೊತ್ತಕ್ಕೆ ಕೇವಲ ಒಂದು ರನ್ ಸೇರಿದಾಗ ರಿಷಭ್ ಪಂತ್ ಔಟಾದರು. ನಂತರ ಜಡೇಜಾ ಜೊತೆ ಸೇರಿದ ಇಶಾಂತ್ ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರು ಉಪಯುಕ್ತ 60 ರನ್ ಸೇರಿಸಿದರು. 62 ಬಾಲ್ ಎದುರಿಸಿ 19 ರನ್ ಗಳಿಸಿದ ಇಶಾಂತ್, ಜಡೇಜಾಗೆ ಉತ್ತಮ ಸಾಥ್ ನೀಡಿದರು. ಜಡೇಜಾ 58 ರನ್ ಗಳಿಸಿ ಔಟಾಗುವುದರೊಂದಿಗೆ ಭಾರತ 297 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ಗೂ ಉತ್ತಮವೆನಿಸುವ ಆರಂಭ ಸಿಗಲಿಲ್ಲ. 36 ರನ್ ಗೆ ಮೊದಲ ವಿಕೆಟ್ ಕಳೆದುಕೊಂಡ ವಿಂಡಿಸ್ ನಂತರ ಇಶಾಂತ್ ಶರ್ಮಾ ದಾಳಿಗೆ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ರೋಸ್ಟನ್ ಚೇಸ್ 48 ರನ್ ಗಳಸಿದ್ದೇ ವಿಂಡೀಸ್ ಇನ್ನಿಂಗ್ಸ್ ನ ಅತ್ಯುತ್ತಮ ಸ್ಕೋರ್. ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ಎಂಟು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಗೆ ವಿಂಡೀಸ್ ಇನ್ನೂ 108 ರನ್ ಗಳಿಸಬೇಕಿದೆ.
ಬಿಗು ದಾಳಿ ಸಂಘಟಿಸಿದ ಇಶಾಂತ್ ಐದು ವಿಕೆಟ್ ಕಿತ್ತರೆ, ಬುಮ್ರಾ, ಶಮಿ, ಜಡೇಜಾ ತಲಾ ಒಂದು ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.