ಅಕ್ಷರ ಮನೆಯ ಮೊಗಸಾಲೆ


Team Udayavani, Aug 25, 2019, 5:47 AM IST

3

ಉಡುಪಿ ಜಿಲ್ಲೆಯ ಕಾಂತಾವರವನ್ನು ಕನ್ನಡ ಗ್ರಾಮವಾಗಿ ಬೆಳೆಸಿದ ನಾ. ಮೊಗಸಾಲೆಯವರಿಗೆ ಈಗ ಎಪ್ಪತ್ತೈದರ ಸಂಭ್ರಮ !

ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು ಅನುಗೊಂಬನಿತು ಕಾಯಕಂ ನಡೆಯುತ್ತಿರಬೇಕು ಎಂಬೊಂದು ಮಾತುಂಟು. ಏನದರ ಅರ್ಥವೆಂದು ತಿಳಿಯಬೇಕಿದ್ದರೆ ನೀವು ಕಾಂತಾವರವನ್ನು ನೋಡಬೇಕು; ಡಾ. ನಾ. ಮೊಗಸಾಲೆ ಎಂಬ ಕವಿಯ ಸಾಹಸವನ್ನು ಕೇಳಬೇಕು. ಸಾಹಿತ್ಯವೆನ್ನುವುದು ಹಲವು ಅರ್ಥಗಳಲ್ಲಿ ಸ್ವಾಂತಸುಖಾಯ ಆಗುತ್ತಿರುವ ಹೊತ್ತೂಂದರಲ್ಲಿ, ಸಾಹಿತ್ಯ ಮತ್ತು ವೃತ್ತಿಜೀವನ ನಗರಾಭಿಮುಖ ಆಗುತ್ತಿರುವ ಹೊತ್ತೂಂದರಲ್ಲಿ, ವೈದ್ಯನೊಬ್ಬ ಹಳ್ಳಿಗೆ ಬಂದು ಕುಳಿತು, ಅಲ್ಲೊಂದು ಪರ್ಯಾಯ ಸಾಂಸ್ಕೃತಿಕ ರಾಜಧಾನಿಯನ್ನು ಕಟ್ಟಿದ ಕತೆ ನೀವು ಮನಗಾಣಬೇಕು.

1965ರ ರಾಜ್ಯೋತ್ಸವದ ಸಂದರ್ಭದಲ್ಲಿ ಕಾಸರಗೋಡು ಮಂಜೇಶ್ವರ ಫಿರ್ಕಾದ ಕೋಳ್ಯೂರು ಗ್ರಾಮದ ಮೊಗಸಾಲೆಯ ನಾರಾಯಣ ಭಟ್ಟರು ಕಾರ್ಕಳ ತಾಲೂಕಿನ ಕಾಂತಾರದ ನಡುವೆ ಅಡಗಿದ್ದ ಕಾಂತಾವರಕ್ಕೆ ವೈದ್ಯಾಧಿಕಾರಿಯಾಗಿ ಬಂದಿದ್ದರು. ಮುಂದಿನ ಐವತ್ತನಾಲ್ಕು ವರ್ಷಗಳ ಕಾಲ ಅವರು ತಮ್ಮೆಲ್ಲವನ್ನೂ- ತಮ್ಮ ಜೀವನೋತ್ಸಾಹವನ್ನು, ಅನುಭವವನ್ನು, ಕನಸುಗಳನ್ನು ಕಾಂತಾವರಕ್ಕೆಂದೇ ಮುಡಿಪಿಟ್ಟರು. ಐವತ್ತು ವರ್ಷಗಳ ಹಿಂದೆ ಕಾಂತಾವರವೆಂದರೆ ಕರ್ನಾಟಕದ ಮ್ಯಾಪ್‌ನಲ್ಲಿ ಕಾಣಿಸದ, ಕಾರ್ಕಳ -ಉಡುಪಿ-ಮೂಡುಬಿದಿರೆಗಳ ಜನ ಕೂಡ ಏನು ಎತ್ತ ಎಲ್ಲಿ ಎಂದು ಕೇಳುತ್ತಿದ್ದ , ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದ ಹಳ್ಳಿ. ಇವತ್ತು ಡಾ. ನಾ ಮೊಗಸಾಲೆ, ಕಾಂತಾವರ ಕನ್ನಡ ಸಂಘ ಮತ್ತು ಅಲ್ಲಮಪ್ರಭು ಪೀಠಗಳಿಂದಾಗಿ ಕಾಂತಾವರದ ಹೆಸರು ನಾಡಿನಾದ್ಯಂತ ಅನುರಣಿಸುತ್ತಿದೆಯೆಂದರೆ ಉತ್ಪ್ರೇಕ್ಷೆಯಲ್ಲ. ಕಾಂತಾವರದಲ್ಲಿ ಕವಿಯೊಬ್ಬ ಮಾಗಿ ಅಪ್ರತಿಹತ ಸಾಹಿತ್ಯ ಪರಿಕರ್ಮಿ ಯಾದರು. ಅಲ್ಲೊಂದು ಕನ್ನಡದ ಪರ್ಯಾಯ ಸಾಂಸ್ಕೃತಿಕ ರಾಜಧಾನಿಯನ್ನು ಕಟ್ಟಿದರು. ಒಬ್ಬ ಕಾರಂತರು ಪುತ್ತೂರಿನಲ್ಲಿ, ಒಬ್ಬ ಸುಬ್ಬಣ್ಣ ಹೆಗ್ಗೊಡಿನಲ್ಲಿ ಹಂಬಲಿಸಿದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪುನರ್ನಿರ್ಮಾಣದ ಮುಂದುವರಿದ ಆವೃತ್ತಿಯಂತೆ ಒಬ್ಬ ಮೊಗಸಾಲೆ ಕಾಂತಾವರದಲ್ಲಿ ಪಲ್ಲವಿಸಿದರು.

ಕಾಂತಾವರ ಎಂಬುದೊಂದು ರೂಪಕ
ಇವತ್ತು ಕಾಂತಾವರವೆಂದರೆ ಒಂದು ಪುಟ್ಟಹಳ್ಳಿಯಲ್ಲ. ಕಾಂತಾವರ ಒಂದು ರೂಪಕ. ನಾವಿಲ್ಲಿ ನೆನಪಿರಿಸಿಕೊಳ್ಳಬೇಕಾದ ಸಂಗತಿಯೆಂದರೆ ಮೊಗಸಾಲೆಯವರಿಗೆ ಕೀರ್ತಿಶಿಖರವನ್ನೇರಲು ಸಾಹಿತ್ಯಪರಿಚಾರಿಕೆ ಮತ್ತು ಪರಿಕರ್ಮಗಳು ಅನಿವಾರ್ಯ ಮಾರ್ಗವೇನೂ ಅಗಿರಲಿಲ್ಲ. ಸಾಹಿತ್ಯಕ್ಷೇತ್ರದಲ್ಲಿ ಎಂತಹ ಸಾಧಕರೂ ಅಸೂಯೆ ಪಡಬಹುದಾದಷ್ಟು ಎತ್ತರವನ್ನು ಅವರು ಸೃಜನಶೀಲಸಾಹಿತ್ಯದ ಮೂಲಕವೇ ಏರಿದ್ದಾರೆ. ಅವರು ರಚಿಸಿದ ಕಾದಂಬರಿಗಳು (18), ಕಥಾಸಂಕಲನಗಳು (7), ಕವನಸಂಕಲನಗಳು (13), ಲೇಖನಸಂಕಲನಗಳು (7), ಸಂಪಾದಿತ ಕೃತಿಗಳು (13), ವೈದ್ಯಕೀಯ ಕೃತಿಗಳು (7), ಮತ್ತು ಗೀತನಾಟಕಗಳು (1) ಸೃಜನಶೀಲಸಾಹಿತ್ಯದ ಅತ್ಯುನ್ನತ ಫ‌ಲಶ್ರುತಿಗಳಂತಿವೆ. ಬಯಲು ಬೆಟ್ಟ ಅವರ ಆತ್ಮಚರಿತ್ರೆ. ಮೊಗಸಾಲೆಯವರ ಸಾಹಿತ್ಯಕೃತಿಗಳಿಗೆ ಸಂದ ರಾಜ್ಯಮಟ್ಟದ ಪುರಸ್ಕಾರಗಳು ಇವರ ಸಾಹಿತ್ಯಿಕ ಸಾಧನೆಯ ಮೈಲಿಗಲ್ಲು ಗಳಂತಿವೆ. ಅವರ ಮೂರು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಪ್ರಾಪ್ತವಾಗಿವೆ. ನನ್ನದಲ್ಲದ್ದು (ಕಾದಂಬರಿ- 1977), ಇದಲ್ಲ ಇದಲ್ಲ (ಕವನಸಂಕಲನ- 2003) ಮತ್ತು ಉಲ್ಲಂಘನೆ (ಕಾದಂಬರಿ – 2008). ಕನ್ನಡದಲ್ಲಿ ಕಾವ್ಯ ಮತ್ತು ಕಾದಂಬರಿ ಎರಡೂ ಮಾಧ್ಯಮಗಳಲ್ಲಿ ಅಕಾಡೆಮಿ ಪ್ರಶಸ್ತಿ ಪಡೆದ ಅಪರೂಪದ ಲೇಖಕರಿವರು. ಅವರ ಕಥೆ, ಕವನ, ಕಾದಂಬರಿಗಳು ತೆಲುಗು, ಮಲಯಾಳ, ಮರಾಠಿ, ಹಿಂದಿ, ಇಂಗ್ಲಿಷ್‌ ಭಾಷೆಗಳಿಗೆ ಅನುವಾದಿತ ವಾಗಿವೆ, ಮಾತ್ರವಲ್ಲ, ಯೂನಿವರ್ಸಿಟಿ ಗಳಲ್ಲಿ ಪಠ್ಯವಾಗಿವೆ. ಇವರ ಸಮಗ್ರ ಸಾಹಿತ್ಯವನ್ನು ವಿಶ್ಲೇಷಿಸಿ ಎಂಫಿಲ್‌ ಮತ್ತು ಪಿಎಚ್‌ಡಿ ಪಡೆದವರಿದ್ದಾರೆ. ಸಾಹಿತಿಯೊಬ್ಬ ಬರಹದ ಮೂಲಕ ಹಂಬಲಿಸುವ ಎಲ್ಲ ಸಾಧನೆಗಳನ್ನು ಅವರು ಮಾಡಿದ್ದಾರೆ, ಮಾಡುತ್ತಿದ್ದಾರೆ.

ಅವರ ಉಲ್ಲಂಘನೆ ಕನ್ನಡದ ಮಹತ್ವಪೂರ್ಣ ಬೃಹತ್‌ ಕಾದಂಬರಿ ಗಳಲ್ಲಿ ಒಂದು. ಮರಳಿಮಣ್ಣಿಗೆ, ಕಾನೂರು ಸುಬ್ಬಮ್ಮ ಹೆಗ್ಗಡತಿ, ಔದಾರ್ಯದ ಉರುಳಲ್ಲಿ, ಸಮರಸವೇ ಜೀವನ, ಸ್ವಾತಂತ್ರ್ಯದ ಓಟ ಕಾದಂಬರಿಗಳಷ್ಟೇ, ಗಾತ್ರದಿಂದ ಮಾತ್ರವಲ್ಲ, ಅಂತಃಸತ್ವದಿಂದಲೂ ಗಮನಾರ್ಹ ಎನ್ನಿಸುವಂತಹ ಕಾದಂಬರಿ. ಮನುಷ್ಯ ನಿರಂತರವಾಗಿ ನಡೆಸುತ್ತ ಬಂದ ಹೋರಾಟ- ನಿಸರ್ಗ ದೊಂದಿಗೆ, ನಂಬಿಕೆಗಳೊಂದಿಗೆ, ವ್ಯವಸ್ಥೆಯೊಂದಿಗೆ ಮತ್ತು ಮನುಷ್ಯ ರೊಂದಿಗೆ -ಮತ್ತು ಆಧುನಿಕಮೌಲ್ಯಗಳ ಪ್ರವೇಶದನಂತರದ ಈ ಹೋರಾಟವನ್ನು ಆತಂಕದಿಂದ, ಬೆರಗಿನಿಂದ, ವಿಷಾದದಿಂದ ಚಿತ್ರಿಸುತ್ತ “ಒಪ್ಪಿಕೊಳ್ಳುವಲ್ಲಿನ ಕಾವ್ಯಶ ವಿಸ್ಮಯ’ ಈ ಕಾದಂಬರಿಯ ವಸ್ತು. ಇಂಥ ವಸ್ತುವನ್ನು ಸ್ವೀಕರಿಸಿದ ಹಲವು ಪ್ರಮುಖ ಕತೆಗಾರರು ಈ ಹೋರಾಟದ ವಸಾಹತುಶಾಹೀ, ರಾಜಕೀಯ ಮತ್ತು ಆರ್ಥಿಕ ಮಗ್ಗುಲನ್ನು ಮಾತ್ರ ದಾಖಲಿಸಿದ್ದರು. ಮೊಗಸಾಲೆ, ಹೊಸ ಉದ್ಯೋಗಾವಕಾಶ, ಆಧುನಿಕ ವಿಚಾರ ಮತ್ತು ಸ್ಥಳೀಯಸಾಧ್ಯತೆಗಳು ಈ ಹೋರಾಟವನ್ನು ಅನಿವಾರ್ಯ ವಾಗಿಸುವ ಸಂಭಾವ್ಯತೆಗಳನ್ನು ಗಮನಿಸಿದ್ದಾರೆ; ಹಳ್ಳಿಗಳಿಂದ ಪಟ್ಟಣಕ್ಕೆ ಅನಿವಾರ್ಯ ವಾಗುವ ವಲಸೆ, ಅವಿಭಾಜ್ಯಕುಟುಂಬಗಳ ವಿಘಟನೆ, ಮತ್ತು ಆಚರಣೆಗಳ ವೈಭವೀಕರಣ ಈ ಪ್ರಕ್ರಿಯೆಗಳನ್ನೂ ಮೊಗಸಾಲೆ ಚಿತ್ರಿಸಿದ್ದಾರೆ.

ಮೊಗಸಾಲೆಯವರು ಕವಿತೆಗೆ ಗದ್ಯಲಯವನ್ನು ದಕ್ಕಿಸಿಕೊಂಡ ಕನ್ನಡದ ಪ್ರಮುಖ ಕವಿ. ಅವರ ಕಾವ್ಯದ ಆಕೃತಿಯು ಜೆನ್‌ ಬರವಣಿಗೆ, ಜಪಾನಿನ ಹಾಯಿಕು ಮಾದರಿ, ಕನ್ನಡದ ಬೆಡಗಿನ ವಚನಗಳ ಪರಂಪರೆಯ ಮುಂದುವರಿಕೆಯಂತೆ ಕಾಣಿಸುತ್ತದೆ. ಅವರ ಹತ್ತು ಕವನ ಸಂಕಲನಗಳು ಮತ್ತು ಸಮಗ್ರ ಕಾವ್ಯದ ಮೂರು ಸಂಪುಟಗಳು ಪ್ರಕಟವಾಗಿವೆ.

ಮೊಗಸಾಲೆಯವರ ನೆಲದ ನೆರಳು (1999), ಇದಲ್ಲ ಇದಲ್ಲ (2003), ಇಹಪರದ ಕೊಳ (2006), ಕಾಮನೆಯ ಬೆಡಗು (2010) ಮತ್ತು ದೇವರು ಮತ್ತೆ ಮತ್ತೆ (2014) ಕವನ ಸಂಕಲನಗಳು ನವ್ಯೋತ್ತರ ಕನ್ನಡ ಕಾವ್ಯ ಕಂಡುಕೊಂಡ ಪಾರಮಾರ್ಥಿಕ ಸ್ಪರ್ಶದ ಅತ್ಯುತ್ತಮ ಕವಿತೆಗಳನ್ನು ಒಳಗೊಂಡಿವೆ. 2003ರಲ್ಲಿ ಪ್ರಕಟವಾದ ಇದಲ್ಲ ಇದಲ್ಲ ಮೊಗಸಾಲೆಯವರ ಕಾವ್ಯಪರ್ಯಟನೆಯ ಒಂದು ಮಹತ್ವದ ಮೈಲಿಗಲ್ಲು. ಶಂಕರಾಚಾರ್ಯರ “ನೇತಿ ನೇತಿ’ ವಾದವನ್ನು ನೆನಪಿಗೆ ತರುವ ಹೆಸರಿನ ಈ ಸಂಕಲನದಲ್ಲಿ ಇದೇ ಹೆಸರಿನ ಒಂದು ಕವಿತೆಯೂ ಇದೆ. ಆದರೆ ಈ ಕವಿತೆಯಲ್ಲಿ ಇದಲ್ಲ ಇದಲ್ಲ ತಿಳಿವು ಎಂದು ಎದ್ದದ್ದು ಬುದ್ಧ.

ಇಂತಹದೇ ಚಮತ್ಕಾರವನ್ನು ಮೊಗಸಾಲೆಯವರ ಸಣ್ಣಕಥೆಗಳಲ್ಲಿ ಮರುಹುಟ್ಟು ಪಡೆದ ಗಾಂಧಿವಾದದಲ್ಲಿ ಕಾಣಬಹುದು. ಉಲ್ಲಂಘನೆ ಕಾದಂಬರಿಯಲ್ಲಿ ಬರುವ ಗಾಂಧೀವಾದವು ಅಕ್ಷರಶಃ ಗಾಂಧೀವಾದವಾದರೆ, ಅವರ ಸಣ್ಣ ಕಥೆಗಳಲ್ಲಿ ಸೀತಾಪುರಕ್ಕೆ ಬರುವ ಗಾಂಧಿ ಎಲ್ಲೋ ಲೋಹಿಯಾ ಆಗಿಬಿಡುತ್ತಾರೆ; ಅಲ್ಲಮನೂ ಆಗಿಬಿಡುತ್ತಾರೆ. ಅದು ಅವರ ಓದಿನ ವ್ಯಾಪ್ತಿಯ ಸಂಕೇತವಾಗುತ್ತದೆ.
ಇವತ್ತು ಮೊಗಸಾಲೆಯವರೆಂದರೆ ಐವತ್ತನಾಲ್ಕು ವರ್ಷಗಳ ಕಾಲ ನಿರಂತರವಾಗಿ ಕಟ್ಟಿಕೊಡುತ್ತಾ ಬಂದ ಅಮೂಲ್ಯವಾದ ಸಾಹಿತ್ಯಕೃತಿಗಳಷ್ಟೇ ಆಗಿ ಉಳಿದಿಲ್ಲ.

ಮೊಗಸಾಲೆಯವರೆಂದರೆ 1976ರಲ್ಲಿ ಹುಟ್ಟಿಕೊಂಡ ಕಾಂತಾವರ ಕನ್ನಡ ಸಂಘ; 1978ರಲ್ಲಿ ಹುಟ್ಟುಹಾಕಿದ ವರ್ಧಮಾನ ಪೀಠ; 2003ರಲ್ಲಿ ಕಟ್ಟಿದ ಕಾಂತಾವರ ಕನ್ನಡ ಭವನ; 2010ರಲ್ಲಿ ಕಟ್ಟಿದ ಅಲ್ಲಮಪ್ರಭು ಪೀಠ; ಯಾವ ಯೂನಿವರ್ಸಿಟಿಯೂ ಮಾಡಲಿಕ್ಕೆ ಅಂಜುವ ಎರಡು ಆ್ಯಂಥಾಲಜಿಗಳು- ದಕ್ಷಿಣಕನ್ನಡ ಕಾವ್ಯ 1901-1976 ಮತ್ತು ದಕ್ಷಿಣಕನ್ನಡ ಶತಮಾನದ ಕಾವ್ಯ 1900-2000.; ಕರ್ನಾಟಕ ರಾಜ್ಯದ ಸುವರ್ಣ ಸಂಭ್ರಮದ ಶಾಶ್ವತ ನೆನಪಿಗಾಗಿ ಆರಂಭಿಸಿದ ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಪ್ರಕಟಿಸುತ್ತಿರುವ ಕಿರುಹೊತ್ತಿಗೆಗಳು; ನುಡಿನಮನ, ಅನುಭವದ ನಡೆ – ಅನುಭಾವದ ನುಡಿ ಉಪನ್ಯಾಸಗಳು ಮತ್ತು ಸಂಪುಟೀಕರಣಗೊಂಡ ನುಡಿಹಾರ, ಕರಣಕಾರಣ.

ಇವತ್ತು ಮೊಗಸಾಲೆಯವರೆಂದರೆ, ಕನ್ನಡ ಇನ್ನು ಮುಂದೆ ಉಳಿಯಬೇಕಿರುವುದು ನಮ್ಮ-ನಿಮ್ಮಂತಹ ಹಳ್ಳಿಗರ ನಡುವೆ ಎಂಬ ಪರಿಕಲ್ಪನೆಗೊಂದು ದ್ಯೋತಕ.

ಬೆಳಗೋಡು ರಮೇಶ ಭಟ್‌

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.