ಕಲ್ಲಾದ ಮನಸ್ಸುಗಳು ಮೃದುತ್ವ ಪಡೆದುಕೊಳ್ಳಲಿ: ಸಾಣೇಹಳ್ಳಿ ಶ್ರೀ

ಮಾತಿಗೆ ತಕ್ಕ ಕೃತಿ ಇದ್ದಾಗ ವ್ಯಕ್ತಿತ್ವಕ್ಕೆ ಮೆರುಗು

Team Udayavani, Aug 25, 2019, 12:10 PM IST

25-Agust-17

ಶಿವಮೊಗ್ಗ: ಸಾಮರಸ್ಯ ನಡಿಗೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು.

ಶಿವಮೊಗ್ಗ: ಜಾತಿ, ಮತ, ಪಂಥ, ಪಕ್ಷಗಳ ಹೆಸರಿನಲ್ಲಿ ಕಲ್ಲಾಗಿರುವ ಮನಸ್ಸುಗಳು ಇಂದು ಮೃದುತ್ವ ಪಡೆದುಕೊಳ್ಳಬೇಕಿದೆ. ‘ನೂರನೋದಿ ನೂರ ಕೇಳಿದಡೇನು? ಆಸೆ ಅರಿಯದು; ರೋಷ ಬಿಡದು’ ಎನ್ನುವಂತಾದರೆ ಮತ್ತೆ ಕಲ್ಯಾಣವೂ ವ್ಯರ್ಥ ಎಂದು ಸಾಣೇಹಳ್ಳಿ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ‘ಮತ್ತೆ ಕಲ್ಯಾಣ’ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಆಡುವ, ಕೇಳುವ ಮೂಲಕ ಆಸೆ, ರೋಷಗಳನ್ನು ಕಳೆದುಕೊಳ್ಳುವ ಕೆಲಸವಾಗಬೇಕು. ಮೃದುತ್ವ ಪ್ರತಿಯೊಬ್ಬರೂ ತಮ್ಮಿಂದ ತಾವೇ ಮಾಡಿಕೊಳ್ಳಬೇಕಾದ ಕಾರ್ಯವೇ ಹೊರತು, ಇನ್ನೊಬ್ಬರಿಂದ ಆಗದ ಕೆಲಸ. ಹೊರಗಿನಿಂದ ಪ್ರೇರಣೆ ನೀಡಬಹುದಷೇr. ‘ಇವನಾರವ, ಇವನಾರವ ಎನ್ನದೆ ಬಾ ಬಂಧು’ ಎನ್ನುವ ಹೃದಯವಂತಿಕೆ ಬರಬೇಕು. ಇಂದು ವೇದಿಕೆಯ ಮಾತುಗಳಿಗಿಂತ ವ್ಯಾವಹಾರಿಕ ಬದುಕು ಮುಖ್ಯವಾಗುತ್ತಿದೆ. ವ್ಯಾವಹಾರಿಕ ಬದುಕು ಮುಖ್ಯ ನಿಜ. ಆದರೆ ವೇದಿಕೆಯ ಮಾತುಗಳೂ ವ್ಯಾವಹಾರಿಕ ಬದುಕಿಗೆ ಅಗತ್ಯವಾಗಿ ಬೇಕು ಎನ್ನುವುದನ್ನು ನಾವು ಮನಗಾಣಬೇಕು. ‘ಮನವರಿಯದ ಕಳ್ಳತನವಿಲ್ಲ’ ಎನ್ನುವಂತೆ ನಾವು ಆಡುವ ಮಾತುಗಳು ಮನದೊಡೆಯ ಮಹದೇವ ಮೆಚ್ಚುವಂತಿರಬೇಕು. ಇಂದು ಮಾತುಗಳಿಗೆ ಕೊರತೆಯಿಲ್ಲ. ಅನುಷ್ಠಾನಕ್ಕೆ ತರುವಲ್ಲಿ ಕೊರತೆಯಿದೆ. ನಮ್ಮ ಮಾತು ಮಂತ್ರ, ಜ್ಯೋತಿಲಿಂರ್ಗ, ಮಾಣಿಕ್ಯವಾಗಬೇಕು. ಮಾತಿಗೆ ತಕ್ಕ ಕೃತಿ ಇದ್ದಾಗ ಆ ವ್ಯಕ್ತಿಗೆ ಮೌಲ್ಯ ಬರುವುದು. ಇಲ್ಲದೇ ಹೋದರೆ ಮಾತು ಗಾಳಿಯ ಗೋಪುರವಾಗುವುದು. ಶರಣರದ್ದು ಮೊದಲು ನಡೆ ನಂತರ ನುಡಿ. ಆಚಾರ-ವಿಚಾರಗಳ ಸಂಗಮವೇ ಶರಣತ್ವ. ಶರಣತ್ವದೆಡೆಗೆ ಕರೆದೊಯ್ಯುವ ಶಕ್ತಿ ವಚನ ಸಾಹಿತ್ಯಕ್ಕಿದೆ. ವಚನಗಳ ಅಧ್ಯಯನ, ಮನನ, ಅನುಷ್ಠಾನ ನಿರಂತರವಾಗಿ ನಡೆಯಬೇಕು. ವಚನಗಳು ನಮಗೆ ನಾವೇ ಹೇಳಿಕೊಳ್ಳುವಂಥವೇ ಹೊರತು ಇನ್ನೊಬ್ಬರಿಗೆ ಉಪದೇಶ ಮಾಡುವಂಥವಲ್ಲ. ಮನಃಶುದ್ಧತೆಯೇ ಆತ್ಮ ಕಲ್ಯಾಣವೂ ಹೌದು; ಲೋಕ ಕಲ್ಯಾಣವೂ ಹೌದು ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಮತ್ತೆ ಕಲ್ಯಾಣ ಕಾರ್ಯಕ್ರಮ ತುಂಬ ರಚನಾತ್ಮಕವಾದುದು. ‘ಮತ್ತೆ’ ಅನ್ನುವುದು ಅರ್ಥಪೂರ್ಣವಾದ ಶಬ್ದ. ಅಂದು 12ನೇ ಶತಮಾನದಲ್ಲಿ ಆಡಿದ ಶರಣರ ಮಾತುಗಳು ನಿಂತಿವೆ. ಆ ಮಾತುಗಳು ಮುಂದುವರಿಯಲು ನಿಮ್ಮಿಂದ ‘ಮತ್ತೆ’ ಎನ್ನುವ ಪ್ರಶ್ನೆ ಬಂದಿದೆ. ಅದಕ್ಕೆ ಉತ್ತರವೇ ಕಲ್ಯಾಣ. ‘ಮತ್ತೆ’ಗಳಿಗೆ ಕೊನೆಯಿಲ್ಲ. ಎಷ್ಟು ಮತ್ತೆಗಳನ್ನು ಆದರೂ ಮತ್ತೆ, ಮತ್ತೆ ಕಲ್ಯಾಣ ಆಗಲೇಬೇಕು. ಅಂಥ ಕಲ್ಯಾಣ ಇಲ್ಲಿಯೂ ಸೃಷ್ಟಿಯಾಗಿದೆ. ಕಲ್ಯಾಣ ಕ್ರಾಂತಿಯ ಆರಂಭವಾದುದು ಅಕ್ಕನಾಗಮ್ಮನಿಂದ. ಮುಕ್ತಾಯವಾದುದೂ ಅಕ್ಕನಾಗಮ್ಮನಿಂದಲೇ. ಬಸವಣ್ಣನಲ್ಲಿ ಪ್ರಶ್ನೆಗಳು ಹುಟ್ಟಿದ್ದೇ ಅಕ್ಕನಾಗಮ್ಮನಿಂದ. ‘ನಾನಾ ಸಾಹೇಬನ ಎಂಟು’ ಎನ್ನುವಂತೆ ಹುಚ್ಚು ದೊರೆಯ ಕೈಗೆ ಸಿಕ್ಕ ಕಲ್ಯಾಣ ನುಚ್ಚುನೂರಾಯಿತು. ನುಚ್ಚುನೂರಾಗಿದ್ದ ಶರಣರನ್ನೆಲ್ಲ ಸಂಘಟಿಸಿದ್ದು ಅಕ್ಕನಾಗಮ್ಮ. ನಮ್ಮ ಜಿಲ್ಲೆಯಿಂದ ಕಲ್ಯಾಣಕ್ಕೆ ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ಶರಣ-ಶರಣೆಯರನ್ನು ನೀಡಿ ಬಡವಾಗಿತ್ತು. ಆ ಬಡತವನ್ನು ಹೋಗಲಾಡಿಸಲು ಎನ್ನುವಂತೆ ವಚನ ಸಾಹಿತ್ಯದ ಸಂಪತ್ತನ್ನು ತಂದು ನಮ್ಮ ಜಿಲ್ಲೆಗೆ ಸಿರಿತನ ತಂದುಕೊಟ್ಟವಳು ಅಕ್ಕನಾಗಮ್ಮ. ದೇವರಿಗೆ ಆಶ್ರಯ ದೇಹವೇ ಹೊರತು; ದೇವಾಲಯವಲ್ಲ. ಮತ್ತೆ ಕಲ್ಯಾಣ ಅತ್ಯಂತ ತುರ್ತು. ಇವುಗಳನ್ನು ಉಪೇಕ್ಷಿಸಿದರೆ ನಮ್ಮನ್ನು ನಾವೇ ಕಳೆದುಕೊಂಡಂತೆ ಎಂದರು.

ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಶರಣರ ಹೆಜ್ಜೆ ಗುರುತುಗಳಲ್ಲಿ ಇಂದಿನ ಪೀಳಿಗೆಗೆ ಬೇಕಾದ ಮಾರ್ಗದರ್ಶನದ ಕುರುಹುಗಳಿವೆ. ಆ ಕುರುಹುಗಳ ಮೇಲಿರುವ ಧೂಳನ್ನು ಒರೆಸಿ ಆ ಹೆಜ್ಜೆಯಲ್ಲಿ ನಾವೂ ಹೆಜ್ಜೆ ಹಾಕುವಂತೆ ಮಾಡುವುದೇ ಮತ್ತೆ ಕಲ್ಯಾಣ. ಈ ಅಭಿಯಾನ ಇಡೀ ನಾಡಿನಾದ್ಯಂತ ಸಂಚಲನವನ್ನೇ ಉಂಟು ಮಾಡಿದೆ. ಎಡ ಪಂಥ ಮತ್ತು ಬಲ ಪಂಥಗಳ ನಡುವೆ ಸಂವಾದವನ್ನು ಏರ್ಪಡಿಸುವುದೇ ಮತ್ತೆ ಕಲ್ಯಾಣ ಎಂದರು.

‘ಕಾಯಕ-ದಾಸೋಹ’ ಕುರಿತಂತೆ ಡಾ| ಸಿ. ಸೋಮಶೇಖರ್‌ ಮಾತನಾಡಿ, ಬಸವಾದಿ ಶರಣರು ವಿಶ್ವಕ್ಕೆ ಕೊಟ್ಟ ಸಂದೇಶ ಅನನ್ಯ ಮತ್ತು ಅಪೂರ್ವವಾದುದು. ಮಠಾಧಿಪತಿಗಳೊಬ್ಬರು ಮಾಡುವ ಕೆಲಸ ಏನು ಎನ್ನುವುದನ್ನು ಪಂಡಿತಾರಾಧ್ಯ ಶ್ರೀಗಳು ‘ಮತ್ತೆ ಕಲ್ಯಾಣ’ದ ಮೂಲಕ ತೋರಿಸಿಕೊಟ್ಟಿದ್ದಾರೆ. ಬಸವಾದಿ ಶರಣರ ಚಳುವಳಿಯ ಮೂಲ ಉದ್ದೇಶ ಆತ್ಮ ಕಲ್ಯಾಣ ಮತ್ತು ಲೋಕಕಲ್ಯಾಣ. ಕಾಯಕ-ದಾಸೋಹದ ಸಂದೇಶ ಅನನ್ಯವಾದುದು. ಇಡೀ ವಿಶ್ವಕ್ಕೆ ಸ್ತ್ರೀ ಸಮಾನತೆಯ ರಣಕಹಳೆ ಊದಿದವರು ಬಸವಾದಿ ಶಿವಶರಣರು. ಮೂಢನಂಬಿಕೆ, ಪರಿಸರಪ್ರೇಮ, ಜಾತ್ಯತೀತ ಕಲ್ಪನೆ, ಕಾಯಕ-ದಾಸೋಹ ಸಿದ್ಧಾಂತಗಳು ಶರಣರು ಜಗತ್ತಿಗೆ ನೀಡಿದ ಕೊಡುಗೆ ಎಂದರು.

‘ಕ್ರಾಂತಿಗಂಗೋತ್ರಿ ಅಕ್ಕನಾಗಮ್ಮ’ ಕುರಿತಂತೆ ಡಾ| ವಿಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿ, ಬಸವಣ್ಣನ ಅಕ್ಕ, ಚೆನ್ನಬಸವಣ್ಣನ ತಾಯಿ ಅಕ್ಕನಾಗಮ್ಮನದು ಮೇರು ವ್ಯಕ್ತಿತ್ವ. ಆಕೆ ತ್ರಿವಿಧ ದಾಸೋಹಿ. ಕಲ್ಯಾಣದ ಕ್ರಾಂತಿಯಲ್ಲಿ ವಿರೋಗಳೊಂದಿಗೆ ಕಾದಾಡಿದ ವೀರ ಯೋಧೆ. ಮಗ ಚನ್ನಬಸವಣ್ಣನನ್ನು ಕೊಲೆ ಮಾಡಿದವನನ್ನೂ ಕ್ಷಮಿಸಿದ ಕ್ಷಮಯಾಧರಿತ್ರಿ. ಕೇವಲ ಕುಲೋದ್ಧಾರಕನಾಗಿದ್ದ ಬಸವಣ್ಣನನ್ನು ಲೋಕೋದ್ದಾರಕನ್ನಾಗಿ ಮಾಡಿದ ಮಹಾತಾಯಿ. ವಚನಕಾರರಲ್ಲಿಯೇ ಅತ್ಯಂತ ಹೆಚ್ಚು ವಚನ ರಚಿಸಿದವರು ಅಕ್ಕನಾಗಮ್ಮ. ಆದರೆ ಕಲ್ಯಾಣದ ಕ್ರಾಂತಿಯಾದಾಗ ತನ್ನ ಸಾಹಿತ್ಯವನ್ನು ಕಡೆಗಣಿಸಿ ಅನ್ಯ ವಚನಕಾರರ ವಚನಗಳನ್ನು ಸಂರಕ್ಷಿಸುವ ಕೆಲಸ ಮಾಡಿದ ನಿಸ್ವಾರ್ಥಿ ಎಂದರು. ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ವಿಧಾನ ಪರಿಷತ್‌ ಸದಸ್ಯ ರುದ್ರೇಗೌಡ ಸ್ವಾಗತಿಸಿದರು. ಎಸ್‌.ಪಿ. ದಿನೇಶ್‌ ಕಾರ್ಯಕ್ರಮ ನಿರ್ವಹಿಸಿದರು. ಕಾಂತೇಶ್‌ ಕದರಮಂಡಲಗಿ ವಂದಿಸಿದರು. ಕಾರ್ಯಕ್ರಮದ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಂಡಿತು. ನಾಟಕ ಮುಗಿದ ಮೇಲೆ ಪ್ರೇಕ್ಷಕರು ನಾಟಕದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು. ಪ್ರಭುಸ್ವಾಮಿಗಳು, ಫಾದರ್‌ ವೀರೇಶ್‌ ಮೋರಸ್‌, ಫಾದರ್‌ ಲಾರೆನ್ಸ್‌ ಇತರರಿದ್ದರು.

ಶ್ರೀಶಿವಪ್ಪನಾಯಕ ವೃತ್ತದಿಂದ ಸಾಮರಸ್ಯ ನಡಿಗೆ ಆರಂಭವಾಯಿತು. ರೈತ ಮುಖಂಡ ಬಸವರಾಜಪ್ಪ, ಬೆನಕಪ್ಪ, ಕೆ. ಎಲ್. ಅಶೋಕ್‌, ಮರುಳಸಿದ್ಧ ಸ್ವಾಮಿಗಳು ಆಶಯ ನುಡಿಗಳನ್ನು ಆಡಿದರು. ಮುಂದುವರಿದ ಸಾಮರಸ್ಯ ನಡಿಗೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ಕುವೆಂಪು ರಂಗಮಂದಿರಕ್ಕೆ ಬಂದು ತಲುಪಿದರು. ನೆರೆ ಸಂತ್ರಸ್ತರ ನಿಧಿ 34042 ರೂ. ಸಂಗ್ರಹವಾಯಿತು.

ಟಾಪ್ ನ್ಯೂಸ್

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.