ಈ ತರಕಾರಿಗಳನ್ನು ಬೇರೆ ಬೇರೆ ಇಟ್ಟರೆ ಸೇಫ್!
ಒಟ್ಟಿಗೆ ಇಟ್ಟರೆ ಏನಾಗುತ್ತೆ ಗೊತ್ತಾ?
Team Udayavani, Aug 25, 2019, 8:10 PM IST
ತರಕಾರಿಗಳ ಶಾಪಿಂಗ್ ತೆರಳುವಾಗ ಎಲ್ಲರ ಮಾಡುವ ಮೊದಲ ತಪ್ಪು ಒಂದೇ ಚೀಲದಲ್ಲಿ ಹಣ್ಣುಗಳು ಹಾಗೂ ತರಕಾರಿಗಳನ್ನು ಹಾಕುವುದು. ಹಾಗೆಯೇ ಮನೆಯಲ್ಲಿ ರೆಫ್ರಿಜರೇಟ್‌ನಲ್ಲಿಯೂ ಎಲ್ಲ ತರಕಾರಿಗಳನ್ನು, ಹಣ್ಣು ಹಂಪಲುಗಳನ್ನು ಜತೆಯಲ್ಲಿ ಇರಿಸುವುದು. ನಿಜವಾಗಿಯೂ ಎಲ್ಲ ತರಕಾರಿಗಳನ್ನು ಜತೆಗಿಡಬಾರದು.
ಮುಳ್ಳುಸೌತೆ
ಮುಳ್ಳುಸೌತೆಯೊಂದಿಗೆ ಯಾವುದೇ ತರಕಾರಿಗಳನ್ನು ಸ್ಟೋರ್ ಮಾಡಬೇಡಿ. ಅವುಗಳನ್ನು ಪ್ರತ್ಯೇಕವಾಗಿ ಸ್ಟೋರ್ ಮಾಡಬೇಕು. ಒಂದು ವೇಳೆ ಮುಳ್ಳುಸೌತೆಯನ್ನು ನಿಂಬೆ, ಬಾಳೆಹಣ್ಣು ಅಥವಾ ಟೊಮೋಟೊದೊಂದಿಗೆ ಇರಿಸಿದರೆ ಅದು ಎಥಿಲೀನ್ ಅನಿಲ ಅನ್ನು ಉತ್ಪತ್ತಿ ಮಾಡುತ್ತದೆ. ಇದು ಮುಳ್ಳು ಸೌತೆಯನ್ನು ಬೇಗ ಕೆಡುವಂತೆ ಮಾಡುತ್ತದೆ. ಫ್ರಿಜ್xನಲ್ಲಿ ಮುಳ್ಳುಸೌತೆಯನ್ನು ಪ್ರತ್ಯೇಕೆವಾಗಿಸಿ ಹಾಗೂ ಯಾವುದೇ ಹಣ್ಣುಗಳನ್ನು ಅದರ ಜತೆ ಇರಿಸಬೇಡಿ.
ಕುಂಬಳಕಾಯಿ ಹಾಗೂ ಸೇಬು
ಕುಂಬಳಕಾಯಿ ಎಲ್ಲರಿಗೂ ಇಷ್ಟ. ಆದರೆ ಇದನ್ನು ಸೇಬು ಹಾಗೂ ಪಿಯರ್ನಿಂದ ದೂರವಿರಿಸಿದರೆ ಅದಷ್ಟು ಒಳ್ಳೆಯದು. ಯಾಕೆಂದರೆ ಈ ಎರಡು ಹಣ್ಣುಗಳು ಕುಂಬಳಕಾಯಿಗೆ ಉತ್ತಮವಲ್ಲ. ಅದನ್ನು ತುಸು ಬೆಚ್ಚನೆ ಜಾಗದಲ್ಲಿ ಸ್ಟೋರ್ ಮಾಡುವುದು ಉತ್ತಮ. ಇದು ಕುಂಬಳಕಾಯಿಗಳನ್ನು 6 ತಿಂಗಳು ಕೆಡದಂತೆ ಇಡಲು ಸಹಕರಿಯಾಗುತ್ತದೆ
ಸಿಹಿಗೆಣಸು ಹಾಗೂ ಆಲೂಗೆಡ್ಡೆ
ಇವುಗಳನ್ನು ಪೇಪರ್ ಬ್ಯಾಗ್‌ನಲ್ಲಿ ಸ್ಟೋರ್ ಮಾಡುವುದು ಉತ್ತಮ. ಈ ತರಕಾರಿಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ ಹಾಗೂ ಪ್ರತ್ಯೇಕವಾಗಿ ತೆಗೆದಿಡುವುದು ಒಳ್ಳೆಯದು. ಮಾತ್ರವಲ್ಲದೇ ಇವುಗಳನ್ನು ಫ್ರಿಡ್ಜ್ನಲ್ಲಿಡಬೇಡಿ. ಇದರಿಂದ ಇವುಗಳು ಬಹುಬೇಗನೆ ಕೊಳೆಯುತ್ತವೆ.
ಸೇಬು ಹಾಗೂ ಕಿತ್ತಳೆ
ಹಣ್ಣುಗಳನ್ನು ಜತೆಯಾಗಿ ಶೇಖರಿಸಿಡಲು ನೀವು ಬಯಸಿದರೆ ಸೇಬು ಮತ್ತು ಕಿತ್ತಳೆ ಹಣ್ಣನ್ನು ಮಾತ್ರ ಜತೆಯಲ್ಲಿರಿಸಬೇಡಿ. ಈ ಹಣ್ಣುಗಳು ಕೂಡ ಎಥಿಲೀನ್ ಗ್ಯಾಸ್ ಅನ್ನು ಉತ್ಪತ್ತಿ ಮಾಡುತ್ತವೆ. ಸೇಬನ್ನು ಫ್ರಿಡ್ಜ್ ನಲ್ಲಿರಿಸಿದರೆ ಕಿತ್ತಳೆ ಹಣ್ಣನ್ನು ಮಾತ್ರ ಅದರೊಂದಿಗೆ ಇರಿಸಬೇಡಿ. ಜಾಲರಿ ಚೀಲದಲ್ಲಿ ಕಿತ್ತಳೆ ಹಣ್ಣುಗಳನ್ನು ಇಡುವುದು ಸೂಕ್ತ. ಆ ಚೀಲ ಹಣ್ಣಿನ ಸುತ್ತ ಗಾಳಿಯಾಡುವಂತೆ ಮಾಡುತ್ತದೆ.
ಈರುಳ್ಳಿ ಹಾಗೂ ಆಲೂಗಡ್ಡೆ
ಭಾರತೀಯರು ಒಂದೇ ಬುಟ್ಟಿಯಲ್ಲಿ ಈರುಳ್ಳಿ ಹಾಗೂ ಆಲೂಗಡ್ಡೆಯನ್ನು ಶೇಖರಿಸಿಡುವುದು ಸಾಮಾನ್ಯ. ಈರುಳ್ಳಿಗಳು ಆಲೂಗಡ್ಡೆಯನ್ನು ಕೆಡಿಸುತ್ತದೆ. ಅವುಗಳನ್ನು ಪ್ರತ್ಯೇಕವಾಗಿ ತೆರೆದ ಬುಟ್ಟಿಗಳಲ್ಲಿ ಶೇಖರಿಸಿಡಿ. ಪೇಪರ್ ಚೀಲಗಳಲ್ಲಿ ಶೇಖರಿಸುವುದು ಕೂಡ ಅವುಗಳನ್ನು ಕೆಡದಂತೆ ಕಾಪಾಡಲು ಸಹಕಾರಿ. ಈರುಳ್ಳಿಯನ್ನು ಬೆಳ್ಳುಳ್ಳಿಯೊಂದಿಗೆ ಸ್ಟೋರ್ ಮಾಡಬಹುದು.
ರಮ್ಯಾ. ಎಂ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.