ತೋಂಟದಾರ್ಯ ಸೆಂಟರ್‌ನಲ್ಲಿ ಮಸಾಲೆ ಮಿರ್ಚಿ, ಬದನೆಕಾಯಿ


Team Udayavani, Aug 26, 2019, 3:06 AM IST

tontadarya

ಗಿರ್ಮಿಟ್‌, ಮೆಣಸಿನಕಾಯಿ ಬಜ್ಜಿ, ಒಗ್ಗರಣೆ ಮಂಡಕ್ಕಿ, ಒಗ್ಗರಣೆ ಅವಲಕ್ಕಿ ಉತ್ತರ ಕರ್ನಾಟಕದಲ್ಲಿ ತುಂಬಾ ಜನಪ್ರಿಯ ತಿಂಡಿ. ಇದು ಸಾಮಾನ್ಯವಾಗಿ ಎಲ್ಲಾ ಖಾನಾವಳಿಗಳಲ್ಲೂ ಸಿಗುತ್ತದೆ. ಆದರೆ, ಮಸಾಲೆ ಮೆಣಸಿನ ಕಾಯಿ, ಮಸಾಲೆ ಬದನೆಕಾಯಿ ಸಿಗುವುದು ಸ್ವಲ್ಪ ಕಷ್ಟ. ಈ ಹೆಸರನ್ನು ಹಲವರು ಕೇಳಿರಬಹುದು, ನೋಡಿರ­ಬಹುದು. ಆದರೆ, ತಿಂದಿರು ವವರ ಸಂಖ್ಯೆ ತೀರಾ ಕಡಿಮೆ. ಏಕೆಂದರೆ, ಎಲ್ಲಾ ಕಡೆ ಈ ಮಸಾಲೆ ಮಿರ್ಚಿ, ಬದನೆ ಕಾಯಿ ಮಾಡಲ್ಲ. ಗದಗ್‌ನ ಶ್ರೀಗುರು ತೋಂಟದಾರ್ಯ ಮಿರ್ಚಿ ಸೆಂಟರ್‌ಇಲ್ಲಿ ಇದು ಜನಪ್ರಿಯ ತಿಂಡಿ.

ಗದಗ್‌ ನಗರದವರೇ ಆದ ಈರಮ್ಮ ಮತ್ತು ತಿಪ್ಪಣ್ಣ 1988ರಲ್ಲಿ ಈ ಸೆಂಟರ್‌ ಪ್ರಾರಂಭಿಸಿದರು. ಮೊದಲು ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದ ಇವರಿಗೆ, ಅದರಲ್ಲಿ ಅಂತಹ ಆದಾಯ ಬರುತ್ತಿರಲಿಲ್ಲ. ಹೀಗಾಗಿ, ಅಂಗಡಿ ಮುಂದೆ ಸಂಜೆ ವೇಳೆ ಮೆಣಸಿನಕಾಯಿ ಬಜ್ಜಿ, ವಡೆ ಹೀಗೆ.. ಕೆಲವು ತಿಂಡಿ ಮಾಡಲು ಶುರು ಮಾಡಿದ್ರು. ಈ ಹೊಸ ಕೆಲಸ ಇವರ ಕೈಹಿಡಿದ್ದುದನ್ನು ಗಮನಿಸಿ ಕೇವಲ ಗಿರ್ಮಿಟ್‌, ಬಜ್ಜಿ ಮಾಡಿದ್ರೆ ಗ್ರಾಹಕರಿಗೆ ಸಮಾಧಾನ ಇರುವುದಿಲ್ಲ, ಏನಾದ್ರೂ ವಿಶೇಷ ತಿನಿಸು ತಯಾರಿಸಬೇಕು ಎಂದುಕೊಂಡು ಈ ಮಸಾಲೆ ಮೆಣಸಿನಕಾಯಿ ಮತ್ತು ಮಸಾಲೆ ಬದನೆಕಾಯಿ ಮಾಡಲು ಆರಂಭಿಸಿದ್ರು.

ಜನರಿಗೂ ಅದು ಇಷ್ಟವಾಯ್ತು. ಈಗ ಅದನ್ನೇ ಪ್ರಮುಖ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ಮೋಡ ಮುಸುಕಿದ ವಾತಾವರಣ, ಸಂಜೆ ಮಳೆಗೆ ಒಂದು ಲೋಟ ಬಿಸಿ ಚಹದ ಜೊತೆಗೆ ಗರಿಗರಿಯಾದ ಮಿರ್ಚಿ ತಿನ್ನಬೇಕು ಅನ್ನುವವರಿಗೆ ಈ ಮಿರ್ಚಿ ಸೆಂಟರ್‌ ಸೂಕ್ತ. ಸಂಜೆಯಾದ್ರೆ ಮಸಾಲೆ ಮಿರ್ಚಿ, ಬದನೆಕಾಯಿ, ಗಿರ್ಮಿಟ್‌ ತಿನ್ನಲು ಬಹುತೇಕ ಮಂದಿ ಈ ಮಿರ್ಚಿ ಸೆಂಟರ್‌ಗೆ ಬರುತ್ತಾರೆ. ಇದು ರಾತ್ರಿ 10 ಗಂಟೆವರೆಗೂ ತೆಗೆದಿರುತ್ತದೆ. ದಿನಕ್ಕೆ 25 ಕೆ.ಜಿ. ಕಡ್ಲೆಹಿಟ್ಟು, 20 ಕೆ.ಜಿ. ಬದನೆಕಾಯಿ, 10 ಕೆ.ಜಿ. ಮೆಣಸಿನಕಾಯಿ ಖರ್ಚಾಗುತ್ತದೆ. ಸದ್ಯ ಸೆಂಟರ್‌ಅನ್ನು ಬಸವರಾಜು ನೋಡಿಕೊಳ್ಳುತ್ತಿದ್ದು, ಇವರ ತಾಯಿ ಈರಮ್ಮ ಮಿರ್ಚಿ ಕರಿಯುವ ಕೆಲಸ ಮಾಡುತ್ತಾರೆ.

ಕುಟುಂಬದವರಿಗೆ ಉದ್ಯೋಗ: ಮಿರ್ಚಿ ಸೆಂಟರ್‌ನಿಂದ ಕುಟುಂಬದ ಆರು ಮಂದಿಗೆ ಉದ್ಯೋಗ ಸಿಕ್ಕಿದೆ. ಈರಮ್ಮ ಜೊತೆಗೆ ಇವರ ಮಕ್ಕಳಾದ ಬಸವರಾಜು, ಸುವರ್ಣ, ಅನ್ನಪೂರ್ಣ ಹಾಗೂ ಮೊಮ್ಮಕ್ಕಳೂ ಇಲ್ಲೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಮಿರ್ಚಿ ವಿಶೇಷ: ಸಾಮಾನ್ಯವಾಗಿ ಕಡ್ಲೆಹಿಟ್ಟು ಲೇಪಿಸಿದ ಮೆಣಸಿನಕಾಯಿ ಬಜ್ಜಿಯನ್ನಷ್ಟೇ ನಾವು ತಿಂದಿದ್ದೇವೆ. ಆದರೆ, ತೋಂಟದಾರ್ಯ ಸೆಂಟರ್‌ನಲ್ಲಿ ಮಸಾಲೆ ತುಂಬಿ ಮಾಡಿದ ಮೆಣಸಿನಕಾಯಿ, ಬದನೆಕಾಯಿ ಸಿಗುತ್ತದೆ. ಇಲ್ಲಿ ಮೆಣಸಿನ ಕಾಯಿ ಮತ್ತು ಬದನೆಕಾಯಿಯನ್ನು ಸ್ವಲ್ಪ ಕೊಯ್ದು ಅದಕ್ಕೆ ಕಲಸಿದ ಮಸಾಲೆಯನ್ನು ತುಂಬಿ, ನಂತರ ಅದನ್ನು ಕಡ್ಲೆಹಿಟ್ಟಿನಲ್ಲಿ ಅದ್ದಿ ನಂತರ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಗರಿಗರಿಯಾದ ಈ ಮೆಣಸಿನಕಾಯಿ ಮತ್ತು ಬದನೆಕಾಯಿಯನ್ನು ಟೊಮೆಟೋ ಚಟ್ನಿಯಲ್ಲಿ ಅದ್ದಿ ತಿಂದರೆ ರುಚಿಕಟ್ಟಾಗಿರುತ್ತದೆ. ದರ 10 ರೂ.

ಇತರೆ ತಿಂಡಿ: ಮಸಾಲೆ ಮೆಣಸಿನಕಾಯಿ ಜೊತೆಗೆ ಮಾಮೂಲಿ ಮಿರ್ಚಿ(5 ರೂ.), ಕಡ್ಲೆಬೇಳೆ ವಡೆ(5 ರೂ.), ಗಿರ್ಮಿಟ್‌(20 ರೂ.), ದಿಲ್ಲಿ ದರ್ಬಾರ್‌, ಚಹ(5 ರೂ.) ಹೀಗೆ… ನಾಲ್ಕೈದು ಬಗೆಯ ತಿಂಡಿಗಳು ಇಲ್ಲಿ ಸಿಗುತ್ತವೆ.

ಮಿರ್ಚಿ ಸೆಂಟರ್‌ ವಿಳಾಸ: ಗದಗ್‌ ನಗರದಲ್ಲಿನ ಗಾಂಧಿ ಸರ್ಕಲ್‌ನಿಂದ 100 ಮೀಟರ್‌ ಮುಂದೆ ಸಾಗಿದ್ರೆ ವೀರಭದ್ರೇಶ್ವರ ಖಾನಾವಳಿ ಬರುತ್ತೆ. ಅದರ ಎದುರೇ ಇದೆ ಶ್ರೀ ಗುರುತೋಂಟದಾರ್ಯ ಮಿರ್ಚಿ ಸೆಂಟರ್‌.

ಮಿರ್ಚಿ ಸೆಂಟರ್‌ ಸಮಯ: ಮಧ್ಯಾಹ್ನ 3 ರಿಂದ ರಾತ್ರಿ 10.30ರವರೆಗೆ, ವಾರದ ರಜೆ ಇಲ್ಲ. ಮನೆಯಲ್ಲಿ ಫ‌ಂಕ್ಷನ್‌ ಇದ್ರೆ ಮಾತ್ರ ರಜೆ.

* ಭೋಗೇಶ ಆರ್‌. ಮೇಲುಕುಂಟೆ/ಜಗದೀಶ್‌ ಕುಲಕರ್ಣಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.