ತಟ್ಟೆಯಲ್ಲಿದ್ದ ತುತ್ತು ಬಾಯಿಗೆ ಸೇರಲು ಪ್ರವಾಹ ಬಿಡಲಿಲ್ಲ


Team Udayavani, Aug 26, 2019, 3:07 AM IST

tatteyalli

ಬೆಳ್ತಂಗಡಿ: ಮಳೆಗಾಲ, ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸಮಯ. ಆದರೆ, ಆ ದಿನ ಮಾತ್ರ ಅಪ್ಪಳಿಸಿದ ಪ್ರವಾಹ ನಾವೀಗ ಒಪ್ಪೊತ್ತು ಊಟಕ್ಕೂ ಪರದಾಡುವಂತೆ ಮಾಡಿದೆ, ನಮ್ಮ ಕೃಷಿಯ ಬದುಕನ್ನೇ ಕಸಿದಿದೆ… ಇತ್ತೀಚಿನ ನೆರೆ-ಪ್ರವಾಹ ಸಂತ್ರಸ್ತರ ಮನದಾಳದ ನೋವಿನ ನುಡಿಗಳಿವು. “ನಾನು ಅಂದು ಮನೆಯಲ್ಲಿರಲಿಲ್ಲ. ನೆರೆಮನೆಯವರನ್ನು ಆಸ್ಪತ್ರೆಗೆ ಕರೆದುಕೊಂಡು ಮಂಗಳೂರಿಗೆ ತೆರಳಿದ್ದೆ. ಮನೆಯಲ್ಲಿ ಅಮ್ಮ, ಅಪ್ಪ ಇಬ್ಬರೇ ಇದ್ದರು.

ಹತ್ತಿರದ ಇನ್ನೊಂದು ಮನೆಯಲ್ಲಿರುವ ಅಣ್ಣ ಮತ್ತವರ ಮನೆ ಮಂದಿ ಅಂದು ದೇವರಂತೆ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ಇನ್ನೇನು ಅನ್ನ ಕಲಸಿ ಬಾಯಿಗಿಡಬೇಕು ಎನ್ನುವಷ್ಟರಲ್ಲಿ ಭೀಕರ ಸ್ಫೋಟದಂತಹ ಸದ್ದು ಕೇಳಿಸಿತು. ಕಣ್ಣು ಮಿಟುಕಿಸುವಷ್ಟರಲ್ಲಿ ನೀರು ಮನೆಯೊಳಗೆ ನುಗ್ಗಿತ್ತು. ಹೊರ ಧಾವಿಸಿ ನೋಡಿದರೆ ಮನೆಯೆದುರಿನ ತೋಡು ಹೊಳೆಯಾಗಿತ್ತು. ಭಾರೀ ಮರಗಳು ಪರಸ್ಪರ ಲಟಲಟನೆ ಹೊಡೆದುಕೊಳ್ಳುತ್ತ, ಬೆಂಕಿಕಡ್ಡಿಗಳಂತೆ ತೇಲಿ ಬರುತ್ತಿದ್ದವು.

ಅಣ್ಣಂದಿರು ಅಪ್ಪ, ಅಮ್ಮನನ್ನು ಹೊತ್ತುಕೊಂಡೇ ಓಡಿ ಸಂಬಂಧಿಕರ ಮನೆ ಸೇರಿದರು’ ಎಂದು ಮಿತ್ತಬಾಗಿಲು ಕಲ್ಲೊಲೆಯ ಸತೀಶ್‌ ಗೌಡ ಆ ದಿನದ ಘಟನೆಯ ಭೀಕರತೆಯನ್ನು ನೆನೆದರು. ತಂದೆಗೆ ಹೃದಯ ಸಂಬಂಧಿ ಕಾಯಿಲೆಯಿದೆ, ಹೀಗಾಗಿ ಪ್ರವಾಹ ಅಪ್ಪಳಿಸುವುದಕ್ಕೆ ನಾಲ್ಕು ದಿನ ಹಿಂದೆಯಷ್ಟೇ ನಮ್ಮ ಮನೆಗೆ ಬಂದಿದ್ದರು. ಅಂದು ಅಣ್ಣಂದಿರಿಲ್ಲದೇ ಹೋಗಿದ್ದರೆ ಅಥವಾ ರಾತ್ರಿ ಸಮಯದಲ್ಲಿ ಪ್ರವಾಹ ಅಪ್ಪಳಿಸಿದ್ದರೆ ನಾನೀಗ ನಿಮಗೆ ಮಾತಿಗೆ ಸಿಗುತ್ತಿರಲೇ ಇಲ್ಲ… ಎಂದು ದುಃಖೀಸಿದರು ಸತೀಶ್‌.

ಸೊಸೆ ನನ್ನನ್ನು ಎಳೆದುಕೊಂಡೇ ಓಡಿದಳು: ನಾನು, ಮಗನ ಸಂಸಾರದ ಜತೆ ಮನೆಯಲ್ಲಿದ್ದೆವು. ನನಗೆ ನಡೆಯಲು ಸಾಧ್ಯವಿಲ್ಲ. ಮೊನ್ನೆ ಬಂದ ನೀರು ಯಾವ ಕಾಡಿನ ಒಳಗಿತ್ತೋ! ಅಬ್ಟಾ, ನನಗಂತೂ ಸೊಂಟದ ವರೆಗೆ ನೀರು ಬಂದಾಗ ನಾನು ಎಲ್ಲಿದ್ದೇನೆ ಎಂಬುದೇ ಗೊತ್ತಾಗಲಿಲ್ಲ. ನಮ್ಮ ಮನೆಗೆ ಬರಬೇಕಾದರೆ ಗುಡ್ಡ ಏರಿ ಬರಬೇಕು. ಆದರೆ, ಮೊನ್ನೆ ನೀರು ನಮ್ಮನ್ನೇ ಗುಡ್ಡ ಹತ್ತುವಂತೆ ಮಾಡಿತು. ಕಣ್ಣೆದುರೇ ಮನೆಯ ಮುಂದಿನ ಭಾಗ ಬಿದ್ದು ಹೋಯಿತು.

ಸೊಸೆ ನನ್ನನ್ನು ಎಳೆದುಕೊಂಡೇ ಓಡಿದಳು. ಒಂದು ವರ್ಷದ ಮಗು ಕೈಯಲ್ಲಿತ್ತು. ಮಗ ಮನೆಯಲ್ಲಿ ಇರಲಿಲ್ಲ, ನಾವು ಜೀವದಾಸೆ ಬಿಟ್ಟಿದ್ದೆವು. ಇದೆಲ್ಲ ತಾಸುಗಟ್ಟಲೆಯ ಮಾತಲ್ಲ; 5 ನಿಮಿಷದೊಳಗಿನ ಕತೆ. ನಮ್ಮ ಮನೆಯಲ್ಲಿದ್ದ 20 ಪವನ್‌ ಚಿನ್ನ ಸಹಿತ ಸೊತ್ತುಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿವೆ. ಬಾಡಿಗೆ ಮನೆಯೇ ನಮಗೀಗ ಗತಿ’ ಎಂದರು ಮಾಪಲ್ದಡಿ ಸೀತಮ್ಮ. ತಮ್ಮ ಸಂಕಷ್ಟ ಹೇಳಿಕೊಳ್ಳುವಾಗ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು.

ಅಡಿಕೆ ಮರಗಳಿಲ್ಲದಿದ್ದರೆ ಮನೆಯೇ ಇರುತ್ತಿರಲಿಲ್ಲ: “ಸಾಗರವಾಗಿ ಹರಿದು ಬಂದ ನೀರಿನೊಂದಿಗೆ ತೇಲಿ ಬಂದದ್ದು ಮರಗಳ ರಾಶಿ. ನಮ್ಮ ತೋಟದ ಅಡಿಕೆ ಮರಗಳು ತಾವು ಮುರಿದು ಹೋದರೂ ಆ ಮರಗಳ ರಾಶಿಯನ್ನು ತಡೆದವು. ಇಲ್ಲದಿದ್ದರೆ ನಮ್ಮ ಮನೆಯ ಅವಶೇಷವೂ ಸಿಗುತ್ತಿರಲಿಲ್ಲ’ ಎಂದು ವಿಠಲ ಗೌಡ ಕಲ್ಲೊಲೆ ಕಣ್ಣಲ್ಲೇ ನೆರೆ-ಪ್ರವಾಹದ ಭೀಕರತೆಯನ್ನು ತೆರೆದಿಟ್ಟರು.

“ನನಗೆ ತಿಳಿದಿರುವಂತೆ ನಮ್ಮ ತಂದೆಯ ಕಾಲದಿಂದಲೇ ಇಲ್ಲಿ ವಾಸವಾಗಿದ್ದೇವೆ. ಎಷ್ಟೇ ಮಳೆ ಬಂದರೂ ಎರಡು ಬಾರಿ ನೀರು ಉಕ್ಕೇರುತ್ತದೆ, ಬಳಿಕ ಶಾಂತವಾಗುತ್ತದೆ. ಈ ಬಾರಿಯೂ ಅದೇ ರೀತಿ ಅಂದುಕೊಂಡಿದ್ದೆವು. ಆದರೆ ಹಾಗಾಗಲಿಲ್ಲ. ನೀರು ತೋಟದೊಳಗೆ ನುಗ್ಗಿದ ಮರುಕ್ಷಣವೇ ಮನೆಯನ್ನು ಬಿಡಲಿಲ್ಲ. ನಮ್ಮದು ಮಣ್ಣಿನ ಇಟ್ಟಿಗೆ ಮನೆ, ಕೊಟ್ಟಿಗೆಯಲ್ಲಿದ್ದ ಗೊಬ್ಬರ ನೀರಲ್ಲಿ ಕೊಚ್ಚಿ ಹೋಗಿ ಮರಳಿನ ರಾಶಿ ಬಿದ್ದಿವೆ. ಮನೆಯಲ್ಲಿ ವಾಸವಿರಲು ಸಾಧ್ಯವಿಲ್ಲ. ನಾನು ಅಂಗಡಿಯಲ್ಲೇ ರಾತ್ರಿ ಕಳೆಯುತ್ತಿದ್ದೇನೆ. ಇರುವ ಒಂದೆಕರೆ ಜಾಗದಲ್ಲಿ ಎಲ್ಲಿ ನೊಡಿದರಲ್ಲಿ ಮರಳೇ ತುಂಬಿದೆ. ಏನು ಮಾಡುವುದು ಎಂಬುದು ತೋಚುತ್ತಿಲ್ಲ’ ಎಂದು ಕಣ್ಣೀರಿಟ್ಟರು ವಿಠಲ ಗೌಡ.

ನೆರೆ ಆವರಿಸಿದ ಪ್ರದೇಶ ಮರು ನಿರ್ಮಾಣ: ಮಿತ್ತಬಾಗಿಲು ಗ್ರಾಮದ ಕುಕ್ಕಾವು ಪ್ರದೇಶ ಮರು ನಿರ್ಮಾಣದೆಡೆಗೆ ಸಾಗುತ್ತಿದೆ. ಸೇತುವೆ ಸಂಪರ್ಕ ಕಡಿದು 20 ಕಿ.ಮೀ.ಸುತ್ತಿ ಬರಬೇಕಿತ್ತು. ಸದ್ಯ ಸೇತುವೆ ಕಾಮಗಾರಿ ವೇಗದಿಂದ ಸಾಗುತ್ತಿದೆ. ಎಂಜಿನಿಯರ್‌ ಪರಿಶೀಲಿಸಿದ ಬಳಿಕ ಬಸ್‌ ಓಡಾಟಕ್ಕೆ ಅವಕಾಶ ಲಭಿಸಲಿದೆ. ಕೆಸರು ನುಗ್ಗಿದ ಮನೆಗಳೆಲ್ಲ ಸ್ವತ್ಛವಾಗುತ್ತಿವೆ. ವಿಸ್ತರಿಸಿದ ಹೊಳೆಯನ್ನು ಎರಡು ಬದಿ ಕಲ್ಲು ರಾಶಿ ಹಾಕಿ ಕುಗ್ಗಿಸುವ ಪ್ರಯತ್ನ ಮಾಡಲಾಗಿದೆ. ಆಹಾರ ಸಾಮಗ್ರಿಯ ಕಿಟ್‌ ವಿತರಿಸಲಾಗಿದ್ದು, ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾಮಗಾರಿ ಹಮ್ಮಿಕೊಂಡಿದೆ. ಗ್ರಾ.ಪಂ.ನಿಂದ ನಷ್ಟದ ಕುರಿತು ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಕುಕ್ಕಾವು ಗ್ರಾಮದಂಚಿನ 20ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದು, ಸದ್ಯ ಅವರು ಬಾಡಿಗೆ ಮನೆಯಲ್ಲಿ ವಾಸಿಸಲು ನಿರ್ಧರಿಸಿದ್ದಾರೆ.

* ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

8-gadaga

Diesel theft; ಗದಗ: ಕೆ.ಎಸ್.‌ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

CT-Ravi-BJP

Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

5

Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು

4

Udupi: ಕೊಳಚೆಯಿಂದ ಕಂಗಾಲಾದ ನಿಟ್ಟೂರು, ಕಲ್ಮಾಡಿ

8-gadaga

Diesel theft; ಗದಗ: ಕೆ.ಎಸ್.‌ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.