ಮದುವೆಯಾದ ಕೆಲವೇ ನಿಮಿಷಗಳಲ್ಲಿ ದಂಪತಿ ಸಾವು
Team Udayavani, Aug 26, 2019, 5:00 AM IST
ಟೆಕ್ಸಾಸ್: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ನಿಮಿಷಗಳಲ್ಲಿ ನವದಂಪತಿ ಅಪಘಾತದಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಅಮೆರಿಕದ ಟೆಕ್ಸಾಸ್‌ನ ಆರೆಂಜ್ ಕೌಂಟಿಯಲ್ಲಿ ನಡೆದಿದೆ. ಬಾಲ್ಯ ಸ್ನೇಹಿತ ರಾಗಿದ್ದ ಹಾರ್ಲೆ ಮೋರ್ಗಾನ್(19) ಹಾಗೂ ರಿಯಾನ್ನಾನ್ ಬೌಡ್ರೆಯಾಕ್ಸ್(20) ಅವರ ವಿವಾಹವನ್ನು ಘೋಷಿಸಿದ್ದ ಪಾದ್ರಿ ಕೆಲವೇ ನಿಮಿಷಗಳಲ್ಲಿ ಅವರ ನಿಧನವನ್ನೂ ಅದೇ ಸ್ಥಳದಲ್ಲಿ ಘೋಷಿಸಿದರು. ಮದುವೆ ಶಾಸ್ತ್ರ ಮುಗಿಸಿ ವಧೂವರರು ಕಾರಿನಲ್ಲಿ ಒಂದಷ್ಟು ದೂರ ಸಂಚಾರ ಮಾಡಿ ಬರಲು ಹೊರಟರು. ಅವರ ಕುಟುಂಬ ಸದಸ್ಯರು ಅವರ ಹಿಂದೆಯೇ ಇದ್ದರು. ಕಾರನ್ನು ರಸ್ತೆಗೆ ತರುತ್ತಲೇ ಬೃಹತ್‌ಗಾತ್ರದ ಲಾರಿಯೊಂದು ಕಾರಿನ ಮೇಲೆ ಎರಗಿ ಇಬ್ಬರೂ ತಮ್ಮ ಕುಟುಂಬಗಳ ಸಮ್ಮುಖದಲ್ಲೇ ಪ್ರಾಣಬಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.