ಪತ್ರಿಕೆ ನೀಡಿದ ಬೆಂಬಲಕ್ಕೆ ಉದ್ಯಮಿ, ಸಂತ್ರಸ್ತರ ನೆನಕೆ
ಪುನರ್‌ನಿರ್ಮಾಣಕ್ಕೆ ಉದಯವಾಣಿ ಸರಣಿಯ ಹೆಸರು
Team Udayavani, Aug 26, 2019, 5:50 AM IST
ಬೆಳ್ತಂಗಡಿ: ಪ್ರವಾಹ ಪೀಡಿತ ಚಾರ್ಮಾಡಿ ಗ್ರಾಮದ ಕೊಳಂಬೆಯ ಪುನರ್‌ನಿರ್ಮಾಣಕ್ಕೆ ಟೊಂಕ ಕಟ್ಟಿರುವ ಉಜಿರೆಯ ಉದ್ಯಮಿಗಳ ತಂಡ ತನ್ನ ಕಾರ್ಯ ಯೋಜನೆಗೆ “ಉದಯವಾಣಿ’ಯ “ಬನ್ನಿ ಬದುಕು ಕಟ್ಟೋಣ’ ಶೀರ್ಷಿಕೆ ಯನ್ನೇ ಇರಿಸಿಕೊಂಡಿದೆ.
ಉಜಿರೆಯ ಕೆ. ಮೋಹನ್ ಕುಮಾರ್, ರಾಜೇಶ್ ಪೈ ಸಹಿತ 40ಕ್ಕೂ ಹೆಚ್ಚು ಉದ್ಯಮಿಗಳ ತಂಡ ಕೊಳಂಬೆಯ ಪುನರ್‌ನಿರ್ಮಾಣಕ್ಕೆ ಆ. 15ರಂದು ಚಾಲನೆ ನೀಡುವ ಕುರಿತು “ಉದಯವಾಣಿ’ ವರದಿ ಪ್ರಕಟಿಸಿತ್ತು.
ವರದಿ ಮತ್ತಷ್ಟು ಮಂದಿಗೆ ಪ್ರೇರಣೆಯಾಗಿದೆ. ಜತೆಗೆ ಉದ್ಯಮಿಗಳ ತಂಡವೂ ತನ್ನ ಯೋಜನೆಯ ಹೆಸರನ್ನು “ಬನ್ನಿ ಬದುಕು ಕಟ್ಟೋಣ’ ಎಂದು ಬದಲಾಯಿಸುವ ಮೂಲಕ ಮತ್ತಷ್ಟು ಮಂದಿಗೆ ಆದರ್ಶವಾಗಿದೆ.
ಉದ್ಯಮಿ ಮೋಹನ್ ಕುಮಾರ್ ಸಂತ್ರಸ್ತರೊಂದಿಗೆ ಪತ್ರಿಕೆಯಿಂದ ಪ್ರೇರಣೆ ಪಡೆದ ವಿಚಾರವನ್ನು ಹಂಚಿಕೊಂಡಿದ್ದಾರೆ. ನೆರೆ ಬಂದ ಸಂದರ್ಭ ಇಲ್ಲಿನ ಪರಿಸ್ಥಿತಿ ಮನಗಂಡು ತಂಡ ಕಟ್ಟಿದೆವು.
ಸ್ವಾತಂತ್ರ್ಯ ದಿನದಂದು ಚಾಲನೆ ನೀಡಲು ಮುಂದಾಗಿದ್ದೆವು. “ಉದಯವಾಣಿ’ವರದಿ ಪ್ರಕಟಿಸುವ ಮೂಲಕ ಮತ್ತಷ್ಟು ಪ್ರೇರಣೆ ಒದಗಿಸಿದೆ. ಇದು ದಾನಿಗಳಿಗೆ ಪ್ರೇರಣೆಯಾಗಲಿ ಎಂದಿದ್ದಾರೆ.
ಉದ್ಯಮಿ ರಾಜೇಶ್ ಪೈ ಮಾತನಾಡಿ, ಪತ್ರಿಕೆಯ ವರದಿ ಆಧರಿಸಿ ಉಜಿರೆ ಆಸುಪಾಸಿನ ಸಂಘ ಸಂಸ್ಥೆಗಳು ನಮ್ಮ ಕೈಹಿಡಿದಿವೆ. ಸಂತ್ರಸ್ತರ ಮನೆ ಸ್ವತ್ಛ, ಕೃಷಿ ಪ್ರದೇಶ ಪುನಃರೂಪಿಸುವ ಕೆಲಸಕ್ಕೆ ಶಾಸಕರು ಚಾಲನೆ ನೀಡಿದರು.ಹಂತ ಹಂತವಾಗಿ ಊರು ಅಭಿವೃದ್ಧಿ ಕಾಣುತ್ತಿದೆ. 2020ರ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಮಾದರಿ ಪರಿಸರ ನಿರ್ಮಿಸುವ ಗುರಿ ನಮ್ಮದು ಎಂದರು.
ಬದಲಾಗುತ್ತಿದೆ ಕೊಳಂಬೆ ಚಿತ್ರಣ
ಉದ್ಯಮಿಗಳ ಕೈಹಿಡಿದ ಸಂಘ-ಸಂಸ್ಥೆಗಳಿಂದಾಗಿ ಪ್ರತಿ ದಿನ ಶ್ರಮದಾನ ಸಾಗುತ್ತಿದೆ. ಕೊಳಂಬೆಯಲ್ಲಿ ಹಾನಿ ಗೀಡಾದ 22 ಮನೆಗಳ ಪೈಕಿ 4 ಸಂಪೂರ್ಣ ಕುಸಿದಿವೆ. ಉಳಿದ 18 ಮನೆಗಳ ಕೆಸರು, ಮಣ್ಣು ಸ್ವತ್ಛಗೊಳಿಸಲಾಗಿದೆ. ಬಾವಿಯಿಂದ ಕೆಸರು ತೆಗೆದು ನೀರನ್ನು ಕುಡಿಯಲು ಯೋಗ್ಯವಾಗಿಸಲಾಗಿದೆ. ಪ್ರವಾಹದ ಆಘಾತಕ್ಕೆ ಒಳಗಾದವರಿಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಪಶುಗಳಿಗೆ ಮೇವು ವಿತರಣೆ, ಅಡಿಕೆ ತೋಟದ ಮರಳು ತೆರವುಗೊಳಿಸಲಾಗುತ್ತಿದೆ. ಸಂಘ ಸಂಸ್ಥೆ, ಶಾಲೆಗಳು ಪ್ರತಿದಿನ ಶ್ರಮದಾನಿಗಳಿಗೆ ಊಟ, ತಿಂಡಿ ವ್ಯವಸ್ಥೆ ಕಲ್ಪಿಸಿವೆ. “ಬನ್ನಿ ಬದುಕು ಕಟ್ಟೋಣ’ ಮಾಹಿತಿ ಕಚೇರಿಯನ್ನೂ ತೆರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Washington: ಅಮೆರಿಕದ ಭರವಸೆಯಬೆಳಕು ಜೀವಂತವಿರಲಿದೆ: ಕಮಲಾ ಭಾವುಕ ಭಾಷಣ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.